Sign In

By signing in or creating an account, you agree with Associated Broadcasting Company's Terms & Conditions and Privacy Policy.

Reliance Jio 5G Cities: ಭಾರತದ 50 ನಗರಗಳಲ್ಲಿ 5ಜಿ ಸೇವೆ ಘೋಷಿಸಿದ ರಿಲಯನ್ಸ್ ಜಿಯೋ

ನಾವು ರಾಷ್ಟ್ರದಾದ್ಯಂತ True 5Gನ ಆರಂಭದ ವೇಗ ಮತ್ತು ತೀವ್ರತೆಯನ್ನು ಹೆಚ್ಚಿಸಿದ್ದೇವೆ. ಏಕೆಂದರೆ 2023 ರ ಹೊಸ ವರ್ಷದಲ್ಲಿ ಜಿಯೋ ಟ್ರೂ 5G ತಂತ್ರಜ್ಞಾನದ ರೂಪಾಂತರದ ಪ್ರಯೋಜನಗಳನ್ನು ಪ್ರತಿಯೊಬ್ಬ ಬಳಕೆದಾರರು ಆನಂದಿಸಬೇಕೆಂದು ನಾವು ಬಯಸುತ್ತೇವೆ

Reliance Jio 5G Cities: ಭಾರತದ 50 ನಗರಗಳಲ್ಲಿ 5ಜಿ ಸೇವೆ ಘೋಷಿಸಿದ ರಿಲಯನ್ಸ್ ಜಿಯೋ
ರಿಲಯನ್ಸ್ ಜಿಯೋ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 24, 2023 | 8:16 PM

ರಿಲಯನ್ಸ್ ಜಿಯೋ (Reliance Jio) ಮಂಗಳವಾರ 17 ರಾಜ್ಯಗಳ 50 ನಗರಗಳಲ್ಲಿ ತನ್ನ 5G ಸೇವೆಗಳನ್ನು (5G services) ಘೋಷಿಸಿದೆ. ಇದು “ಇದುವರೆಗಿನ ಅತಿದೊಡ್ಡ” ಚಾಲನೆ ಆಗಿದ್ದು 184 ನಗರಗಳಲ್ಲಿ 5ಜಿ ಲಭ್ಯವಾಗಲಿದೆ. ಕಂಪನಿಯು ಈ ನಗರಗಳ ಜಿಯೋ ಬಳಕೆದಾರರನ್ನು ಸ್ವಾಗತ ಕೊಡುಗೆಗೆ ಸೇರಲು ಆಹ್ವಾನಿಸಿದ್ದು, ಇಲ್ಲಿ 1 Gbps ಗಿಂತ ಹೆಚ್ಚಿನ ವೇಗದಲ್ಲಿ ಅನಿಯಮಿತ ಡೇಟಾ ಸಿಗಲಿದೆ.ರಿಲಯನ್ಸ್ ಜಿಯೋ ಹೆಚ್ಚಿನ ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಜಿಯೋ ವಕ್ತಾರರು ಪ್ರಸ್ತುತ 5G ಸೇವೆಗಳ ಚಾಲನೆಯು ವಿಶ್ವದ ಅತಿದೊಡ್ಡ ಚಾಲನೆ ಆಗಿದೆ ಎಂದು ಹೇಳಿದ್ದಾರೆ. ನಾವು ರಾಷ್ಟ್ರದಾದ್ಯಂತ True 5Gನ ಆರಂಭದ ವೇಗ ಮತ್ತು ತೀವ್ರತೆಯನ್ನು ಹೆಚ್ಚಿಸಿದ್ದೇವೆ. ಏಕೆಂದರೆ 2023 ರ ಹೊಸ ವರ್ಷದಲ್ಲಿ ಜಿಯೋ ಟ್ರೂ 5G ತಂತ್ರಜ್ಞಾನದ ರೂಪಾಂತರದ ಪ್ರಯೋಜನಗಳನ್ನು ಪ್ರತಿಯೊಬ್ಬ ಬಳಕೆದಾರರು ಆನಂದಿಸಬೇಕೆಂದು ನಾವು ಬಯಸುತ್ತೇವೆ ಎಂದು ವಕ್ತಾರರು ಹೇಳಿದ್ದಾರೆ. ಡಿಸೆಂಬರ್ 2023 ರ ವೇಳೆಗೆ ದೇಶಾದ್ಯಂತ ಬಳಕೆದಾರರಿಗೆ 5ಜಿ ಸೇವೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ರಿಲಯನ್ಸ್ ಜಿಯೋದ ಟ್ರೂ 5G ಸೇವೆಗಳನ್ನು ಆಂಧ್ರಪ್ರದೇಶದ ಏಳು ನಗರಗಳು, ಅಸ್ಸಾಂನಲ್ಲಿ ಒಂದು, ಛತ್ತೀಸ್‌ಗಢದಲ್ಲಿ ಮೂರು, ಗೋವಾದಲ್ಲಿ ಒಂದು, ಹರ್ಯಾಣದಲ್ಲಿ ಎಂಟು, ಜಾರ್ಖಂಡ್‌ನಲ್ಲಿ ಒಂದು, ಕರ್ನಾಟಕದಲ್ಲಿ ಐದು, ಕೇರಳದಲ್ಲಿ ಒಂದು, ಮಹಾರಾಷ್ಟ್ರದಲ್ಲಿ ಮೂರು, ಒಡಿಶಾದಲ್ಲಿ ಆರು, ಪುದುಚೇರಿಯಲ್ಲಿ ಒಂದು, ಪಂಜಾಬ್‌ನಲ್ಲಿ ಒಂದು, ರಾಜಸ್ಥಾನದಲ್ಲಿ ಎರಡು, ತಮಿಳುನಾಡಿನಲ್ಲಿ ಮೂರು, ತೆಲಂಗಾಣದಲ್ಲಿ ಒಂದು, ಉತ್ತರ ಪ್ರದೇಶದಲ್ಲಿ ನಾಲ್ಕು ಮತ್ತು ಪಶ್ಚಿಮ ಬಂಗಾಳದಲ್ಲಿ ಎರಡು ನಗರಗಳಲ್ಲಿ ಆರಂಭಿಸಲಾಗಿದೆ. ಕರ್ನಾಟಕದಲ್ಲಿ ಬಾಗಲಕೋಟೆ,ಚಿಕ್ಕಮಗಳೂರು ಮತ್ತು ಹಾಸನ ಈ ಪಟ್ಟಿಯಲ್ಲಿ ಸೇರಿದೆ.

5ಜಿ ಸೇವೆ ಲಭ್ಯವಿರುವ ನಗರಗಳು -ರಾಜ್ಯಗಳು

ಚಿತ್ತೋರ್ – ಆಂಧ್ರಪ್ರದೇಶ

ಕಡಪ- ಆಂಧ್ರಪ್ರದೇಶ

ನರಸರೋಪೇಟ್- ಆಂಧ್ರಪ್ರದೇಶ

ಓಂಗೋಲ್ – ಆಂಧ್ರಪ್ರದೇಶ

ರಾಜಮಹೇಂದ್ರವರಂ – ಆಂಧ್ರಪ್ರದೇಶ

ಶ್ರೀಕಾಕುಲಂ- ಆಂಧ್ರಪ್ರದೇಶ

ವಿಜಯನಗರಂ- ಆಂಧ್ರಪ್ರದೇಶ

ನಾಗಾನ್ – ಅಸ್ಸಾಂ

ಬಿಲಾಸ್ಪುರ್ – ಛತ್ತೀಸ್ಗಢ

ಕೊರ್ಬಾ – ಛತ್ತೀಸ್‌ಗಢ

ರಾಜನಂದಗಾಂವ್- ಛತ್ತೀಸ್ಗಢ

ಪಣಜಿ – ಗೋವಾ

ಅಂಬಾಲಾ- ಹರಿಯಾಣ

ಬಹದ್ದೂರ್ಗಢ- ಹರಿಯಾಣ

ಹಿಸಾರ್- ಹರಿಯಾಣ

ಕರ್ನಾಲ್- ಹರಿಯಾಣ

ಪಾಣಿಪತ್ – ಹರಿಯಾಣ

ರೋಹ್ಟಕ್- ಹರಿಯಾಣ

ಸಿರ್ಸಾ – ಹರಿಯಾಣ

ಸೋನಿಪತ್ – ಹರಿಯಾಣ

ಧನ್ಬಾದ್- ಜಾರ್ಖಂಡ್

ಬಾಗಲಕೋಟೆ – ಕರ್ನಾಟಕ

ಚಿಕ್ಕಮಗಳೂರು- ಕರ್ನಾಟಕ

ಹಾಸನ – ಕರ್ನಾಟಕ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Tue, 24 January 23

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್