Google Street View: ಮನೆಯಲ್ಲೇ ಕುಳಿತು ಗೂಗಲ್ ಮ್ಯಾಪ್​ನಲ್ಲಿ ಒಂದು ಸ್ಥಳವನ್ನು ಲೈವ್ ಆಗಿ ನೋಡುವುದು ಹೇಗೆ?

ಈಗ ನೀವು ಯಾವುದಾದರೊಂದು ಸ್ಥಳಕ್ಕೆ ಹೋಗಬೇಕು ಎಂದು ಅಂದುಕೊಂಡಿದ್ದೀರಿ. ಆಗ ನೀವು ಗೂಗಲ್ ಮ್ಯಾಪ್ ತೆರೆದು ಸ್ಟ್ರೀಟ್ ವ್ಯೂ ಫೀಚರ್ ಮೂಲಕ ಆ ಸ್ಥಳದ ಸ್ಥಿತಿಯ ಬಗ್ಗೆ ಮೊದಲೇ ತಿಳಿದುಕೊಳ್ಳಬಹುದು.

Google Street View: ಮನೆಯಲ್ಲೇ ಕುಳಿತು ಗೂಗಲ್ ಮ್ಯಾಪ್​ನಲ್ಲಿ ಒಂದು ಸ್ಥಳವನ್ನು ಲೈವ್ ಆಗಿ ನೋಡುವುದು ಹೇಗೆ?
Street View in Google Maps
Follow us
|

Updated on: Jul 01, 2023 | 1:38 PM

ಭಾರತದಲ್ಲಿ ಅತಿ ಹೆಚ್ಚು ಜನರು ಉಪಯೋಗಿಸುವ ವೆಬ್​ಸೈಟ್ ಎಂದರೆ ಅದು ಗೂಗಲ್ (Google). ಇದು ಅನೇಕ ಸೇವೆಗಳನ್ನು ನೀಡುತ್ತಿದೆ. ಇದರಲ್ಲಿ ಬಹಳ ಉಪಯುಕ್ತವಾದ ಸೇವೆ ಎಂದರೆ ಗೂಗಲ್ ಮ್ಯಾಪ್ಸ್ (Google Maps). ಜನರಿಗೆ ಒಂದು ಸ್ಥಳಕ್ಕೆ ತೆರಳಲು ದಾರಿ ತಿಳಿದಿಲ್ಲದಿದ್ದರೆ ಇದು ಸಹಾಯ ಮಾಡುತ್ತದೆ. ಈಗಂತು ಗೂಗಲ್ ಮ್ಯಾಪ್ಸ್ ಸಾಕಷ್ಟು ಅಪ್ಡೇಟ್ ಪಡೆದುಕೊಂಡಿದೆ. ಕೇವಲ ದಾರಿಯನ್ನು ಹುಡುಕಲು ಮಾತ್ರವಲ್ಲದೆ ಹತ್ತಿರದಲ್ಲಿರುವ ಹೋಟೇಲ್, ಪ್ರವಾಸಿ ತಾಣ, ಉತ್ತಮವಾದ ಲಾಡ್ಜ್ ಹೀಗೆ ಹೆಚ್ಚಿನ ಮಾಹಿತಿಗಳನ್ನು ಗೂಗಲ್ ಮ್ಯಾಪ್ಸ್ ನೀಡುತ್ತದೆ. ಇತ್ತೀಚೆಗಷ್ಟೆ ಇದರಲ್ಲಿ ಸ್ಟ್ರೀವ್ ವ್ಯೂ (Street View) ಎಂಬ ವಿಶೇಷ ಫೀಚರ್ ಕೂಡ ಬಂದಿದೆ.

ಏನಿದು ಸ್ಟ್ರೀಟ್ ವ್ಯೂ?:

ಈಗ ನೀವು ಯಾವುದಾದರೊಂದು ಸ್ಥಳಕ್ಕೆ ಹೋಗಬೇಕು ಎಂದು ಅಂದುಕೊಂಡಿದ್ದೀರಿ. ಆಗ ನೀವು ಗೂಗಲ್ ಮ್ಯಾಪ್ ತೆರೆದು ಸ್ಟ್ರೀಟ್ ವ್ಯೂ ಫೀಚರ್ ಮೂಲಕ ಆ ಸ್ಥಳದ ಸ್ಥಿತಿಯ ಬಗ್ಗೆ ಮೊದಲೇ ತಿಳಿದುಕೊಳ್ಳಬಹುದು. ಅಂದರೆ ಒಂದು ಸ್ಥಳದ ಬಗ್ಗೆ ನಿಮಗೆ ಮಾಹಿತಿ ಬೇಕು ಎಂದಾದಲ್ಲಿ ಅದಕ್ಕಾಗಿ ನೀವು ಆ ಪ್ರದೇಶಕ್ಕೆ ತೆರಳಿ ಪರಿಶೀಲಿಸಬೇಕಾಗಿಲ್ಲ. ಸ್ಟ್ರೀಟ್ ವ್ಯೂ ಫೀಚರ್ ಮೂಲಕ ಕುಳಿತಲ್ಲಿಯೇ ಆ ಪ್ರದೇಶದ ಚಿತ್ರವನ್ನು ನೀವು 360 ಡಿಗ್ರಿಯಲ್ಲಿ ವೀಕ್ಷಿಸಬಹುದು.

WhatsApp Videos: ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಹಂಚಿಕೊಳ್ಳಲು WhatsAppನಲ್ಲಿ ಬರುತ್ತಿದೆ ಹೊಸ ವೈಶಿಷ್ಟ್ಯ

ಇದನ್ನೂ ಓದಿ
Image
Air Conditioner: ನಿಮ್ಮ ಮನೆಯ AC ಪಕ್ಕದಲ್ಲೇ ಟಿವಿ ಕೂಡ ಇದೆಯಾ?: ಹಾಗಾದರೆ ಕೂಡಲೇ ಸ್ಥಳ ಬದಲಾಯಿಸಿ
Image
Sony Bravia XR X90L: ಟಿವಿ ಪ್ರಿಯರಿಗಾಗಿ ಹೊಸ ಮಾದರಿ ಪರಿಚಯಿಸಿದೆ ಸೋನಿ
Image
Noise ColorFit Vision 3: ನಾಯ್ಸ್ ಸ್ಮಾರ್ಟ್​ವಾಚ್ ಸರಣಿಯಲ್ಲಿ ಬಂತು ಮತ್ತೊಂದು ಸ್ಟೈಲಿಶ್ ವಾಚ್
Image
Tecno Camon 20 Pro 5G: ವಿಶೇಷ ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಟೆಕ್ನೋ ಫೋನ್

ಈ ಫೀಚರ್ 2016ರಲ್ಲೇ ಭಾರತದಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ, ಈ ಫೀಚರ್ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಇದನ್ನು ಪ್ರಾರಂಭಿಸಲು ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಕಳೆದ ವರ್ಷ ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ, ಪುಣೆ, ವಡೋದರಾ, ನಾಸಿಕ್, ಅಹಮದ್‌ನಗರ ಮತ್ತು ಅಮೃತಸರ ನಗರಗಳಲ್ಲಿ ಸಿಗುತ್ತಿತ್ತು. ಇದೀಗ ದೇಶದ ಸಣ್ಣ ಹಳ್ಳಿ, ಪಟ್ಟಣ ಸೇರಿದಂತೆ ಎಲ್ಲ ನಗರಗಳಲ್ಲಿ ಈ ಸೇವೆ ಲಭ್ಯವಾಗುತ್ತಿದೆ. ಈ ಫೀಚರ್​ನಲ್ಲಿ ಗೌಪ್ಯತೆಯನ್ನು ಕಾಪಾಡಲು ಫೋಟೋಗಳಲ್ಲಿ ಕಾಣಿಸುವ ಜನರ ಮುಖಗಳನ್ನು ಬ್ಲರ್ ಮಾಡಲಾಗುತ್ತದೆ.

ಗೂಗಲ್ ಸ್ಟ್ರೀವ್ ವ್ಯೂ ಫೀಚರ್ ಅನ್ನು ಆಂಡ್ರಾಯ್ಡ್​ನಲ್ಲಿ ಬಳಸುವುದು ಹೇಗೆ?

  • ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್​ಫೋನ್​ನಲ್ಲಿ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್ ತೆರೆಯಿರಿ
  • ಒಂದು ಸ್ಥಳವನ್ನು ಆಯ್ಕೆ ಮಾಡಿ ಅಥವಾ ನಕ್ಷೆಯಲ್ಲಿ ಪಿನ್ ಮಾಡಿ
  • ಈಗ ಆಯ್ಕೆ ಮಾಡಿದ ಸ್ಥಳದ ಮೇಲೆ ಕ್ಲಿಕ್ ಮಾಡಿ ಹಿಡಿದುಕೊಳ್ಳಿ
  • ನಂತರ ಕೆಳಭಾಗದಲ್ಲಿ ಬಂದಿರುವ ಸ್ಥಳದ ಹೆಸರನ್ನು ಟ್ಯಾಪ್ ಮಾಡಿ
  • ಈಗ ನಿಮಗೆ “ಸ್ಟ್ರೀಟ್ ವ್ಯೂ” ಬರೆದಿರುವ ಫೋಟೋ ಕಾಣಿಸುತ್ತದೆ
  • ಆ ಫೋಟೋವನ್ನು ಸ್ಕ್ರಾಲ್ ಮಾಡಿ ಮತ್ತು ಆಯ್ಕೆಮಾಡಿ
  • ಇಲ್ಲಿ ಮ್ಯಾಪ್‌ನಲ್ಲಿ ಕಾಣಿಸುವ ಚಿಕ್ಕ ಚಿಕ್ಕ ವೃತ್ತಗಳನ್ನು ಕ್ಲಿಕ್ ಮಾಡಿದರೆ ಆ ಪ್ರದೇಶವನ್ನು ನೀವು 360 ಡಿಗ್ರಿ ಕೋನದಲ್ಲಿ ವೀಕ್ಷಿಸಬಹುದು

ಗೂಗಲ್ ಸ್ಟ್ರೀವ್ ವ್ಯೂ ಫೀಚರ್ ಅನ್ನು ಐಫೋನ್​ನಲ್ಲಿ ಬಳಸುವುದು ಹೇಗೆ?

  • ನೀವು ಐಫೋನ್​ನಲ್ಲಿ ಗೂಗಲ್‌ ಮ್ಯಾಪ್‌ ಆ್ಯಪ್ ಓಪನ್ ಮಾಡಿ
  • ಒಂದು ಸ್ಥಳವನ್ನು ಆಯ್ಕೆ ಮಾಡಿ ಅಥವಾ ನಕ್ಷೆಯಲ್ಲಿ ಪಿನ್ ಮಾಡಿ
  • ಈಗ ಆಯ್ಕೆ ಮಾಡಿದ ಸ್ಥಳದ ಮೇಲೆ ಕ್ಲಿಕ್ ಮಾಡಿ ಹಿಡಿದುಕೊಳ್ಳಿ
  • ನಂತರ ಕೆಳಭಾಗದಲ್ಲಿ ಬಂದಿರುವ ಸ್ಥಳದ ಹೆಸರನ್ನು ಟ್ಯಾಪ್ ಮಾಡಿ
  • ಈಗ ನಿಮಗೆ “ಸ್ಟ್ರೀಟ್ ವ್ಯೂ” ಬರೆದಿರುವ ಫೋಟೋ ಕಾಣಿಸುತ್ತದೆ
  • ಫೋಟೋ ಮೇಲೆ ಕ್ಲಿಕ್ ಮಾಡಿದ ನಂತರ ಪರದೆಯ ಮೇಲೆ ಎಳೆಯಿರಿ
  • ನೀವು ಎಡಕ್ಕೆ, ಬಲಕ್ಕೆ ಸ್ವೈಪ್ ಮಾಡಿ 360 ಡಿಗ್ರಿಯಲ್ಲಿ ಆ ಪ್ರದೇಶವನ್ನು ವೀಕ್ಷಿಸಬಹುದು

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ