ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ದಿಢೀರ್ ಆಗಿ ಕೆಲ ನೂತನ ಅಪ್ಡೇಟ್ಗಳನ್ನು ಪರಿಚಯಿಸುತ್ತಿದೆ. ಅತ್ಯಂತ ಸುಲಭವಾಗಿ ಕಾರ್ಯನಿರ್ವಹಿಸುವಂತಹ ಆಯ್ಕೆಯನ್ನು ಒಂದರ ಹಿಂದೆ ಒಂದರಂತೆ ವಾಟ್ಸ್ಆ್ಯಪ್ ನೀಡುತ್ತಿದೆ. ಈ ವರ್ಷವಂತು ಅನೇಕ ವಿನೂತನ ಅಪ್ಡೇಟ್ಗಳನ್ನು ನೀಡಿ ಬಳಕೆದಾರರನ್ನು ಮತ್ತಷ್ಟು ಖುಷಿ ಪಡಿಸುತ್ತಿದೆ. ಇದೀಗ ವಾಟ್ಸ್ಆ್ಯಪ್ ಮತ್ತೊಂದು ಪ್ರಮುಖ ಆಯ್ಕೆಯನ್ನು ನೀಡಲು ಮುಂದಾಗಿದೆ. ಪ್ರೊಫೈಲ್ ಫೋಟೋದಲ್ಲಿ (Profile Photo) ಅವತಾರ್ (Avatar) ಎಂಬ ಆಯ್ಕೆಯನ್ನು ವಾಟ್ಸ್ಆ್ಯಪ್ ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ವಾಟ್ಸ್ಆ್ಯಪ್ ಬೇಟಾಇನ್ಫೋ ವರದಿ ಮಾಡಿದೆ.
ಈ ಅವತಾರ್ ಫೀಚರ್ ಅನ್ನು ಬಳಸಿ ನಿಮ್ಮ ಪ್ರೊಫೈಲ್ ಫೋಟೋವನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು. ಅಂದರೆ, ಇಲ್ಲಿ ನಿಮಗೆ ಬ್ಯಾಕ್ಗ್ರೌಂಡ್ ಕಲರ್ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಸದ್ಯಕ್ಕೆ ಪರೀಕ್ಷಾ ಹಂತದಲ್ಲಿರುವ ಈ ಫೀಚರ್ ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್, ಐಒಎಸ್ ಹಾಗೂ ಡೆಸ್ಕ್ ಟಾಪ್ ಬಳಕೆದಾರರಿಗೆ ಸಿಗಲಿದೆಯಂತೆ.
ವಾಟ್ಸ್ಆ್ಯಪ್ ಇತ್ತೀಚೆಗಷ್ಟೆ ಎಲ್ಲ ಬಳಕೆದಾರರು ಉಪಯೋಗಿಸುತ್ತಿರುವ ಡಿಲೀಟ್ ಫಾರ್ ಎವರಿಒನ್ ಫೀಚರ್ನಲ್ಲಿ ಹೊಸ ಅಪ್ಡೇಟ್ ಒಂದನ್ನು ನೀಡಿತ್ತು. ಈ ಹಿಂದೆ ತಾವು ಸೆಂಡ್ ಮಾಡಿದ ಸಂದೇಶವನ್ನು ಹಂಚಿಕೊಂಡ ಸಮಯದಿಂದ ಒಂದು ಗಂಟೆ ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳ ಅವಧಿಯಲ್ಲಿ ಡಿಲೀಟ್ ಮಾಡಬಹುತ್ತು. ಇದೀಗ ಇದರ ಟೈಂ ಲಿಮಿಟ್ ಹೆಚ್ಚಿಸಲಾಗಿದೆ. ಈ ಸಮಯವನ್ನು ಎರಡು ದಿನಗಳಿಗೆ ವಿಸ್ತರಣೆ ಮಾಡಿದೆ. ಇದರ ಜೊತೆಗೆ ಯಾರಿಗೂ ತಿಳಿಯದಂತೆ ಗ್ರೂಪ್ನಿಂದ ಹಿಂದೆ ಸರಿಯಬಹುದಾದ ಆಯ್ಕೆ ನೀಡಲಾಗಿದೆ.
ಈ ಹಿಂದೆ ಒಬ್ಬರು ಗ್ರೂಪ್ನಿಂದ ಎಕ್ಸಿಟ್ ಆದರೆ ಎಲ್ಲರಿಗೂ ಆ ನೋಟಿಫಿಕೇಶನ್ ಕಾಣುತ್ತಿತ್ತು. ಈಗ ನೀವು ಗ್ರೂಪ್ನಿಂದ ಹಿಂದೆ ಸರಿದರೆ ಆ ನೋಟಿಫಿಕೇಶನ್ ಕೇವಲ ಅಡ್ಮಿನ್ಗೆ ಮಾತ್ರ ಕಾಣುತ್ತದೆ. ಇನ್ನು ವಾಟ್ಸ್ಆ್ಯಪ್ನಲ್ಲಿ ವ್ಯೂವ್ ಒನ್ಸ್ ಫೀಚರ್ ನಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ಆಯ್ಕೆಯನ್ನು ನಿರ್ಬಂಧಿಸಿದೆ. ಹಾಗೆಯೆ ಆಯ್ದ ಜನರಿಗೆ ನೀವು ಆನ್ಲೈನ್ನಲ್ಲಿದ್ದರೂ ಆಫ್ಲೈನ್ ಇರುವಂತೆ ಮಾಡುವ ಆಯ್ಕೆ ನೀಡಲಾಗಿದೆ.
Published On - 3:14 pm, Tue, 16 August 22