WhatsApp Videos: ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಹಂಚಿಕೊಳ್ಳಲು WhatsAppನಲ್ಲಿ ಬರುತ್ತಿದೆ ಹೊಸ ವೈಶಿಷ್ಟ್ಯ

WhatsApp ಅಪ್ಲಿಕೇಶನ್‌ನಲ್ಲಿ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿದೆ. ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಕಳುಹಿಸುವ ಸಾಮರ್ಥ್ಯವನ್ನು ನೀಡುತ್ತಿದೆ ಎಂದು WABetaInfo ವರದಿ ಮಾಡಿದೆ.

WhatsApp Videos: ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಹಂಚಿಕೊಳ್ಳಲು WhatsAppನಲ್ಲಿ ಬರುತ್ತಿದೆ ಹೊಸ ವೈಶಿಷ್ಟ್ಯ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 30, 2023 | 1:15 PM

ವಾಟ್ಸಪ್​​  (WhatsApp) ಎಲ್ಲ ಸಂವಹನಗಳಿಗೆ ಒಂದು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಅನೇಕ ಅಪ್ಡೇಟ್​​​​ಗಳ ಜತೆಗೆ, ಬಳಕೆದಾರರಿಗೆ ಹೊಸ ಹೊಸ ಫೀಚರ್​​ಗಳನ್ನು ಪರಿಚಯಿಸಿದೆ. ಮೆಸೇಜ್, ಫೋಟೋ, ವೀಡಿಯೊ ಎಲ್ಲವನ್ನು ಕಳುಹಿಸಲು ಈ ವಾಟ್ಸಪ್​​ ಉತ್ತಮ ವೇದಿಕೆಯಾಗಿದೆ, ದಿನಕ್ಕೊಂದು ಬದಲಾವಣೆಗಳನ್ನು ವಾಟ್ಸಪ್​​ ಮಾಡುತ್ತಿದೆ, ಇದೀಗ ಅದರ ಡೇಟಾ ಕಂಪ್ರೆಷನ್‌ನಿಂದಾಗಿ ವಾಟ್ಸಾಪ್‌ನಲ್ಲಿ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಂಡಾಗ ಅವುಗಳ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಅನೇಕ ಬಳಕೆದಾರರ ದೂರಿನಿಂದಾಗಿ ಈಗ ಹೊಸ ಅಪ್ಡೇಟ್​​ನ್ನು ಬಂದಿದೆ.

ಇದೀಗ WhatsApp ಅಪ್ಲಿಕೇಶನ್‌ನಲ್ಲಿ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿದೆ. ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಕಳುಹಿಸುವ ಸಾಮರ್ಥ್ಯವನ್ನು ನೀಡುತ್ತಿದೆ ಎಂದು WABetaInfo ವರದಿ ಮಾಡಿದೆ. WhatsApp ಉತ್ತಮ ಗುಣಮಟ್ಟದ ಮತ್ತು ಅವುಗಳ ಮೂಲ ಆಯಾಮಗಳನ್ನು ಕಳೆದುಕೊಳ್ಳದೆ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ಕಳುಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

WhatsAppನಲ್ಲಿ ಉತ್ತಮ ಗುಣಮಟ್ಟದ ವೀಡಿಯೊಗಳು ಹೇಗೆ ಕೆಲಸ ಮಾಡುತ್ತದೆ?

WhatsApp ಡ್ರಾಯಿಂಗ್ ಎಡಿಟರ್‌ಗೆ ಹೊಸ ಕ್ಲಿಕ್ ಬಟನ್​ನ್ನು ಪರಿಚಯಿಸಿದ್ದು, ಈ ಮೂಲಕ ಬಳಕೆದಾರರು ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಅದೇ ರೆಸಲ್ಯೂಶನ್​ನಲ್ಲಿ ಕಳುಹಿಸಬಹುದು. ಆದರೆ ಕೆಲವು ಬದಲಾವಣೆಗಳನ್ನು ವಾಟ್ಸಪ್ ಮಾಡಿದೆ. ಇದಕ್ಕೆ ಬೇರೆ ಬೇರೆ ಎಡಿಟ್​​ ಆಪ್ಷನ್ ನೀಡಿದೆ. ​ನೀವು ಈಗಾಗಲೇ ಬೇರೆ ಬೇರೆ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ವೀಡಿಯೊಗಳನ್ನು ಅದಕ್ಕಿಂತ ಉತ್ತಮ ಕ್ವಾಲಿಟಿಯನ್ನು ವೀಡಿಯೊವನ್ನು ವಾಟ್ಸಪ್​​ ಈ ಹೊಸ ಫೀಚರ್​ ನೀಡುತ್ತದೆ. WhatsApp “ಸ್ಟ್ಯಾಂಡರ್ಡ್ ಕ್ವಾಲಿಟಿ” ಸೆಟ್ಟಿಂಗ್​ನ್ನು ಬಳಸಲು ಡೀಫಾಲ್ಟ್ ಆಗಿರುತ್ತದೆ ಮತ್ತು ಬಳಕೆದಾರರು ಪ್ರತಿ ಬಾರಿ ವೀಡಿಯೊವನ್ನು ಹಂಚಿಕೊಳ್ಳುವಾಗ ಉತ್ತಮ ಗುಣಮಟ್ಟದ ಆಪ್ಷನ್​​ಗಳನ್ನು ಬಳಸಿಕೊಳ್ಳಬಹುದು.

ಇದು ಈಗಾಗಲೇ ನಿಮ್ಮ ಮೊಬೈಲ್​​ನಲ್ಲಿ ಈ ಸೆಟ್ಟಿಂಗ್ಸ್​​​ ಬಂದಿದೆ ಎಂದು ತಿಳಿದುಕೊಳ್ಳಲು ದೊಡ್ಡದಾದ, ಉತ್ತಮ ಗುಣಮಟ್ಟದ ವೀಡಿಯೊ ಫೈಲ್​​ನ್ನು ಒಮ್ಮೆ ಯಾರಿಗಾದರೂ ಕಳುಹಿಸಿ ನೋಡಿ. ಒಂದು ವೇಳೆ ಇದು ವರ್ಕ್ ಆಯಿತು ಎಂದರೆ ಈ ವೈಶಿಷ್ಟ್ಯ ಸಕ್ರಿಯಗೊಳಿಸಲಾಗಿದೆ ಎಂದು ಬರುತ್ತದೆ. ಬಳಕೆದಾರರು ಉತ್ತಮ ಗುಣಮಟ್ಟದ ಆಯ್ಕೆಯನ್ನು ಬಳಸಿಕೊಂಡು ವೀಡಿಯೊವನ್ನು ಹಂಚಿಕೊಂಡಾಗ, ಅದನ್ನು ಉತ್ತಮ ಗುಣಮಟ್ಟದ ವೀಡಿಯೊ ಎಂದು ಗುರುತಿಸಲಾಗುತ್ತದೆ ಎಂದು WABetaInfo ಹೇಳಿದೆ.

ಇದನ್ನೂ ಓದಿ: WhatsApp Storage: ವಾಟ್ಸ್​ಆ್ಯಪ್ ಸ್ಟೋರೇಜ್ ಫುಲ್ ಆದರೆ ಏನು ಮಾಡ್ಬೇಕು ಗೊತ್ತಾ?

ಇದು ಯಾವಾಗ ಹೊರಬರುತ್ತಿದೆ

ಈ ಸದ್ಯಕ್ಕೆ Google Play Store ನಿಂದ WhatsApp ಬೀಟಾದ Android ಆವೃತ್ತಿ 2.23.14.10 ಅನ್ನು ನವೀಕರಿಸಿದ ಕೆಲವು ಬೀಟಾ ಪರೀಕ್ಷಕರಿಗೆ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಕಳುಹಿಸುವ ಸಾಮರ್ಥ್ಯವನ್ನು WhatsApp ಪ್ರಸ್ತುತಪಡಿಸುತ್ತಿದೆ. ಈ ವೈಶಿಷ್ಟ್ಯವು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗುತ್ತದೆ ಎಂದು ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Fri, 30 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ