ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಆ್ಯಪ್ ಎಂದರೆ ಅದು ವಾಟ್ಸ್ಆ್ಯಪ್ (WhatsApp). ತಿಂಗಳಲ್ಲಿ 2 ಬಿಲಿಯನ್ಗೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದರಲ್ಲಿ 500 ಮಿಲಿಯನ್ ಅಕೌಂಟ್ ಭಾರತೀಯರದ್ದೇ ಆಗಿದೆ. ವಾಟ್ಸ್ಆ್ಯಪ್ ಬಳಕೆದಾರರಿಗೆ ಇಷ್ಟೊಂದು ಹತ್ತಿರವಾಗಲು ಪ್ರಮುಖ ಕಾರಣ ಇದರಲ್ಲಿರುವ ಫೀಚರ್ಸ್. ಜನರ ಅನುಕೂತಕ್ಕೆ ತಕ್ಕಂತೆ ಒಂದರ ಹಿಂದೆ ಒಂದು ಆಕರ್ಷಕ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿರುವ ವಾಟ್ಸ್ಆ್ಯಪ್ ಇದೀಗ ಹೊಸ ವರ್ಷದ ಸಂಭ್ರಮದಲ್ಲಿರುವವರಿಗೆ ಶಾಕಿಂಗ್ ಸುದ್ದಿಯೊಂದು ನೀಡಿದೆ. ಇದೀಗ ಕೆಲ ಐಫೋನ್ (iPhone) ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ತನ್ನ ಕೆಲಸವನ್ನು ನಿಲ್ಲಿಸಿದೆ.
2023ರಿಂದ ವಾಟ್ಸ್ಆ್ಯಪ್ ಹಳೆಯ ಸ್ಯಾಮ್‌ಸಂಗ್ ಮತ್ತು ಆ್ಯಪಲ್ ಫೋನ್ಗಳಿಗೆ ಕೆಲಸ ಮಾಡುವುದಿಲ್ಲ ಈ ಹಿಂದೆಯೇ ಹೇಳಿತ್ತು. ಅದರಂತೆ ಇದೀಗ 49 ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ ಎಂದು ವರದಿ ಆಗಿದೆ. ವಾಟ್ಸ್ಆ್ಯಪ್ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವಂತಹ ಫೀಚರ್ಗಳು ಬಹಳ ಗುಣಮಟ್ಟದ್ದಾಗಿರುತ್ತದೆ. ಆದರೆ ಈ ಫೀಚರ್ಸ್ ಮತ್ತು ಮೊಬೈಲ್ನ ಕಾರ್ಯಚಟುವಟಿಕೆಗಳೊಂದಿಗೆ ಸಮಸ್ಯೆ ಉಂಟಾಗುವುದರಿಂದ ಇನ್ಮುಂದೆ ವಾಟ್ಸ್ಆ್ಯಪ್ ಫೀಚರ್ಸ್ ಅನ್ನು ಬೆಂಬಲ ನೀಡದ ಸ್ಮಾರ್ಟ್ಫೋನ್ಗಳಿಂದ ಹಂತ ಹಂತವಾಗಿ ಅಪ್ಲಿಕೇಶನ್ ಅನ್ನು ತೆಗೆದು ಹಾಕಲಾಗುವುದು ಎಂದು ಕಂಪನಿ ಹೇಳಿದೆ. ಇದಲ್ಲದೆ ವಾಟ್ಸಾಪ್ ಐಓಎಸ್ 12 ಮತ್ತು ಇನ್ನೂ ಹೆಚ್ಚಿನ ಡಿವೈಸ್ಗಳೊಂದಿಗೆ ಹೊಂದಿಕೊಳ್ಳುತ್ತದೆ. ಆದರೆ ಆ್ಯಪಲ್ನ ಆಪರೇಟಿಂಗ್ ಸಿಸ್ಟಮ್ನ ಇತ್ತೀಚಿನ ವರ್ಷನ್ಗೆ ಅಪ್ಡೇಟ್ ಮಾಡಲು ವಾಟ್ಸ್ಆ್ಯಪ್ ಬಳಕೆದಾರರಿಗೆ ಸಲಹೆ ನೀಡುತ್ತಿದೆ.
Tech Tips: ಮೊಬೈಲ್ ಅಥವಾ ಲ್ಯಾಪ್ಟಾಪ್ ಇದ್ರೆ ಸಾಕು: ಆನ್ಲೈನ್ನಲ್ಲಿ ಹಣಗಳಿಸಲು ಇರುವ ಮಾರ್ಗಗಳು ಇಲ್ಲಿದೆ ನೋಡಿ
ವಾಟ್ಸ್ಆ್ಯಪ್ 2011, 2012 ಮತ್ತು 2013 ರಲ್ಲಿ ಬಿಡುಗಡೆಯಾದ ಏಳು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುದಿಲ್ಲ ಎನ್ನಲಾಗಿದೆ. ಇದರಲ್ಲಿ ಗ್ಯಾಲಕ್ಸಿ ಏಸ್ 2, ಗ್ಯಾಲಕ್ಸಿ ಕೋರ್, ಗ್ಯಾಲಕ್ಸಿ S2, ಗ್ಯಾಲಕ್ಸಿ S3 ಮಿನಿ, ಗ್ಯಾಲಕ್ಸಿ ಟ್ರೆಂಡ್ II, ಗ್ಯಾಲಕ್ಸಿ ಟ್ರೆಂಡ್ ಲೈಟ್ ಮತ್ತು ಗ್ಯಾಲಕ್ಸಿ ಎಕ್ಸ್‌ಕವರ್ 2 ಫೋನ್‌ಗಳು ಸೇರಿವೆ. ಈ ಎಲ್ಲಾ ಡಿವೈಸ್‌ಗಳನ್ನು ಆಂಡ್ರಾಯ್ಡ್ 4.x ಗೆ ಅಪ್‌ಗ್ರೇಡ್ ಮಾಡಲಾಗಿದೆ. ನಂತರದ ದಿನಗಳಲ್ಲಿ ಈ ಫೋನ್‌ಗಳು ಯಾವುದೇ ಆಪರೇಟಿಂಗ್ ಸಿಸ್ಟಂ ಪಡೆದಿಲ್ಲ.
ಹಳೆಯ ಡಿವೈಸ್‌ಗಳನ್ನು ಬಳಸುತ್ತರುವ ಬಳಕೆದಾರರಿಗೆ ವಾಟ್ಸ್ಆ್ಯಪ್ ಈ ಹಿಂದೆಯೇ ಹಲವು ಸಂದೇಶಗಳನ್ನು ಕಳುಹಿಸಿತ್ತು. ಎಚ್ಚರಿಕೆ ಸಂದೇಶಗಳನ್ನು ನೀಡುವ ಮೂಲಕ ಕೂಡಲೇ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳುವಂತೆ ಹೇಳಿತ್ತು. ಈ ರೀತಿಯ ಡಿವೈಸ್‌ಗಳಲ್ಲಿ ದುರುದ್ದೇಶಪೂರಿತ ಚಟುವಟಿಕೆಗಳಿಂದ ರಕ್ಷಿಸಲು ಅಗತ್ಯವಾದ ಸುರಕ್ಷತೆಗಾಗಿ ವಾಟ್ಸ್ಆ್ಯಪ್ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Mon, 2 January 23