Upcoming smartphons: ಬರುತ್ತಿದೆ ಆಕರ್ಷಕ ಮೊಬೈಲ್ಗಳು: ಜುಲೈನಲ್ಲಿ ರಿಲೀಸ್ ಆಗಲಿದೆ 5 ಹೊಸ ಸ್ಮಾರ್ಟ್ಫೋನ್ಸ್
ಒನ್ಪ್ಲಸ್ ಕಂಪನಿಯ ನೂತನ ನಾರ್ಡ್ 3 ಫೋನ್ ಇದೆ ಜುಲೈನಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದರ ಬೆಲೆ 30,000 ರೂ. ಒಳಗಡೆ ಇರಬಹುದು ಎನ್ನಲಾಗಿದೆ.
ಮೊಬೈಲ್ (Mobile) ಮಾರುಕಟ್ಟೆ ಇಂದು ವಿಸ್ತಾರವಾಗಿದೆ. ಸಾಕಷ್ಟು ಸ್ಮಾರ್ಟ್‌ಫೋನ್ (Smartphone) ಕಂಪನಿಗಳು ಹುಟ್ಟುಕೊಂಡಿದ್ದು, ಹೆಚ್ಚಿನ ಕಂಪನಿ ತಿಂಗಳಿಗೆ ಒಂದು ಮೊಬೈಲ್ ಅನ್ನು ಬಿಡುಗಡೆ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ವಾರಕ್ಕೆ ಎರಡು ಅಥವಾ ಮೂರು ಫೋನ್ ಅನಾವರಣಗೊಳ್ಳುತ್ತದೆ. ಅದರಂತೆ ಜುಲೈ ತಿಂಗಳು ಕೂಡ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಆಕರ್ಷಕ ಮೊಬೈಲ್ಗಳು ಲಗ್ಗೆ ಇಡಲು ಸಜ್ಜಾಗಿ ನಿಂತಿದೆ. ಒನ್ಪ್ಲಸ್, ರಿಯಲ್ ಮಿ (Realme), ಸ್ಯಾಮ್‌ಸಂಗ್ ಸೇರಿದಂತೆ ಇನ್ನೂ ಕೆಲ ಕಂಪನಿಯ ಮೊಬೈಲ್ ಬಿಡುಗಡೆ ಆಗಲಿದೆ.
ಒನ್ಪ್ಲಸ್ ನಾರ್ಡ್ 3:
ಒನ್ಪ್ಲಸ್ ಕಂಪನಿಯ ನೂತನ ನಾರ್ಡ್ 3 ಫೋನ್ ಇದೆ ಜುಲೈನಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದರ ಬೆಲೆ 30,000 ರೂ. ಒಳಗಡೆ ಇರಬಹುದು ಎನ್ನಲಾಗಿದೆ. ಇದು 6.7 ಇಂಚಿನ ಅಮೋಲೆಡ್ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಡೈಮನ್ಸಿಟಿ 900 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಲ್ಲಿರುವ ಹಿಂಭಾಗದ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇರಲಿದೆ. ಇದು ಸೋನಿ ಸೆನ್ಸಾರ್ ಸಾಮರ್ಥ್ಯ ಇರುವ ಸಾಧ್ಯತೆ ಇದೆ. ಹಾಗೆಯೆ 8 ಮೆಗಾಪಿಕ್ಸೆಲ್ನ ಸೆಕೆಂಡರಿ ಕ್ಯಾಮೆರಾ ಇರಲಿದ್ದು 2 ಮೆಗಾಪಿಕ್ಸೆಲ್ನ ಕ್ಯಾಮೆರಾ ಕೂಡ ಇರಲಿದೆ. ಮುಂಭಾಗ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. 5,000mAh ಬ್ಯಾಟರಿಯನ್ನು ಒಳಗೊಂಡಿರುವುದು ಬಹುತೇಕ ಖಚಿತ. ಇದು ಬರೋಬ್ಬರಿ 80W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.
ರಿಯಲ್ ಮಿ ನಾರ್ಜೊ 60 5G:
ರಿಯಲ್ ಮಿ ನಾರ್ಜೊ 60 5G ಸ್ಮಾರ್ಟ್‌ಫೋನ್ ಜುಲೈ 6 ರಂದು ಅನಾವರಣಗೊಳ್ಳುವ ನಿರೀಕ್ಷೆಯಿದೆ. ಇದು ಬಜೆಟ್ ಬೆಲೆಗೆ ಲಭ್ಯವಿದ್ದು ಇದರ ಆರಂಭಿಕ ದರ 17,999 ರೂ. ಎಂದು ಹೇಳಲಾಗಿದೆ. ಈ ಫೋನಿನ ಅಧಿಕೃತ ಫೀಚರ್ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 6.43-ಇಂಚಿನ ಪೂರ್ಣ HD + AMOLED ಡಿಸ್ ಪ್ಲೇಯೊಂದಿಗೆ ಬರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್ ಜೊತೆಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಬಹುದು. 33W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ನೀಡಲಾಗಿದೆ.
Noise ColorFit Vision 3: ನಾಯ್ಸ್ ಸ್ಮಾರ್ಟ್ವಾಚ್ ಸರಣಿಯಲ್ಲಿ ಬಂತು ಮತ್ತೊಂದು ಸ್ಟೈಲಿಶ್ ವಾಚ್
ನಥಿಂಗ್ ಫೋನ್ (2):
ನಥಿಂಗ್ ಫೋನ್ (2) ಸ್ಮಾರ್ಟ್‌ಫೋನ್ ಜುಲೈ 11 ರಂದು ರಿಲೀಸ್ ಆಗಲಿದೆ. ಈ ಬಗ್ಗೆ ಕಂಪನಿ ಖಚಿತ ಪಡಿಸಿದೆ. ಈ ಫೋನ್ 6.67 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದ್ದು, ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಈ ಫೋನಿನ ಹಿಂಭಾಗದಲ್ಲರುವ ಎಲ್ಲ ಮೂರು ಕ್ಯಾಮೆರಾಗಳು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆಯಂತೆ. ಅದರಂತೆ ಮುಂಭಾಗ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಳ್ಳಲಿದೆ ಎನ್ನುವ ವದಂತಿಗಳಿವೆ. ನಥಿಂಗ್ ಫೋನ್ (2) 4700mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರಲಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5
ಬರೋಬ್ಬರಿ 6,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್‌ಫೋನ್ ಇದೇ ಜುಲೈ 7 ರಂದು ಭಾರತದ ಮಾರುಕಟ್ಟೆಗೆ ಅಪ್ಪಳಿಸುತ್ತಿದೆ. ಈ ಫೋನಿನ ಬೆಲೆ 30,000 ರೂ. ಇರಬಹುದು. 6.7 ಇಂಚಿನ ಸೂಪರ್ ಅಮೊಲೊಡ್ ಡಿಸ್‌ಪ್ಲೇ ಹೊಂದಿರಲಿದೆ. ಎಕ್ಸಿನೋಸ್ 1280 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿರಲಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಇದಲ್ಲದೆ ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ಒಳಗೊಂಡಿರಬಹುದು. 6,000mAh ಸಾಮರ್ಥ್ಯದ ಬ್ಯಾಟರಿ ಇದೆ. ಇದು 25W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರುತ್ತದೆ.
ಐಕ್ಯೂ ನಿಯೋ 7 ಪ್ರೊ:
ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್ ಜುಲೈ 4 ರಂದು ಭಾರತದಲ್ಲಿ ಬಿಡುಗಡೆ ಆಗುವುದು ಖಚಿತವಾಗಿದೆ. ಈ ಫೋನ್‌ನ ಕೆಲವು ಫೀಚರ್ಸ್ ಈಗಾಗಲೇ ಲೀಕ್ ಆಗಿವೆ. ತನ್ನ ಫಾಸ್ಟ್ ಚಾರ್ಜರ್ನಿಂದ ಟೆಕ್ ಪ್ರಿಯರ ನಿದ್ದೆಗೆಡಿಸಿರುವ ಈ ಹೊಸ ಫೋನ್ನಲ್ಲಿ ಸ್ನಾಪ್‌ಡ್ರಾಗನ್ 8+ ಜೆನ್ 1 ಪ್ರೊಸೆಸರ್ ಅಳವಡಿಸಲಾಗಿದೆ. 6.78 ಇಂಚಿನ FHD+ ಸ್ಯಾಮ್‌ಸಂಗ್ E5 ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಈ ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿ ಜೊತೆಗೆ ಸ್ಯಾಮ್‌ಸಂಗ್ GN5 ಸೆನ್ಸರ್ ಆಯ್ಕೆಯ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರಲಿದೆ. ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ ಎಂದು ಹೇಳಲಾಗಿದೆ. 120W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ