AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Recharge Plans 2023: ಜಿಯೋ, ವಿ, ಏರ್ಟೆಲ್ ಧಮಾಕ ಆಫರ್: ಒಂದು ವರ್ಷದ ವ್ಯಾಲಿಡಿಯ ಬೆಸ್ಟ್ ಯೋಜನೆಗಳು ಇಲ್ಲಿದೆ

JIO-Vi-Airtel: ದೀರ್ಘಾವಧಿಯ ಯೋಜನೆಗಳು ಅನಿಯಮಿತ ಕರೆ, ಡೇಟಾ ಪ್ರಯೋಜನಗಳು, ಉಚಿತ ಎಸ್​ಎಮ್​ಎಸ್ ಸೇರಿದಂತೆ ಬಳಕೆದಾರ ಮನೋರಂಜನೆಗಾಗಿ OTT ಕೊಡುಗೆಗಳನ್ನು ಕೂಡ ನೀಡುತ್ತಿದೆ. ಜಿಯೋ (Jio), ಏರ್ಟೆಲ್ (Airtel) ಹಾಗೂ ವೊಡಾಫೋನ್ ಐಡಿಯಾದ ವಾರ್ಷಿಕ ಯೋಜನೆ ನೋಡೋಣ.

Best Recharge Plans 2023: ಜಿಯೋ, ವಿ, ಏರ್ಟೆಲ್ ಧಮಾಕ ಆಫರ್: ಒಂದು ವರ್ಷದ ವ್ಯಾಲಿಡಿಯ ಬೆಸ್ಟ್ ಯೋಜನೆಗಳು ಇಲ್ಲಿದೆ
JIO Airtel and Vi
TV9 Web
| Updated By: Vinay Bhat

Updated on:Jan 02, 2023 | 1:45 PM

Share

2023 ಹೊಸ ವರ್ಷ (New Year) ಬಂದಾಗಿದೆ. ಕೆಲ ಬಳಕೆದಾರರು ತಿಂಗಳ ರಿಚಾರ್ಜ್ ಮಾಡುವ ಬದಲು ವಾರ್ಷಿಕ ಯೋಜನೆಯತ್ತ ಮುಖ ಮಾಡುತ್ತಿದ್ದಾರೆ. ಇದಕ್ಕಾಗಿಯೆ ಬಳಕೆದಾರರಿಗೆ ಸಹಾಯ ಮಾಡಲು, ಟೆಲಿಕಾಂ ಆಪರೇಟರ್‌ಗಳು ಸಹ ಆಕರ್ಷಕ ವಾರ್ಷಿಕ ರೀಚಾರ್ಜ್ ಯೋಜನೆಗಳನ್ನು ನೀಡುದೆ. ಈ ಮೂಲಕ ಬಳಕೆದಾರರು ಇಡೀ ವರ್ಷ ರೀಚಾರ್ಜ್ ಮಾಡುವ ತಲೆಬಿಸಿ ಇರುವುದಿಲ್ಲ. ಈ ದೀರ್ಘಾವಧಿಯ ಯೋಜನೆಗಳು ಅನಿಯಮಿತ ಕರೆ, ಡೇಟಾ ಪ್ರಯೋಜನಗಳು, ಉಚಿತ ಎಸ್​ಎಮ್​ಎಸ್ ಸೇರಿದಂತೆ ಬಳಕೆದಾರ ಮನೋರಂಜನೆಗಾಗಿ OTT ಕೊಡುಗೆಗಳನ್ನು ಕೂಡ ನೀಡುತ್ತಿದೆ. ಹಾಗಾದರೆ ಜಿಯೋ (Jio), ಏರ್ಟೆಲ್ (Airtel) ಹಾಗೂ ವೊಡಾಫೋನ್ ಐಡಿಯಾದ ಅತ್ಯುತ್ತಮ ವಾರ್ಷಿಕ ಯೋಜನೆಗಳ ಪಟ್ಟಿ ನೋಡೋಣ.

ಜಿಯೋ:

ಜಿಯೋದ 2879 ರೂ. ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಒಟ್ಟಾರೆಯಾಗಿ 730GB ಸಿಗಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ದೊರೆಯುತ್ತದೆ. ಜಿಯೋ ಆ್ಯಪ್ಸ್ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಹಾಗೂ ಜಿಯೋ ಕ್ಲೌಡ್ ಚಂದಾದಾರಿಕೆ ಸಿಗಲಿದೆ.

2545 ರೂ. ಪ್ಲಾನ್ ಕೂಡ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 336 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಇದನ್ನೂ ಓದಿ
Image
WhatsApp: ಈ ಆಂಡ್ರಾಯ್ಡ್-ಐಫೋ​ನ್​ಗಳಲ್ಲಿ ವಾಟ್ಸ್​ಆ್ಯಪ್ ಬಂದ್
Image
Tech Tips: ಟ್ರೂ ಕಾಲರ್ ತೋರಿಸುವ ನಿಮ್ಮ ಹೆಸರನ್ನು ಬದಲಾಯಿಸುವುದು ಹೇಗೆ?: ಇಲ್ಲಿದೆ ಟ್ರಿಕ್
Image
WhatsApp: ಭಾರತದ ತಪ್ಪಾದ ನಕ್ಷೆಯ ವಿಡಿಯೋ ಡಿಲಿಟ್ ಮಾಡಿ ಕ್ಷಮೆಯಾಚಿಸಿದ ವಾಟ್ಸ್​​ಆ್ಯಪ್​
Image
Poco C50: ಹೊಸ ವರ್ಷಕ್ಕೆ ಪೋಕೋದಿಂದ ಹೊಸ ಸ್ಮಾರ್ಟ್​ಫೋನ್: ದಂಗಾದ ಬಜೆಟ್ ಪ್ರಿಯರು

Cyber Attack: 829 ಮಿಲಿಯನ್ ಸೈಬರ್ ದಾಳಿ: 2022 ರಲ್ಲಿ ಅತಿ ಹೆಚ್ಚು ಸೈಬರ್ ಅಟ್ಯಾಕ್ ಆಗಿದ್ದೇ ಭಾರತದಲ್ಲಿ

2999 ರೂ. ಪ್ಲಾನ್ ವಿಶೇಷ ಯೋಜನೆ ಆಗಿದ್ದು, ಇದು 365+ 23 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಜಿಯೋ ಆ್ಯಪ್ ಚಂದಾದಾರಿಕೆ ಲಭ್ಯವಿದೆ.

ಏರ್ಟೆಲ್:

ಏರ್ಟೆಲ್​ನ 3359 ರೂ. ಪ್ರಿಪೇಯ್ಡ್‌ ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್ಟೆಲ್ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಬಳಕೆದಾರರು ಒಂದು ವರ್ಷದ ಅಮೆಜಾನ್ ಪ್ರೈಮ್ ಮೊಬೈಲ್ ಎಡಿಷನ್ ಚಂದಾದಾರಿಕೆ ಮತ್ತು ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ ಪಡೆಯುತ್ತಾರೆ. ವಿಂಕ್ ಮ್ಯೂಸಿಕ್, ಉಚಿತ ಹಲೋ ಟ್ಯೂನ್ ಜೊತೆಗೆ ಫಾಸ್ಟ್ ಟ್ಯಾಗ್ ರಿಚಾರ್ಜ್ ಮಾಡಿದರೆ 100 ರೂ. ಕ್ಯಾಶ್​ಬ್ಯಾಕ್ ಸಿಗಲಿದೆ.

ಏರ್ಟೆಲ್​ನ 2999 ರೂ. ಪ್ರಿಪೇಯ್ಡ್‌ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ವಿಂಕ್ ಮ್ಯೂಸಿಕ್, ಉಚಿತ ಹಲೋ ಟ್ಯೂನ್ ಜೊತೆಗೆ ಫಾಸ್ಟ್ ಟ್ಯಾಗ್ ರಿಚಾರ್ಜ್ ಮಾಡಿದರೆ 100 ರೂ. ಕ್ಯಾಶ್​ಬ್ಯಾಕ್ ಸಿಗಲಿದೆ.

1799 ರೂ. ವಿನ ಪ್ಲಾನ್ ಕೂಡ ಇದ್ದು, ಇದುಕೂಡ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್ಟೆಲ್ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ವರ್ಷಕ್ಕೆ 3600 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

Dream 11: ಎಚ್ಚರ, ರಜೆಯಲ್ಲಿರುವ ಸಹೋದ್ಯೋಗಿಗೆ ತೊಂದರೆ ಕೊಟ್ಟರೆ 1 ಲಕ್ಷ ರೂ. ದಂಡ; ಭಾರತದ ಟೆಕ್ ಕಂಪನಿಯಲ್ಲಿ ಹೀಗೊಂದು ನಿಯಮ!

ವೊಡಾಫೋನ್- ಐಡಿಯಾ:

ವಿ ಟೆಲಿಕಾಂನ 3099 ರೂ. ಪ್ಲಾನ್​ನಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟ್​ವರ್ಕ್​ಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಒಂದು ವರ್ಷದ ವಿ ಮೂವೀಸ್, ಟಿವಿ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ.

2899 ರೂ. ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ, ವಿ ಮೂವೀಸ್, ಟಿವಿ ಉಚಿತವಾಗಿ ಲಭ್ಯವಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:45 pm, Mon, 2 January 23

ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!