WhatsApp: ವಾಟ್ಸ್​ಆ್ಯಪ್ ಮೇಲೆ ಬಿದ್ದಿದೆ ಹ್ಯಾಕರ್​​ಗಳ ಕಣ್ಣು: ಮಾಹಿತಿ ಕದಿಯಲು ಬಿಡುವ ʼಬಗ್ʼ ಬಗ್ಗೆ ಎಚ್ಚರ

| Updated By: Vinay Bhat

Updated on: Sep 06, 2021 | 12:55 PM

ಬಳಕೆದಾರರಿಗೆ ಹಾನಿಯುಂಟು ಮಾಡುತ್ತಿದ್ದ ವಾಟ್ಸ್​ಆ್ಯಪ್​​ ಇಮೇಜ್ ಫಿಲ್ಟರ್‌ ಒಂದನ್ನು ಸೈಬರ್‌ ಭದ್ರತಾ ಕಂಪನಿಯೊಂದು ಬಿಡುಗಡೆ ಮಾಡಿದೆ. ಚೆಕ್‌ ಪಾಯಿಂಟ್‌ ರೀಸರ್ಚ್ ಪ್ರಕಾರ, ಬಳಕೆದಾರರ ಸೂಕ್ಷ್ಮ ವಿವರಗಳನ್ನು ಓದಲು ಹ್ಯಾಕರ್‌ಗಳಿಗೆ ಈ ಫಿಲ್ಟರ್ ಅನುವಾಗುತ್ತಿತ್ತು.

WhatsApp: ವಾಟ್ಸ್​ಆ್ಯಪ್ ಮೇಲೆ ಬಿದ್ದಿದೆ ಹ್ಯಾಕರ್​​ಗಳ ಕಣ್ಣು: ಮಾಹಿತಿ ಕದಿಯಲು ಬಿಡುವ ʼಬಗ್ʼ ಬಗ್ಗೆ ಎಚ್ಚರ
WhatsApp
Follow us on

ವಿಶ್ವದಲ್ಲಿ ಕೋಟ್ಯಾಂತರ ಜನರು ಬಳಕೆ ಮಾಡುವ ಜನಪ್ರಿಯ ಆ್ಯಪ್​ಗಳ ಮೇಲೆ ಹ್ಯಾಕರ್​ಗಳ ಕಣ್ಣು ಇದ್ದೇ ಇರುತ್ತದೆ. ಭದ್ರತೆಯನ್ನು ಎಷ್ಟೇ ಬಲ ಪಡಿಸಿದರು ಹ್ಯಾಕರ್​ಗಳು ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯಲು ಪ್ರಯತ್ನ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್​​ನಲ್ಲೂ (WhatsApp) ಬಳಕೆದಾರರ ಖಾಸಗಿ ಸಂದೇಶಗಳು ಹಾಗೂ ಮಾಹಿತಿ ಸೋರಿಕೆಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ.

ಈ ಪೈಕಿ ಬಳಕೆದಾರರಿಗೆ ಹಾನಿಯುಂಟು ಮಾಡುತ್ತಿದ್ದ ವಾಟ್ಸ್​ಆ್ಯಪ್​​ ಇಮೇಜ್ ಫಿಲ್ಟರ್‌ ಒಂದನ್ನು ಸೈಬರ್‌ ಭದ್ರತಾ ಕಂಪನಿಯೊಂದು ಬಿಡುಗಡೆ ಮಾಡಿದೆ. ಚೆಕ್‌ ಪಾಯಿಂಟ್‌ ರೀಸರ್ಚ್ ಪ್ರಕಾರ, ಬಳಕೆದಾರರ ಸೂಕ್ಷ್ಮ ವಿವರಗಳನ್ನು ಓದಲು ಹ್ಯಾಕರ್‌ಗಳಿಗೆ ಈ ಫಿಲ್ಟರ್ ಅನುವಾಗುತ್ತಿತ್ತು. ಆದರೆ, ಇದು ಗಮನಕ್ಕೆ ಬಂದ ಕೂಡಲೆ ಈ ದೋಷವನ್ನು ವಾಟ್ಸ್​ಆ್ಯಪ್​ ಸರಿಪಡಿಸಿದೆ.

ಈ  ನ್ಯೂನತೆ ಹ್ಯಾಕರ್​ ಕೈಗೆ ಸಿಕ್ಕರೆ ವಾಟ್ಸ್​ಆ್ಯಪ್​ ಮೆಮೊರಿಯಿಂದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಅನುಕೂಲವಾಗುತ್ತದೆ. ಆಕ್ರಮಣಕಾರರು ದುರುದ್ದೇಶಪೂರಿತ ಫೋಟೋವನ್ನು ಕಳುಹಿಸುವ ಮೂಲಕ ಬಳಕೆದಾರರ ಸ್ಮಾರ್ಟ್​ಫೋನ್​ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ಸೆಕ್ಯುರಿಟಿ ಸಂಸ್ಥೆಯ ಸಂಶೋಧಕರಾದ ಡಿಕ್ಲಾ ಬರ್ದಾ ಮತ್ತು ಗಾಲ್ ಎಲ್ಬಾಜ್ ಅವರು ಬಳಕೆದಾರರು ವಾಟ್ಸ್​ಆ್ಯಪ್ ಫೋಟೋಗೆ ಫಿಲ್ಟರ್  ಬಳಸಿದರೆ ಹ್ಯಾಕರ್​ಗಳು ಇದನ್ನೇ ದಾರಿಯೆಂದುಕೊಂಡು ಬಳಕೆದಾರರನ ವಾಟ್ಸ್​ಆ್ಯಪ್ ಮೆಮೊರಿಗೆ ಪ್ರವೇಶವನ್ನು ಪಡೆಯಬಹುದು ಎಂದು ತಿಳಿಸದ್ದಾರೆ. ಕೊನೆಗೆ ಇದೇ ತಂಡ ನ್ಯೂನತೆಯನ್ನು ಸರಿ ಪಡಿಸಿದೆ.

ಭದ್ರತಾ ಸಂಸ್ಥೆ ನ್ಯೂನತೆಯನ್ನು ನವೆಂಬರ್ 10, 2020 ರಂದು ವಾಟ್ಸ್​ಆ್ಯಪ್ ‌ಗೆ ತಿಳಿಸಿದೆ. ವಾಟ್ಸ್​ಆ್ಯಪ್ ನಂತರ ಈ ಸಮಸ್ಯೆಯನ್ನು ಒಪ್ಪಿಕೊಂಡಿತು. ಈ ವರ್ಷ ಜನವರಿಯಲ್ಲಿ ಲಭ್ಯವಾದ ವಾಟ್ಸ್ಆ್ಯಪ್ ಆವೃತ್ತಿ 2.21.1.13 ರಲ್ಲಿ ನ್ಯೂನತೆ ಕಾಣಿಸಿಕೊಂಡಿತು. ಆದರೆ ವಾಟ್ಸ್​ಆ್ಯಪ್ ಇತ್ತೀಚಿನ ಆವೃತ್ತಿಯನ್ನು ನ್ಯೂನತೆಯನ್ನು ಸರಿಪಡಿಸಿಕೊಂಡಿದ್ದು,  ಬಳಕೆದಾರರು ಈ ನ್ಯೂನತೆಯಿಂದ ರಕ್ಷಿಸಲ್ಪಟ್ಟಿದ್ದಾರೆ.

ಸ್ಮಾರ್ಟ್​ಫೋನ್​ಗಳ ಮೇಲೆ ಭಾರೀ ಡಿಸ್ಕೌಂಟ್: ಕಡಿಮೆ ಬೆಲೆಗೆ ಮೊಬೈಲ್ ಖರೀದಿಸುವ ಅವಕಾಶ

Amazon Quiz: ಅಮೆಜಾನ್​ನ ಈ 5 ಪ್ರಶ್ನೆಗಳಿಗೆ ಉತ್ತರಿಸಿದ್ರೆ 20 ಸಾವಿರ ರೂ. ಬಹುಮಾನ: ಇಲ್ಲಿದೆ ಉತ್ತರ

(WhatsApp Hacks THIS WhatsApp bug allows hackers to steal sensitive details from your phone)

Published On - 12:55 pm, Mon, 6 September 21