WhatsApp: ವಾಟ್ಸ್​ಆ್ಯಪ್ ವಾಯ್ಸ್ ಮೆಸೇಜ್​ನಲ್ಲಿ ಹೊಸ ಫೀಚರ್: ಬಳಕೆದಾರರು ಫುಲ್ ಖುಷ್

| Updated By: Vinay Bhat

Updated on: Dec 17, 2021 | 12:31 PM

WhatsApp Voice Message Preview: ವಾಟ್ಸ್​ಆ್ಯಪ್​​ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರು ತಮ್ಮ ಧ್ವನಿ ಸಂದೇಶವನ್ನು ಕಳುಹಿಸುವ ಮೊದಲು ಅವುಗಳನ್ನು ಪೂರ್ವವೀಕ್ಷಿಸಲು ಅನುಮತಿಸುತ್ತದೆ.

WhatsApp: ವಾಟ್ಸ್​ಆ್ಯಪ್ ವಾಯ್ಸ್ ಮೆಸೇಜ್​ನಲ್ಲಿ ಹೊಸ ಫೀಚರ್: ಬಳಕೆದಾರರು ಫುಲ್ ಖುಷ್
WhatsApp Voice Message Preview
Follow us on

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ತನ್ನ ಬಳಕೆದಾರರ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ವಾಟ್ಸ್ಆ್ಯಪ್ ಒಳಗೊಂಡಿರುವ ಫೀಚರ್ಸ್ (WhatsApp New Feature). ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಸದಾ ಒಂದಲ್ಲ ಒಂದು ಫೀಚರ್ಸ್ ಪರಿಚಯಿಸಿ ಅಪ್ಡೇಟ್​ಗಳನ್ನು ನೀಡುವ ವಾಟ್ಸ್ಆ್ಯಪ್ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಪರಿಚಯಿಸಿದೆ. ಇದು ವಾಟ್ಸ್ಆ್ಯಪ್ ವಾಯ್ಸ್‌ ಮೆಸೇಜ್‌ನಲ್ಲಿ ಹೊಸ ಬದಲಾವಣೆಗೆ ನಾಂದಿಯಾಗಲಿದೆ. ಇದರಿಂದ ನಿಮ್ಮ ವಾಯ್ಸ್‌ ಮೆಸೇಜ್‌ ಅನುಭವ ಇನ್ನಷ್ಟು ಸುಧಾರಿಸಲಿದೆ ಎನ್ನಲಾಗಿದೆ (Voice Message Preview). ಧ್ವನಿ ಸಂದೇಶವನ್ನು ಪೂರ್ವ ವೀಕ್ಷಿಸುವ ಆಯ್ಕೆಯು “ಬಳಕೆದಾರರನ್ನು ಮತ್ತು ಅವರ ಸ್ನೇಹಿತರು, ಕುಟುಂಬಕ್ಕೆ ಹತ್ತಿರವಾಗಲಿದೆ” ಎಂದು ವಾಟ್ಸ್ಆ್ಯಪ್ ಹೇಳಿದೆ.

ಹೊಸ ವೈಶಿಷ್ಟ್ಯವು ಬಳಕೆದಾರರು ತಮ್ಮ ಧ್ವನಿ ಸಂದೇಶವನ್ನು ಕಳುಹಿಸುವ ಮೊದಲು ಅವುಗಳನ್ನು ಪೂರ್ವವೀಕ್ಷಿಸಲು ಅನುಮತಿಸುತ್ತದೆ. ಪ್ರಸ್ತುತ, ನೀವು ಕಳುಹಿಸುವ ಮೊದಲು ಧ್ವನಿ ಸಂದೇಶವನ್ನು ಪೂರ್ವವೀಕ್ಷಣೆ ಮಾಡಲು ಯಾವುದೇ ಆಯ್ಕೆಗಳಿಲ್ಲ. ವಾಟ್ಸ್​ಆ್ಯಪ್​​ ಧ್ವನಿ ಸಂದೇಶವನ್ನು ಕಳುಹಿಸುವ ಮೊದಲು ಅದನ್ನು ಕೇಳಲು, ಬಳಕೆದಾರರು ಕೆಲವು ತಂತ್ರಗಳನ್ನು ಮಾಡಬೇಕಾಗುತ್ತದೆ, ಆದರೆ ಅದಕ್ಕೆ ಯಾವುದೇ ನೇರ ಆಯ್ಕೆಗಳಿಲ್ಲ. ಆದರೆ ವಾಟ್ಸ್​ಆ್ಯಪ್​ ಇದೀಗ ಈ ಹೊಸ ವೈಶಿಷ್ಟ್ಯವನ್ನು ಎಲ್ಲಾ ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಪರಿಚಯಿಸುತ್ತಿದೆ.

ವಾಟ್ಸ್​ಆ್ಯಪ್​​ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಬಗ್ಗೆ ತನ್ನ ಸಪೋರ್ಟ್‌ ಪೇಜ್‌ನಲ್ಲಿ ಮಾಹಿತಿ ನೀಡಿದೆ. ಈ ಮಾಹಿತಿ ಪ್ರಕಾರ, ವಾಯ್ಸ್‌ ಮೆಸೇಜ್‌ ಅನ್ನು ಪ್ರಿವ್ಯೂ ಮಾಡುವ ಆಯ್ಕೆಯು ನೀವು ರೆಕಾರ್ಡಿಂಗ್ ಅನ್ನು ಪೂರ್ಣಗೊಳಿಸಲು ಸ್ಟಾಪ್ ಬಟನ್ ಅನ್ನು ಒತ್ತಿದ ನಂತರ ಕಾಣಿಸಿಕೊಳ್ಳುತ್ತದೆ. ಪ್ಲೇ ಬಟನ್ ಅನ್ನು ಬಳಸಿಕೊಂಡು ಬಳಕೆದಾರರು ವಾಯ್ಸ್‌ ರೆಕಾರ್ಡಿಂಗ್ ಅನ್ನು ಪ್ರಿವ್ಯೂ ಮಾಡಬಹುದು. ಅಲ್ಲದೆ ಟೈಮ್‌ಸ್ಟ್ಯಾಂಪ್ ಅನ್ನು ಬಳಸಿಕೊಂಡು ವಾಯ್ಸ್‌ ರೆಕಾರ್ಡಿಂಗ್‌ನ ನಿರ್ದಿಷ್ಟ ಭಾಗವನ್ನು ಸಹ ಕೇಳಬಹುದು. ತಮ್ಮ ವಾಯ್ಸ್‌ ಮೆಸೇಜ್‌ ಅನ್ನು ಪರಿಶೀಲಿಸಿದ ನಂತರ, ರೆಕಾರ್ಡಿಂಗ್ ಅನ್ನು ಡಿಲೀಟ್‌ ಮಾಡಲು ಟ್ರಾಶ್‌ ಬಟನ್ ಅನ್ನು ಹಿಟ್ ಮಾಡಬಹುದು.

ವಾಟ್ಸ್​ಆ್ಯಪ್​​ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಮಾಡುವುದು ಹೇಗೆ?:

  • ಮೊದಲಿಗೆ ವಾಟ್ಸ್​ಆ್ಯಪ್​​ನಲ್ಲಿ ನಿಮ್ಮ ವೈಯಕ್ತಿಕ ಅಥವಾ ಗುಂಪು ಚಾಟ್ ತೆರೆಯಿರಿ.
  • ನಂತರ ಮೈಕ್ರೊಫೋನ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ,
  • ಇದೀಗ ವಾಯ್ಸ್ ಸಂದೇಶವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿ.
  • ವಾಯ್ಸ್‌ ಮೆಸೇಜ್‌ ನಂತರ, ಸ್ಟಾಪ್‌ ಟ್ಯಾಪ್ ಮಾಡಿ.
  • ಇದಾದ ನಂತರ ನಿಮ್ಮ ರೆಕಾರ್ಡಿಂಗ್ ಆಲಿಸಲು ಪ್ಲೇ ಟ್ಯಾಪ್ ಮಾಡಿ. ಆ ಟೈಮ್‌ಸ್ಟ್ಯಾಂಪ್‌ನಿಂದ ಅದನ್ನು ಪ್ಲೇ ಮಾಡಲು ನೀವು ರೆಕಾರ್ಡಿಂಗ್‌ನ ಯಾವುದೇ ಭಾಗವನ್ನು ಟ್ಯಾಪ್ ಮಾಡಬಹುದು.
  • ನೀವು ಪ್ರಿವ್ಯೂ ಮಾಡಿದ ಸಂದೇಶ ಸರಿಯಿಲ್ಲದಿದ್ದರೆ ಅದನ್ನು ಡಿಲೀಟ್‌ ಮಾಡಲು ಟ್ರಾಶ್‌ ಕ್ಯಾನ್ ಅನ್ನು ಟ್ಯಾಪ್ ಮಾಡಬಹುದು. ಒಂದು ವೇಳೆ ನಿಮ್ಮ ಸಂದೇಶ ಸರಿಯಿದ್ದರೆ ಸೆಂಡ್‌ ಟ್ಯಾಪ್ ಮಾಡಿ.

Aadhar- Voter ID Link: ಸ್ವತಃ ನೀವೇ ಆಧಾರ್ ಮತ್ತು ವೋಟರ್​ ಐಡಿಯನ್ನು ಲಿಂಕ್ ಮಾಡಬಹುದು; ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ

(WhatsApp announced preview your voice messages before sending them to your contacts)