AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poco C50: ಹೊಸ ವರ್ಷಕ್ಕೆ ಪೋಕೋದಿಂದ ಹೊಸ ಸ್ಮಾರ್ಟ್​ಫೋನ್: ದಂಗಾದ ಬಜೆಟ್ ಪ್ರಿಯರು

ಇದೇ ಜನವರಿ ತಿಂಗಳಲ್ಲಿ ಪೋಕೋ ಸಿ50 (Poco C50) ಫೋನ್ ಭಾರತದಲ್ಲಿ ಅನಾವರಣಗೊಳ್ಳಲಿದೆ. ಆದರೆ, ಕಂಪನಿ ಈ ಫೋನ್‌ ಬಗ್ಗೆ ಯಾವುದೇ ಫೀಚರ್ಸ್ ಅನ್ನು ಬಹಿರಂಗ ಪಡಿಸಿಲ್ಲ.

Poco C50: ಹೊಸ ವರ್ಷಕ್ಕೆ ಪೋಕೋದಿಂದ ಹೊಸ ಸ್ಮಾರ್ಟ್​ಫೋನ್: ದಂಗಾದ ಬಜೆಟ್ ಪ್ರಿಯರು
POCO C50
TV9 Web
| Edited By: |

Updated on: Jan 01, 2023 | 2:19 PM

Share

ಪೋಕೋ (Poco) ಸಂಸ್ಥೆ 2022 ರಲ್ಲಿ ಬಿಡುಗಡೆ ಮಾಡಿರುವುದು ಅತಿ ಕಡಿಮೆ ಮೊಬೈಲ್​ಗಳನ್ನು. ಅಪರೂಪಕ್ಕೆ ಒಂದೊಂದು ಸ್ಮಾರ್ಟ್​ಫೋನ್​ಗಳನ್ನು ಅನಾವರಣ ಮಾಡುತ್ತಿತ್ತು. ಆದರೀಗ ಹೊಸ ವರ್ಷದ ಮೊದಲ ತಿಂಗಳಲ್ಲೇ ಪೋಕೋ ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ತಯಾರಿ ನಡೆಸುತ್ತಿದೆ. ಪೋಕೋ ಸಿ50 (Poco C50) ಎಂಬ ಹೊಸ ಸ್ಮಾರ್ಟ್‌ಫೋನ್​ನೊಂದಿಗೆ (Smartphone) ಸಂಸ್ಥೆ ಮತ್ತೆ ಬಂದಿದೆ. ಇದೇ ಜನವರಿ ತಿಂಗಳಲ್ಲಿ ಈ ಫೋನ್ ಭಾರತದಲ್ಲಿ ಅನಾವರಣಗೊಳ್ಳಲಿದೆ. ಆದರೆ, ಕಂಪನಿ ಈ ಫೋನ್‌ ಬಗ್ಗೆ ಯಾವುದೇ ಫೀಚರ್ಸ್ ಅನ್ನು ಬಹಿರಂಗ ಪಡಿಸಿಲ್ಲ. ಕೆಲವು ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ ಈ ಹೊಸ ಫೋನ್‌ ರೆಡ್ಮಿ A1+ ರೀಬ್ರಾಂಡೆಡ್ ವರ್ಷನ್ ಆಗಿರುಬಹುದು ಎನ್ನಲಾಗಿದೆ.

  • ಈ ಸ್ಮಾರ್ಟ್‌ಫೋನ್‌ ಫೋನ್ ವಾಟರ್‌ಡ್ರಾಪ್ ನಾಚ್‌ ಆಯ್ಕೆಯ ಜೊತೆಗೆ 6.52 ಇಂಚಿನ HD+ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಸ್ಕ್ರಾಚ್ ರೆಸಿಸ್ಟೆಂಟ್ ಗ್ಲಾಸ್ ಆಯ್ಕೆ ಪಡೆದುಕೊಂಡಿರಬಹುದು.
  • ಪೋಕೋ C50 ಮೀಡಿಯಾ ಟೆಕ್‌ ಹಿಲಿಯೋ A22 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಈ ಫೋನ್ ಆಂಡ್ರಾಯ್ಡ್ 12 ಗೋ ಆವೃತ್ತಿಯಲ್ಲಿ ಪ್ಯಾಕ್‌ ಆಗಲಿದೆ ಎಂದು ತಿಳಿದುಬಂದಿದೆ.
  • ಇದನ್ನೂ ಓದಿ
    Image
    Smartphones 2023: ಹೊಸ ವರ್ಷ 2023ರ ಮೊದಲ ತಿಂಗಳೇ ಧೂಳೆಬ್ಬಿಸಲು ಬರುತ್ತಿದೆ ಈ 5 ಸ್ಮಾರ್ಟ್​ಫೋನ್​ಗಳು
    Image
    Tech Tips: ಮೊಬೈಲ್ ಅಥವಾ ಲ್ಯಾಪ್​ಟಾಪ್ ಇದ್ರೆ ಸಾಕು: ಆನ್​ಲೈನ್​ನಲ್ಲಿ ಹಣಗಳಿಸಲು ಇರುವ ಮಾರ್ಗಗಳು ಇಲ್ಲಿದೆ ನೋಡಿ
    Image
    Instagram WhatsApp stickers: ಇನ್‍ಸ್ಟಾ ಮತ್ತು ವಾಟ್ಸ್ ಆ್ಯಪ್​ನಲ್ಲಿ ಹೊಸ ವರ್ಷದ ಸ್ಟಿಕರ್ಸ್​ ಕಳುಹಿಸುವುದು ಹೇಗೆ?
    Image
    Dream 11: ಎಚ್ಚರ, ರಜೆಯಲ್ಲಿರುವ ಸಹೋದ್ಯೋಗಿಗೆ ತೊಂದರೆ ಕೊಟ್ಟರೆ 1 ಲಕ್ಷ ರೂ. ದಂಡ; ಭಾರತದ ಟೆಕ್ ಕಂಪನಿಯಲ್ಲಿ ಹೀಗೊಂದು ನಿಯಮ!
  • ಒಟ್ಟು ಎಷ್ಟು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಆಗಲಿದೆ ಎಂಬುದು ತಿಳಿದಿಲ್ಲ. ಆದರೆ, 64GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿರುವುದು ಖಚಿತ.
  • ಇದರೊಂದಿಗೆ 8MP ರಿಯರ್‌ ಕ್ಯಾಮೆರಾ, 2MP ಡೆಪ್ತ್‌ ಸೆನ್ಸರ್‌ ಆಯ್ಕೆಯ ಸೆಕೆಂಡರಿ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಹಾಗೆಯೇ ರಿಯರ್‌ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್‌ ನೀಡಲಾಗಿದೆ.
  • ಮತ್ತೊಂದು ವಿಶೇಷ ಎಂದರೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 10W ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ.
  • ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡಿಕೊಳ್ಳುವ ಆಯ್ಕೆ ನೀಡಲಾಗಿದ್ದು, 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ.
  • ಪೋಕೋ C50 ಒಂದು ಬಜೆಟ್ ಬೆಲೆಯ ಫೋನಾಗಿ ಲಾಂಚ್‌ ಆಗಲಿದ್ದು, ಬೆಲೆ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಮೂಲಗಳ 15,000 ರೂ. ಗಿಂತ ಕಡಿಮೆಯಿರಬಹುದು ಎನ್ನಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?