Instagram WhatsApp stickers: ಇನ್‍ಸ್ಟಾ ಮತ್ತು ವಾಟ್ಸ್ ಆ್ಯಪ್ನಲ್ಲಿ ಹೊಸ ವರ್ಷದ ಸ್ಟಿಕರ್ಸ್ ಕಳುಹಿಸುವುದು ಹೇಗೆ?
ಒಬ್ಬ ವ್ಯಕ್ತಿ ತನ್ನ ಪ್ರೀತಿ ಪಾತ್ರರೊಂದಿಗೆ ಹೊಸ ವರ್ಷವನ್ನು ಆಚರಿಸಲು ಬಯಸಿದಾಗ ಅವರೆಲ್ಲರೂ ಜೊತೆಯಲ್ಲಿ ಇರಲು ಸಾಧ್ಯವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ತಂತ್ರಜ್ಞಾನವು ನಮ್ಮ ಸಹಾಯಕ್ಕೆ ಬರುತ್ತವೆ.
2023 ಬರಲು ಇನ್ನೂ ಒಂದು ದಿನವಿದೆ. ಒಬ್ಬ ವ್ಯಕ್ತಿ ತನ್ನ ಪ್ರೀತಿ ಪಾತ್ರರೊಂದಿಗೆ ಹೊಸ ವರ್ಷವನ್ನು ಆಚರಿಸಲು ಬಯಸಿದಾಗ ಅವರೆಲ್ಲರೂ ಜೊತೆಯಲ್ಲಿ ಇರಲು ಸಾಧ್ಯವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ತಂತ್ರಜ್ಞಾನವು ನಮ್ಮ ಸಹಾಯಕ್ಕೆ ಬರುತ್ತವೆ. ನಾವು ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವೀಡಿಯೊ ಕಾಲ್ ಮೂಲಕ ಮಾತನಾಡಬಹುದು. ಮತ್ತು ಸ್ಟಿಕರ್ಸ್ ಮೂಲಕ ಶುಭಾಶಯಗಳನ್ನು ಕಳುಹಿಸುವುದು ಜನಪ್ರಿಯ ಆಯ್ಕೆಯಾಗಿದೆ. ನಿಮ್ಮ ಪ್ರೀತಿಪಾತ್ರರಿಗೆ ಹೊಸವರ್ಷದ ಶುಭಾಶಯ ಸ್ಟಿಕರ್ಸ್‍ಗಳನ್ನು ಕಳುಹಿಸಲು ನೀವು ಬಯಸಿದರೆ ಮತ್ತು ಅದಕ್ಕಾಗಿ ಸಂಕ್ಷಿಪ್ತ ಮಾರ್ಗದರ್ಶಿಯನ್ನು ಹುಡುಕುತ್ತಿದ್ದೀರಿ ಅಂತಿದ್ದರೆ ನಾವು ನಿಮಗೆ ಇನ್‍ಸ್ಟಾಗ್ರಾಮ್ ಮತ್ತು ವಾಟ್ಸ್‍ಆ್ಯಪ್‍ನಲ್ಲಿ ಸ್ಟಿಕ್ಕರ್ಗಳನ್ನು ಹೇಗೆ ಕಳುಹಿಸುವುದು ಎಂದು ಇಲ್ಲಿ ಹೇಳುತ್ತೇವೆ.
ವಾಟ್ಸ್‍ಆ್ಯಪ್‍ನಲ್ಲಿ ಹ್ಯಾಪಿ ನ್ಯೂ ಇಯರ್ ಸ್ಟಿಕ್ಕರ್ಗಳನ್ನು ಹೇಗೆ ಕಳುಹಿಸುವುದು:
ಹ್ಯಾಪಿ ನ್ಯೂ ಇಯರ್ ಸ್ಟಿಕ್ಕರ್ಗಳನ್ನು ಕಳುಹಿಸಲು, ಬಳಕೆದಾದರು ಮೊದಲು ಅವುಗಳನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್‍ಲೋಡ್ ಮಾಡಬೇಕಾಗುತ್ತದೆ. ಹಾಗೆ ಮಾಡಲು ಪ್ಲೇ ಸ್ಟೋರ್ಗೆ ಹೋಗಿ ಮತ್ತು ಅಲ್ಲಿನ ಆಯ್ಕೆಯ ಯಾವುದೇ ಸ್ಟಿಕ್ಕರ್ ಪ್ಯಾಕ್‍ನ್ನು ಡೌನ್‍ಲೋಡ್ ಮಾಡಿ.
ಇದನ್ನು ಓದಿ;Instagram: ಇನ್‍ಸ್ಟಾಗ್ರಾಮ್ ರೀಲ್ಸ್ನಲ್ಲಿ ದೊಡ್ಡ ಬದಲಾವಣೆ: ಹೊಸ ಆಯ್ಕೆಯಲ್ಲಿ ಏನಿದೆ ನೋಡಿ
ಒಮ್ಮೆ ನೀವು ನಿಮ್ಮ ಆಯ್ಕೆಯ ಹ್ಯಾಪಿ ನ್ಯೂ ಇಯರ್ ಸ್ಟಿಕ್ಕರ್ ಪ್ಯಾಕ್‍ನ್ನು ಡೌನ್‍ಲೋಡ್ ಮಾಡಿದ ನಂತರ ಅದನ್ನು ತೆರೆಯಿರಿ ಮತ್ತು ನಿಮ್ಮ ವಾಟ್ಸ್‍ಆ್ಯಪ್‍ಗೆ ಸೇರಿಸಿ. ಬಳಕೆದಾರರು ಆ್ಯಪ್‍ನೊಳಗೆ ಬಹು ಸ್ಟಿಕ್ಕರ್ ಪ್ಯಾಕ್‍ನ್ನು ಕಾಣಬಹುದು. ಎಲ್ಲಾ (+) ನಂತಹ ಆಕಾರದಲ್ಲಿ ಅವುಗಳನ್ನು ಪಕ್ಕದಲ್ಲಿ ಸೇರಿಸು ಬಟನ್ ಇರುತ್ತದೆ. ಅದರ ಮೂಲಕ ವಾಟ್ಸ್‍ಆ್ಯಪ್‍ನಲ್ಲಿ ಸ್ಟಿಕ್ಕರ್ ಸೇವ್ ಮಾಡಿ. ನಂತರ ಬಳಕೆದಾರರು ವಾಟ್ಸ್‍ಆ್ಯಪ್‍ನಲ್ಲಿ ಯಾವುದೇ ಚಾಟ್‍ಲಿಸ್ಟ್ ತೆರೆದು ನಿಮ್ಮ ಆಯ್ಕೆಯ ಸ್ಟಿಕ್ಕರ್ನ್ನು ಕಳುಹಿಸಬಹುದು.
ಆಂಡ್ರಾಯ್ಡ್ ಸ್ಮಾರ್ಟ್‍ಫೋನ್ ಬಳಕೆದಾರರು ಮಾತ್ರ ಈ ವಿಧಾನವನ್ನು ಬಳಸಿಕೊಂಡು ಸ್ಟಿಕ್ಕರ್ಗಳನ್ನು ಕಳುಹಿಸಬಹುದು. ಆದರೆ ಐಫೋನ್ ಬಳಕೆದಾರರಿಗೆ ತಮ್ಮ ಮೊಬೈಲ್‍ನಲ್ಲಿ ಸ್ಟಿಕ್ಕರ್ ಡೌನ್‍ಲೋಡ್ ಮಾಡುವ ಆಯ್ಕೆ ಇರುವುದಿಲ್ಲ. ನೀವು ನಿಮ್ಮ ಆಂಡ್ರಾಯ್ಡ್ ಫೋನ್ ಬಳಕೆ ಮಾಡುವ ಸ್ನೇಹಿತರ ಬಳಿ ಸ್ಟಿಕ್ಕರ್ ಕಳುಹಿಸುವಂತೆ ಕೇಳಬಹುದು, ನಂತರ ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
ಇನ್‍ಸ್ಟಾಗ್ರಾಮ್‍ನಲ್ಲಿ ಹ್ಯಾಪಿ ನ್ಯೂ ಇಯರ್ ಸ್ಟಿಕ್ಕರ್ಗಳನ್ನು ಕಳುಹಿಸುವುದು ಹೇಗೆ:
ಇನ್‍ಸ್ಟಾಗ್ರಾಮ್‍ನಲ್ಲಿ ನ್ಯೂ ಇಯರ್ ಸ್ಟಿಕ್ಕರ್ಗಳನ್ನು ಕಳುಹಿಸಲು, ಆಪ್ಲಿಕೇಷನ್‍ನಲ್ಲಿ ನೇರ ಸಂದೇಶಗಳನ್ನು ತೆರೆಯಿರಿ ನಂತರ ರಿಸೀವರ್ನ್ನು ಚಾಟ್ ವಿಂಡೋವನ್ನು ತೆರೆಯಿರಿ. ಕೆಳಭಾಗದಲ್ಲಿ ಟೈಪಿಂಗ್ ಬಾರ್ನ್ನು ಪಕ್ಕದಲ್ಲಿ ಸ್ಟಿಕ್ಕರ್ ಐಕಾನ್ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಿಮ್ಮ ಆಯ್ಕೆಯ ಸ್ಟಿಕ್ಕರ್ ಪಡೆಯಲು ಸರ್ಚಿಂಗ್ ಆಯ್ಕೆಯು ಇದೆ. ಹೀಗೆ ನಿಮ್ಮ ಆಯ್ಕೆಯ ಸ್ಟಿಕ್ಕರ್ನ್ನು ಟ್ಯಾಪ್ ಮಾಡಿ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Sat, 31 December 22