Moto G51 5G: ಮೋಟೋ G51 5G ಮೊದಲ ಸೇಲ್: ಬೆಜೆಟ್ ಬೆಲೆಯ ಫೋನನ್ನು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಿ

Moto G51 5G Sirst Sale: ಭಾರತದಲ್ಲಿ ಮೋಟೋ G51 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಕೇವಲ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕಾಗಿ 14,999 ರೂ. ನಿಗದಿ ಮಾಡಲಾಗಿದೆ.

Moto G51 5G: ಮೋಟೋ G51 5G ಮೊದಲ ಸೇಲ್: ಬೆಜೆಟ್ ಬೆಲೆಯ ಫೋನನ್ನು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಿ
Moto G51 5G
Follow us
TV9 Web
| Updated By: Vinay Bhat

Updated on: Dec 16, 2021 | 3:25 PM

ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮೋಟೋರೊಲಾ (Motorola) ಕಂಪನಿ ಕಳೆದ ವಾರವಷ್ಟೆ ತನ್ನ ಹೊಸ ಮೋಟೋರೊಲಾ ಜಿ51 5ಜಿ (Moto G51 5G) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಭರ್ಜರಿ ಸುದ್ದಿಯಲ್ಲಿರುವ ಈ ಸ್ಮಾರ್ಟ್​ಫೋನಿನ ಮೊದಲ ಮಾರಾಟ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಸಿದ್ಧ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್​ನಲ್ಲಿ (Flipkart) ಆರಂಭವಾಗಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 480 SoC ಪ್ಲಸ್‌ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್​ಫೋನ್ (Smartphone) ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ ಎಂಬುದು ವಿಶೇಷ. ಹಾಗಾದ್ರೆ ಈ ಫೋನಿನ ಮೊದಲ ಸೇಲ್​ನಲ್ಲಿ ಏನು ಆಫರ್ ಇದೆ?, ಏನು ವಿಶೇಷತೆ?, ಬೆಲೆ ಎಷ್ಟು ಎಂಬುದನ್ನು ನೋಡೋಣ.

ಏನು ವಿಶೇಷತೆ?:

ಮೋಟೋ G51 ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಹೋಲ್‌ ಪಂಚ್‌ ಎಲ್‌ಸಿಡಿ ಡಿಸ್‌ಪ್ಲೇ ಆಗಿದ್ದು 20:9 ರಚನೆಯ ಅನುಪಾತವನ್ನು ಪಡೆದಿದೆ. 120 Hz ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್​ನಿಂದ ಕೂಡಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 480+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ವಿಶೇಷವಾಗಿ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ S5JKN1 ಸೆನ್ಸಾರ್‌ ಅನ್ನು ಒಳಗೊಂಡಿರುತ್ತದೆ. ಇನ್ನು ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಪಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇನ್ನು ಮೋಟೋ G51 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇದನ್ನು ಬರೋಬ್ಬರಿ 30 ಗಂಟೆಯ ವರೆಗೆ ಉಪಯೋಗಿಸಬಹುದು ಎಂದು ಕಂಪನಿ ಹೇಳಿದೆ. ಉಳಿದಂತೆ Dolby Atmos ಬೆಂಬಲ ಪಡೆದುಕೊಂಡಿದ್ದು, ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ, Wi-Fi 5, ಬ್ಲೂಟೂತ್ v5.2, GPS, USB ಟೈಪ್-C ಪೋರ್ಟ್ ಮತ್ತು 3.5mm ಆಡಿಯೊ ಜ್ಯಾಕ್‌ ನೀಡಲಾಗಿದೆ. ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಇದೆ.

ಬೆಲೆ ಮತ್ತು ಆಫರ್:

ಭಾರತದಲ್ಲಿ ಮೋಟೋ G51 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಕೇವಲ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕಾಗಿ 14,999 ರೂ. ನಿಗದಿ ಮಾಡಲಾಗಿದೆ. ಡಿಸೆಂಬರ್ 16 ಇಂದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಈ ಸ್ಮಾರ್ಟ್​ಫೋನ್ ಮೊದಲ ಸೇಲ್ ಕಾಣುತ್ತಿದೆ. ಈ ಸ್ಮಾರ್ಟ್‌ಫೋನ್ ಆಕ್ವಾ ಬ್ಲೂ ಮತ್ತು ಇಂಡಿಗೊ ಬ್ಲೂ ಬಣ್ಣಗಳ ಆಯ್ಕೆ ಪಡೆದಿದೆ. ಈ ಫೋನ್‌ಗೆ EMI ಯೋಜನೆ ಆಕರ್ಷಕ ನೀಡಿದೆ. ಆರಂಭಿಕ ಇಎಮ್ಐ 520 ರೂ. ಆಗಿದೆ. ಜೊತೆಗೆ ಮೊಟೊ ಹ್ಯಾಂಡ್‌ಸೆಟ್‌ನಲ್ಲಿ 12 ತಿಂಗಳ ವಾರಂಟಿ ಮತ್ತು ಬಿಡಿಭಾಗಗಳ ಮೇಲೆ ಆರು ತಿಂಗಳ ವಾರಂಟಿಯನ್ನು ಘೋಷಿಸಿದೆ.

WhatsApp: ವಾಟ್ಸ್ಆ್ಯಪ್ ಡಿಲೀಟ್ ಮೆಸೇಜ್​ನಲ್ಲಿ ಶಾಕಿಂಗ್ ಬದಲಾವಣೆ: ಹೊಸ ಅಪ್ಡೇಟ್​ನಲ್ಲಿದೆ ಊಹಿಸಲಾಗದ ಫೀಚರ್

Jio 1 rs Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ನಿನ್ನೆ ಪರಿಚಯಿಸಿದ 1 ರೂ. ಪ್ಲಾನ್​ನಲ್ಲಿ ಇಂದು ದೊಡ್ಡ ಬದಲಾವಣೆ

(Moto G51 5G will go on sale in India today for the first time and will be exclusively available on Flipkart)