Instagram: ಇನ್​​ಸ್ಟಾಗ್ರಾಮ್ ರೀಲ್ಸ್​ನಲ್ಲಿ ದೊಡ್ಡ ಬದಲಾವಣೆ: ಹೊಸ ಆಯ್ಕೆಯಲ್ಲಿ ಏನಿದೆ ನೋಡಿ

Instagram reels New Feature: ಈ ವಾರ ಇನ್​ಸ್ಟಾಗ್ರಾಮ್ ತನ್ನ ರೀಲ್ಸ್ ವಿಡಿಯೋದಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಅದೇನೆಂದರೆ ಇನ್ನುಮುಂದೆ 90 ಸೆಕೆಂಡ್​ಗಳ ಕಾಲ ರೀಲ್​​ಗಳನ್ನು ನೀವು ರೆಕಾರ್ಡ್​ ಮಾಡಬಹುದು.

Instagram: ಇನ್​​ಸ್ಟಾಗ್ರಾಮ್ ರೀಲ್ಸ್​ನಲ್ಲಿ ದೊಡ್ಡ ಬದಲಾವಣೆ: ಹೊಸ ಆಯ್ಕೆಯಲ್ಲಿ ಏನಿದೆ ನೋಡಿ
Instagram Reels
Follow us
TV9 Web
| Updated By: Vinay Bhat

Updated on:Jun 03, 2022 | 2:41 PM

ಇಂದಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ (Instagram) ರೀಲ್ಸ್‌ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಟಿಕ್​ಟಾಕ್ ನಿಷೇಧವಾಗಿರುವುದು. ಭಾರತದಲ್ಲಿ ಟಿಕ್‌ಟಾಕ್‌ ಅಪ್ಲಿಕೇಶನ್‌ ಅನ್ನು ಬ್ಯಾನ್‌ ಮಾಡಿದ ನಂತರ ಹೆಚ್ಚಿನ ಜನರು ಇನ್‌ಸ್ಟಾಗ್ರಾಮ್‌ ರೀಲ್ಸ್​ಗೆ ಅಂಟಿಕೊಂಡು ಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ತನ್ನ ರೀಲ್ಸ್‌ನಲ್ಲಿ (Instagram Reels) ಹಲವು ಆಕರ್ಷಕ ಫೀಚರ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಇದಲ್ಲದೆ ಇನ್‌ಸ್ಟಾಗ್ರಾಮ್‌ ತನ್ನ ಶಾರ್ಟ್‌ ವೀಡಿಯೊ ಸ್ವರೂಪವನ್ನು ಬದಲಾಯಿಸುವುದಕ್ಕಾಗಿ ಹಲವಾರು ಫೀಚರ್ಸ್‌ಗಳನ್ನು ರೀಲ್ಸ್‌ಗೆ ಸೇರಿಸಿದೆ. ಈಗಂತು ರೀಲ್ಸ್‌ ಮಾಡಿ ಪೋಸ್ಟ್‌ ಮಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನೆ ಗಮನದಲ್ಲಿಟ್ಟುಕೊಂಡು ಇದೀಗ ಇನ್​ಸ್ಟಾ ಹೊಸ ಫೀಚರ್ (Feature) ಒಂದನ್ನು ತಂದಿದೆ.

ಹೌದು, ಈ ವಾರ ಇನ್​ಸ್ಟಾಗ್ರಾಮ್ ತನ್ನ ರೀಲ್ಸ್ ವಿಡಿಯೋದಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಅದೇನೆಂದರೆ ಇನ್ನುಮುಂದೆ 90 ಸೆಕೆಂಡ್​ಗಳ ಕಾಲ ರೀಲ್​​ಗಳನ್ನು ನೀವು ರೆಕಾರ್ಡ್​ ಮಾಡಬಹುದು. ಸದ್ಯಕ್ಕೆ ಲಭ್ಯವಿರುವ 60 ಸೆಕೆಂಡ್‌ಗಳ ಸಮಯದ ಬದಲಿಗೆ 90 ಸೆಕೆಂಡುಗಳ ಕಾಲ ರೀಲ್‌ಗಳನ್ನು ರೆಕಾರ್ಡ್ ಮಾಡಲು ಕಂಪನಿಯು ಬಳಕೆದಾರರಿಗೆ ಅವಕಾಶ ನೀಡುತ್ತಿದೆ.

ಇನ್‌ಸ್ಟಾಗ್ರಾಮ್‌ ರೀಲ್ಸ್‌ ಡೌನ್‌ಲೋಡ್‌ ಹೇಗೆ?:

ಇದನ್ನೂ ಓದಿ
Image
Best Smartphone: ಇಲ್ಲಿದೆ ನೋಡಿ 15,000 ರೂ. ಒಳಗೆ ನೀವು ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು
Image
WhatsApp: ನಿಮ್ಮ ಫ್ರೆಂಡ್ಸ್ ನಿಮ್ಮನ್ನ ಹೈಡ್ ಮಾಡಿ ಏನು ಸ್ಟೇಟಸ್ ಹಾಕಿದ್ದಾರೆ ನೋಡಬೇಕೇ?: ಇಲ್ಲಿದೆ ಟ್ರಿಕ್
Image
Vivo: ವಿವೋದ ಹೊಸ ಸ್ಮಾರ್ಟ್​​ಫೋನ್ ಫೀಚರ್ ಕಂಡು ಬೆರಗಾದ ಟೆಕ್ ಮಾರುಕಟ್ಟೆ: ಅಂಥದ್ದೇನಿದೆ ನೋಡಿ
Image
WhatsApp: ಇನ್ನಾದರೂ ಎಚ್ಚೆತ್ತುಕೊಳ್ಳಿ: 16 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್

ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ರೀಲ್ಸ್‌ಗಳನ್ನು ಐಫೋನ್‌ನಲ್ಲಿ ಡೌನ್‌ಲೋಡ್‌ ಮಾಡಬೇಕಾದರೆ  ಆ್ಯಪ್ ಸ್ಟೋರ್‌ನಿಂದ Instadp ಅಥವಾ Igram.io ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಅಂತೆಯೆ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ರೀಲ್ಸ್ ಡೌನ್‌ಲೋಡರ್ ಅನ್ನು ಡೌನ್‌ಲೋಡ್‌ ಮಾಡಬೇಕಾಗುತ್ತದೆ.

  • ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಇನ್‌ಸ್ಟಾಗ್ರಾಮ್‌ ತೆರೆಯಿರಿ.
  • ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಭಾಗಕ್ಕೆ ಹೋಗಿ.
  • ನಂತರ, ನಿಮ್ಮ ಡಿವೈಸ್‌ನಲ್ಲಿ ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್‌ಗಳ ಲಿಂಕ್ ಅನ್ನು ಕಾಪಿ ಮಾಡಿ.
  • ಇದೀಗ ರೀಲ್ಸ್ ಡೌನ್‌ಲೋಡರ್ ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್‌ನ ಲಿಂಕ್ ಅನ್ನು ಪೇಸ್ಟ್‌ ಮಾಡಿರಿ.
  • ಇದಾದ ನಂತರ ನೀವು ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
  • ಇದೀಗ ಇನ್‌ಸ್ಟಾಗ್ರಾಮ್‌ ರೀಲ್ಸ್‌ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಆಗಲಿವೆ. ಈ ರೀಲ್ಸ್‌ಗಳನ್ನು ನಿಮ್ಮ ಫೋನ್ ಗ್ಯಾಲರಿ ಅಪ್ಲಿಕೇಶನ್‌ನಲ್ಲಿ ಸ್ಟೋರೇಜ್‌ ಮಾಡಬಹುದು.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Fri, 3 June 22

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ