Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhar- Voter ID Link: ಸ್ವತಃ ನೀವೇ ಆಧಾರ್ ಮತ್ತು ವೋಟರ್​ ಐಡಿಯನ್ನು ಲಿಂಕ್ ಮಾಡಬಹುದು; ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ

Aadhar Linking: ವೋಟರ್​ ಐಡಿಯನ್ನು ಆಧಾರ್​ ಕಾರ್ಡ್​ನೊಂದಿಗೆ ಲಿಂಕ್ ಮಾಡಲು ಕೇಂದ್ರ ಸಂಪುಟ ಅವಕಾಶ ನೀಡಿದೆ. ಈ ಪ್ರಕ್ರಿಯೆಯನ್ನು ಯಾವೆಲ್ಲಾ ವಿಧಾನದಿಂದ ಮಾಡಬಹುದು? ಕೊನೆಗೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.

Aadhar- Voter ID Link: ಸ್ವತಃ ನೀವೇ ಆಧಾರ್ ಮತ್ತು ವೋಟರ್​ ಐಡಿಯನ್ನು ಲಿಂಕ್ ಮಾಡಬಹುದು; ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shivaprasad.hs

Updated on:Dec 16, 2021 | 4:34 PM

ಕೇಂದ್ರ ಸಂಪುಟವು ಬುಧವಾರ ಚುನಾವಣಾ ಸುಧಾರಣೆಗಳ ಮಸೂದೆಯನ್ನು ಅನುಮೋದಿಸಿದ್ದು, ಅದರನ್ವಯ ಮತದಾರರ ಗುರುತಿನ ಚೀಟಿಗಳಿಗೆ (Voter ID) ಆಧಾರ್ (Aadhar Card) ಅನ್ನು ಲಿಂಕ್ ಮಾಡಲು ಅವಕಾಶ ನೀಡಿದೆ. ಇದು ಭಾರತದ ಚುನಾವಣಾ ಆಯೋಗ (ECI) ಪ್ರಸ್ತಾಪಿಸಿದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಮತದಾರರ ಪಟ್ಟಿಯನ್ನು ಬಲಪಡಿಸಲು, ಮತದಾನ ಪ್ರಕ್ರಿಯೆಯನ್ನು ಹೆಚ್ಚು ಒಳಗೊಳ್ಳುವಂತೆ ಮಾಡಲು, ಚುನಾವಣಾ ಆಯೋಗಕ್ಕೆ (Election Commission) ಹೆಚ್ಚಿನ ಅಧಿಕಾರವನ್ನು ನೀಡಲು ಮತ್ತು ನಕಲಿಗಳನ್ನು ಹೊರಹಾಕಲು ನಾಲ್ಕು ಪ್ರಮುಖ ಸುಧಾರಣೆಗಳನ್ನು ಪರಿಚಯಿಸಲಾಗುತ್ತಿದೆ. ಮುಂದಿನ ವರ್ಷ ಜನವರಿ 1 ರಿಂದ, 18 ವರ್ಷ ತುಂಬಿದ ಮತದಾರರು ನಾಲ್ಕು ವಿಭಿನ್ನ ಕಟ್-ಆಫ್ ದಿನಾಂಕಗಳೊಂದಿಗೆ ವರ್ಷಕ್ಕೆ ನಾಲ್ಕು ಬಾರಿ ನೋಂದಾಯಿಸಲು ಅವಕಾಶವನ್ನು ಹೊಂದಿರುತ್ತಾರೆ. ಅವರು ಇದನ್ನು ಇಲ್ಲಿಯವರೆಗೆ ವರ್ಷಕ್ಕೊಮ್ಮೆ ಮಾತ್ರ ಮಾಡುತ್ತಿದ್ದರು. ಇದಲ್ಲದೇ ಸೇವಾ ಅಧಿಕಾರಿಗಳಿಗೆ ಜೆಂಡರ್ ನ್ಯೂಟ್ರಲ್ ಕಾನೂನು ಜಾರಿ ಕುರಿತು ತಿಳಿಸಲಾಗಿದೆ. ಹಾಗೂ ಚುನಾವಣೆ ನಡೆಸಲು ಯಾವುದೇ ಕಟ್ಟಡ ಸ್ವಾಧೀನಪಡಿಸಿಕೊಳ್ಳುವ ಅಧಿಕಾರವನ್ನು ಸಭೆಯಲ್ಲಿ ಆಯೋಗಕ್ಕೆ ನೀಡಲಾಗಿದೆ. ಆಧಾರ್ ಹಾಗೂ ವೋಟರ್ ಐಡಿ ಲಿಂಕ್ ಮಾಡುವವಿಚಾರದ ಕುರಿತು ಬರುವುದಾದರೆ, ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್, ಎಸ್‌ಎಂಎಸ್, ಫೋನ್ ಅಥವಾ ಬೂತ್ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಪ್ರಶ್ನೋತ್ತರ ರೂಪದಲ್ಲಿ ನೀಡಲಾಗಿದೆ.

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವೇ? ಇಲ್ಲ, ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಲ್ಲ.

ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬುದು ಇಲ್ಲಿದೆ: ಹಂತ 1: https://voterportal.eci.gov.in ಗೆ ಭೇಟಿ ನೀಡಿ

ಹಂತ 2: ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್ ಐಡಿ/ವೋಟರ್ ಐಡಿ ಸಂಖ್ಯೆ ಬಳಸಿ ಲಾಗಿನ್ ಮಾಡಿ ಮತ್ತು ಪಾಸ್‌ವರ್ಡ್ ನಮೂದಿಸಿ

ಹಂತ 3: ಹೆಸರು, ಹುಟ್ಟಿದ ದಿನಾಂಕ ಮತ್ತು ತಂದೆಯ ಹೆಸರಿನಂತಹ ರಾಜ್ಯ, ಜಿಲ್ಲೆ ಮತ್ತು ವೈಯಕ್ತಿಕ ವಿವರಗಳನ್ನು ನಮೂದಿಸಿ.

ಹಂತ 4: ವಿವರಗಳನ್ನು ಭರ್ತಿ ಮಾಡಿದ ನಂತರ ‘ಹುಡುಕಾಟ’ (Search) ಬಟನ್ ಕ್ಲಿಕ್ ಮಾಡಿ. ನೀವು ನಮೂದಿಸಿದ ವಿವರಗಳು ಸರ್ಕಾರಿ ಡೇಟಾಬೇಸ್‌ಗೆ ಹೊಂದಿಕೆಯಾಗಿದ್ದರೆ, ನಂತರ ವಿವರಗಳು ಪರದೆಯ ಮೇಲೆ ಗೋಚರಿಸುತ್ತವೆ.

ಹಂತ 5: ಪರದೆಯ ಎಡಭಾಗದಲ್ಲಿ ಗೋಚರಿಸುವ ‘ಫೀಡ್ ಆಧಾರ್ ಸಂಖ್ಯೆ’ (Feed Aadhaar No) ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 6: ಆಗ ಆಧಾರ್ ಕಾರ್ಡ್, ಆಧಾರ್ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ನೋಂದಾಯಿತ ಇಮೇಲ್ ವಿಳಾಸದಲ್ಲಿ ನಮೂದಿಸಿರುವಂತೆ ನಿಮ್ಮ ಹೆಸರನ್ನು ಭರ್ತಿ ಮಾಡಬೇಕಾದ ಪುಟವೊಂದು ತೆರೆದುಕೊಳ್ಳುತ್ತದೆ.

ಹಂತ 7: ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿದ ನಂತರ, ಒಮ್ಮೆ ಕ್ರಾಸ್ ಚೆಕ್ ಮಾಡಿ ಮತ್ತು ‘ಸಲ್ಲಿಸು’ (Submit) ಬಟನ್ ಒತ್ತಿರಿ.

ಹಂತ 8: ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ನೋಂದಾಯಿಸಲಾಗಿದೆ ಎಂಬ ಸಂದೇಶವು ಪರದೆಯ ಮೇಲೆ ಕಾಣಿಸುತ್ತದೆ.

Aadhar Card

ಆಧಾರ್ ಕಾರ್ಡ್ (ಪ್ರಾತಿನಿಧಿಕ ಚಿತ್ರ)

ಎಸ್‌ಎಂಎಸ್ ಮೂಲಕ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬುದು ಇಲ್ಲಿದೆ: ಕೆಳಗೆ ನೀಡಲಾದ ಫಾರ್ಮ್ಯಾಟ್‌ನಲ್ಲಿ 166 ಅಥವಾ 51969 ಗೆ SMS ಕಳುಹಿಸುವ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ವೋಟರ್ ಐಡಿಯೊಂದಿಗೆ ಲಿಂಕ್ ಮಾಡಬಹುದು.

< ಮತದಾರರ ID ಸಂಖ್ಯೆ > < ಆಧಾರ್_ಸಂಖ್ಯೆ > ಈ ಫಾರ್ಮ್ಯಾಟ್​ನಲ್ಲಿ ಬರೆದು 166 ಅಥವಾ 51969 ಗೆ ಎಸ್​ಎಂಎಸ್ ಕಳುಹಿಸಿ.

ಫೋನ್ ಮೂಲಕ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬುದು ಇಲ್ಲಿದೆ: ವೋಟರ್ ಐಡಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಇನ್ನೊಂದು ಆಯ್ಕೆಯೆಂದರೆ ಇದಕ್ಕೆಂದೇ ಸ್ಥಾಪಿಸಲಾದ ಕಾಲ್ ಸೆಂಟರ್​ಗಳಿಗೆ (Call Centre) ಕರೆ ಮಾಡುವ ಮೂಲಕ. ನೀವು ವಾರದ ದಿನಗಳಲ್ಲಿ 10 ರಿಂದ ಸಂಜೆ 5 ರ ನಡುವೆ 1950 ಗೆ ಡಯಲ್ ಮಾಡಬೇಕಾಗುತ್ತದೆ. ನಂತರ ಆಧಾರ್ ಹಾಗೂ ವೋಟರ್ ಐಡಿ ಲಿಂಕ್ ಮಾಡಲು ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ: ನೀವು ಹತ್ತಿರದ ಬೂತ್ ಮಟ್ಟದ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಬೂತ್ ಮಟ್ಟದ ಅಧಿಕಾರಿಯು ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ ಮತ್ತು ವಿವರಗಳನ್ನು ಪರಿಶೀಲಿಸಲು ನಿಮ್ಮ ಸ್ಥಳಕ್ಕೆ ಭೇಟಿ ನೀಡಬಹುದು. ಒಮ್ಮೆ ಪರಿಶೀಲಿಸಿದರೆ, ನಂತರ ಅದು ದಾಖಲೆಗಳಲ್ಲಿ ಕಾಣಿಸಿಕೊಳ್ಳಲಿದೆ.

ಮತದಾರರ ಐಡಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ನೀವು ಎನ್​ವಿಎಸ್​​ಪಿ(NVSP) ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಅಪ್ಲಿಕೇಶನ್‌ನ ಸ್ಥಿತಿಯನ್ನು ಪರಿಶೀಲಿಸಬಹುದು. https://voterportal.eci.gov.in ನಲ್ಲಿ ಮಾಹಿತಿಯನ್ನು ನಮೂದಿಸಿ. ವಿನಂತಿಯನ್ನು ನೋಂದಾಯಿಸಲಾಗಿದೆ ಮತ್ತು ಪ್ರಕ್ರಿಯೆಯಲ್ಲಿದೆ ಎಂದು ಹೇಳುವ ಅಧಿಸೂಚನೆಯು ನಿಮಗೆ ಕಾಣಿಸಿಕೊಳ್ಳುತ್ತದೆ.

ನಿಮ್ಮ ಆಧಾರ್ ಕಾರ್ಡ್ ವೋಟರ್ ಐಡಿಯೊಂದಿಗೆ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಲು ನೀವು UIDAIಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಇದನ್ನೂ ಓದಿ:

ಬಗ್​ ಕಂಡುಹಿಡಿದು ಗೂಗಲ್​ನಿಂದ ಬಹುಮಾನ ಪಡೆದ ಭಾರತೀಯ ಯುವಕ; ಒಟ್ಟು ಪಡೆದ ಮೊತ್ತವೆಷ್ಟು ಗೊತ್ತಾ?

Moto G51 5G: ಮೋಟೋ G51 5G ಮೊದಲ ಸೇಲ್: ಬೆಜೆಟ್ ಬೆಲೆಯ ಫೋನನ್ನು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಿ

Published On - 4:07 pm, Thu, 16 December 21

25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್