WhatsApp New Feature: ವಾಟ್ಸ್​ಆ್ಯಪ್ ಗ್ರೂಪ್ ಅಡ್ಮಿನ್​ಗಳಿಗೆ ಶುಭ ಸುದ್ದಿ: ನಿಮಗೆ ಸಿಗಲಿದೆ ವಿಶೇಷ ಪವರ್

|

Updated on: May 08, 2023 | 2:45 PM

WhatsApp Group Admin: ವಾಟ್ಸ್​ಆ್ಯಪ್ ಇದೀಗ ಮತ್ತೊಂದ ಹೊಸ ಫೀಚರ್ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಇದರಲ್ಲಿ ಗ್ರೂಪ್ ಅಡ್ಮಿನ್​ಗೆ ವಿಶೇಷ ಪವರ್ ದೊರೆಯಲಿದೆ.

WhatsApp New Feature: ವಾಟ್ಸ್​ಆ್ಯಪ್ ಗ್ರೂಪ್ ಅಡ್ಮಿನ್​ಗಳಿಗೆ ಶುಭ ಸುದ್ದಿ: ನಿಮಗೆ ಸಿಗಲಿದೆ ವಿಶೇಷ ಪವರ್
WhatsApp New Feature
Follow us on

ಇಂದು ಕ್ಷಣಾರ್ಧದಲ್ಲಿ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಬಹುತೇಕ ಜನರು ಉಪಯೋಗಿಸುತ್ತಿರುವ ಆ್ಯಪ್ ಎಂದರೆ ಅದು ಮೆಟಾ (Meta) ಒಡೆತನದ ವಾಟ್ಸ್​ಆ್ಯಪ್ (WhatsApp). ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಈ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಉಪಯೋಗಿಸುತ್ತಿದ್ದಾರೆ. ಈಗಂತು ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್​ಗಳನ್ನು ಪರಿಚಯಿಸುತ್ತಿದೆ. ವಾರಕ್ಕೊಂದು ನೂತನ ಆಯ್ಕೆಗಳನ್ನು ನೀಡುವ ವಾಟ್ಸ್​ಆ್ಯಪ್​ನಲ್ಲಿ ಸಾಲು ಸಾಲು ಹೊಸ ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ. ಇದರ ನಡುವೆ ವಾಟ್ಸ್​ಆ್ಯಪ್ ಇದೀಗ ಮತ್ತೊಂದ ಹೊಸ ಫೀಚರ್ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಇದರಲ್ಲಿ ಗ್ರೂಪ್ ಅಡ್ಮಿನ್​ಗೆ (Group Admin) ವಿಶೇಷ ಪವರ್ ದೊರೆಯಲಿದೆ.

WABetaInfo ಮಾಡಿರುವ ವರದಿಯ ಪ್ರಕಾರ, ಗ್ರೂಪ್​ನಲ್ಲಿ ಬಂದ ಮೆಸೇಜ್​ ಅನಗತ್ಯ ಅಥವಾ ನಿಯಮಕ್ಕೆ ವಿರುದ್ಧವಾಗಿದ್ದರೆ ಸದಸ್ಯ ಅದನ್ನು ಗ್ರೂಪ್ ಅಡ್ಮಿನ್​ಗೆ ವರದಿ ಮಾಡಬಹುದು. ಅಷ್ಟೇ ಅಲ್ಲದೆ ಅಡ್ಮಿನ್ ಅನುಮತಿಸಿದರೆ ಆ ಮೆಸೇಜ್ ಅನ್ನು ಯಾವ ಸದಸ್ಯನಿಗೆ ಬೇಕಾದರೂ ಡಿಲೀಟ್ ಮಾಡಬಹುದು. ಸರಳವಾಗಿ ಹೇಳುವುದಾದರೆ, ಒಂದು ಗುಂಪಿನಿಂದ ನೀವು ಇಷ್ಟವಿಲ್ಲದ ಸಂದೇಶವನ್ನು ಸ್ವೀಕರಿಸಿದರೆ, ನೀವು ಆ ಸಂದೇಶದ ಕುರಿತು ಗ್ರೂಪ್ ಅಡ್ಮಿನ್‌ಗೆ ದೂರು ನೀಡಬಹುದು. ವರದಿ ಮಾಡಿದ ನಂತರ, ಗ್ರೂಪ್ ಅಡ್ಮಿನ್ ಆ ಸಂದೇಶವನ್ನ ಪರಿಶೀಲಿಸಿ ಡಿಲೀಟ್ ಮಾಡಬಹುದು ಅಥವಾ ಗ್ರೂಪ್​ನಲ್ಲಿರುವ ಇತರೆ ಸದಸ್ಯರಿಗೆ ಡಿಲೀಟ್ ಮಾಡುವಂತಹ ಅವಕಾಶ ನೀಡಬಹುದು. ಈ ಮೂಲಕ ಗ್ರೂಪ್​ನಲ್ಲಿ ಉತ್ತಮ ವಾತಾವರಣ ಸೃಷ್ಟಿಸುವುದು ವಾಟ್ಸ್​ಆ್ಯಪ್​ನ ಮುಖ್ಯ ಉದ್ದೇಶವಾಗಿದೆ.

Realme 11 Pro Plus: ಮೂರೇ ದಿನ ಬಾಕಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ 200MP ಕ್ಯಾಮೆರಾ ಸ್ಮಾರ್ಟ್​ಫೋನ್

ಇದನ್ನೂ ಓದಿ
Google Pixel 7a: ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 7a ಬಿಡುಗಡೆಗೆ ದಿನಗಣನೆ: ಭಾರತದಲ್ಲಿ ಬೆಲೆ ಎಷ್ಟು ಗೊತ್ತೇ?
Amazon Great Summer Sale: ಅಮೆಜಾನ್ ಗ್ರೇಟ್ ಸಮ್ಮರ್ ಡೇಸ್ ಸೇಲ್: ಇಂದು ಕೊನೇ ದಿನ: ಆಫರ್ ಮಿಸ್ ಮಾಡ್ಬೇಡಿ
Fake App: ಪ್ಲೇ ಸ್ಟೋರ್​ನಲ್ಲಿ 11 ಅಪಾಯಕಾರಿ ಆ್ಯಪ್ ಪತ್ತೆ: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
Motorola Edge 40: ಬೊಂಬಾಟ್ ಕ್ಯಾಮೆರಾ, ಬಲಿಷ್ಠ ಪ್ರೊಸೆಸರ್: ಮಾರುಕಟ್ಟೆಗೆ ಎಂಟ್ರಿಕೊಟ್ಟ ಮೋಟೋ ಎಡ್ಜ್‌ 40 ಸ್ಮಾರ್ಟ್‌ಫೋನ್‌

ಚಾಟ್ ಲಾಕ್ ಹಾಗೂ ಹೈಡ್ ಮಾಡುಬಹುದು:

ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ (Hide) ಮಾಡಬಹುದು ಎಂದು ಹೇಳಿದೆ. ಈ ಆಯ್ಕೆ ಚಾಟ್​ನ ಕಾಂಟೆಕ್ಟ್ ಅಥವಾ ಗ್ರೂಪ್​ನ ಇನ್​ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್​ಗೆ ಹೋಗುತ್ತದೆ. ಸದ್ಯಕ್ಕೆ ಈ ಫೀಚರ್ಸ್‌ ಅಭಿವೃದ್ಧಿ ಹಂತದಲ್ಲಿದೆ. ಆಂಡ್ರಾಯ್ಡ್ ಬೀಟಾ ಆವೃತ್ತಿಯ 2.23.8.2 ಅಪ್ಡೇಟ್​ನಲ್ಲಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರು ಈ ಫೀಚರ್ಸ್‌ ಅನ್ನು ಬಳಕೆ ಮಾಡಬಹುದು ಎಂದು ತಿಳಿದುಬಂದಿದೆ.

ವಾಟ್ಸ್​ಆ್ಯಪ್​ನಲ್ಲಿ ಇರಲ್ಲ ಸ್ಕ್ಯಾಮ್ ಕರೆಗಳ ಕಿರಿ ಕಿರಿ:

ವಾಟ್ಸ್​ಆ್ಯಪ್ ಸದ್ಯದಲ್ಲೇ ತನ್ನ ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಯನ್ನು ಮ್ಯೂಟ್‌ ಮಾಡುವ ಸೌಲಭ್ಯವನ್ನು ನೀಡಲಿದೆ. ಈ ಫೀಚರ್‌ ಆಯ್ದ ಬೀಟಾ ಟೆಸ್ಟರ್‌ಗಳಿಗೆ ಮಾತ್ರ ಲಭ್ಯವಿದೆ. ಕೆಲವೆ ದಿನಗಳಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗೆ ಸಿಗಲಿದೆ. ಇದರ ಮೂಲಕ ನಿಮ್ಮ ಫೋನ್‌ಗಳಿಗೆ ವಾಟ್ಸ್​ಆ್ಯಪ್ ಮೂಲಕ ಬರುವ ಅಪರಿಚಿತ ಕರೆಗಳನ್ನು ಸೈಲೆನ್ಸ್‌ ಮಾಡಬಹುದು. WABetaInfo ತಾಣದಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ ಈ ಫೀಚರ್‌ ವಾಟ್ಸ್​ಆ್ಯಪ್ ಆಂಡ್ರಾಯ್ಡ್‌ 2.23.10.7 ಅಪ್‌ಡೇಟ್‌ನಲ್ಲಿ ದೊರಕಲಿದೆ. ಇದಕ್ಕಾಗಿ ಸೆಟ್ಟಿಂಗ್‌> ಪ್ರೈವೇಸಿ ಮೆನುಗೆ ಹೋಗಿ ಕ್ಲಿಕ್‌ ಮಾಡಬೇಕು. ಇದರಿಂದ ಸ್ಪ್ಯಾಮ್‌ ಕರೆಗಳನ್ನು ನಿಯಂತ್ರಿಸಲು ವಾಟ್ಸ್​ಆ್ಯಪ್ ಬಳಕೆದಾರರಿಗೆ ಸಾಧ್ಯವಾಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ