WhatsApp New Feature: ವಾಟ್ಸ್ಆ್ಯಪ್ನಲ್ಲಿ ಹೊಸ ಫೀಚರ್: ವಿಡಿಯೋವನ್ನು ಹೆಚ್ಡಿ ಕ್ವಾಲಿಟಿಯಲ್ಲಿ ಕಳುಹಿಸುವುದು ಹೇಗೆ?
ಫೋಟೋ ಕಳುಹಿಸುವಾಗ ಕಾಣಿಸುವ ಆಯ್ಕೆಯಂತೆ ವಿಡಿಯೋಕ್ಕೆ ಕೂಡ ಹೆಚ್ಡಿ ಎಂಬ ಬಟನ್ ಕಾಣಸಿಗಲಿದೆ. ವಾಟ್ಸ್ಆ್ಯಪ್ನಲ್ಲಿ ವಿಡಿಯೋವನ್ನು ಕಳುಹಿಸುವ ಮುನ್ನ ಸ್ಟಾಂಡರ್ಡ್ ಮತ್ತು ಹೆಚ್ಡಿ ಎಂಬ ಎರಡು ಆಯ್ಕೆ ನೀಡಲಾಗಿದೆ.
ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಇದೀಗ ಹೊಸ ಫೀಚರ್ ಬಗ್ಗೆ ಘೋಷಣೆ ಮಾಡಿದೆ. ಮೆಟಾ ಒಡೆತನದ ಈ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಇತ್ತೀಚೆಗಷ್ಟೆ ಬಳಕೆದಾರರಿಗೆ ಫೋಟೋವನ್ನು ಹೈ-ಕ್ವಾಲಿಟಿಯಲ್ಲಿ ಕಳುಹಿಸುವ ಆಯ್ಕೆಯನ್ನು ಪರಿಚಯಿಸಿತ್ತು. ಫೋಟೋವನ್ನು ಹೆಚ್ಡಿಯಲ್ಲಿ (HD) ಕಳುಹಿಸುವ ಫೀಚರ್ ಯಶಸ್ವಿಯಾದ ಬೆನ್ನಲ್ಲೇ ಇದೀಗ ವಿಡಿಯೋವನ್ನು ಕೂಡ ಹೆಚ್ಡಿ ಕ್ವಾಲಿಟಿಯಲ್ಲಿ ಕಳುಹಿಸುವ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಸದ್ಯಕ್ಕೆ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು, ಆಂಡ್ರಾಯ್ಡ್ (Android) ಬೇಟಾ ಬಳಕೆದಾರರು ಉಪಯೋಗಿಸಬಹುದು.
ಫೋಟೋ ಕಳುಹಿಸುವಾಗ ಕಾಣಿಸುವ ಆಯ್ಕೆಯಂತೆ ವಿಡಿಯೋಕ್ಕೆ ಕೂಡ ಹೆಚ್ಡಿ ಎಂಬ ಬಟನ್ ಕಾಣಸಿಗಲಿದೆ. ವಾಟ್ಸ್ಆ್ಯಪ್ನಲ್ಲಿ ವಿಡಿಯೋವನ್ನು ಕಳುಹಿಸುವ ಮುನ್ನ ಸ್ಟಾಂಡರ್ಡ್ ಮತ್ತು ಹೆಚ್ಡಿ ಎಂಬ ಎರಡು ಆಯ್ಕೆ ನೀಡಲಾಗಿದೆ. ಈವರೆಗೆ ವಿಡಿಯೋವನ್ನು ಕಳುಹಿಸಿದಾಗ ಅದು ತನ್ನ ನೈಜ್ಯತೆಯನ್ನು ಕಳೆದುಕೊಳ್ಳುತ್ತಿತ್ತು. ಒರಿಜಿನಲ್ ಕ್ವಾಲಿಟಿಯಲ್ಲಿ ರಿಸಿವರ್ಗೆ ಸಿಗುತ್ತಿರಲಿಲ್ಲ. ಆದರೀಗ ಹೆಚ್ಡಿ ಆಯ್ಕೆಯಲ್ಲಿ ಈ ಎಲ್ಲ ತೊಂದರೆ ನಿವಾರಣೆ ಆಗಲಿದೆ.
Tecno Camon 20 Pro 5G: ವಿಶೇಷ ಡಿಸ್ಕೌಂಟ್ನಲ್ಲಿ ಲಭ್ಯವಾಗುತ್ತಿದೆ ಟೆಕ್ನೋ ಫೋನ್
ಸ್ಟಾಂಡರ್ಡ್ ಕ್ವಾಲಿಟಿಯಲ್ಲಿ 416 x 880 ಪಿಕ್ಸೆಲ್ ಮೂಲಕ 6.3MB ಯಲ್ಲಿ ಸೆಂಡ್ ಆದರೆ, ಹೆಚ್ಡಿ ಕ್ವಾಲಿಟಿಯಲ್ಲಿ 608 x 1296 ಪಿಕ್ಸೆಲ್ ಮೂಲಕ 12MB ವರೆಗೆ ಕಳುಹಿಸಬಹುದು. ಇದರ ಬಗ್ಗೆ ವಾಟ್ಸ್ಆ್ಯಪ್ ಸ್ಕ್ರೀನ್ ಶಾಟ್ ಒಂದು ಹಂಚಿಕೊಂಡಿದೆ. ಈ ಆಯ್ಕೆ ವಾಟ್ಸ್ಆ್ಯಪ್ ಆಂಡ್ರಾಯ್ಡ್ ಬೇಟಾ ವರ್ಷನ್ 2.23.14.10 ದಲ್ಲಿ ಸಿಗುತ್ತಿದೆ. ಸದ್ಯದಲ್ಲೇ ಈ ಫೀಚರ್ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ.
ಚಾಟ್ ಲಾಕ್ ಫೀಚರ್:
ವಾಟ್ಸ್ಆ್ಯಪ್ ಮತ್ತೊಂದು ಅದ್ಭುತ ಆಯ್ಕೆಯನ್ನು ನೀಡುತ್ತಿದೆ. ಅದುವೇ ಚಾಟ್ ಲಾಕ್ ಫೀಚರ್. ಇದರ ಮೂಲಕ ನಿಮ್ಮ ವಾಟ್ಸ್ಆ್ಯಪ್ ಚಾಟ್ ಅನ್ನು ನೀವು ಪಾಸ್ವರ್ಡ್ ಹಾಕಿ ಲಾಕ್ ಮಾಡಬಹುದು. ಈ ಆಯ್ಕೆ ಚಾಟ್ನ ಕಾಂಟೆಕ್ಟ್ ಅಥವಾ ಗ್ರೂಪ್ನ ಇನ್ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್ಗೆ ಹೋಗುತ್ತದೆ. ಚಾಟ್ ಅನ್ನು ಲಾಕ್ ಮಾಡಿದಾಗ ಬಳಕೆದಾರರು ತಮ್ಮ ಫೇಸ್ ಐಡಿ, ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಮಾತ್ರ ತೆರೆಯಲು ಸಾಧ್ಯವಾಗುತ್ತದೆ. ಹೀಗಿದ್ದಾಗ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ