- Kannada News Technology Reliance Jio has already changed the benefits of the Re 1 plan Here is Prepaid Plan Benefits
Jio 1 rs Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ನಿನ್ನೆ ಪರಿಚಯಿಸಿದ 1 ರೂ. ಪ್ಲಾನ್ನಲ್ಲಿ ಇಂದು ದೊಡ್ಡ ಬದಲಾವಣೆ
Jio Tariff: ಬುಧವಾರ ಪರಿಚಯಿಸಿದ್ದ ಜಿಯೋದ ಈ 1 ರೂ. ರೀಚಾರ್ಜ್ ಪ್ಲಾನ್ನಲ್ಲಿ 30 ದಿನಗಳವರೆಗೆ 100MB ಡೇಟಾ ಪ್ರಯೋಜನ ಘೋಷಿಸಿತ್ತು. ಆದರೆ ಇದೀಗ ಈ ಅಗ್ಗದ ರೀಚಾರ್ಜ್ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
Updated on: Dec 16, 2021 | 2:05 PM

ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ ಶಾಕ್ನಿಂದ ಗ್ರಾಹಕರು ಇನ್ನೂ ಹೊರಬಂದಿಲ್ಲ. ಇದನ್ನ ಮರೆಮಾಚಲು ಜಿಯೋ, ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ ಅಧಿಕ ಡೇಟಾ, ಓಟಿಟಿ ಆಫರ್ಗಳನ್ನು ಬಿಡುಗಡೆ ಮಾಡುತ್ತಿದೆ. ಆದರೂ ಬಳಕೆದಾರರಿಂದ ಬೆಲೆ ಏರಿಕೆಯ ಬಿಸಿ ತಣ್ಣಗಾಗಿಲ್ಲ. ಇದನ್ನ ಮನಗಂಡ ಜಿಯೋ ಬುಧವಾರ ಕೇವಲ 1 ರೂಪಾಯಿಗೆ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿತ್ತು. ಆದ್ರೆ ಇದೀಗ ಈ ಅತೀ ಅಗ್ಗದ ರೀಚಾರ್ಜ್ ಪ್ಲಾನಿನಲ್ಲಿ ದೊಡಗಡ ಬದಲಾವಣೆ ಮಾಡಿ ಗ್ರಾಹಕರಿಗೆ ಮತ್ತೆ ಬಿಗ್ ಶಾಕ್ ನೀಡಿದೆ.

ಹೌದು, ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಜಿಯೋ ಬುಧವಾರವಷ್ಟೆ ಕೇವಲ 1 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯೊಂದನ್ನು ಪರಿಚಯಿಸಿತು. ಈ ಹೊಸ ಯೋಜನೆಯನ್ನು ಜಿಯೋ ಮೊಬೈಲ್ ಅಪ್ಲಿಕೇಶನ್ನಲ್ಲಿ ಮಾತ್ರವೇ ಪರಿಚಯಿಸಲಾಗಿದ್ದು, ಅಗತ್ಯಕ್ಕಿಂತ ಹೆಚ್ಚಿನ ಡೇಟಾವನ್ನು ಖರೀದಿಸಲು ಬಯಸದ ಕಡಿಮೆ-ಆದಾಯದ ವರ್ಗದ ಜನರಿಗೆ ಈ 1 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆ ಉಪಕಾರಿ ಆಗಲಿದೆ ಎನ್ನಲಾಗಿತ್ತು.

ಬುಧವಾರ ಪರಿಚಯಿಸಿದ್ದ ಈ 1 ರೂ. ರೀಚಾರ್ಜ್ ಪ್ಲಾನ್ನಲ್ಲಿ 30 ದಿನಗಳವರೆಗೆ 100MB ಡೇಟಾ ಪ್ರಯೋಜನ ಘೋಷಿಸಿತ್ತು. ಆದ್ರೆ ಇದೀಗ ಈ ಅತೀ ಅಗ್ಗದ ರೀಚಾರ್ಜ್ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಗ್ರಾಹಕರಿಗೆ ಬಿಗ್ ಶಾಕ್ ಎನಿಸಿದೆ.

ರಿಲಯನ್ಸ್ ಜಿಯೋ ಟೆಲಿಕಾಂ ಹೊಸದಾಗಿ 1 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯಲ್ಲಿ ಈಗ ಬದಲಾವಣೆ ಆಗಿದೆ. 100MB ಬದಲಿಗೆ ಕೇವಲ 10MB ಡೇಟಾ ಪ್ರಯೋಜನ ನೀಡಲಿದೆ. ಹಾಗೆಯೇ 30 ದಿನಗಳ ವ್ಯಾಲಿಡಿಟಿ ಬದಲಿಗೆ ಒಂದು ದಿನದ ವ್ಯಾಲಿಡಿಟಿ ತಿಳಿಸಿ ಆಘಾತ ನೀಡಿದೆ.

ಈ ರೀಚಾರ್ಜ್ ಯಾವುದೇ ಹೆಚ್ಚುವರಿ ಪ್ರಯೋಜನ ಹೊಂದಿಲ್ಲ. ಮೈ ಜಿಯೋ ಮೊಬೈಲ್ ಅಪ್ಲಿಕೇಶನ್ನಲ್ಲಿ ಈ ರೀಚಾರ್ಜ್ ಬಗ್ಗೆ ಗ್ರಾಹಕರು ನೋಡಬಹುದಾಗಿದೆ. ಅಂದರೆ ಈ ಯೋಜನೆಯಲ್ಲಿ ಯಾವುದೇ ವಾಯಿಸ್ ಕರೆ, ಎಸ್ಎಮ್ಎಸ್ ಪ್ರಯೋಜನ ಲಭ್ಯ ಇರುವುದಿಲ್ಲ.

ಇನ್ನು 119 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಲಾಭಗಳನ್ನು ಪರಿಷ್ಕರಿಸಿದೆ. ಅನಿಯಮಿತ ಯೋಜನೆಗಳ ರೀಚಾರ್ಜ್ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಕೊಡುಗೆಯಾಗಿರುವ ಜಿಯೋವಿನ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಈಗ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ಪಡೆಯಲು ಸಹಾಯಕವಾಗಿದೆ.

ಜಿಯೋ ಟೆಲಿಕಾಂನ 119 ರೂ. ಪ್ರಿಪೇಯ್ಡ್ ಪ್ಲಾನ್ 14 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300 SMSಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 21GB ಡೇಟಾ ಪ್ರಯೋಜನ ಸಿಗಲಿದೆ.

ಜಿಯೋದ 299 ರೂ. ಪ್ರಿಪೇಯ್ಡ್ ಪ್ಲಾನ್ನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. 28 ದಿನಗಳ ವ್ಯಾಲಿಡಿಟಿಗೆ ಒಟ್ಟು 56 GB ಡೇಟಾ ಸಿಗಲಿದೆ.




