ಬಗ್​ ಕಂಡುಹಿಡಿದು ಗೂಗಲ್​ನಿಂದ ಬಹುಮಾನ ಪಡೆದ ಭಾರತೀಯ ಯುವಕ; ಒಟ್ಟು ಪಡೆದ ಮೊತ್ತವೆಷ್ಟು ಗೊತ್ತಾ?

ಬಗ್​ ಕಂಡುಹಿಡಿದು ಗೂಗಲ್​ನಿಂದ ಬಹುಮಾನ ಪಡೆದ ಭಾರತೀಯ ಯುವಕ; ಒಟ್ಟು ಪಡೆದ ಮೊತ್ತವೆಷ್ಟು ಗೊತ್ತಾ?
ರೋನಿ ದಾಸ್ (ಸಂಗ್ರಹ ಚಿತ್ರ)

Google: ಆಂಡ್ರಾಯಿಡ್ ಫೋರ್​ಗ್ರೌಂಡ್ ಸೇವೆಗಳಲ್ಲಿ ಬಗ್ ಕಂಡುಹಿಡಿದಿದ್ದಕ್ಕಾಗಿ ಭಾರತೀಯ ಮೂಲದ ಯುವಕನಿಗೆ ಗೂಗಲ್ ಬಹುಮಾನ ಘೋಷಿಸಿದೆ. ಅಸ್ಸಾಂ ಮೂಲದ ರೋನಿ ದಾಸ್ ಈ ಬಹುಮಾನ ಪಡೆದ ಯುವಕರಾಗಿದ್ದಾರೆ. ಪ್ರಶಸ್ತಿಯ ಮೊತ್ತವೆಷ್ಟು? ಇಲ್ಲಿದೆ ಮಾಹಿತಿ.

TV9kannada Web Team

| Edited By: shivaprasad.hs

Dec 16, 2021 | 4:35 PM

ಆಂಡ್ರಾಯ್ಡ್ (Android) ಸೇವೆಗಳಲ್ಲಿ ಬಗ್​ ಒಂದನ್ನು ಕಂಡುಹಿಡಿದು ವರದಿ ಮಾಡಿದ್ದಕ್ಕಾಗಿ ಗೂಗಲ್ (Google) ಸಂಸ್ಥೆಯು ಭಾರತದ ರೋನಿ ದಾಸ್ (Rony Das) ಅವರಿಗೆ ಬಹುಮಾನ ಘೋಷಿಸಿದೆ. ದಾಸ್ ಅವರು ಸೂಚಿಸಿದ ಬಗ್ (Bug) ಮೂಲಕ ಹ್ಯಾಕರ್‌ಗಳು ಫೋನ್‌ಗೆ ಪ್ರವೇಶಿಸಲು ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲು ಅವಕಾಶವಿತ್ತು. ಇದನ್ನು ಕಂಡುಹಿಡಿದು, ತಿಳಿಸಿದ್ದಕ್ಕಾಗಿ ಅಸ್ಸಾಂ ಮೂಲದ ದಾಸ್ ಅವರಿಗೆ ಬಹುಮಾನವಾಗಿ 5,000 ಡಾಲರ್ ಅಂದರೆ ಸರಿಸುಮಾರು 3.5 ಲಕ್ಷ ರೂ ಬಹುಮಾನವನ್ನು ನೀಡಲಿದೆ. ಸೈಬರ್ ಭದ್ರತಾ ತಜ್ಞರಾಗಿರುವ ದಾಸ್, ಈ ವರ್ಷದ ಮೇ ತಿಂಗಳಲ್ಲಿ ಗೂಗಲ್‌ಗೆ ಬಗ್​ಅನ್ನು ವರದಿ ಮಾಡಿದ್ದಾರೆ. ಗೂಗಲ್ ಆಂಡ್ರಾಯ್ಡ್ ಸೆಕ್ಯುರಿಟಿ ಟೀಮ್‌ನ ಇಮೇಲ್ ಪ್ರಕಾರ, ದಾಸ್ ಅವರು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಾಗಿ ಅಪ್ಲಿಕೇಶನ್ ರಚಿಸುವಾಗ ತಾಂತ್ರಿಕ ಸಮಸ್ಯೆಗಳನ್ನು ಗಮನಿಸಿದರು. ಮತ್ತು ಆಂಡ್ರಾಯ್ಡ್ ಫೋರ್ಗ್ರೌಂಡ್ (Android Foreground) ಸೇವೆಗಳಲ್ಲಿ ಭದ್ರತಾ ವೈಫಲ್ಯ ಇರುವುದನ್ನು ಗಮನಿಸಿದರು.

ದಿ ಈಸ್ಟ್ ಮೊಜೊ ಮಾಧ್ಯಮವು, ಗೂಗಲ್​ ದಾಸ್​​ಗೆ ಬರೆದ ಮೈಲ್​ ಅನ್ನು ಉಲ್ಲೇಖಿಸಿದೆ.  “ನಿಮ್ಮ ಪ್ರಯತ್ನಗಳನ್ನು ಗುರುತಿಸಿ ನಾವು ನಿಮಗೆ 5000 ಡಾಲರ್ ಮೊತ್ತವನ್ನು ಪ್ರೋತ್ಸಾಹದ ರೂಪದಲ್ಲಿ ನೀಡಲು ಬಯಸುತ್ತೇವೆ. ನೀವು ಒದಗಿಸಿದ ಉತ್ತಮ-ಗುಣಮಟ್ಟದ ಸಲ್ಲಿಕೆ ಮತ್ತು ಮಾಹಿತಿಗಾಗಿ ಧನ್ಯವಾದಗಳು” ಎಂದು ಗೂಗಲ್ ಆಂಡ್ರಾಯಿಡ್ ಭದ್ರತಾ ತಂಡವು ದಾಸ್‌ಗೆ ಇಮೇಲ್‌ನಲ್ಲಿ ತಿಳಿಸಿದೆ.

ರೋನಿ ದಾಸ್ ಈ ಕುರಿತು ಪ್ರತಿಕ್ರಿಯಿಸಿದ್ದು, ಅವರು ಆಪ್ ರಚಿಸುವಾಗ ಗೂಗಲ್ ಆಂಡ್ರಾಯ್ಡ್​​ ಫೋರ್ಗ್ರೌಂಡ್ ಸೇವೆಗಳ ಸೆಕ್ಯುರಿಟಿ ದುರ್ಬಲತೆ ಗಮನಿಸಿದರು. ಇದರಿಂದ ಬಳಕೆದಾರರಿಗೆ ತಿಳಿಯದಂತೆ ಅವರ ಕ್ಯಾಮೆರಾ, ಮೈಕ್ರೋಫೋನ್, ಸ್ಥಳಗಳನ್ನು ಪ್ರವೇಶಿಸಬಹುದಿತ್ತು. ಇದನ್ನು ಗಮನಿಸಿದ ದಾಸ್, ಗೂಗಲ್​ಗೆ ವರದಿ ಮಾಡಿ ನಿರಂತರ ಸಂಪರ್ಕದಲ್ಲಿದ್ದರು. ಕೊನೆಗೆ ಗೂಗಲ್ ಇದನ್ನು ಸರಿಪಡಿಸಿತು. ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ದಾಸ್ ತಾಔಉ ಕಂಡುಹಿಡಿದಿದ್ದ ಬಗ್ ಅನ್ನು ಬಹಿರಂಗಗೊಳಿಸಲು ಒಪ್ಪಿಲ್ಲ.

ಅದಾಗ್ಯೂ, ದಾಸ್ ವರದಿ ಮಾಡಿದ್ದ ಬಗ್ ಕುರಿತು ಗೂಗಲ್ ಇನ್ನೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ದಾಸ್ ಕಂಡುಹಿಡಿದ ಬಗ್ ನಿಮ್ಮ ಫೋನ್‌ನ ಮೇಲೆ ಪರಿಣಾಮ ಬೀರಿದೆಯೇ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ವಾಸ್ತವವಾಗಿ ಗೂಗಲ್ ಇದಕ್ಕೆ ಉತ್ತರವನ್ನು ನೀಡಿಲ್ಲ. ಕೆಲವು ಮೂಲಗಳ ಪ್ರಕಾರ ಗೂಗಲ್ ಈಗಾಗಲೇ ತನ್ನ ಅಪ್ಡೇಟ್​ಗಳಲ್ಲಿ ಈ ಬಗ್​ಅನ್ನು ಸರಿಪಡಿಸಿದೆ. ಆದರೆ ಈ ಕುರಿತು ಗೂಗಲ್ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ರೋನಿ ದಾಸ್ ತಮ್ಮನ್ನು ತಾವು ‘ಸೈಬರ್ ಉತ್ಸಾಹಿ’ ಎಂದು ವ್ಯಾಖ್ಯಾನಿಸಿಕೊಳ್ಳುತ್ತಾರೆ. ಈ ಹಿಂದೆ ಕೂಡ ಅವರು ಗೌಹಾಟಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಬಗ್ ಇರುವುದನ್ನು ಪತ್ತೆ ಮಾಡಿದ್ದರು. ಅವರ ಇತ್ತೀಚಿನ ಗೂಗಲ್​ ಬಗ್ ಕಂಡುಹಿಡಿದಿದ್ದು, ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಗೂಗಲ್, ಆಪಲ್ (Apple), ಫೇಸ್​ಬುಕ್ (Facebook) ಮೊದಲಾದ ಸಾಫ್ಟ್​ವೇರ್ ದೈತ್ಯ ಕಂಪನಿಗಳು ಬಗ್ ಕಂಡುಹಿಡಿದವರಿಗೆ ಬಹುಮಾನಗಳನ್ನು ನೀಡುತ್ತವೆ.

ಇದನ್ನೂ ಓದಿ:

ITR Filing Online: ಆದಾಯ ತೆರಿಗೆ ಪೋರ್ಟಲ್​ನಲ್ಲಿ ಪ್ರೊಫೈಲ್ ಅಪ್​ಡೇಟ್​ ಹೇಗೆಂದು ತಿಳಿಯಿರಿ

ಪ್ರೇಯಸಿಯ ಪತಿಯಿಂದ ತಪ್ಪಿಸಿಕೊಳ್ಳಲು ಐದನೇ ಅಂತಸ್ತಿನಿಂದ ಹಾರಿದ ಯುವಕ; ಗಾಬರಿ ಪ್ರಾಣಕ್ಕೇ ಕುತ್ತು ತಂದ ಘಟನೆ ಇದು !

Follow us on

Related Stories

Most Read Stories

Click on your DTH Provider to Add TV9 Kannada