ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಬಹಳ ಉಪಯುಕ್ತವಾದ ಆಕರ್ಷಕ ಫೀಚರ್ಗಳನ್ನು ನೀಡುವ ಕೆಲಸ ಮುಂದುವರೆಸಿದೆ. ಈಗಾಗಲೇ ವಾಟ್ಸ್ಆ್ಯಪ್ ಬೀಟಾ ವರ್ಷನ್ನಲ್ಲಿ ಸಾಲು-ಸಾಲು ಫೀಚರ್ಗಳು ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಒಂದೊಂದು ಆಯ್ಕೆ ಪರಿಚಯಿಸಲಿದೆ. ಇದರ ನಡುವೆ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಷನ್ ಮತ್ತೊಂದು ನೂತನ ಅಪ್ಡೇಟ್ ನೀಡುವ ಬಗ್ಗೆ ಘೋಷಣೆ ಮಾಡಿದೆ. ಸದ್ಯದಲ್ಲೇ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಹೊಸ ಇ-ಮೇಲ್ ವೆರಿಫಿಕೇಷನ್ ಫೀಚರ್ನ ಪ್ರಯೋಜನ ಪಡೆಯಲಿದ್ದಾರೆ.
WABetaInfo ವರದಿ ಮಾಡಿದಂತೆ, ವಾಟ್ಸ್ಆ್ಯಪ್ ಪ್ರಸ್ತುತ ಇ-ಮೇಲ್ ವಿಳಾಸವನ್ನು ಬಳಸಿಕೊಂಡು ನಿಮ್ಮ ಖಾತೆಯನ್ನು ರಕ್ಷಿಸಲು ಹೊಸ ಭದ್ರತಾ ವೈಶಿಷ್ಟ್ಯದ ರೂಪದಲ್ಲಿ ಈ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದ ನಿಮ್ಮ ಖಾತೆ ಮತ್ತಷ್ಟು ಭದ್ರತೆಯಿಂದ ಕೂಡಿರುತ್ತದೆ. ಈ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿದೆ ಮತ್ತು ಇದು ಆಂಡ್ರಾಯ್ಡ್ನ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಈ ಫೀಚರ್ ಅನ್ನು ವಾಟ್ಸ್ಆ್ಯಪ್ ಬೀಟಾ ಆವೃತ್ತಿ ಸಂಖ್ಯೆ 2.23.18.19 ರ ಮೂಲಕ ಪ್ರವೇಶಿಸಬಹುದು.
ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ಇಲ್ಲದಿದ್ರೆ ಹಾಳಾದೀತು
ಬಳಕೆದಾರರ ಇಮೇಲ್ ವಿಳಾಸವನ್ನು ದೃಢೀಕರಿಸಿದ ನಂತರ ಅವರಿಗೆ ವಾಟ್ಸ್ಆ್ಯಪ್ ಖಾತೆಯನ್ನುಪ್ರವೇಶಿಸಲು ಸುಲಭವಾಗುತ್ತದೆ ಎಂದು ವರದಿ ಹೇಲಿದೆ. ಗೌಪ್ಯತೆ ಕಾರಣದಿಂದ ಈ ಇಮೇಲ್ ವಿಳಾಸವು ನಿಮ್ಮ ಕಾಂಟೆಕ್ಟ್ ಲಿಸ್ಟ್ನಲ್ಲಿರುವ ಯಾರಿಗೂ ಗೋಚರಿಸುವುದಿಲ್ಲ ಎಂಬುದನ್ನು ಗಮನಿಸಬೇಕಾದ ವಿಷಯ. ಈ ವೈಶಿಷ್ಟ್ಯವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಸಂಪೂರ್ಣ ವಿವರಗಳು ಲಭ್ಯವಿಲ್ಲದಿದ್ದರೂ, ಭವಿಷ್ಯದಲ್ಲಿ ಇದು ತುಂಬಾ ಉಪಯುಕ್ತವಾಗಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ ಇ-ಮೇಲ್ ವೆರಿಫಿಕೇಷನ್ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದೆ.
ವಾಟ್ಸ್ಆ್ಯಪ್ ಆಂಡ್ರಾಯ್ಡ್ ಬಳಕೆದಾರರಿಗೆ ಹೈ-ರೆಸಲ್ಯೂಷನ್‌ನಲ್ಲಿ ವಿಡಿಯೋವನ್ನು ಕಳುಹಿಸುವ ಫೀಚರ್ ಪರಿಚಯಿಸಿದೆ. ಈ ಹಿಂದೆ ಯಾರಿಗಾದರು ವಿಡಿಯೋ ಕಳುಹಿಸಿದಾಗ ಅದು ಕಂಪ್ರೆಸ್ ಆಗಿ ತನ್ನ ಕ್ವಾಲಿಟಿಯನ್ನು ಕಳೆದುಕೊಳ್ಳುತ್ತಿತ್ತು. ಆದರೀಗ ಹೆಚ್ಡಿ ಕ್ವಾಲಿಟಿಯಲ್ಲಿ ವಿಡಿಯೋ ಕಳುಹಿಸಬಹುದು. ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ನೂತನ ಅಪ್‌ಡೇಟ್‌ನೊಂದಿಗೆ ಈ ಫೀಚರ್ ಬಿಡುಗಡೆ ಆಗಿದೆ. ವಾಟ್ಸ್ಆ್ಯಪ್ ಕಾಂಟೆಕ್ಟ್ ಲಿಸ್ಟ್ನಲ್ಲಿ ಇರುವವರಿಗೆ ಹಂಚಿಕೊಳ್ಳಲು ವಿಡಿಯೋವನ್ನು ಆಯ್ಕೆಮಾಡುವಾಗ ಪರದೆಯ ಮೇಲ್ಭಾಗದಲ್ಲಿ HD ಐಕಾನ್ ಕಾಣಿಸುತ್ತಿದೆ. ಇದನ್ನು ಒತ್ತಿದ ನಂತರ ವಾಟ್ಸ್ಆ್ಯಪ್ ಸ್ಟ್ಯಾಂಡರ್ಡ್ ಮತ್ತು ಡೀಫಾಲ್ಟ್ ಆಗಿ ವಿಡಿಯೋ ಹಂಚಿಕೊಳ್ಳುಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ