WhatsApp Chat Lock: ನಿಮ್ಮ ವಾಟ್ಸ್ಆ್ಯಪ್ ಚಾಟ್ ಅನ್ನು ಬೇರೆಯವರು ನೋಡದಂತೆ ಲಾಕ್ ಮಾಡಬಹುದು: ಹೇಗೆ ಗೊತ್ತೇ?
ವಾಟ್ಸ್ಆ್ಯಪ್ ಚಾಟ್ ಲಾಕ್ ಫೀಚರ್ ತುಂಬಾ ಉಪಯುಕ್ತವಾದ ಆಯ್ಕೆ ಆಗಿದ್ದು, ಫ್ಯಾಮಿಲಿ ಅಥವಾ ಸ್ನೇಹಿತರ ಜೊತೆ ಸ್ಮಾರ್ಟ್ಫೋನನ್ನು ಹಂಚಿಕೊಳ್ಳುವವರಿಗೆ ಸಹಕಾರಿ ಆಗಲಿದೆ. ಈ ಆಯ್ಕೆ ಚಾಟ್ನ ಕಾಂಟೆಕ್ಟ್ ಅಥವಾ ಗ್ರೂಪ್ನ ಇನ್ಫೋದಲ್ಲಿ ಇರುತ್ತದೆ.
ವಾಟ್ಸ್ಆ್ಯಪ್ನಲ್ಲಿ (WhatsApp) ನಿಮ್ಮ ಚಾಟ್ ಅನ್ನು ಬೇರೆಯವರು ನೋಡುತ್ತಾರೆ ಅಥವಾ ಓದುತ್ತಾರೆ ಎಂಬ ಅನುಮಾನ ನಿಮಗೆ ಇದ್ದರೆ ಕಂಪನಿ ಒಂದು ಅದ್ಭುತ ಆಯ್ಕೆಯನ್ನು ನೀಡಿದೆ. ಅದುವೇ ಚಾಟ್ ಲಾಕ್ (Chat Lock) ಫೀಚರ್. ಇದರ ಮೂಲಕ ನಿಮ್ಮ ವಾಟ್ಸ್ಆ್ಯಪ್ ಚಾಟ್ ಅನ್ನು ನೀವು ಪಾಸ್ವರ್ಡ್ ಹಾಕಿ ಲಾಕ್ ಮಾಡಬಹುದು. ಇತ್ತೀಚೆಗಷ್ಟೆ ವಾಟ್ಸ್ಆ್ಯಪ್ ಈ ಆಯ್ಕೆಯನ್ನು ಆಂಡ್ರಾಯ್ಡ್ ಮತ್ತು ಐಫೋನ್ (iPhone) ಬಳಕೆದಾರರಿಗೆ ನೀಡುವುದಾಗಿ ಹೇಳಿದೆ. ಇದು ತುಂಬಾ ಉಪಯುಕ್ತವಾದ ಆಯ್ಕೆ ಆಗಿದ್ದು, ಫ್ಯಾಮಿಲಿ ಅಥವಾ ಸ್ನೇಹಿತರ ಜೊತೆ ಸ್ಮಾರ್ಟ್ಫೋನನ್ನು ಹಂಚಿಕೊಳ್ಳುವವರಿಗೆ ಸಹಕಾರಿ ಆಗಲಿದೆ.
ಈ ಆಯ್ಕೆ ಚಾಟ್ನ ಕಾಂಟೆಕ್ಟ್ ಅಥವಾ ಗ್ರೂಪ್ನ ಇನ್ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್ಗೆ ಹೋಗುತ್ತದೆ. ಚಾಟ್ ಅನ್ನು ಲಾಕ್ ಮಾಡಿದಾಗ ಬಳಕೆದಾರರು ತಮ್ಮ ಫೇಸ್ ಐಡಿ, ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಮಾತ್ರ ತೆರೆಯಲು ಸಾಧ್ಯವಾಗುತ್ತದೆ. ಹೀಗಿದ್ದಾಗ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ.
Taara: ಭಾರತದಲ್ಲಿ ಬೆಳಕಿನ ಕಿರಣ ಬಳಸಿ ಅತ್ಯಂತ ವೇಗದ, ಅಗ್ಗದ ಇಂಟರ್ನೆಟ್ ಸೌಲಭ್ಯ
ಚಾಟ್ ಲಾಕ್ ಫೀಚರ್ ಹೇಗೆ ಬಳಸುವುದು?:
ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್ಆ್ಯಪ್ ಅನ್ನು ಮೊದಲು ಅಪ್ಡೇಟ್ ಕೊಡಿ
ನಂತರ ಆ್ಯಪ್ ತೆರೆದು ಚಾಟ್‌ಗಳನ್ನು ಲಾಕ್ ಮಾಡಲು ವಾಟ್ಸ್ಆ್ಯಪ್ ಕಾಂಟ್ಯಾಕ್ಟ್ ಪ್ರೊಫೈಲ್ ವಿಭಾಗ ಓಪನ್ ಮಾಡಬೇಕು.
ಕೆಳಗೆ ಸ್ಕ್ರೋಲ್ ಮಾಡಿದಾಗ ಚಾಟ್ ಲಾಕ್ ಆಯ್ಕೆ ಕಾಣಸಿಗುತ್ತದೆ
ಚಾಟ್ ಲಾಕ್ ಟ್ಯಾಪ್ ಮಾಡಿದರೆ ಲಾಕ್ ದಿಸ್ ಚಾಟ್ ವಿತ್ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಆಕ್ಟೀವ್ ಮಾಡಿ.
ಫಿಂಗರ್‌ಪ್ರಿಂಟ್, ಪಾಸ್ ಕೋಡ್ ಅಥವಾ ಫೇಸ್ ಐಡಿಯೊಂದಿಗೂ ಚಾಟ್ ಅನ್ನು ಲಾಕ್ ಮಾಡಬಹುದು.
ಲಾಕ್ಡ್ ಚಾಟ್ಸ್ ಎಂಬ ಫೋಲ್ಡರ್‌ನಲ್ಲಿ ಈ ಚಾಟ್‌ಗಳು ಗೌಪ್ಯವಾಗಿ ಇರುತ್ತದೆ.
ವಾಟ್ಸ್ಆ್ಯಪ್ ವೆಬ್ನಲ್ಲಿ ವರ್ಕ್ ಆಗಲ್ಲ:
ಬೇಸರದ ಸಂಗತಿ ಎಂದರೆ ನೀವು ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್ಆ್ಯಪ್ ಚಾಟ್‌ಗಳನ್ನು ಚಾಟ್ ಲಾಕ್ ಫೀಚರ್ ಮೂಲಕ ಆನ್ ಮಾಡಿದ್ದರೆ, ಅದು ವೆಬ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ನೀವು ವೆಬ್ ಆವೃತ್ತಿಯನ್ನು ಬಳಸಿಕೊಂಡು ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಈ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರೆ, ನಿಮ್ಮ ಲಾಕ್ ಮಾಡಿದ ಚಾಟ್‌ಗಳನ್ನು ಇಲ್ಲಿ ಹೈಡ್ ಆಗುವುದಿಲ್ಲ. ಲಾಕ್ ಮಾಡಿದ ಚಾಟ್‌ಗಳು ಮೊಬೈಲ್ ಆವೃತ್ತಿಯಲ್ಲಿ ಮಾತ್ರ ಇರುತ್ತದೆ. ಕಂಪನಿಯು ವಾಟ್ಸ್ಆ್ಯಪ್ ವೆಬ್ ಆವೃತ್ತಿಗೆ ಚಾಟ್ ಲಾಕ್ ಫೀಚರ್ ಅನ್ನು ಇನ್ನೂ ಹೊರತಂದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ