Cyber Attack: 829 ಮಿಲಿಯನ್ ಸೈಬರ್ ದಾಳಿ: 2022 ರಲ್ಲಿ ಅತಿ ಹೆಚ್ಚು ಸೈಬರ್ ಅಟ್ಯಾಕ್ ಆಗಿದ್ದೇ ಭಾರತದಲ್ಲಿ
2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಪತ್ತೆ ಹಚ್ಚಿದ ಮತ್ತು ನಿರ್ಬಂಧಿಸಿದ 829 ಮಿಲಿಯನ್ ಸೈಬರ್ ದಾಳಿಗಳಲ್ಲಿ, 59 ಪ್ರತಿಶತದಷ್ಟು ಭಾರತದಲ್ಲೇ ಜರುಗಿದ ಘಟನೆಗಳು ಎಂದು ಉಲ್ಲೇಖಿಸಲಾಗಿದೆ.
ವಿಶ್ವದಲ್ಲಿ ಸೈಬರ್ ದರೋಡೆಕೋರರ (Cyber Fraud) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ (OTP) ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇದೆ. ಈ ಹಿಂದೆ ವಿದ್ಯುತ್ ಬಿಲ್, ಓಟಿಪಿ ಮೂಲಕ ಹಣ ದೋಚಿಕೊಳ್ಳುತ್ತಿದ್ದ ಖದೀಮರು ಈಗೀಗ ಫೋನ್‌ಗೆ ಮಿಸ್ಡ್‌ಕಾಲ್ (Missed Call) ಕೊಡುವ ಮೂಲಕ ಸಿಮ್ ಸ್ವ್ಯಾಪ್ ಮಾಡಿ ಹಣ ಖದಿಯುವ ರಹಸ್ಯ ದಾರಿಯನ್ನೂ ಹುಡುಕಿದ್ದಾರೆ. ಅಚ್ಚರಿ ಎಂದರೆ ಇತರೆ ದೇಶಗಳಿಗೆ ಹೋಲಿಸಿದರೆ ಸೈಬರ್ ಅಟ್ಯಾಕ್ ಹೆಚ್ಚಾಗಿ ನಡೆಯುತ್ತಿರುವುದು ಭಾರತದಲ್ಲೇ.
2022 ರಲ್ಲಿ ಭಾರತವು ಸೈಬರ್ ಅಟ್ಯಾಕ್‌ಗಳಿಗೆ ಗುರಿಯದ ಪ್ರಮುಖ ದೇಶವಾಗಿದೆ ಎಂದು ವೆಬ್ ಭದ್ರತಾ ಸಂಸ್ಥೆ ಇಂಡಸ್‌ಫೇಸ್ ಅಧ್ಯಯನದಿಂದ ತಿಳಿದುಬಂದಿದೆ. 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಪತ್ತೆ ಹಚ್ಚಿದ ಮತ್ತು ನಿರ್ಬಂಧಿಸಿದ 829 ಮಿಲಿಯನ್ ಸೈಬರ್ ದಾಳಿಗಳಲ್ಲಿ, 59 ಪ್ರತಿಶತದಷ್ಟು ಭಾರತದಲ್ಲೇ ಜರುಗಿದ ಘಟನೆಗಳು ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ನಮ್ಮವರೇ ಭಾಗಿಯಾಗಿರುವುದು ಅತ್ಯಂತ ಕೆಟ್ಟ ಘಟನೆಯಾಗಿದೆ ಎಂದು ಹೇಳಿದೆ.
Infinix Zero Ultra: 200MP ಕ್ಯಾಮೆರಾದ ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಸ್ಮಾರ್ಟ್ಫೋನ್ ಮಾರಾಟ ಆರಂಭ: ಬೆಲೆ ಎಷ್ಟು?
ಭಾರತ, ಯುಎಸ್ಎ, ಇಂಡೋನೇಷ್ಯಾ ಮತ್ತು ಚೀನಾ ಕಳೆದ ಎರಡು ವರ್ಷಗಳಲ್ಲಿ ಹೆಚ್ಚು ಸೈಬರ್ ದಾಳಿಗೆ ಗುರಿಯಾದ ಪ್ರಮುಖ ದೇಶಗಳಾಗಿದ್ದು, ನಾಲ್ಕು ದೇಶಗಳಲ್ಲಿ ಒಟ್ಟಾಗಿ 40 ಕ್ಕೂ ಹೆಚ್ಚಿನ ಪ್ರತಿಶತ ಘಟನೆ ವರದಿ ಮಾಡಿವೆ. ಹಾಗೆಯೇ ಈ ಸೈಬರ್ ದಾಳಿಗಳ ಪ್ರಾಥಮಿಕ ಉದ್ದೇಶವು ಹಣಕಾಸಿನ ಲಾಭಗಳಿಗಷ್ಟೇ ಅಲ್ಲದೆ ಒಂದು ನಿರ್ದಿಷ್ಟ ರಾಜಕೀಯ, ಧಾರ್ಮಿಕ ಅಥವಾ ಆರ್ಥಿಕ ಗುರಿಗಾಗಿ ಬೆಂಬಲ ಅಥವಾ ವಿರೋಧವನ್ನು ವ್ಯಕ್ತಪಡಿಸುವ ಮಾರ್ಗವಾಗಿ ಬಳಕೆ ಮಾಡಿಕೊಳ್ಳಲಾಗಿದೆ.
ಆಗಸ್ಟ್ 2019 ರಿಂದ ಡಿಸೆಂಬರ್ 12, 2022 ರವರೆಗೆ ಭಾರತದಲ್ಲಿ ಸೈಬರ್ ವಂಚನೆಯ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲಾಗಿವೆ. 1 ಲಕ್ಷದ 11 ಸಾವಿರ ದೂರುಗಳಲ್ಲಿ 188 ಸಾವಿರ ಕೋಟಿ ರೂಪಾಯಿ ವಂಚನೆಯಿಂದ ಉಳಿಸಲಾಗಿದೆ. ಯಾರಾದರೂ ಸೈಬರ್ ವಂಚನೆ ಮೂಲಕ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯಾದ 1930ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೆ ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ನಿಮ್ಮ ಮಾಹಿತಿಯನ್ನು ಆಧರಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುತ್ತಾರೆ. ಇದರಿಂದ ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ www.cybercrime.gov.in ಮೂಲಕವೂ ದೂರು ನೀಡಬಹುದು. ಈ ಮೂಲಕ ಸೈಬರ್ ವಂಚಕರ ಮೋಸದ ಜಾಲ ನಿಯಂತ್ರಣಕ್ಕೆ ಮಹತ್ವದ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Sat, 31 December 22