ವಾಟ್ಸ್ಆ್ಯಪ್ (WhatsApp) ಎಂಬುದು ಇಂದು ವಿಶ್ವದ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿಬಿಟ್ಟಿದೆ. ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್ ಹೊಸ ಹೊಸ ಅಪ್ಡೇಟ್ ಗಳನ್ನು ನೀಡುತ್ತಾ ಬರುತ್ತಿದೆ. ಇತ್ತೀಚಿನ ವರದಿ ಪ್ರಕಾರ ವಾಟ್ಸ್ಆ್ಯಪ್ನಲ್ಲಿ ಪ್ರತಿದಿನ 100 ಕೋಟಿಗೂ ಅಧಿಕ ಮಂದಿ ಕರೆ ಮಾಡುತ್ತಾರಂತೆ. ಆದರೆ, ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಸಂಸ್ಥೆ ಕರೆಗಳನ್ನು ರೆಕಾರ್ಡ್ ಮಾಡುವ ಆಯ್ಕೆಯನ್ನು ಇನ್ನೂ ನೀಡಿಲ್ಲ. ಹೀಗಿದ್ದರೂ ನೀವು ವಾಟ್ಸ್ಆ್ಯಪ್ ಕರೆಗಳನ್ನು (WhatsApp Call) ಅದು ಆಡಿಯೋ ಅಥವಾ ವಿಡಿಯೋ ಕರೆಗಳನ್ನು ರೆಕಾರ್ಡ್ ಮಾಡಬಹುದು. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್.
ಸಾಮಾನ್ಯವಾಗಿ ವಾಟ್ಸ್ಆ್ಯಪ್ ಕರೆ ಬಂದಾಗ ಸ್ಪೀಕರ್ ಆನ್ ಮಾಡಿ, ಇನ್ನೊಂದು ಮೊಬೈಲ್ ಮೂಲಕ ರೆಕಾರ್ಡ್ ಮಾಡಬಹುದು. ಆದರೆ ಇದಕ್ಕಾಗಿ ಎರಡು ಫೊನ್ ಬೇಕಾಗುತ್ತದೆ. ಇದಿಲ್ಲದಿದ್ದರೇ ಥರ್ಡ್ ಪಾರ್ಟಿ ಆ್ಯಪ್ಗಳಲ್ಲಿ ಒಂದಾದ “ವಾಯ್ಸ್ ರೆಕಾರ್ಡರ್” ಬಳಸಬಹುದು ಉತ್ತಮ ಆಯ್ಕೆ.
Otter.Ai app ಎಂಬ ಆ್ಯಪ್ ಕೂಡ ವಾಯ್ಸ್ ರೆಕಾರ್ಡ್ಗೆ ಪರಿಣಾಮಕಾರಿಯಾಗಿದ್ದು, ರೆಕಾರ್ಡ್ ಬಟನ್ ಕ್ಲಿಕ್ ಮಾಡುವ ಮೂಲಕ ವಾಟ್ಸ್ಆ್ಯಪ್ ಕರೆಗಳನ್ನು ದಾಖಲಿಸಿಕೊಳ್ಳಬಹುದು. ಈ ಆ್ಯಪ್ನ ವಿಶೇಷತೆಯೆಂದರೆ ವಾಯ್ಸ್ ಕರೆಗಳು Text ಮಾದರಿಯಲ್ಲಿ ರೂಪಾಂತರಗೊಳ್ಳುತ್ತದೆ. ಇದರ ಮೂಲಕ ಪ್ರತಿ ತಿಂಗಳು ಉಚಿತವಾಗಿ 600 ನಿಮಿಷ ಕರೆಗಳನ್ನು ರೆಕಾರ್ಡ್ ಮಾಡಬಹುದು. ಇದರ ಹೊರತಾಗಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ಕೂಡ ಹಲವು ವಾಯ್ಸ್ ಕಾಲ್ ರೆಕಾರ್ಡ್ ಗಳು ಲಭ್ಯವಿದೆ.
“ರೆಕಾರ್ಡ್ ವಾಟ್ಸ್ಆ್ಯಪ್ ಕಾಲ್” ಕೂಡ ಒಂದು ಅತ್ಯುತ್ತಮ ಆ್ಯಪ್ ಆಗಿದೆ. ಇದರಲ್ಲಿ ಅಟೋಮ್ಯಾಟಿಕ್ ಆಗಿ ವಾಟ್ಸ್ಆ್ಯಪ್ ಕರೆಗಳು ರೆಕಾರ್ಡ್ ಆಗುವುದು ಮಾತ್ರವಲ್ಲದೆ, ಗೂಗಲ್ ಡ್ರೈವ್ಗೂ ಇದು ಅಪ್ಲೋಡ್ ಮಾಡುತ್ತದೆ. ಇದು ಬಿಟ್ಟರೆ ಕ್ಯೂಬ್ ಕಾಲ್ ರೆಕಾರ್ಡರ್ ಆ್ಯಪ್ ಅನ್ನು ಬಳಸಬಹುದು. ಇದನ್ನು ಇನ್ಸ್ಟಾಲ್ ಮಾಡಿಕೊಂಡು ಒಪನ್ ಮಾಡಿದ ಬಳಿಕ ವಾಟ್ಸ್ಆ್ಯಪ್ಗೆ ಸ್ವಿಚ್ ಮಾಡಿ. ಆಗ, ನೀವು ಬಯಸುವ ವ್ಯಕ್ತಿಗೆ ವಾಟ್ಸ್ಆ್ಯಪ್ ಮೂಲಕ ಕರೆ ಮಾಡಬಹುದು.
ಇನ್ನೂ ವಾಯ್ಸ್ ಕಾಲ್ ನಂತೆಯೆ ವಿಡಿಯೋ ಕಾಲ್ ಕೂಡ ರೆಕಾರ್ಡ್ ಮಾಡಲು ಡಿಯು ರೆಕಾರ್ಡರ್ ಎಂಬ ಆ್ಯಪ್ ಸುಲಭವಾದ ಮತ್ತು ಉತ್ತಮ ಸ್ಕ್ರೀನ್ ರೆಕಾರ್ಡರ್ ಆ್ಯಪ್ ಆಗಿದೆ. ಈ ಆ್ಯಪ್ ಹೆಚ್ಚು ಬಳಕೆದಾರರ ಸ್ನೇಹಿಯಾಗಿದ್ದು, ಸ್ಕ್ರೀನ್ ಮೇಲಿನ ಪ್ಲೋಟಿಂಗ್ ಐಕಾನ್ ಮೂಲಕ ಸ್ಕ್ರೀನ್ ರೆಕಾರ್ಡ್ ಮಾಡಬಹುದಾಗಿದೆ. ವಿಡಿಯೋದಲ್ಲಿ ಶಬ್ಧವಿದ್ದರೆ ಅದನ್ನು ಕೂಡ ಡಿಯು ರೆಕಾರ್ಡರ್ ರೆಕಾರ್ಡ್ ಕ್ಲೀಯರ್ ಮಾಡುತ್ತದೆ.
Nokia G50: ನೋಕಿಯಾದ ಹೊಸ 5G ಸ್ಮಾರ್ಟ್ಫೋನ್ನ ಮಾಹಿತಿ ಆನ್ಲೈನ್ನಲ್ಲಿ ಸೋರಿಕೆ
Realme Narzo 30: ರಿಯಲ್ ಮಿಯಿಂದ ಬಂಪರ್ ಕೊಡುಗೆ: ನಾರ್ಜೊ 30 5G ಈಗ ಹೊಸ ವೇರಿಯೆಂಟ್ನಲ್ಲಿ ಲಭ್ಯ
(WhatsApp call recorder Here is the Tricks to record WhatsApp audio and Video calls)