WhatsApp Ban: ಮೇ ತಿಂಗಳಲ್ಲಿ ಭಾರತದ 65 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ

6,508,000 ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್ (Ban) ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ. ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ಕೂಡ ಭಾರತದಲ್ಲಿ 74 ಲಕ್ಷಕ್ಕೂ ಅಧಿಕತ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್​ಆ್ಯಪ್ ಹೇಳಿತ್ತು.

WhatsApp Ban: ಮೇ ತಿಂಗಳಲ್ಲಿ ಭಾರತದ 65 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ
WhatsApp ban

Updated on: Jul 03, 2023 | 10:10 AM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್ ಮೇ ತಿಂಗಳಲ್ಲಿ ಬರೋಬ್ಬರಿ 65 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್​ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮೇ 01-31ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್​ಆ್ಯಪ್​ (WhatsApp) ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 6,508,000 ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್ (Ban) ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ. ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ಕೂಡ ಭಾರತದಲ್ಲಿ 74 ಲಕ್ಷಕ್ಕೂ ಅಧಿಕತ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್​ಆ್ಯಪ್ ಹೇಳಿತ್ತು.

ಬ್ಯಾನ್‌ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ. ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ಮೇ 26 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಈ ವರದಿಯಲ್ಲಿ ಸ್ವೀಕರಿಸಿದ ದೂರುಗಳು ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು.

Mobile Number: ನಿಮ್ಮ ನಂಬರ್​ಗೆ ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ಆ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ?

ಇದನ್ನೂ ಓದಿ
Samsung Odyssey OLED G9: ಸೂಪರ್ ಗೇಮಿಂಗ್​ ಪ್ರಿಯರಿಗೆ ಸ್ಯಾಮ್​ಸಂಗ್ ಮಾನಿಟರ್
Insta360 Go 3: ಪ್ರವಾಸದ ಸುಂದರ ಕ್ಷಣಗಳ ಸೆರೆಹಿಡಿಯಲು ಇನ್​ಸ್ಟಾ360 ಕ್ಯಾಮೆರಾ
Tech Tips: ನಿಮ್ಮ ಹಳೆಯ ಸ್ಮಾರ್ಟ್​ಫೋನ್ ಮಾರಾಟ ಮಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ
ZenFone 10: ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್: ಮಾರುಕಟ್ಟೆಗೆ ಅಪ್ಪಳಿಸಿತು ಏಸಸ್ ಜೆನ್‌ಫೋನ್‌ 10 ಸ್ಮಾರ್ಟ್​ಫೋನ್

ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸುತ್ತದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, ವಾಟ್ಸ್​ಆ್ಯಪ್ ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ ಎಂದಿದ್ದಾರೆ. ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು.

ವಿಡಿಯೋವನ್ನು ಹೆಚ್​ಡಿ ಕ್ವಾಲಿಟಿಯಲ್ಲಿ ಕಳುಹಿಸಿ:

ವಾಟ್ಸ್​ಆ್ಯಪ್ ಬಳಕೆದಾರರಿಗೆ ವಿಡಿಯೋವನ್ನು ಹೆಚ್​ಡಿ ಕ್ವಾಲಿಟಿಯಲ್ಲಿ ಕಳುಹಿಸುವ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಸದ್ಯಕ್ಕೆ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು, ಆಂಡ್ರಾಯ್ಡ್ ಬೇಟಾ ಬಳಕೆದಾರರು ಉಪಯೋಗಿಸಬಹುದು. ಫೋಟೋ ಕಳುಹಿಸುವಾಗ ಕಾಣಿಸುವ ಆಯ್ಕೆಯಂತೆ ವಿಡಿಯೋಕ್ಕೆ ಕೂಡ ಹೆಚ್​ಡಿ ಎಂಬ ಬಟನ್ ಕಾಣಸಿಗಲಿದೆ. ವಾಟ್ಸ್​ಆ್ಯಪ್​ನಲ್ಲಿ ವಿಡಿಯೋವನ್ನು ಕಳುಹಿಸುವ ಮುನ್ನ ಸ್ಟಾಂಡರ್ಡ್ ಮತ್ತು ಹೆಚ್​ಡಿ ಎಂಬ ಎರಡು ಆಯ್ಕೆ ನೀಡಲಾಗಿದೆ. ಈವರೆಗೆ ವಿಡಿಯೋವನ್ನು ಕಳುಹಿಸಿದಾಗ ಅದು ತನ್ನ ನೈಜ್ಯತೆಯನ್ನು ಕಳೆದುಕೊಳ್ಳುತ್ತಿತ್ತು. ಒರಿಜಿನಲ್ ಕ್ವಾಲಿಟಿಯಲ್ಲಿ ರಿಸಿವರ್​ಗೆ ಸಿಗುತ್ತಿರಲಿಲ್ಲ. ಆದರೀಗ ಹೆಚ್​ಡಿ ಆಯ್ಕೆಯಲ್ಲಿ ಈ ಎಲ್ಲ ತೊಂದರೆ ನಿವಾರಣೆ ಆಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ