AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smartphones 2023: ಹೊಸ ವರ್ಷ 2023ರ ಮೊದಲ ತಿಂಗಳೇ ಧೂಳೆಬ್ಬಿಸಲು ಬರುತ್ತಿದೆ ಈ 5 ಸ್ಮಾರ್ಟ್​ಫೋನ್​ಗಳು

January 2023 Launching Smartphones: 2023ರ ಹೊಸ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.

Smartphones 2023: ಹೊಸ ವರ್ಷ 2023ರ ಮೊದಲ ತಿಂಗಳೇ ಧೂಳೆಬ್ಬಿಸಲು ಬರುತ್ತಿದೆ ಈ 5 ಸ್ಮಾರ್ಟ್​ಫೋನ್​ಗಳು
Smartphones
Follow us
TV9 Web
| Updated By: Vinay Bhat

Updated on:Jan 01, 2023 | 12:08 PM

ಹೊಸ ವರ್ಷ 2023 (New Year 2023) ಬಂದೇ ಬಿಟ್ಟಿದೆ. ಪ್ರಸಿದ್ಧ ಇ ಕಾಮರ್ಸ್​ ತಾಣ, ರಿಟೇಲ್ ಸ್ಟೋರ್​ಗಳಲ್ಲಿ ನ್ಯೂ ಈಯರ್ ಆಫರ್​ಗಳಿಗೆ ಸ್ಮಾರ್ಟ್​ಫೋನ್​ಗಳು (Smartphone) ಬಂಪರ್ ಡಿಸ್ಕೌಂಟ್​ಗೆ ಸಿಗುತ್ತಿವೆ. ವರ್ಷಾಂತ್ಯಕ್ಕೂ ಕೆಲವು ಮೊಬೈಲ್​ಗಳು ಬಿಡುಗಡೆಗೆ ಆಗಿವೆ. 2023ನೇ ವರ್ಷ ಕೂಡ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲು ಸಿದ್ಧತೆ ನಡೆಸಿವೆ. ಈಗಾಗಲೇ ಅನೇಕ ಫೋನ್‌ಗಳು ಬಿಡುಗಡೆ ದಿನಾಂಕವನ್ನು ಘೊಷಣೆ ಮಾಡಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರ ಕುತೂಹಲವನ್ನು ಕೆರಳಿಸಿವೆ. ಇವು ಮೊಬೈಲ್ (Mobile) ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಖಚಿತ. ಹಾಗಾದ್ರೆ 2023ರ ಹೊಸ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.

ರೆಡ್ಮಿ ನೋಟ್ 12 ಸರಣಿ:

ಚೀನಾ ಮೂಲದ ಪ್ರಸಿದ್ಧ ಶವೋಮಿ ಸಂಸ್ಥೆ ತನ್ನ ರೆಡ್ಮಿ ಬ್ರ್ಯಾಂಡ್​ ಅಡಿಯಲ್ಲಿ ಭಾರತದಲ್ಲಿ ಹೊಸ ಪವರ್​ಫುಲ್ ಮೊಬೈಲ್ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಅದುವೇ ರೆಡ್ಮಿ ನೋಟ್ 12 ಸರಣಿ. ಹೊಸ ವರ್ಷ ಜನವರಿ 5 ರಂದು ಭಾರತದಲ್ಲಿ ಈ ಫೋನ್ ಅನಾವರಣಗೊಳ್ಳಲಿದೆ. ಅಲ್ಲದೆ ಇದು ಹೊಸ ವರ್ಷದ ಮೊದಲ ಸ್ಮಾರ್ಟ್​ಫೋನ್ ಆಗಿರಲಿದೆ. ಇದರಲ್ಲಿ ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ ಮತ್ತು ರೆಡ್ಮಿ ನೋಟ್ 12 ಪ್ರೊ+ ಎಂಬ ಮೂರು ಸ್ಮಾರ್ಟ್​ಫೋನ್​ಗುಗಳಿವೆ. ವಿಶೇಷ ಎಂದರೆ ರೆಡ್ಮಿ ನೋಟ್‌ 12 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಬರೋಬ್ಬರಿ 200 ಮೆಗಾಪಿಕ್ಸೆಲ್‌ ಕ್ಯಾಮೆರಾ ಸೆನ್ಸಾರ್‌ ಹೊಂದಿರಲಿದೆಯಂತೆ ಈ ಮೂರು ಸ್ಮಾರ್ಟ್‌ಫೋನ್​ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ನೋಟ್ 12 33W ವೇಗದ ಚಾರ್ಜಿಂಗ್‌, ನೋಟ್ 12 ಪ್ರೊ 67W ವೇಗದ ಚಾರ್ಜಿಂಗ್‌ ಹಾಗೂ ನೋಟ್ 12 ಪ್ರೊ+ 210W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ನೋಟ್ 12 ಪ್ರೊ+ ಕೇವಲ 9 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತಂತೆ.

ಐಕ್ಯೂ 11 ಸರಣಿ:

ವಿವೋ ಒಡೆತನದ ಬಹುನಿರೀಕ್ಷಿತ ಐಕ್ಯೂ 11 ಸರಣಿ ಕೂಡ ಇದೇ ಜನವರಿ ತಿಂಗಳಿನಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದರಲ್ಲಿ ಐಕ್ಯೂ 11 ಮತ್ತು ಐಕ್ಯೂ 11 ಪ್ರೊ ಎಂಬ ಎರಡು ಫೋನ್​ಗಳಿರಲಿವೆ. ಐಕ್ಯೂ 11 ಫೋನ್‌ 6.78 ಇಂಚಿನ E6 AMOLED ಡಿಸ್‌ಪ್ಲೇ ಹೊಂದಿದೆ. ಇದು HDR10+ ಬೆಂಬಲವನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅ್ನು ಹೊಂದಿದೆ. ಜೊತೆಗೆ 120W ವೇಗದ ಚಾರ್ಜಿಂಗ್‌ ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಐಕ್ಯೂ 11 ಪ್ರೊ ಸ್ಮಾರ್ಟ್‌ಫೋನ್‌ ಬರೋಬ್ಬರಿ 200W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ
Image
Tech Tips: ಮೊಬೈಲ್ ಅಥವಾ ಲ್ಯಾಪ್​ಟಾಪ್ ಇದ್ರೆ ಸಾಕು: ಆನ್​ಲೈನ್​ನಲ್ಲಿ ಹಣಗಳಿಸಲು ಇರುವ ಮಾರ್ಗಗಳು ಇಲ್ಲಿದೆ ನೋಡಿ
Image
Instagram WhatsApp stickers: ಇನ್‍ಸ್ಟಾ ಮತ್ತು ವಾಟ್ಸ್ ಆ್ಯಪ್​ನಲ್ಲಿ ಹೊಸ ವರ್ಷದ ಸ್ಟಿಕರ್ಸ್​ ಕಳುಹಿಸುವುದು ಹೇಗೆ?
Image
Dream 11: ಎಚ್ಚರ, ರಜೆಯಲ್ಲಿರುವ ಸಹೋದ್ಯೋಗಿಗೆ ತೊಂದರೆ ಕೊಟ್ಟರೆ 1 ಲಕ್ಷ ರೂ. ದಂಡ; ಭಾರತದ ಟೆಕ್ ಕಂಪನಿಯಲ್ಲಿ ಹೀಗೊಂದು ನಿಯಮ!
Image
WhatsApp Update: ವಾಟ್ಸ್​ಆ್ಯಪ್ ಚಾಟ್​ನಲ್ಲಿ ಹೊಸ ಫೀಚರ್: ಬಳಕೆದಾರರು ಫುಲ್ ಖುಷ್

Cyber Attack: 829 ಮಿಲಿಯನ್ ಸೈಬರ್ ದಾಳಿ: 2022 ರಲ್ಲಿ ಅತಿ ಹೆಚ್ಚು ಸೈಬರ್ ಅಟ್ಯಾಕ್ ಆಗಿದ್ದೇ ಭಾರತದಲ್ಲಿ

ಪೋಕೋ C50:

2023 ಜನವರಿಯಲ್ಲಿ ರಿಲೀಸ್ ಆಗಲಿರುವ ಸ್ಮಾರ್ಟ್​ಫೋನ್​ಗಳ ಸಾಲಿನಲ್ಲಿ ಪೋಕೋ C50 ಕೂಡ ಇದೆ. ಈ ಸ್ಮಾರ್ಟ್‌ಫೋನ್‌ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದೆ. ಬಲಿಷ್ಠವಾದ 6000mAh ಸಾಮರ್ಥ್ಯದ ಬ್ಯಾಟರಿ ಮತ್ತು ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್‌ ಬಜೆಟ್ ಬೆಲೆಗೆ ಅತ್ಯುತ್ತಮ ಸ್ಮಾರ್ಟ್​ಫೋನ್ ಆಗುವ ಎಲ್ಲ ಲಕ್ಷಣವಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04:

ಈಗಾಗಲೇ ಟೀಸರ್ ಮೂಲಕ ಬಜೆಟ್ ಪ್ರಿಯರ ಹುಬ್ಬೇರಿಸುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್‌ 6.5 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿರಬಹುದು. ಇದಲ್ಲದೆ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು 8GB ವರ್ಚುವಲ್ RAM ಅನ್ನು ಪಡೆಯುವ ಸಾಧ್ಯತೆಯಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 8,000 ರೂ.ಇರಬಹುದು ಎಂದು ಹೇಳಲಾಗಿದೆ.

ಟೆಕ್ನೋ ಫ್ಯಾಂಟಮ್ X2:

ಹೆಚ್ಚಾಗಿ ಬಜೆಟ್ ಫೋನ್ ಮೂಲಕವೇ ಸದ್ದು ಮಾಡುವ ಟೆಕ್ನೋ ಕಂಪನಿ ಹೊಸ ವರ್ಷದ ಜನವರಿಯಲ್ಲಿ ಮಧ್ಯಮ ಬೆಲೆಗೆ ಆಕರ್ಷಕ ಫೋನೊಂದನ್ನು ರಿಲೀಸ್ ಮಾಡಲಿದೆ. ಅದುವೇ ಟೆಕ್ನೋ ಫ್ಯಾಂಟಮ್ X2. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿರಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 64MP ಸೆನ್ಸಾರ್‌, ಎರಡನೇ ಕ್ಯಾಮೆರಾ 13MP ಸೆನ್ಸಾರ್‌, ಮೂರನೇ ಕ್ಯಾಮೆರಾ 2MP ಸೆನ್ಸಾರ್‌ ಪಡೆದಿರುವ ಸಾಧ್ಯತೆಯಿದೆ. ಇದರ ಬೆಲೆ 20,000-25,000 ರೂ. ಒಳಗಡೆ ಇರಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Sun, 1 January 23

ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್