Tech Tips: ಟ್ರೂ ಕಾಲರ್ ತೋರಿಸುವ ನಿಮ್ಮ ಹೆಸರನ್ನು ಬದಲಾಯಿಸುವುದು ಹೇಗೆ?: ಇಲ್ಲಿದೆ ಟ್ರಿಕ್
Truecaller: ಟ್ರೂಕಾಲರ್‌ನಲ್ಲಿ ಕಾಣಿಸುವ ಹೆಸರುಗಳು ಕೆಲವೊಮ್ಮೆ ತಪ್ಪಾಗಿರುತ್ತವೆ. ಆದರೆ ಬಳಕೆದಾರರೇ ಅವರ ಹೆಸರನ್ನು ಸರಿಯಾಗಿ ನಮೂದಿಸಲು ಅವಕಾಶ ಇದೆ. ಹೌದು, ನಿಮ್ಮ ಟ್ರೂ ಕಾಲರ್ ಹೆಸರನ್ನು ನೀವು ಸುಲಭವಾಗಿ ಬದಲಾಯಿಸಬಹುದು.
ಈಗಂತು ಅನೇಕ ಸ್ಮಾರ್ಟ್‌ಫೋನ್ (Smartphone) ಬಳಕೆದಾರರು ಪ್ರಸಿದ್ಧ ಟ್ರೂ ಕಾಲರ್ ಆ್ಯಪ್ (Truecaller App) ಅನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಬೇಡವಾದ ಕರೆಗಳನ್ನು ನಿರ್ಭಂದಿಸಬಹುದು. ಅಲ್ಲದೆ ಗುರುತು ಪತ್ತೆ ಇಲ್ಲದ ನಂಬರ್ ಗಳನ್ನು ಹುಡುಕಲು ಸೇರಿದಂತೆ ವಿವಿಧ ಕಾರ್ಯಗಳಿಗೆ ಟ್ರೂಕಾಲರ್ ಆ್ಯಪ್ ಸಹಕಾರಿಯಾಗಿದೆ. ಪ್ರಮುಖವಾಗಿ ಅಪರಿಚಿತ ಕರೆಯನ್ನು ಪತ್ತೆ ಹಚ್ಚುವುದಕ್ಕೆಂದೇ ಟ್ರೂಕಾಲರ್ ಆ್ಯಪ್ ಹೆಚ್ಚು ಫೇಮಸ್ ಆಗಿದೆ. ಹೀಗೆ ಟ್ರೂ ಕಾಲರ್ ಅನೇಕ ಫೀಚರ್ಗಳನ್ನು ಪರಿಚಯಿಸಿ ವಿಶ್ವದ ಅತ್ಯಂತ ಜನಪ್ರಿಯ ಕ್ರೌಡ್‌ಸೋರ್ಸ್ಡ್ ಕಾಲರ್ ID ಅಪ್ಲಿಕೇಶನ್ (Application) ಆಗಿ ಗುರುತಿಸಿಕೊಂಡಿದೆ. ಹೆಚ್ಚಿನ ಸಂದರ್ಭಗಳಲ್ಲಿ ನಿಮಗೆ ಕರೆ ಮಾಡುವ ಸಂಖ್ಯೆಯನ್ನು ಬಳಸುವವರ ಹೆಸರನ್ನು ಕೂಡ ಪತ್ತೆ ಮಾಡಬಲ್ಲದು. ಆದರೆ ಹೆಸರು ಸರಿಯಾಗಿಲ್ಲದಿದ್ದರೆ ಅದು ದಾರಿ ತಪ್ಪಿಸುತ್ತದೆ ಎನ್ನಬಹುದಾಗಿದೆ.
ಟ್ರೂ ಕಾಲರ್ ಹೊಸ ನಂಬರ್‌ನಿಂದ ಕರೆ ಬಂದರೇ ಅದು ಯಾರದ್ದು ಅಂತಾ ತಿಳಿಸುತ್ತದೆ. ಹಾಗೆಯೇ ಫೋನ್ ರಿಂಗ್ ಆಗುವ ಮೊದಲೇ ಯಾರು ಕರೆ ಮಾಡುತ್ತಿದ್ದಾರೆ ಎಂದು ಹೇಳುವ ಆಯ್ಕೆಯನ್ನು ಈ ಆ್ಯಪ್ ಪಡೆದಿರುವುದು ವಿಶೇಷ. ಟ್ರೂಕಾಲರ್‌ನಲ್ಲಿ ಕಾಣಿಸುವ ಹೆಸರುಗಳು ಕೆಲವೊಮ್ಮೆ ತಪ್ಪಾಗಿರುತ್ತವೆ. ಆದರೆ ಬಳಕೆದಾರರೇ ಅವರ ಹೆಸರನ್ನು ಸರಿಯಾಗಿ ನಮೂದಿಸಲು ಅವಕಾಶ ಇದೆ.
ಹೌದು, ನಿಮ್ಮ ಟ್ರೂ ಕಾಲರ್ ಹೆಸರನ್ನು ನೀವು ಸುಲಭವಾಗಿ ಬದಲಾಯಿಸಬಹುದು. ಒಂದು ವೇಳೆ, ನಿಮ್ಮ ಉಪಸ್ಥಿತಿಯನ್ನು ತೋರಿಸಲು ನೀವು ಬಯಸುವುದಿಲ್ಲ, ಜನರ ದೃಷ್ಟಿಯಿಂದ ನಿಮ್ಮ ಹೆಸರನ್ನು ನೀವು ಮರೆ ಮಾಡಲು ಬಯಸಿದರೆ ನಿಮ್ಮ ಫೋನ್ ಸಂಖ್ಯೆಯನ್ನು ಅಪ್ಲಿಕೇಶನ್‌ನಿಂದ ಅನ್ಲಿಸ್ಟ್ ಮಾಡಬಹುದು. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್.
Cyber Attack: 829 ಮಿಲಿಯನ್ ಸೈಬರ್ ದಾಳಿ: 2022 ರಲ್ಲಿ ಅತಿ ಹೆಚ್ಚು ಸೈಬರ್ ಅಟ್ಯಾಕ್ ಆಗಿದ್ದೇ ಭಾರತದಲ್ಲಿ
ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಟ್ರೂಕಾಲರ್ ಅಪ್ಲಿಕೇಶನ್‌ಗೆ ಹೋಗಿ ಮೇಲಿನ ಬಲ ಮೂಲೆಯಲ್ಲಿರುವ ಮೆನು ಆಯ್ಕೆಯನ್ನು ಆರಿಸಿ. ಅಲ್ಲಿ ಎಡಿಟ್ ಆಯ್ಕೆಯೊಂದಿಗೆ ನಿಮ್ಮ ಪ್ರೊಫೈಲ್ ಅನ್ನು ನೀವು ಕಾಣಬಹುದು. ನಿಮ್ಮ ಪ್ರೊಫೈಲ್ ಎಡಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ವಿವರಗಳ ಹಾಳೆ ಕಾಣಿಸುತ್ತದೆ.
ಈಗ, ಟ್ರೂಕಾಲರ್‌ನಲ್ಲಿ ನೀವು ತೋರಿಸಲು ಬಯಸುವ ಯಾವುದೇ ಹೆಸರಿನಿಂದ ಮೊದಲ ಮತ್ತು ಕೊನೆಯ ಹೆಸರುಗಳ ವಿಭಾಗವನ್ನು ಎಡಿಟ್ ಮಾಡಿ. ಇದನ್ನು ಮಾಡಿದ ನಂತರ, ಮೇಲಿನ ಬಲ ಮೂಲೆಯಲ್ಲಿರುವ ಸೇವ್ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಇದು ನಿಮ್ಮ ವಿವರಗಳನ್ನು ಸೇವ್ ಮಾಡುತ್ತದೆ.
ಇದಲ್ಲದೆ ನೀವು ಬಯಸಿದರೆ ಪರ್ಯಾಯವಾಗಿ, ಡೆಸ್ಕ್‌ಟಾಪ್ ಮೂಲಕವೂ ನಿಮ್ಮ ಹೆಸರನ್ನು ಟ್ರೂಕಾಲರ್‌ನಲ್ಲಿ ಬದಲಾಯಿಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಟ್ರೂಕಾಲರ್ ವೆಬ್‌ಸೈಟ್‌ಗೆ ಹೋಗಿ, ನಿಮ್ಮ ವಿವರಗಳೊಂದಿಗೆ ಪ್ಲಾಟ್‌ಫಾರ್ಮ್‌ಗೆ ಲಾಗ್ ಇನ್ ಮಾಡಿ. ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿದ ನಂತರ ಸೂಚಿಸುವ ಹೆಸರನ್ನು ಆಯ್ಕೆ ಮಾಡಿ. ಹೊಸ ಹೆಸರನ್ನು ಸೇರಿಸಿ ಮತ್ತು ಸೇವ್ ಆಯ್ಕೆಯನ್ನು ಟ್ಯಾಪ್ ಮಾಡಿರಿ. ನೀವು ಮಾಡಿರುವ ಬದಲಾವಣೆಗಳು ಟ್ರೂಕಾಲರ್‌ನಲ್ಲಿರುವ ಜನರಿಗೆ ಒಂದು ಅಥವಾ ಎರಡು ದಿನಗಳಲ್ಲಿ ಕಾಣಿಸಲು ಪ್ರಾರಂಭವಾಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ