ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಒಂದರ ಹಿಂದೆ ಒಂದು ಆಕರ್ಷಕ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ತನ್ನ ಸ್ಟೇಟಸ್ ವಿಭಾಗದಲ್ಲಿ ಸ್ಟೇಟಸ್ ಅನ್ನು 24 ಗಂಟೆಗಳ ಸಮಯವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಸುಳಿವು ನೀಡಿತ್ತು. ಇದೀಗ ವಾಟ್ಸ್ಆ್ಯಪ್ ತನ್ನ ಚಾಟ್‌ಗಳಲ್ಲಿ ಸಂದೇಶಗಳನ್ನು ಪಿನ್ ಮಾಡಲು ಅನುಮತಿಸುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಭಿವೃದ್ಧಿಯಲ್ಲಿದ್ದ ಈ ಫೀಚರ್ ಇದೀಗ ಆಂಡ್ರಾಯ್ಡ್ ವಾಟ್ಸ್ಆ್ಯಪ್ ಬೀಟಾದಲ್ಲಿ ಲಭ್ಯವಿದೆ.
ಈ ಹೊಸ ವೈಶಿಷ್ಟ್ಯವು ಇತ್ತೀಚಿನ ವಾಟ್ಸ್ಆ್ಯಪ್ ಬೀಟಾದ ಆಂಡ್ರಾಯ್ಡ್ 2.23.21.4 ಅಪ್‌ಡೇಟ್‌ನಲ್ಲಿ ಲಭ್ಯವಿದ್ದು, ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್‌ಲೋಡ್ ಮಾಡಬಹುದು. WABetaInfo ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ಪ್ರಕಾರ, ಈ ಫೀಚರ್ ಮೂಲಕ ಚಾಟ್‌ಗಳಲ್ಲಿ ಮೆಸೇಜ್ ಅನ್ನು ಪಿನ್ ಮಾಡಬಹುದು. ನೀವು ಪಿನ್ ಮಾಡಲು ಬಯಸುವ ಸಂದೇಶವನ್ನು ಆಯ್ಕೆ ಮಾಡಿದರೆ, ಅದು ಚಾಟ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತದೆ.
ಅತಿಯಾಗಿ ಸ್ಮಾರ್ಟ್ಫೋನ್ ಬಳಸುತ್ತೀರಾ?; ಟ್ರಿಗರ್ ಫಿಂಗರ್ ಸಮಸ್ಯೆ ಬಗ್ಗೆಯೂ ತಿಳಿದಿರಲಿ
ಪಿನ್ ಮಾಡಿದ ಸಂದೇಶದ ಅವಧಿಯನ್ನು ಆಯ್ಕೆ ಮಾಡಲು ಕೂಡ ವಾಟ್ಸ್ಆ್ಯಪ್ ನಿಮಗೆ ಅನುಮತಿಸುತ್ತದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಅದನ್ನು 24 ಗಂಟೆಗಳು, 7 ದಿನಗಳು ಅಥವಾ 30 ದಿನಗಳವರೆಗೆ ಇರಿಸಬಹುದು. ನೀವು ಯಾವಾಗ ಬೇಕಾದರೂ ಸಂದೇಶವನ್ನು ಅನ್‌ಪಿನ್ ಮಾಡಬಹುದು.
ಸದ್ಯಕ್ಕೆ ಈ ವೈಶಿಷ್ಟ್ಯವು ಇನ್ನೂ ಬೀಟಾದಲ್ಲಿದೆ ಮತ್ತು ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಚಾಟ್‌ನಲ್ಲಿ ಒಂದು ಮೆಸೇಜ್ ಅನ್ನು ದೀರ್ಘವಾಗಿ ಒತ್ತಿ ಹಿಡಿದರೆ ಪಿನ್ ಆಯ್ಕೆ ಲಭ್ಯವಾಗುತ್ತದೆ. ಇನ್ನು ವಾಟ್ಸ್ಆ್ಯಪ್ ಚಾಟ್‌ಗಳಿಗಾಗಿ ಅಟ್ಯಾಚ್‌ಮೆಂಟ್ ಮೆನುವನ್ನು ಸಹ ಮರುವಿನ್ಯಾಸಗೊಳಿಸಿದೆ.
ವಾಟ್ಸ್ಆ್ಯಪ್ನಲ್ಲಿ ಪ್ರಸ್ತುತ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು 24 ಗಂಟೆಗಳವರೆಗೆ ಇರುವ ರೀತಿಯಲ್ಲಿ ಪೋಸ್ಟ್ ಮಾಡಬಹುದು. ಆದರೆ ಇತ್ತೀಚಿನ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯನ್ನು ವಾಟ್ಸ್ಆ್ಯಪ್ ವಿಸ್ತರಿಸಲಿದೆ. ಮುಂಬರುವ ಅಪ್‌ಡೇಟ್‌ನಲ್ಲಿ, ವಾಟ್ಸ್ಆ್ಯಪ್ ಬಳಕೆದಾರರಿಗೆ ಸ್ಟೇಟಸ್ ವಿಭಾಗದಲ್ಲಿ ನಾಲ್ಕು ಅವಧಿಯ ಆಯ್ಕೆಗಳನ್ನು ಒದಗಿಸುವ ನಿರೀಕ್ಷೆಯಿದೆ: 24 ಗಂಟೆಗಳು, 3 ದಿನಗಳು, 1 ವಾರ ಮತ್ತು 2 ವಾರಗಳು. ಇದು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎಷ್ಟು ಸಮಯದವರೆಗೆ ವೀಕ್ಷಿಸಲು ಲಭ್ಯವಾಗಬೇಕೆಂದು ಬಯಸುತ್ತಾರೆ ಎಂಬುದರ ಕುರಿತು ಆಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ