ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ 2022 ರಲ್ಲಿ ಸಾಕಷ್ಟು ಅಭಿವೃದ್ದಿ ಕಂಡಿತು. ಕಳೆದ ವರ್ಷ 50ಕ್ಕೂ ಅಧಿಕ ಹೊಸ ಹೊಸ ವಿನೂತನವಾದ ಫೀಚರ್ಗಳನ್ನು ಪರಿಚಯಿಸಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಯಿತು. ಇದಕ್ಕಾಗಿಯೆ ವಾಟ್ಸ್ಆ್ಯಪ್ (WhatsApp) ಅನ್ನು ಇಂದು ವಿಶ್ವದಲ್ಲಿ ಬಳಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಈ ವರ್ಷ ಕೂಡ ವಿಭಿನ್ನವಾದ ಆಯ್ಕೆಗಳು ಬರಲಿದ್ದು, ವಾಟ್ಸ್ಆ್ಯಪ್ ಈ ಕೆಸದಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೆ ವಾಟ್ಸ್ಆ್ಯಪ್ ಫೋಟೋ ಸೆಂಡ್ ಮಾಡುವಾಗ ಹೈ ಕ್ವಾಲಿಟಿಯ ಆಯ್ಕೆ ನೀಡುವ ಬಗ್ಗೆ ಸೂಚನೆ ನೀಡಿತ್ತು. ಇದೀಗ ಡ್ರಾಯಿಂಗ್ ಎಡಿಟರ್ (Drawing Tool) ಮೂಲಕ ಹೊಸ ಸೌಲಭ್ಯಗಳನ್ನು ಕಲ್ಪಿಸಲು ಮೆಸೇಜಿಂಗ್ ಅಪ್ಲಿಕೇಶನ್ ಮುಂದಾಗಿದೆ.
ಈ ಡ್ರಾಯಿಂಗ್ ಎಡಿಟರ್ ಅಡಿಯಲ್ಲಿ ಮೂರು ಹೊಸ ಫೀಚರ್ಗಳನ್ನು ಕಂಪನಿ ಪರಿಚಯಿಸುತ್ತಿದೆ. ಮೊದಲನೆಯದಾಗಿ ವಾಟ್ಸ್ಆ್ಯಪ್ನಲ್ಲಿ ಪಠ್ಯದ ಶೈಲಿ ಸಂಪೂರ್ಣ ಬದಲಾವಣೆ ಆಗಲಿದೆ. ಇದು ಟೆಕ್ಸ್ಟ್ ಎಡಿಟರ್ ಫೀಚರ್ಸ್ ಆಗಿದ್ದು ಕೀಬೋರ್ಡ್ ಮೇಲೆ ಪ್ರದರ್ಶಿಸಲಾದ ಫಾಂಟ್ ಆಯ್ಕೆಗಳಲ್ಲಿ ಒಂದನ್ನು ಟ್ಯಾಪ್ ಮಾಡುವ ಮೂಲಕ ವಿವಿಧ ಫಾಂಟ್‌ಗಳನ್ನು ತ್ವರಿತವಾಗಿ ಬದಲಾಯಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಎರಡನೆಯದಾಗಿ ಪಠ್ಯ ಜೋಡಣೆ ಎಂಬ ಆಯ್ಕೆ ನೀಡುತ್ತಿದ್ದು ಇದರ ಸಹಾಯದಿಂದ ಬಳಕೆದಾರರು ಪಠ್ಯವನ್ನು ಎಡ, ಮಧ್ಯ ಅಥವಾ ಬಲಕ್ಕೆ ಸುಲಭವಾಗಿ ಇರಿಸಲು ಸಾಧ್ಯವಾಗುತ್ತದೆ.
ಕೊನೆಯದಾಗಿ ಪಠ್ಯದ ಹಿನ್ನೆಲೆ ಬಣ್ಣ ಬದಲಾವಣೆ ಮಾಡುವ ಆಯ್ಕೆ. ಇದು ಬಳಕೆದಾರರಿಗೆ ಸುಲಭವಾಗಿ ಪಠ್ಯದ ಹಿನ್ನೆಲೆ ಬಣ್ಣವನ್ನು ಬದಲಾಯಿಸುವಲ್ಲಿ ಸಹಕಾರ ನೀಡುವುದರ ಜೊತೆಗೆ ಪಠ್ಯವನ್ನು ಪ್ರತ್ಯೇಕಿಸಲು ಸುಲಭವಾಗಿ ಸಹಾಯ ಮಾಡಲಿದೆ. ಈಗಾಗಲೇ ಈ ಎಲ್ಲ ಆಯ್ಕೆ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಸದ್ಯದಲ್ಲೇ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
Android Phones: ಭಾರತದಲ್ಲಿ ಭಿನ್ನವಾಗಿರಲಿವೆ ಆ್ಯಂಡ್ರಾಯ್ಡ್ ಫೋನ್ಗಳು; ಕಾರಣ ಇಲ್ಲಿದೆ
ವಾಟ್ಸ್ಆ್ಯಪ್ನಲ್ಲಿ ಈಗ ಒಂದು ಫೋಟೋ ಕಳುಹಿಸಿದರೆ ಅದು ರಿಸೀವ್ ಮಾಡಿಕೊಂಡ ಬಳಕೆದಾರನಿಗೆ ಒರಿಜಿನಲ್ ಕ್ವಾಲಿಟಿಯಲ್ಲಿ ಸಿಗುವುದಿಲ್ಲ. ತನ್ನ ನೈಜ್ಯ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಇದಕ್ಕಾಗಿ ವಾಟ್ಸ್ಆ್ಯಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೂಲ ಗುಣಮಟ್ಟದ ಫೋಟೋಗಳನ್ನು ಸೆಂಡ್ ಮಾಡಲು ಅನುಮತಿಸುವ ಹೊಸ ಫೀಚರ್ಸ್ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ.
ವಾಟ್ಸ್ಆ್ಯಪ್ಪರಿಚಯಿಸಲಿರುವ ಹೊಸ ಫೀಚರ್ಸ್ ನಿಮಗೆ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಲು ಅನುಮತಿಸಲಿದೆ. ಅಂದರೆ ನೀವು ಸೆಂಡ್ ಮಾಡುವ ಫೋಟೋ ಗುಣಮಟ್ಟ ಹೇಗಿರಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಬಹುದು. ಇದರಿಂದ ನಿಮ್ಮ ಫೋಟೋದ ಒರಿಜಿನಲ್ ಕ್ವಾಲಿಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಸೆಂಡ್ ಮಾಡುತ್ತದೆ. ಸದ್ಯ ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಈ ಆಯ್ಕೆ ಕಾಣಿಸಿದ್ದು ಆದಷ್ಟು ಬೇಗ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Sat, 28 January 23