ZenFone 10: ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್: ಮಾರುಕಟ್ಟೆಗೆ ಅಪ್ಪಳಿಸಿತು ಏಸಸ್ ಜೆನ್‌ಫೋನ್‌ 10 ಸ್ಮಾರ್ಟ್​ಫೋನ್

ಏಸಸ್‌ ಜೆನ್‌ಫೋನ್‌ 10 ಫೋನ್‌ ಸದ್ಯಕ್ಕೆ ಯರೋಪ್ ದೇಶದಲ್ಲಿ ಮಾತ್ರ ಖರೀದಿಗೆ ಸಿಗುತ್ತದೆ. ಆದರೆ, ಕೆಲವೇ ವಾರಗಳಲ್ಲಿ ಭಾರತ ಸೇರಿದಂತೆ ಇತರೆ ದೇಶಗಳಲ್ಲೂ ಅನಾವರಣಗೊಳ್ಳಲಿದೆಯಂತೆ.

ZenFone 10: ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್: ಮಾರುಕಟ್ಟೆಗೆ ಅಪ್ಪಳಿಸಿತು ಏಸಸ್ ಜೆನ್‌ಫೋನ್‌ 10 ಸ್ಮಾರ್ಟ್​ಫೋನ್
Asus Zenfone 10
Follow us
|

Updated on: Jul 02, 2023 | 2:30 PM

ತೈವಾನ್ ಮೂಲದ ಪ್ರಸಿದ್ಧ ಕಂಪನಿ ಏಸಸ್ (Asus) ಸದ್ಯ ಹೊಸ ಮೊಬೈಲ್​ನೊಂದಿಗೆ ಮಾರುಕಟ್ಟೆಗೆ ಪುನಃ ಬಂದಿದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇದೀಗ ಜೆನ್‌ಫೋನ್‌ (Asus Zenfone) ಸರಣಿಯಲ್ಲಿ ವಿನೂತನ ಫೋನ್‌ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಅದುವೇ ಜೆನ್‌ಫೋನ್‌ 10 (Asus Zenfone 10). ಇದು ಈ ಹಿಂದಿನ ಜೆನ್‌ಫೋನ್‌ಗಳಿಗಿಂತ ಸಾಕಷ್ಟು ಅಪ್‌ಡೇಟ್‌ ಆಗಿದ್ದು, ಅತ್ಯಂತ ಬಲಿಷ್ಠವಾದ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಅಳವಡಿಸಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್​​ಫೋನ್​ನ ಬೆಲೆ ಎಷ್ಟು?, ಫೀಚರ್ಸ್​ ಏನೇನಿದೆ? ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಏಸಸ್‌ ಜೆನ್‌ಫೋನ್‌ 10 ಫೋನ್‌ ಸದ್ಯಕ್ಕೆ ಯರೋಪ್ ದೇಶದಲ್ಲಿ ಮಾತ್ರ ಖರೀದಿಗೆ ಸಿಗುತ್ತದೆ. ಆದರೆ, ಕೆಲವೇ ವಾರಗಳಲ್ಲಿ ಭಾರತ ಸೇರಿದಂತೆ ಇತರೆ ದೇಶಗಳಲ್ಲೂ ಅನಾವರಣಗೊಳ್ಳಲಿದೆಯಂತೆ. ಈ ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 128GB ವೇರಿಯಂಟ್‌ಗೆ EUR 799, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 71,260 ರೂ. ಎನ್ನಬಹುದು. 8GB RAM + 256GB ಸ್ಟೋರೇಜ್​ಗೆ EUR 849 (ಭಾರತದಲ್ಲಿ 75,714 ರೂ.) ಕೊನೆಯದಾಗಿ 16GB RAM + 512GB ವೇರಿಯಂಟ್‌ಗೆ ದೇಶದಲ್ಲಿ 82,851 ರೂ. ಇರಬಹುದು. ಈ ಫೋನ್ ಕಮೆಟ್ ವೈಟ್, ಮಿಡ್‌ನೈಟ್ ಬ್ಲಾಕ್, ಸ್ಟಾರಿ ಬ್ಲೂ ಬಣ್ಣಗಳಲ್ಲಿ ಲಭ್ಯ ಆಗಲಿದೆ.

ಇದನ್ನೂ ಓದಿ
Image
Mobile Number: ನಿಮ್ಮ ನಂಬರ್​ಗೆ ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ಆ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ?
Image
Twitter Down: ಭಾರತ ಸೇರಿದಂತೆ ವಿಶ್ವದ ಅನೇಕ ಕಡೆಗಳಲ್ಲಿ ಟ್ವಿಟರ್ ಸರ್ವರ್ ಡೌನ್: ಬಳಕೆದಾರರ ಪರದಾಟ
Image
Redmi Watch 3 Active: ಶಓಮಿ ರೆಡ್ಮಿ ಪರಿಚಯಿಸಿದೆ ಲೇಟೆಸ್ಟ್ ಸ್ಮಾರ್ಟ್​ವಾಚ್
Image
Best Camera Phones: ಈ ಸ್ಮಾರ್ಟ್​ಫೋನ್​ಗಳ ಬೆಲೆ ಕೊಂಚ ದುಬಾರಿ, ಆದರೆ ಕ್ಯಾಮೆರಾ ಮಾತ್ರ ಅದ್ಭುತ

Upcoming smartphons: ಬರುತ್ತಿದೆ ಆಕರ್ಷಕ ಮೊಬೈಲ್​ಗಳು: ಜುಲೈನಲ್ಲಿ ರಿಲೀಸ್ ಆಗಲಿದೆ 5 ಹೊಸ ಸ್ಮಾರ್ಟ್​ಫೋನ್ಸ್

ಫೀಚರ್ಸ್ ಏನಿದೆ?:

ಜೆನ್‌ಫೋನ್‌ 10 ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯದ 5.9 ಇಂಚಿನ ಫುಲ್ ಹೆಚ್​ಡಿ+ AMOLED ಹೆಚ್​ಡಿಆರ್​+ ಡಿಸ್‌ಪ್ಲೇ ಹೊಂದಿದೆ. ಇದು 144Hz ರಿಫ್ರೆಶ್ ರೇಟ್​ನೊಂದಿಗೆ ರಿಲೀಸ್ ಆಗಿದ್ದು, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ನೀಡಲಾಗಿದೆ. ಅತ್ಯಂತ ಬಲಿಷ್ಠವಾದ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್‌ ಸಪೋರ್ಟ್‌ ಸಹ ಪಡೆದುಕೊಂಡಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿದೆ. ಇದು ಸೋನಿ IMX766 ಸೆನ್ಸಾರ್​ನಿಂದ ಕೂಡಿದೆ. ಇನ್ನೊಂದು ಕ್ಯಾಮೆರಾವು ಅಲ್ಟ್ರಾ-ವೈಡ್ 13 ಮೆಗಾ ಪಿಕ್ಸಾಲ್‌ ಸೆನ್ಸಾರ್‌ ಸಾಮರ್ಥ್ಯದದೆ. ಅಂತೆಯೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ RGBW ಟೆಕ್ನಾಲಜಿ ಹೊಂದಿರುವ 32 ಮೆಗಾ ಪಿಕ್ಸಾಲ್‌ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ.

ಏಸಸ್‌ ಜೆನ್‌ಫೋನ್‌ 10 ಫೋನಿನ ಬ್ಯಾಟರಿ 4,300mAh ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 30W ವೇಗದ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದಿದೆ. ಜೊತೆಗೆ 15W ವೈಯರ್​ಲೆಸ್ ಚಾರ್ಜಿಂಗ್ ಟೆಕ್ನಾಲಜಿ ನೀಡಲಾಗಿದೆ. ಉಳಿದಂತೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಸಪೋರ್ಟ್ ಪಡೆದುಕೊಂಡಿದೆ. 4G LTE, Wi-Fi 802.11, ಬ್ಲೂಟೂತ್ v5.2 ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆಗಳನ್ನು ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ