AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR Filing Online: ಆದಾಯ ತೆರಿಗೆ ಪೋರ್ಟಲ್​ನಲ್ಲಿ ಪ್ರೊಫೈಲ್ ಅಪ್​ಡೇಟ್​ ಹೇಗೆಂದು ತಿಳಿಯಿರಿ

ಆದಾಯ ತೆರಿಗೆ ಇ- ಫೈಲಿಂಗ್ ಪೋರ್ಟಲ್​ನಲ್ಲಿ ಪ್ರೊಫೈಲ್​ ಅಪ್​ಡೇಟ್​ ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ಮಾಹಿತಿ ಇಲ್ಲಿದೆ.

ITR Filing Online: ಆದಾಯ ತೆರಿಗೆ ಪೋರ್ಟಲ್​ನಲ್ಲಿ ಪ್ರೊಫೈಲ್ ಅಪ್​ಡೇಟ್​ ಹೇಗೆಂದು ತಿಳಿಯಿರಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Dec 16, 2021 | 2:06 PM

Share

ನೀವು ತೆರಿಗೆ ಪಾವತಿದಾರರೆ? ಹಾಗಿದ್ದರೆ ತೆರಿಗೆ ಸಲ್ಲಿಸುವ ಪೋರ್ಟಲ್‌ನಲ್ಲಿ ನಿಮ್ಮ ಎಲ್ಲ ವೈಯಕ್ತಿಕ ವಿವರಗಳು ಅಪ್​ಡೇಟ್ ಆಗಿರುವುದು ಮುಖ್ಯ. ಬಳಕೆದಾರರು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ “www.incometax.gov.in”ಗೆ ಲಾಗ್ ಇನ್ ಮಾಡಬಹುದು ಮತ್ತು ಅವರ ಪ್ರೊಫೈಲ್ ಮಾಹಿತಿಯನ್ನು ಅಪ್​ಡೇಟ್ ಮಾಡಬಹುದು. ಮೈ ಪ್ರೊಫೈಲ್/ಅಪ್‌ಡೇಟ್ ಪ್ರೊಫೈಲ್ ಸೇವೆಯ ಮೂಲಕ ವಿವಿಧ ವಿವರಗಳನ್ನು ಅಪ್​ಡೇಟ್ ಮಾಡಬಹುದು. ಆದಾಯ ತೆರಿಗೆ ಇಲಾಖೆಯು ಪ್ರೊಫೈಲ್ ಮಾಹಿತಿಯನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ:

– ವೈಯಕ್ತಿಕ ವಿವರಗಳು – ಸಂಪರ್ಕ ವಿವರಗಳು – ಇತರ ವಿವರಗಳು

ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪ್ರೊಫೈಲ್ ಎಡಿಟ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು. ಹಂತ 1: ಇ-ಫೈಲಿಂಗ್ ಪೋರ್ಟಲ್ “www.incometax.gov.in”ಗೆ ತೆರಳಿ ಮತ್ತು ಲಾಗ್ ಇನ್ ಮಾಡಬೇಕು. ಹಂತ 2: ಮೇಲ್ಭಾಗದ ಬಲ ಮೂಲೆಯಲ್ಲಿ ಇರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್‌ಡೌನ್‌ನಿಂದ ‘ಮೈ ಪ್ರೊಫೈಲ್’ ಎಂಬುದನ್ನು ಆಯ್ಕೆ ಮಾಡಬೇಕು. ಪರ್ಯಾಯವಾಗಿ, ‘ಪ್ರೊಫೈಲ್ ಅಪ್​ಡೇಟ್’ ಬಟನ್ ಅನ್ನು ಆಯ್ಕೆ ಮಾಡಬಹುದು. ಹಂತ 3: ‘ಪ್ರೊಫೈಲ್’ ವಿಭಾಗದಲ್ಲಿ ಎಡಿಟ್ ಬಟನ್ ಕ್ಲಿಕ್ ಮಾಡಬೇಕು. ಹಂತ 4: ‘ಪ್ರೊಫೈಲ್’ ವಿಭಾಗವು ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, PAN ಮತ್ತು PAN ಸ್ಥಿತಿಯನ್ನು ಪ್ರದರ್ಶಿಸುತ್ತದೆ. ಆದರೂ ನಿಮ್ಮ ಪೌರತ್ವ, ವಾಸ್ತವ್ಯದ ಸ್ಥಿತಿ ಮತ್ತು ಪಾಸ್‌ಪೋರ್ಟ್ ವಿವರಗಳನ್ನು ಎಡಿಟ್ ಮಾಡಬಹುದು. ನಿಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದ್ದರೆ ಆಧಾರ್ ಸಂಖ್ಯೆಯ ಪಕ್ಕದಲ್ಲಿ ‘ಜೋಡಣೆ ಮಾಡಲಾಗಿದೆ’ ಎಂಬ ಸ್ಥಿತಿಯನ್ನು ಕಾಣಬಹುದು. ವಿವರಗಳನ್ನು ಎಡಿಟ್ ಮಾಡಿದ ನಂತರ ‘ಸೇವ್’ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಹಂತ 5: ವೈಯಕ್ತಿಕ ವಿವರಗಳ ಪುಟದಲ್ಲಿ ‘ಕಾಂಟ್ಯಾಕ್ಟ್’ ವಿಭಾಗದ ಅಡಿಯಲ್ಲಿ ಎಡಿಟ್ ಬಟನ್ ಕ್ಲಿಕ್ ಮಾಡಬೇಕು. ಹಂತ 6: ಪ್ರಾಥಮಿಕ ಮೊಬೈಲ್ ಸಂಖ್ಯೆಯನ್ನು ನಮೂದಿಸಿ (ಡ್ರಾಪ್‌ಡೌನ್‌ನಿಂದ ದೇಶದ ಕೋಡ್ ಅನ್ನು ಆಯ್ಕೆ ಮಾಡಿ). ಹಂತ 7: ಪ್ರಾಥಮಿಕ ಸಂಖ್ಯೆಯು ಸೇರಿರುವ ವ್ಯಕ್ತಿಯೊಂದಿಗೆ ಡ್ರಾಪ್‌ಡೌನ್‌ನಿಂದ ಸಂಬಂಧವನ್ನು ಆಯ್ಕೆ ಮಾಡಬೇಕು. ಪ್ರಾಥಮಿಕ ಸಂಪರ್ಕ ವಿವರಗಳನ್ನು ಅಪ್​ಡೇಟ್ ಮಾಡುವುದು ಕಡ್ಡಾಯವಾಗಿದೆ. ಆಧಾರ್‌ನ ಪ್ರಕಾರ ಸಂಪರ್ಕ ಮಾಹಿತಿಯನ್ನು ನವೀಕರಿಸಲು ನೀವು ‘ಆಧಾರ್‌ನಂತೆ ನವೀಕರಿಸಿ (Update as per Aadhaar)’ ಅನ್ನು ಕ್ಲಿಕ್ ಮಾಡಿ ಮತ್ತು ಹೊಸ ಪಾಪ್-ಅಪ್ ಸಂದೇಶದಲ್ಲಿ ಅದನ್ನು ದೃಢೀಕರಿಸಬಹುದು. UIDAIನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ OTP ಅನ್ನು ಸ್ವೀಕರಿಸುತ್ತೀರಿ ಮತ್ತು OTP ಅನ್ನು ನಮೂದಿಸಲು ಮರು ನಿರ್ದೇಶಿಸಲಾಗುತ್ತದೆ. ಹಂತ 8: ಅದೇ ರೀತಿ ನಿಮ್ಮ ದ್ವಿತೀಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ (ಡ್ರಾಪ್‌ಡೌನ್‌ನಿಂದ ದೇಶದ ಕೋಡ್ ಅನ್ನು ಆಯ್ಕೆ ಮಾಡಿ). ಪ್ರಾಥಮಿಕ ಸಂಖ್ಯೆಯು ಸೇರಿರುವ ವ್ಯಕ್ತಿಯೊಂದಿಗೆ ಡ್ರಾಪ್‌ಡೌನ್‌ನಿಂದ ಸಂಬಂಧವನ್ನು ಆಯ್ಕೆ ಮಾಡಿ. ದ್ವಿತೀಯ ಸಂಪರ್ಕ ವಿವರಗಳನ್ನು ನಮೂದಿಸುವುದು ಆಪ್ಷನಲ್​ (ಐಚ್ಛಿಕ) ಆಗಿರುತ್ತದೆ. ಹಂತ 9: ನಿಮ್ಮ ವಸತಿ/ಕಚೇರಿ ಮೊಬೈಲ್ ಸಂಖ್ಯೆ ಮತ್ತು ಲ್ಯಾಂಡ್‌ಲೈನ್ ವಿವರಗಳನ್ನು ಸಹ ನಮೂದಿಸಬಹುದು. ಹಂತ 10: ಪ್ರಾಥಮಿಕ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಇಮೇಲ್ ವಿಳಾಸವನ್ನು ಹೊಂದಿರುವ ವ್ಯಕ್ತಿಯೊಂದಿಗೆ ನಿಮ್ಮ ಸಂಬಂಧವನ್ನು ಆಯ್ಕೆ ಮಾಡಿ. UIDAI ಡೇಟಾಬೇಸ್‌ನಿಂದ ‘ಆಧಾರ್‌ನಂತೆ ನವೀಕರಿಸಿ’ ಆಯ್ಕೆ ಮಾಡುವ ಮೂಲಕ ಅಂತಹ ಪ್ರಾಥಮಿಕ ಸಂಪರ್ಕ ವಿವರಗಳನ್ನು ಪಡೆಯಬಹುದು. ಹಂತ 11: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ವಿಳಾಸವನ್ನು ನಮೂದಿಸಿ. ದೇಶ, ಫ್ಲಾಟ್/ಮನೆ/ಕಟ್ಟಡ ಮತ್ತು ಪಿನ್ ಕೋಡ್ ವಿವರಗಳನ್ನು ನಮೂದಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಪೋಸ್ಟ್ ಆಫೀಸ್, ಪ್ರದೇಶ/ಪ್ರಾದೇಶಿಕತೆ, ಜಿಲ್ಲೆ/ನಗರ, ರಾಜ್ಯ ಮತ್ತು ತಿಳಿಸಬೇಕಾದ ಸಂವಹನವನ್ನು ಆಯ್ಕೆ ಮಾಡಬೇಕು.

ಎಲ್ಲ ಸಂಬಂಧಿತ ವಿವರಗಳನ್ನು ಭರ್ತಿ ಮಾಡಿದ ನಂತರ ಮುಂದುವರಿಯಲು ‘ಉಳಿಸು’ (ಸೇವ್​) ಕ್ಲಿಕ್ ಮಾಡಬೇಕು. ನಿಮ್ಮ ಪ್ರೊಫೈಲ್ ವಿವರಗಳನ್ನು ಯಶಸ್ವಿಯಾಗಿ ಅಪ್​ಡೇಟ್ ಮಾಡಲಾಗುತ್ತದೆ.

ಸಂಪರ್ಕ ವಿವರಗಳನ್ನು ಅಪ್​ಡೇಟ್ ಮಾಡುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳು: – ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ: ಬ್ಯಾಂಕ್ ವಿವರಗಳ ಪ್ರಕಾರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಅಪ್‌ಡೇಟ್ ಮಾಡಿದರೆ ಇ-ಫೈಲಿಂಗ್ ಸೈಟ್‌ನಲ್ಲಿ ನಮೂದಿಸಲಾದ ಪ್ರಾಥಮಿಕ ಮೊಬೈಲ್ ಸಂಖ್ಯೆ ಮತ್ತು ಪ್ರಾಥಮಿಕ ಇಮೇಲ್ ಐಡಿಯಲ್ಲಿ ಕ್ರಮವಾಗಿ OTP ಸ್ವೀಕರಿಸುತ್ತೀರಿ. – ಆಧಾರ್‌ಗೆ ಅನುಗುಣವಾಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಅಪ್​ಡೇಟ್​ ಮಾಡಿದರೆ ಮತ್ತು ಬೇರೆ ಯಾವುದೇ ಬದಲಾವಣೆಗಳನ್ನು ಮಾಡದಿದ್ದರೆ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ನಿಮ್ಮನ್ನು ಕೇಳಲಾಗುವುದಿಲ್ಲ. ಆದರೆ ನಿಮ್ಮ ಇಮೇಲ್ ವಿಳಾಸವನ್ನು ದೃಢೀಕರಣ ಮಾಡಬೇಕಾಗುತ್ತದೆ. – ನೀವು ಕೇವಲ ವಿಳಾಸ ವಿವರಗಳನ್ನು ಅಪ್​ಡೇಟ್ ಮಾಡುತ್ತಿದ್ದರೆ (PAN/ಆಧಾರ್ ಪ್ರಕಾರ) ಯಾವುದೇ OTP ದೃಢೀಕರಣದ ಅಗತ್ಯವಿಲ್ಲ. ವಿಳಾಸವನ್ನು ಯಶಸ್ವಿಯಾಗಿ ಅಪ್​ಡೇಟ್ ಮಾಡಿದ ನಂತರ ಇ-ಫೈಲಿಂಗ್ ಸೈಟ್‌ನಲ್ಲಿ ನೋಂದಾಯಿಸಲಾದ ಪ್ರಾಥಮಿಕ ಇಮೇಲ್ ಐಡಿಯಲ್ಲಿ ಇ-ಮೇಲ್ ಕಳುಹಿಸಲಾಗುತ್ತದೆ. – ಅಂತರರಾಷ್ಟ್ರೀಯ ಫೋನ್ ಸಂಖ್ಯೆಯನ್ನು ಹೊಂದಿರುವ ಅನಿವಾಸಿಯಾಗಿದ್ದರೆ OTP ಅನ್ನು ಪ್ರಾಥಮಿಕ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ: Income Tax Returns: ಡಿಸೆಂಬರ್​ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಂತೆ ಇಲಾಖೆ ಸೂಚನೆ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ