ವಾಟ್ಸಾಪ್ ಭಾರತದಿಂದ ನಿರ್ಗಮಿಸುವುದಾಗಿ ಹೇಳಿದೆ. ನಾಡಿನ ಕಾನೂನು ಕಟ್ಟಳೆಗಿಂತ ತನ್ನ ಬಳಕೆದಾರರ ಗೌಪ್ಯತೆ ಕಾಪಾಡುವುದು ಮುಖ್ಯ ಎನ್ನುವುದು ವಾಟ್ಸಾಪ್ನ ಮಾಲಕ ಸಂಸ್ಥೆ ಮೆಟಾದ (Meta) ಧೋರಣೆ. ಅಂತೆಯೇ ಭಾರತದ ಇತ್ತೀಚಿನ ಐಟಿ ನಿಯಮಗಳ ವಿರುದ್ಧ ವಾಟ್ಸಾಪ್ ನ್ಯಾಯಾಲಯದ ಮೊರೆ ಹೋಗಿದೆ. ಸಂದೇಶಗಳನ್ನು ಎನ್ಕ್ರಿಪ್ಟ್ ಮಾಡಲಾಗುತ್ತದೆಯಾದ್ದರಿಂದ ಅದರ ಮೂಲ ಶೋಧಿಸಲು ಆಗುವುದಿಲ್ಲ. ಎನ್ಕ್ರಿಪ್ಷನ್ ವ್ಯವಸ್ಥೆ ತೆಗೆದುಹಾಕುವುದಿಲ್ಲ ಎಂದು ವಾಟ್ಸಾಪ್ ಹೇಳಿದ್ದು, ಒಂದು ವೇಳೆ ಬಲವಂತ ಮಾಡಿದರೆ ಭಾರತದಿಂದಲೇ ನಿರ್ಗಮಿಸುವುದಾಗಿ ಹೇಳಿದೆ. ಒಂದು ವೇಳೆ ವಾಟ್ಸಾಪ್ ಭಾರತದಲ್ಲಿ ಅಲಭ್ಯವಾದರೆ ಪರ್ಯಾಯವಾಗಿರುವ ಮೆಸೇಜಿಂಗ್ ಆ್ಯಪ್ಗಳು ಯಾವುವಿವೆ? ಲಭ್ಯ ಇರುವ ವಾಟ್ಸಪೇತರ ಐದು ಆ್ಯಪ್ಗಳ ಪರಿಚಯ ಇಲ್ಲಿದೆ:
ಬಳಕೆದಾರರ ಪ್ರೈವಸಿ ವಿಚಾರದಲ್ಲಿ ವಾಟ್ಸಾಪ್ಗಿಂತ ಟೆಲಿಗ್ರಾಂ ಹೆಚ್ಚು ಬದ್ಧವಾಗಿದೆ. ಇದೇ ಕಾರಣಕ್ಕೆ ಟೆಲಿಗ್ರಾಂಗೆ ನಿಷ್ಠಾವಂತರ ಬಳಕೆದಾರರ ಬಳಗ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇದರ ಜನಪ್ರಿಯತೆ ಹೆಚ್ಚುತ್ತಿದೆ. ಎರಡು ಲಕ್ಷ ಸದಸ್ಯರನ್ನು ಒಳಗೊಳ್ಳಬಹುದಾದ ಗ್ರೂಪ್ ಕ್ರಿಯೇಟ್ ಮಾಡಬಹುದು. ದೊಡ್ಡ ಗಾತ್ರ ಫೈಲ್ಗಳನ್ನು ಕಳುಹಿಸಬಹುದು. ಇನ್ನೂ ಹಲವು ವಿಶೇಷ ಫೀಚರ್ಸ್ ಟೆಲಿಗ್ರಾಂನಲ್ಲಿವೆ.
ಇದನ್ನೂ ಓದಿ: ದೇಶ ಬಿಟ್ಟು ಹೋಗುತ್ತೇವೆ ಹೊರತು ಗೌಪ್ಯತೆ ಮಾತ್ರ ಬಿಡಲ್ಲ: ವಾಟ್ಸಾಪ್ ಹಠಕ್ಕೇನು ಕಾರಣ?
ಹೈಕ್ ಭಾರತದ್ದೇ ಆದ ಮೆಸೇಜಿಂಗ್ ಆ್ಯಪ್. ರಸವತ್ತಾಗಿ ಸಂವಾದ ನಡೆಸಲು ನಾನಾ ರೀತಿಯ ಸ್ಟಿಕ್ ಪ್ಯಾಕ್ಗಳನ್ನು ಹೊಂದಿದೆ. ಮೆಸೇಜಿಂಗ್ ಅಲ್ಲದೇ ಕ್ರಿಕೆಟ್ ಸ್ಕೋರ್, ಡಿಜಿಟಲ್ ವ್ಯಾಲಟ್ ಇತ್ಯಾದಿ ಸೇವೆಗಗಳು ಹೈಕ್ನಲ್ಲಿವೆ.
ಜಿಯೋಚ್ಯಾಟ್ ಮತ್ತೊಂದು ಉತ್ತಮ ಪರ್ಯಾಯ ಮೆಸೇಜಿಂಗ್ ಆ್ಯಪ್. ವಿಡಿಯೋ ಕಾನ್ಫರೆನ್ಸಿಂಗ್, ವಾಯ್ಸ್ ಕಾಲ್, ಫೈಲ್ ಶೇರಿಂಗ್ ಇತ್ಯಾದಿ ಫೀಚರ್ಸ್ ಹೊಂದಿದೆ.
ಇದನ್ನೂ ಓದಿ: ಸೋನು ಸೂದ್ ವಾಟ್ಸಾಪ್ ಖಾತೆ ಬ್ಲಾಕ್; ಈ ತಪ್ಪು ಮಾಡಿದರೆ ನಿಮಗೂ ಇದೇ ಗತಿ
ಸಿಗ್ನಲ್ ಆ್ಯಪ್ ತನ್ನ ಬಳಕೆದಾರರ ಪ್ರೈವೆಸಿ ರಕ್ಷಣೆಯಲ್ಲಿ ಟೆಲಿಗ್ರಾಂಗಿಂತ ಒಂದು ಹೆಜ್ಜೆ ಮುಂದು. ಇದು ಪರಿಣಾಮಕಾರಿ ಹಾಗೂ ಸರಳ ಎನಿಸುವ ಆ್ಯಪ್ ಆಗಿದೆ. ಜಾಗತಿಕವಾಗಿ ಇದು ಮನ್ನಣೆ ಪಡೆಯುತ್ತಿದೆ.
ಮೂಲತಃ ವಿಡಿಯೋ ಕಾಲಿಂಗ್ಗೆಂದು ರೂಪಿಸಲಾಗಿದ್ದ ಸ್ಕೈಪ್ ಈಗ ಮೆಸೇಜಿಂಗ್ ಸರ್ವಿಸ್ ಕೂಡ ನೀಡುತ್ತದೆ. ಕಾರ್ಪೊರೇಟ್ ವಲಯದಲ್ಲೂ ಸ್ಕೈಪ್ಗೆ ಪ್ರಾಧಾನ್ಯತೆ ಇದೆ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ