WhatsApp Community: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌: ಏನಿದರ ಪ್ರಯೋಜನ?

| Updated By: Vinay Bhat

Updated on: Nov 12, 2022 | 12:59 PM

WhatsApp New Fetures: ವಾಟ್ಸ್​ಆ್ಯಪ್ ತನ್ನ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌ (WhatsApp Community) ಪರಿಚಯಿಸಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಈ ನೂತನ ಫೀಚರ್ಸ್ ಲಭ್ಯವಾಗುತ್ತಿದೆ.

WhatsApp Community: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌: ಏನಿದರ ಪ್ರಯೋಜನ?
WhatsApp
Follow us on

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ವಿನೂತನವಾದ ಅಪ್ಡೇಟ್ ಮೂಲಕ ಸುದ್ದಿಯಾಗುತ್ತಲೇ ಇದೆ. ಈಗೀಗ ಒಮ್ಮೆಲೆ 4,5 ಹೊಸ ಹೊಸ ಆಯ್ಕೆಯನ್ನು ನೀಡುತ್ತಿರುವ ವಾಟ್ಸ್​ಆ್ಯಪ್​ನಲ್ಲಿ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿ ನಿಂತಿದೆ. ಇದರ ನಡುವೆ ತನ್ನ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌ (WhatsApp Community) ಪರಿಚಯಿಸಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಈ ನೂತನ ಫೀಚರ್ಸ್ ಲಭ್ಯವಾಗುತ್ತಿದೆ. ಈ ಫೀಚರ್ ಅನ್ನು ಗ್ರೂಪ್‌ಗಳ ಗ್ರೂಪ್‌ ಎಂದು ಹೇಳಬಹುದು. ಅಂದರೆ ವಾಟ್ಸ್​ಆ್ಯಪ್​ನಲ್ಲಿ ಆಡ್ಮಿನ್‌ಗಳು ನಿರ್ದಿಷ್ಟ ಗುಂಪುಗಳಿಗೆ ಅಥವಾ ಇಡೀ ಸಮುದಾಯಕ್ಕೆ ವಿಚಾರವನ್ನು ಗುಂಪಿನ ಮೂಲಕ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ.

ವಾಟ್ಸ್​ಆ್ಯಪ್​ ಕಮ್ಯೂನಿಟಿಗಳು ಜನರಿಗೆ ಕೆಲಸ ಮಾಡುವ ರಚನೆಯೊಂದಿಗೆ ಪ್ರತ್ಯೇಕ ಗುಂಪುಗಳನ್ನು ಒಂದೇ ಸೂರಿನಡಿಯಲ್ಲಿ ತರಲು ಅನುವು ಮಾಡಿಕೊಡುತ್ತದೆ. ಇದೇ ರೀತಿಯಲ್ಲಿ ಕಮ್ಯೂನಿಟಿ ಕಳುಹಿಸುವ ಕಂಪ್ಲೀಟ್‌ ಅಪ್ಡೇಟ್‌ಗಳನ್ನು ಜನರು ಸ್ವೀಕರಿಸಬಹುದು. ಜೊತೆಗೆ ಕಮ್ಯೂನಿಟಿ ಗ್ರೂಪ್‌ನಲ್ಲಿ ಮುಖ್ಯವಾದವುಗಳ ಕುರಿತು ಸಣ್ಣ ಚರ್ಚಾ ಗುಂಪುಗಳನ್ನು ಸುಲಭವಾಗಿ ಸಂಘಟಿಸಬಹುದು. ಇದರಲ್ಲಿ, ಅನೇಕ ಗುಂಪುಗಳನ್ನು ಏಕಕಾಲದಲ್ಲಿ ಸೇರಿಸಬಹುದು ಮತ್ತು ನೀವು ಎಲ್ಲಾ ಗುಂಪುಗಳ ನವೀಕರಣಗಳನ್ನು ಒಂದೇ ಸ್ಥಳದಲ್ಲಿ ಪಡೆಯುತ್ತೀರಿ.

ಉದಾಹರಣೆಗೆ, ಶಾಲಾ ಮಕ್ಕಳು ಕಡ್ಡಾಯವಾಗಿ ಓದಬೇಕಾದ ವಿಷಯಗಳನ್ನು ಹಂಚಿಕೊಳ್ಳಲು ಎಲ್ಲಾ ಪೋಷಕರನ್ನು ಒಟ್ಟಿಗೆ ಸೇರಿಸಬಹುದು ಮತ್ತು ನಿರ್ದಿಷ್ಟ ತರಗತಿಗಳು, ಪಠ್ಯೇತರ ಚಟುವಟಿಕೆಗಳು ಅಥವಾ ಸ್ವಯಂಸೇವಕ ಅಗತ್ಯಗಳ ಬಗ್ಗೆ ಗುಂಪುಗಳನ್ನು ಹೊಂದಿಸಬಹುದಾಗಿದೆ. ಈ ಗುಂಪುಗಳು ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಿಕೊಳ್ಳಬಹುದಾದ ಸಮುದಾಯದ ಗ್ರೂಪ್‌ಗಳಾಗಿ ಕಾರ್ಯನಿರ್ವಹಿಸಲಿವೆ. ವಾಟ್ಸ್​ಆ್ಯಪ್​ನಲ್ಲಿನ ಪ್ರತಿಯೊಂದು ಕಮ್ಯೂನಿಟಿ ಗುಂಪುಗಳ ವಿವರಣೆ ಮತ್ತು ಮೆನುವನ್ನು ಹೊಂದಿರುತ್ತದೆ. ಅಲ್ಲದೆ ನೀವು ಯಾವ ಜನರು ಕಮ್ಯೂನಿಟಿ ಸೇರಬಹುದು ಅನ್ನೊದನ್ನ ಆಯ್ಕೆ ಮಾಡಬಹುದು.

ಇದನ್ನೂ ಓದಿ
Twitter Verification: ನಕಲಿ ಖಾತೆಗಳ ಹಾವಳಿ ಬೆನ್ನಲ್ಲೇ 8 ಡಾಲರ್ ಯೋಜನೆ ಅಮಾನತಿನಲ್ಲಿಟ್ಟ ಟ್ವಿಟರ್
Twitter: ನಿಮ್ಮ ಟ್ವಿಟರ್ ಅಕೌಂಟ್​ಗೆ ಬ್ಲೂಟಿಕ್ ಬೇಕಾದರೆ ಎಷ್ಟು ರೂ. ಪಾವತಿಸಬೇಕು?: ಇಲ್ಲಿದೆ ನೋಡಿ
Realme 10 5G: ಅತಿ ಕಡಿಮೆ ಬೆಲೆಗೆ ರಿಯಲ್ ಮಿಯಿಂದ ಹೊಸ 5G ಫೋನ್ ಬಿಡುಗಡೆ: ಯಾವುದು?, ಏನು ಫೀಚರ್ಸ್?
Tech Tips: ಮೊಬೈಲ್ ಕಳೆದು ಹೋದರೆ ಅದರಲ್ಲಿದ್ದ ಫೋನ್ ಪೇ, ಗೂಗಲ್ ಪೇ ಅಕೌಂಟ್ ಏನು ಮಾಡುವುದು?

ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಿಕೊಳ್ಳಬಹುದಾದ ಸಮುದಾಯದ ಗ್ರೂಪ್‌ನಲ್ಲಿ ಆಹ್ವಾನಿಸಲಾದ ಬಳಕೆದಾರರು ತಮ್ಮ ಆಸಕ್ತಿಗಳ ಆಧಾರದ ಮೇಲೆ ಯಾವ ಗ್ರೂಪ್ ಅನ್ನು ಸೇರಬೇಕೆಂದು ನಿರ್ಧರಿಸಬಹುದು. ಇದರಿಂದ ಇತರೆ ವಾಟ್ಸ್​ಆ್ಯಪ್ ಗ್ರೂಪ್‌ಗಳಂತೆ ಈ ಗ್ರೂಪ್‌ಗಳಲ್ಲಿ ಅನ್ಯ ವಿಷಯಗಳ ಬಗ್ಗೆ ಅರ್ಥವಿಲ್ಲದೆ ಚರ್ಚೆಗೆ ಅವಕಾಶವಿರುವುದಿಲ್ಲ. ಗೌಪ್ಯತೆಯ ಕಾರಣಗಳಿಗಾಗಿ ಗುಂಪುಗಳಲ್ಲಿನ ಸದಸ್ಯರ ಸಂಖ್ಯೆಯನ್ನು ಅಡ್ಮಿನ್ ಹೊರತಾಗಿ ಇತರರಿಗೆ ಕಾಣಿಸದೇ ಇರುವ ಹಾಗೆ ಈ ಗ್ರೂಪ್‌ಗಳ ಫೀಚರ್ ತರಲಾಗಿದೆ.

ಈ ಹೊಸ ಫೀಚರ್​ನಲ್ಲಿ ಇರುವ ಸಂದೇಶಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಅನ್ನು ಸಹ ಪಡೆಯುತ್ತವೆ. ಇದಲ್ಲದೆ, ಈಗಾಗಲೇ ಹೇಳಿರುವಂತೆ ಬಳಕೆದಾರರ ಪ್ರೈವೆಸಿಯನ್ನು ರಕ್ಷಿಸಲು ವಾಟ್ಸ್​ಆ್ಯಪ್​ ಕಮ್ಯೂನಿಟಿ ಫೋನ್ ಸಂಖ್ಯೆಗಳನ್ನು ಹೈಡ್‌ ಮಾಡುತ್ತದೆ. ಟೆಲಿಗ್ರಾಮ್ ಚಾನೆಲ್‌ಗಳ ಮಾದರಿಯಲ್ಲಿ ವಾಟ್ಸ್​​ಆ್ಯಪ್ ಗ್ರೂಪಿನ ವಿಸ್ತಾರವನ್ನು ಮಿತಿಗೊಳಿಸುತ್ತದೆ.

ಇನ್ನು ವಾಟ್ಸ್​ಆ್ಯಪ್​ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮೆಸೇಜ್ ವಿಥ್ ಯುವರ್​ಸೆಲ್ಫ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸುವ ಬಗ್ಗೆ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಬೀಟಾ ವರ್ಷನ್​ನಲ್ಲಿ ಈ ಆಯ್ಕೆ ಕಾಣಿಸಿಕೊಂಡಿದೆ. ವಾಟ್ಸ್​ಆ್ಯಪ್​ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಲು ಈಗಲು ಸಾಧ್ಯವಿದೆ. ಆದರೆ, ಅದು ಗ್ರೂಪ್ ಒಂದನ್ನು ರಚಿಸಿ ನೀವೊಬ್ಬರೆ ಆ ಗ್ರೂಪ್​ನ ಸದಸ್ಯರಾಗಿ ಮೆಸೇಜ್ ಮಾಡಬಹುದು. ಆದರೀಗ ವಾಟ್ಸ್​ಆ್ಯಪ್ ನೀಡಲಿರುವ ಈ ಹೊಸ ಆಯ್ಕೆಯಲ್ಲಿ ಕಾಂಟೆಕ್ಟ್​ ಲಿಸ್ಟ್​ನಲ್ಲಿ ಬೇರೆಯವರ ನಂಬರ್ ಜೊತೆ ನಿಮ್ಮ ನಂಬರ್ ಕೂಡ ಕಾಣಲಿದೆ. ಆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಕೂಡ ತೆರೆಯಲಿದ್ದು ಆಗ ನಿಮಗೆ ನೀವೇ ಮಸೇಜ್ ಮಾಡಬಹುದಾಗಿದೆ.

Published On - 12:59 pm, Sat, 12 November 22