Microsoft: ಮೈಕ್ರೋಸಾಫ್ಟ್ ಬಳಕೆದಾರರಿಗೆ ಭಾರತ ಸರ್ಕಾರದಿಂದ ತುರ್ತು ಎಚ್ಚರಿಕೆ: ತಕ್ಷಣ ಅಪ್ಡೇಟ್ ಮಾಡಿ
ಸಿಇಆರ್‌ಟಿ-ಇನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಪ್ರಕಾರ, ಮೈಕ್ರೋಸಾಫ್ಟ್ ಎಡ್ಜ್ (ಕ್ರೋಮಿಯಂ-ಆಧಾರಿತ) ನಲ್ಲಿ ಅನೇಕ ದುರ್ಬಲತೆಗಳು ಕಂಡುಬಂದಿದೆ. ಇದನ್ನು ರಿಮೋಟ್ ದಾಳಿಕೋರರು ಆ್ಯಕ್ಸೆಸ್ ಪಡೆದುಕೊಂಡು ಕನ್ನ ಹಾಕುವ ಸಾಧ್ಯತೆ ಇದೆ ಎಂದು ಹೇಳಿದೆ.
ಮೈಕ್ರೋಸಾಫ್ಟ್ (Microsoft) ಎಡ್ಜ್ ವೆಬ್ ಬ್ರೌಸರ್‌ನಲ್ಲಿ ಕೆಲ ದೋಷಗಳು ಕಂಡುಬಂದಿದ್ದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ (CERT-IN) ಈ ಬಗ್ಗೆ ಎಚ್ಚರಿಕೆ ನೀಡಿದೆ. ಆಪರೇಟಿಂಗ್ ಸಿಸ್ಟಂಗಳಲ್ಲಿನ ದೋಷಗಳು ಮತ್ತು ದುರ್ಬಲತೆಗಳ ಮೇಲೆ ಮೇಲ್ವಿಚಾರಣೆ ಮಾಡುವ ಮತ್ತು ಎಚ್ಚರಿಕೆ ನೀಡುವ ಸರ್ಕಾರಿ ಸಂಸ್ಥೆ ಸೆರ್ಟ್ ಇನ್, ಮೈಕ್ರೋಸಾಫ್ಟ್ ಎಡ್ಜ್ ವೆಬ್ ಬ್ರೌಸರ್ ಮೇಲೆ ಸೈಬರ್ ದಾಳಿ (Cyber Attack) ನಡೆಯುವ ಸಾಧ್ಯತೆ ಇದೆ ಎಂದು ಬಳಕೆದಾರರನ್ನು ಎಚ್ಚರಿಸಿದೆ.
ಸಿಇಆರ್‌ಟಿ-ಇನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಪ್ರಕಾರ, ಮೈಕ್ರೋಸಾಫ್ಟ್ ಎಡ್ಜ್ (ಕ್ರೋಮಿಯಂ-ಆಧಾರಿತ) ನಲ್ಲಿ ಅನೇಕ ದುರ್ಬಲತೆಗಳು ಕಂಡುಬಂದಿದೆ. ಇದನ್ನು ರಿಮೋಟ್ ದಾಳಿಕೋರರು ಆ್ಯಕ್ಸೆಸ್ ಪಡೆದುಕೊಂಡು ಕನ್ನ ಹಾಕುವ ಸಾಧ್ಯತೆ ಇದೆ ಎಂದು ಹೇಳಿದೆ. 109.0.1518.61 ಆವೃತ್ತಿಯ ಹಿಂದಿನ ಮೈಕ್ರೋಸಾಫ್ಟ್ ಎಡ್ಜ್ ಆವೃತ್ತಿಗಳಲ್ಲಿ ಈ ದುರ್ಬಲತೆಗಳು ಪತ್ತೆ ಆಗಿದೆ. ಈ ದೋಷಗಳಿಂದ ಸಿಸ್ಟಂಗಳನ್ನು ರಕ್ಷಿಸಲು, ಮೈಕ್ರೋಸಾಫ್ಟ್ ಎಡ್ಜ್ ವೆಬ್ ಬ್ರೌಸರ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಲು CERT-IN ಸಲಹೆ ನೀಡಿದೆ.
Tech Tips: ಎರಡು ಮೊಬೈಲ್ಗಳಲ್ಲಿ ಒಂದೇ ನಂಬರ್ನ ವಾಟ್ಸ್ಆ್ಯಪ್ ಖಾತೆ ಬಳಸಲು ಸಾಧ್ಯವೇ?
ಮೈಕ್ರೋಸಾಫ್ಟ್ ಈಗಾಗಲೇ ಹೊಸ ಆವೃತ್ತಿ 109.0.1518.61 ಅನ್ನು ಬಿಡುಗಡೆ ಮಾಡಿದೆ. ಇದು ಈ ದೋಷಗಳನ್ನು ಪರಿಹರಿಸುತ್ತದೆ ಮತ್ತು ಬಳಕೆದಾರರು ದಾಳಿಕೋರರಿಂದ ತಮ್ಮ ಸಿಸ್ಟಮ್‌ಗಳನ್ನು ರಕ್ಷಿಸಲು ತಕ್ಷಣವೇ ಡೌನ್‌ಲೋಡ್ ಮಾಡುವಂತೆ ಸೂಚಿಸಿದೆ. ನಿಮ್ಮ ಸಿಸ್ಟಂನಲ್ಲಿ ಅಪ್‌ಡೇಟ್ ಲಭ್ಯವಿದ್ದರೆ, ಪ್ರಾಂಪ್ಟ್‌ನಲ್ಲಿ ಪರಿಶೀಲಿಸಿ. ಇಲ್ಲಿ ಅಪ್ಡೇಟ್ ಆಯ್ಕೆ ಕಾಣಿಸಿಲ್ಲ ಎಂದಾದರೆ ಹೀಗೆ ಮಾಡಿ.
- ನಿಮ್ಮ ಬ್ರೌಸರ್‌ನ ಮೇಲಿನ ಬಲ ಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
- ಸೆಟ್ಟಿಂಗ್ಸ್ಗೆ ಹೋಗಿ.
- ಸೆಟ್ಟಿಂಗ್ಸ್ ಅಡಿಯಲ್ಲಿ, ಮೈಕ್ರೋಸಾಫ್ಟ್ ಎಡ್ಜ್ ಕ್ಲಿಕ್ ಮಾಡಿ.
- ಇತ್ತೀಚಿನ ಅಪ್ಡೇಟ್ ಬಗ್ಗೆ ಅಲ್ಲಿ ಮಾಹಿತಿ ಕಾಣಿಸುತ್ತದೆ ಮತ್ತು ಅದರ ಮೇಲೆ ಕ್ಲಿಕ್ ಮಾಡಿ ಅಪ್ಡೇಟ್ ಕೊಡಿ.
ಮೈಕ್ರೋಸಾಫ್ಟ್ ಸರ್ವರ್ ಡೌನ್
ಮೊನ್ನೆಯಷ್ಟೆ ಬುಧವಾರ ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್ ಡೌನ್ ಆಗಿತ್ತು. ಮೈಕ್ರೋಸಾಫ್ಟ್ ಅಜೂರ್ ಪಬ್ಲಿಕ್ ಕ್ಲೌಡ್ ಪ್ಲಾಟ್ಫಾರ್ಮ್ ಕಾರ್ಯದಲ್ಲಿ ವ್ಯತ್ಯಯ ಉಂಟಾಗಿತ್ತು. ಕೇವಲ ಭಾರತ ಮಾತ್ರವಲ್ಲದೆ ಇತರ ಕೆಲವು ದೇಶಗಳಲ್ಲಿಯೂ ಮೈಕ್ರೋಸಾಫ್ಟ್ ಸರ್ವರ್ ಡೌನ್ ಆದ ಬಗ್ಗೆ ವರದಿಯಾಗಿತ್ತು. ಜಪಾನ್ನಲ್ಲಿ ಸುಮಾರು 900 ಮಂದಿ ಸರ್ವರ್ ಡೌನ್ ಆಗಿರುವ ಬಗ್ಗೆ ರಿಪೋರ್ಟ್ ಮಾಡಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾ, ಬ್ರಿಟನ್, ಯುಎಇಯಲ್ಲಿ ಕೂಡ ಮೈಕ್ರೋಸಾಫ್ಟ್ ಸರ್ವರ್ ಡೌನ್ ಆಗಿದೆ ಎಂದು ವರದಿಯಾಗಿದೆ. ಮೈಕ್ರೋಸಾಫ್ಟ್ನ ಅನೇಕ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ನಿಗದಿಯಾಗಿರುವ ಕರೆಗಳನ್ನು ಸ್ವೀಕರಿಸಲೂ ಸಾಧ್ಯವಾಗುತ್ತಿರಲಿಲ್ಲವಂತೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Fri, 27 January 23