Income Tax Returns: ಡಿಸೆಂಬರ್ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಂತೆ ಇಲಾಖೆ ಸೂಚನೆ
ಆದಾಯ ತೆರಿಗೆ ರಿಟರ್ನ್ಸ್ ಡಿಸೆಂಬರ್ 31ರೊಳಗೆ ಫೈಲ್ ಮಾಡುವಂತೆ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ಒತ್ತಾಯಿಸಲಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವುದನ್ನು ಹೆಚ್ಚು ತೆರಿಗೆದಾರರ ಸ್ನೇಹಿಯನ್ನಾಗಿ ಮಾಡುವ ಪ್ರಯತ್ನದಲ್ಲಿ ಸರ್ಕಾರವು ಈ ವರ್ಷ ಇ-ಫೈಲಿಂಗ್ ಪೋರ್ಟಲ್ ಪ್ರಾರಂಭಿಸಿದೆ. 2021-22ರ ಅಸೆಸ್ಮೆಂಟ್ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವು ಡಿಸೆಂಬರ್ 31 ಆಗಿದೆ ಎಂದು ಘೋಷಿಸುವಾಗ ತೆರಿಗೆದಾರರು ತಮ್ಮ ಇ-ಫೈಲಿಂಗ್ ಪೋರ್ಟಲ್ ಬಳಸಿ, ಶೀಘ್ರದಲ್ಲೇ ರಿಟರ್ನ್ಸ್ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆಯು ಸೂಚಿಸಿದೆ. ಆದಾಯ ತೆರಿಗೆ (ಐ.ಟಿ) ಇಲಾಖೆಯು ಫೈಲಿಂಗ್ ಪ್ರಕ್ರಿಯೆಯನ್ನು ಸರಾಗಗೊಳಿಸುವ ಇತರ ಉಪಕ್ರಮಗಳೊಂದಿಗೆ ಆಟೋಮೆಟೆಡ್ ಫೈಲಿಂಗ್ ವ್ಯವಸ್ಥೆ, ವಾರ್ಷಿಕ ಮಾಹಿತಿ ಹೇಳಿಕೆ (ಎಐಎಸ್) ಪರಿಚಯಿಸಿದೆ. 2021-2022ರ ಅಸೆಸ್ಮೆಂಟ್ ವರ್ಷಕ್ಕೆ ಐಟಿಆರ್ ಸಲ್ಲಿಸಲು ಅಂತಿಮ ದಿನಾಂಕ ಡಿಸೆಂಬರ್ 31, 2021 ಆಗಿದೆ.
ಐಟಿಆರ್ ಇನ್ನೂ ಸಲ್ಲಿಸದ ತೆರಿಗೆದಾರರು ನಿಗದಿತ ದಿನಾಂಕದ ಮೊದಲು ಅದನ್ನು ಮಾಡಬೇಕು. ಸಲ್ಲಿಸಲು ವಿಫಲವಾದರೆ ಎಲ್ಲ ತೆರಿಗೆದಾರರಿಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (CBDT) ಆರಂಭದಲ್ಲಿ ಜುಲೈ 31ರಂದು ಗಡುವನ್ನು ನಿಗದಿಪಡಿಸಿತ್ತು. ಆದರೆ ತಾಂತ್ರಿಕ ದೋಷಗಳಿಂದಾಗಿ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಯಿತು. ಅಂತಿಮವಾಗಿ, ಐಟಿಆರ್ ಫೈಲಿಂಗ್ ಗಡುವನ್ನು ಡಿಸೆಂಬರ್ 31ಕ್ಕೆ ವಿಸ್ತರಿಸಲು ಸರ್ಕಾರ ನಿರ್ಧರಿಸಿತು. ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಡಿಸೆಂಬರ್ 3ರ ಹೊತ್ತಿಗೆ ಮೂರು ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ.
ಇದರ ಜತೆಗೆ, ಟಿಡಿಎಸ್ ಹಾಗೂ ತೆರಿಗೆ ಪಾವತಿಗಳ ನಿಖರತೆಯನ್ನು ಪರಿಶೀಲಿಸಲು ಮತ್ತು ಐಟಿಆರ್ಗಳ ಪೂರ್ವ-ಭರ್ತಿಯಾದ ಐಟಿಆರ್ಗಳು ಪಡೆಯಲು ಇ-ಫೈಲಿಂಗ್ ಪೋರ್ಟಲ್ ಮೂಲಕ ತಮ್ಮ ಫಾರ್ಮ್ 26AS ಮತ್ತು ವಾರ್ಷಿಕ ಮಾಹಿತಿ ಹೇಳಿಕೆ (AIS) ವೀಕ್ಷಿಸಲು ಆದಾಯ ತೆರಿಗೆ ಇಲಾಖೆಯು ತೆರಿಗೆದಾರರನ್ನು ಒತ್ತಾಯಿಸಿದೆ. “ತೆರಿಗೆದಾರರು ತಮ್ಮ ಬ್ಯಾಂಕ್ ಪಾಸ್‌ಬುಕ್, ಬಡ್ಡಿ ಪ್ರಮಾಣಪತ್ರ, ಫಾರ್ಮ್ 16 ಮತ್ತು ಈಕ್ವಿಟಿ ಅಥವಾ ಮ್ಯೂಚುವಲ್ ಫಂಡ್‌ಗಳ ಖರೀದಿ ಹಾಗೂ ಮಾರಾಟದ ಸಂದರ್ಭದಲ್ಲಿ ಬ್ರೋಕರೇಜ್‌ಗಳಿಂದ ಎಐಎಸ್ ಸ್ಟೇಟ್‌ಮೆಂಟ್‌ನಲ್ಲಿರುವ ಡೇಟಾವನ್ನು ಕ್ರಾಸ್-ಚೆಕ್ ಮಾಡುವುದು ಮುಖ್ಯ,” ಎಂದು ಸಚಿವಾಲಯ ಹೇಳಿದೆ.
ಆಧಾರ್ OTP ಮತ್ತು ಇತರ ವಿಧಾನಗಳ ಮೂಲಕ ಇ-ಪರಿಶೀಲನೆಯ ಪ್ರಕ್ರಿಯೆಯು ಇಲಾಖೆಯು ITR ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಯಾವುದಾದರೂ ಮರುಪಾವತಿಯನ್ನು ನೀಡಲು ಮುಖ್ಯವಾಗಿದೆ. “2.69 ಕೋಟಿ ರಿಟರ್ನ್‌ಗಳನ್ನು ಇ-ಪರಿಶೀಲಿಸಲಾಗಿದೆ ಎಂಬುದು ಉತ್ತೇಜನಕಾರಿಯಾಗಿದೆ. ಅದರಲ್ಲಿ 2.28 ಕೋಟಿಗೂ ಹೆಚ್ಚು ಆಧಾರ್ ಆಧಾರಿತ ಒಟಿಪಿ ಮೂಲಕವಾಗಿದೆ,” ಎಂದು ಅದು ಹೇಳಿದೆ. ಇಲಾಖೆಯು ಇಮೇಲ್‌ಗಳು, ಎಸ್‌ಎಂಎಸ್ ಮತ್ತು ಮಾಧ್ಯಮ ಪ್ರಚಾರಗಳ ಮೂಲಕ ತೆರಿಗೆದಾರರಿಗೆ ಜ್ಞಾಪನೆಗಳನ್ನು ನೀಡುತ್ತಿದೆ. ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಮತ್ತಷ್ಟು ವಿಳಂಬವಿಲ್ಲದೆ ಸಲ್ಲಿಸಲು ಉತ್ತೇಜಿಸುತ್ತಿದೆ. “AY 2021-22ರ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಇನ್ನೂ ಸಲ್ಲಿಸದ ಎಲ್ಲ ತೆರಿಗೆದಾರರು ಕೊನೆಯ ಕ್ಷಣದ ವಿಪರೀತವನ್ನು ತಪ್ಪಿಸಲು ತಮ್ಮ ರಿಟರ್ನ್ಸ್ ಅನ್ನು ಆದಷ್ಟು ಬೇಗ ಸಲ್ಲಿಸಲು ವಿನಂತಿಸಲಾಗಿದೆ,” ಎಂದು ಅದು ಸೇರಿಸಿದೆ.
ಇದನ್ನೂ ಓದಿ: IT Refund: ಆದಾಯ ತೆರಿಗೆ ಪಾವತಿದಾರರಿಗೆ ನ. 22ರ ತನಕ 1.24 ಲಕ್ಷ ಕೋಟಿ ರೀಫಂಡ್; ಮರುಪಾವತಿ ಸ್ಥಿತಿ ಪರಿಶೀಲನೆ ಹೇಗೆ?
Published On - 12:17 pm, Mon, 13 December 21