AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TrueCaller App: ಟ್ರೂಕಾಲರ್​ ಅಪ್ಲಿಕೇಶನ್​ನಿಂದ ಕರೆ ಮಾಡಿರುವವರ ಸ್ಥಳ ಟ್ರ್ಯಾಕ್​ ಮಾಡಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಟ್ರೂಕಾಲರ್​ ಅಪ್ಲಿಕೇಶನ್ ಅಪರಿಚಿತ ನಂಬರ್​ನಿಂದ ಕರೆ ಬರುತ್ತಿದ್ದಂತೆಯೇ ಕರೆ ಮಾಡುತ್ತಿರುವವರ ಮಾಹಿತಿಯನ್ನು ನೀಡುತ್ತದೆ​. ಆದರೆ, ಕರೆ ಮಾಡಿರುವ ಮೊಬೈಲ್​ ಸಂಖ್ಯೆಯ ಅಧಾರದ ಮೇಲೆ ಅಪರಿಚಿತರ ಸ್ಥಳದ ಮಾಹಿತಿ ಸಿಗುವುದಿಲ್ಲ.

TrueCaller App: ಟ್ರೂಕಾಲರ್​ ಅಪ್ಲಿಕೇಶನ್​ನಿಂದ ಕರೆ ಮಾಡಿರುವವರ ಸ್ಥಳ ಟ್ರ್ಯಾಕ್​ ಮಾಡಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ
ಟ್ರೂಕಾಲರ್​ ಅಪ್ಲಿಕೇಶನ್​​
shruti hegde
| Edited By: |

Updated on: Apr 22, 2021 | 7:00 AM

Share

ಬೇರೆ ಅಥವಾ ಅಪರಿಚಿತ ಕರೆಯನ್ನು ಗುರುತಿಸಲು ಟ್ರೂಕಾಲರ್​ ಒಂದು ಅತ್ಯುತ್ತಮ ಆ್ಯಪ್​. ಈ ಆ್ಯಪ್​ ದೂರವಾಣಿ ಕರೆಯ ರೆಕಾರ್ಡ್​, ಕಾಲ್​-ಬ್ಲಾಕಿಂಗ್​ ಮತ್ತು ಫ್ಲಾಶ್​ ಮೆಸೇಜ್​ಅನ್ನು ಒಳಗೊಂಡಿದೆ. ಟ್ರೂಕಾಲರ್​ ಅಪ್ಲಿಕೇಶನ್ ಅಪರಿಚಿತ ನಂಬರ್​ನಿಂದ ಕರೆ ಬರುತ್ತಿದ್ದಂತೆಯೇ ಕರೆ ಮಾಡುತ್ತಿರುವವರ ಮಾಹಿತಿಯನ್ನು ನೀಡುತ್ತದೆ​. ಆದರೆ, ಕರೆ ಮಾಡಿರುವ ಮೊಬೈಲ್​ ಸಂಖ್ಯೆಯ ಅಧಾರದ ಮೇಲೆ ಅಪರಿಚಿತರ ಸ್ಥಳದ ಮಾಹಿತಿ ಸಿಗುವುದಿಲ್ಲ. ಅದರ ಬದಲಾಗಿ ಸಿಮ್​ ರಿಜಿಸ್ಟರ್​ ಮಾಡಿಸಿರುವಂತೆ ವ್ಯಕ್ತಿಯ ಪರಿಚಯವನ್ನು ಇನ್ನಿತರರಿಗೆ ಮಾಡಿಕೊಡುತ್ತದೆ.

ಟ್ರೂ ಕಾಲರ್​ನಲ್ಲಿ ಹೈಡ್​ ಆಗಿರುವ ಸಂಖ್ಯೆಯನ್ನು ಹೇಗೆ ನೋಡುವುದು? ಈ ಕೆಳಗೆ ತಿಳಿಸಲಾದಂತಹ ಸೂಚನೆಗಳನ್ನು ಪರಿಸೀಲಿಸಿ ನಿಮ್ಮ ಮೊಬೈಲ್​ ಸೆಟ್ಟಿಂಗ್​ ಆಯ್ಕೆಯನ್ನು ಕ್ಲಿಕ್​ ಮಾಡಿ. ಅಲ್ಲಿ ಕಾಣ ಸಿಗುವ ಫೋನ್​ ಎಂಬ ಆಯ್ಕೆಯನ್ನು ಸೆಲೆಕ್ಟ್​ ಮಾಡಿ. ಅಲ್ಲಿ, ನಿಮಗೆ ಕಾಲ್​ ಬ್ಲಾಕಿಂಗ್​ ಮತ್ತು ಐಡೆಂಟಿಫಿಕೇಶನ್​ ಜೊತೆಗೆ ಶೋ ಮೈ ಕಾಲರ್​ ಐಡಿ ಆಯ್ಕೆ ಕಾಣಸಿಗುತ್ತದೆ. ಅದನ್ನು ಟಾಗಲ್​ ಮಾಡಿ

ಟ್ರೂಕಾಲರ್​ನಿಂದ ನಿಮ್ಮ ಮೊಬೈಲ್​ ನಂಬರ್​ಅನ್ನು ಹೇಗೆ ತೆಗೆದುಹಾಕುವುದು? ಟ್ರೂಕಾಲರ್​ ಆ್ಯಪ್​ ಪೇಜ್​ಅನ್ನು ತೆರೆಯಿರಿ ನಿಮ್ಮ ದೇಶದ ಕೋಡ್​ನೊಂದಿಗೆ ನಿಮ್ಮ ಮೊಬೈಲ್​ ನಂಬರ್​ಅನ್ನು ನಮೂದಿಸಿ ಟ್ರೂಕಾಲರ್​ನಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ತೆಗೆದುಹಾಕಲು ಕಾರಣವನ್ನು ಬರೆಯಿರಿ ಕೊನೆಯಲ್ಲಿ ಅನ್​ಲಿಸ್ಟ್​ ಎಂಬ ಆಯ್ಕೆಯನ್ನು ಕ್ಲಿಕ್​ ಮಾಡಿ

ನಿಮ್ಮ ಟ್ರೂಕಾಲರ್​ ಪ್ರೊಫೈಲ್​ಅನ್ನು ಯಾರು ನೋಡಬಹುದು? ಟ್ರೂಕಾಲರ್​ ಅಕೌಂಟ್​ ವೇರಿಫೈ ಆದ ತಕ್ಷಣ ಟ್ರೂಕಾಲರ್​ ಹೊಂದಿರದ ಇತರರಿಗೆ ನಿಮ್ಮ ಮಾಹಿತಿ ಸಿಗುವುದಿಲ್ಲ. ಯಾರಾದರೂ ನಿಮ್ಮ ಹೆಸರನ್ನು ಹುಡುಕಲು ಪ್ರಯತ್ನಿಸಿದರೆ ಅಥವಾ ನಿಮ್ಮ ದೂರವಾಣಿ ಸಂಖ್ಯೆಯನ್ನು ನಮೂದಿಸಿದರೆ ನಿಮ್ಮ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಟ್ರೂಕಾಲರ್​ ಹೆಸರನ್ನು ಹೇಗೆ ತಿಳಿಯುತ್ತದೆ? ಟ್ರೂಕಾಲರ್​ ಪ್ರಪಂಚದಾದ್ಯಂತ ಫೋನ್​ ಡೈರೆಕ್ಟರಿ ಪೂರೈಕೆದಾರರು ಮತ್ತು ಸಾಮಾಜಿಕ ನೆಟ್​ವರ್ಕ್​ಗಳೊಂದಿಗಿನ ಪಾಲುದಾರಿಕೆಗಳ ಮೂಲಕ ಹೆಸರುಗಳನ್ನು ಸಂಗ್ರಹಿಸುತ್ತದೆ. ಇದರಿಂದ ನಿಖರವಾದ ಹೆಸರನ್ನು ಪಡೆಯುತ್ತದೆ.

ಟ್ರೂಕಾಲರ್​ನಲ್ಲಿ ನಿಮ್ಮ ಪ್ರೊಫೈಲ್​ಅನ್ನು ಯಾರಾದರೂ ನೋಡಿದ್ದನ್ನು ಹೇಗೆ ಕಂಡುಹಿಡಿಯುವುದು? ಟ್ರೂಕಾಲರ್​ ಅಪ್ಲಿಕೆಶನ್​ನಲ್ಲಿ ನಿಮ್ಮ ಪ್ರೊಫೈಲ್​ಅನ್ನು ಯಾರು ನೋಡಿದ್ದಾರೆ ಎಂದು ತಿಳಿಯಲು ಆ್ಯಪ್​ನ ನೋಟಿಫಿಕೇಶನ್​ ಅಥವಾ ‘ಹು ವ್ಯೂವ್ಡ್​ ಮೈ ಪ್ರೊಫೈಲ್​’ ಆಯ್ಕೆಯನ್ನು ಕ್ಲಿಕ್​ ಮಾಡಬೇಕು. ಈ ಮೂಲಕ ನಿಮ್ಮ ಪ್ರೊಫೈಲ್​ ವೀಕ್ಷಣೆ ಮಾಡಿದವರನ್ನು ಗುರುತಿಸಬಹುದಾಗಿದೆ.

ಟ್ರೂಕಾಲರ್​ನಲ್ಲಿ ಬ್ಲೂ ಟಿಕ್​ ಎಂದರೇನು? ಬ್ಲೂ ಟಿಕ್​ ಟ್ರೂಕಾಲರ್​ ಬಳಕೆದಾರರ ಸೂಚನೆಯಾಗಿದೆ. ಟ್ರೂಕಾಲರ್​ ಅಪ್ಲಿಕೇಶನ್​ ಪ್ರೊಫೈಲ್​ ಹೊಂದಿರುವ ಬಳಕೆದಾರರ ಹೆಸರಿನ ಪಕ್ಕದಲ್ಲಿ ಬ್ಲ್ಯೂಟಿಕ್​ ತೋರಿಸುತ್ತದೆ.

ಟ್ರೂಕಾಲರ್​ ನಿಮ್ಮ ಸಂದೇಶವನ್ನು ಓದಬಹುದೇ? ನೀವು ಕಳುಹಿಸುವ ಅಥವಾ ಬರುವ ಸಂದೇಶಗಳನ್ನು ಟ್ರೂಕಾಲರ್ ಎಂದಿಗೂ ಓದಲು ಸಾಧ್ಯವಿಲ್ಲ. ಟ್ರೂಕಾಲರ್​ ಆ್ಯಪ್, ನಿಮ್ಮ ಮೆಸೇಜನ್ನು ಎನಲೈಸ್​ ಮಾಡುತ್ತದೆ. ಮತ್ತು ಸಂದೇಶ ಕಳುಹಿಸುವವರ ವಿವರವನ್ನು ಗುರುತಿಸುತ್ತದೆ. ಟ್ರೂಕಾಲರ್​ನಲ್ಲಿ ಬರುವ ಸಂದೇಶಗಳು, ಕರೆಗಳನ್ನು ಸುರಕ್ಷಿತವಾಗಿಡುತ್ತದೆ.

ಇದನ್ನೂ ಓದಿ: ವಾಟ್ಸ್​​ಆ್ಯಪ್​ ಪಿಂಕ್​​ ಲಿಂಕ್​ ನಿಮ್ಮ ಮೊಬೈಲ್​ಗೂ ಬರಬಹುದು ಎಚ್ಚರ..; ಹಾಗೊಮ್ಮೆ ಲಿಂಕ್​ ಬಂದರೆ ನೀವೇನು ಮಾಡ್ಬೇಕು?

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ