ಇಂದು ವಾಟ್ಸ್‌ಆ್ಯಪ್ (WhatsApp) ಮೆಸೆಂಜರ್ ಬಳಕೆ ಮಾಡುವವರ ಸಂಖ್ಯೆ ಗಗನಕ್ಕೇರಿದೆ. ಇದು ಮನುಷ್ಯನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಕಾಲ ಕಾಲಕ್ಕೆ ತಕ್ಕಂತೆ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾ ಬರುತ್ತಿರುವ ವಾಟ್ಸ್ಆ್ಯಪ್ನಲ್ಲಿ ಈಗ ಸಾಲು ಸಾಲು ಹೊಸ ಆಯ್ಕೆಗಳು ಬರಲು ಪರೀಕ್ಷಾ ಹಂತದಲ್ಲಿದೆ. ಕೆಲವು ದಿನಗಳ ಹಿಂದೆಯಷ್ಟೆ ವಾಟ್ಸ್‌ಆ್ಯಪ್, ಕಳುಹಿಸಿದ ಮೆಸೇಜ್ ಅನ್ನು ಎಡಿಟ್ (Edit) ಮಾಡುವ ಆಯ್ಕೆ ಗ್ರಾಹಕರಿಗೆ ಒದಗಿಸುವುದಾಗಿ ಹೇಳಿತ್ತು. ಅಲ್ಲದೆ ಡಿಲೀಟ್ ಆದ ಚಾಟ್ ಅನ್ನು ಮರಳಿಸುವ ಅನ್ಡು ಆಯ್ಕೆ ನೀಡುವುದಾಗಿ ಹೇಳಿತ್ತು. ಇದೀಗ ಮಿಸ್ಡ್ ಕಾಲ್‌ಗಳಿಗಾಗಿ ಹೊಸ ಡು ನಾಟ್ ಡಿಸ್ಟರ್ಬ್ (Do Not Disturb) ಆಯ್ಕೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ವಾಟ್ಸ್‌ಆ್ಯಪ್ ಹೊಸ iOS 15ನಲ್ಲಿ ಈ API ಅನ್ನು ಬೆಂಬಲಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಡು ನಾಟ್ ಡಿಸ್ಟರ್ಬ್ ಫೀಚರ್ಸ್ ಮೂಲಕ ನೀವು ಮಿಸ್ ಮಾಡಿಕೊಂಡ ವಾಟ್ಸ್‌ಆ್ಯಪ್ ಕಾಲ್‌ಗಳ ಬಗ್ಗೆ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ನೀವು ಕರೆ ತಪ್ಪಿಸಿಕೊಳ್ಳುವುದಕ್ಕೆ ನಿಖರವಾದ ಕಾರಣ ಏನು ಅನ್ನೊದನ್ನ ತಿಳಿಸಲಿದೆ. ಆದರೆ ಈ ಮಾಹಿತಿಯು ಕರೆ ಸ್ವೀಕರಿಸುವವರ ಡಿವೈಸ್‌ಗೆ ಮಾತ್ರ ಸೀಮಿತವಾಗಿರುವುದರಿಂದ ಕರೆ ಮಾಡುವವರಿಗೆ ಯಾವುದೇ ಸೂಚನೆ ನೀಡಲಾಗುವುದಿಲ್ಲ ಎಂಬುದು ಗಮನಿಸಬೇಕಾದ ವಿಚಾರವಾಗಿದೆ. ಈ ಫೀಚರ್ಸ್ iOS 15 ನಲ್ಲಿ ಚಾಲನೆಯಲ್ಲಿರುವ ವಾಟ್ಸ್‌ಆ್ಯಪ್ ಬೀಟಾದಲ್ಲಿ ಮಾತ್ರ ಲಭ್ಯವಿದೆ. ಆಂಡ್ರಾಯ್ಡ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಈ ಆಯ್ಕೆ ಯಾವಾಗ ಬರಲಿದೆ ಎಂಬ ಬಗ್ಗೆ ಕಂಪನಿ ಇನ್ನೂ ತಿಳಿಸಿಲ್ಲ.
Xiaomi: ಶವೋಮಿ ಸ್ಮಾರ್ಟ್ಫೋನ್ ಬಳಸುತ್ತಿರುವವರು ತಪ್ಪದೇ ಈ ಸ್ಟೋರಿ ಓದಿ: ಬ್ಯಾಟರಿ ಬಗ್ಗೆ ಹೊಸ ಘೋಷಣೆ
ಡಬಲ್ ವೆರಿಫಿಕೇಶನ್ ಕೋಡ್ ಆಯ್ಕೆ:
ವಾಟ್ಸ್‌ಆ್ಯಪ್ ಅಕೌಂಟ್‌ಗೆ ಲಾಗ್ ಇನ್ ಮಾಡುವುದಕ್ಕೆ ಹೆಚ್ಚುವರಿ ಭದ್ರತೆಯ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಅಂದರೆ ವಾಟ್ಸ್‌ಆ್ಯಪ್ ಡಬಲ್ ವೆರಿಫಿಕೇಶನ್ ಕೋಡ್ ಅನ್ನು ಕೇಳಲಿದೆ. SMS ಮೂಲಕ ಕಳುಹಿಸಲಾದ ವೆರಿಫಿಕೇಶನ್ ಕೋಡ್ ಹೊರತುಪಡಿಸಿ ನಿಮಗೆ ಹೆಚ್ಚುವರಿ ಪರಿಶೀಲನೆ ಕೋಡ್ ಕೇಳಲಿದೆ. ಇದರಿಂದ ನಿಮ್ಮ ವಾಟ್ಸ್‌ಆ್ಯಪ್ ಅಕೌಂಟ್ ಫೋನ್ ನಂಬರ್ ಅನ್ನು ಈಗಾಗಲೇ ಮತ್ತೊಂದು ಫೋನ್‌ನಲ್ಲಿ ಬಳಸುತ್ತಿದ್ದರೆ, ನಿಮ್ಮ ಖಾತೆಯು ನಿಮ್ಮ ನಿಯಂತ್ರಣದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡಲಿದೆ.
ಹೆಚ್ಚುವರಿ ಭದ್ರತೆಗಾಗಿ ನೀವು ಕೋಡ್ ಕಳುಹಿಸುವ ಮೊದಲು ಟೈಮರ್ ಮುಗಿಯುವವರೆಗೆ ಕಾಯಬೇಕಾಗುತ್ತದೆ. ಆದರೆ ನೀವು ಕೋಡ್ ಅನ್ನು ಸ್ವೀಕರಿಸಿದಾಗ, ಅದನ್ನು ನಮೂದಿಸುವ ಮೂಲಕ ನಿಮ್ಮ ಖಾತೆಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಈ ಹೊಸ ವೆರಿಫಿಕೇಶನ್ ಫೀಚರ್ಸ್‌ನಿಂದಾಗಿ ವಾಟ್ಸ್‌ಆ್ಯಪ್ ಬಳಕೆದಾರರ ಖಾತೆಗಳಿಗೆ ಅನಧಿಕೃತ ಪ್ರವೇಶವನ್ನು ತಡೆಯಲು ಸಾಧ್ಯವಾಗಲಿದೆ.
ಇದರ ಜೊತೆಗೆ ವಾಟ್ಸ್ಆ್ಯಪ್ನಲ್ಲಿ ನೀವು ಮೆಸೇಜ್ ಒಂದನ್ನು ಡಿಲೀಟ್ ಮಾಡಿದರೆ ಅದನ್ನು ಅನ್ಡು ಮಾಡುವ ಆಯ್ಕೆ ಸಿಗಲಿದೆ. ಹೆಚ್ಚಿನ ಬಾರಿ ಬಳಕೆದಾರರು ಮೆಸೇಜ್ ಡಿಲೀಟ್ ಮಾಡಲು ಹೊರಟಾಗ ಡಿಲೀಟ್ ಫಾರ್ ಎವರಿವರ್ ಬದಲು ಡಿಲೀಟ್ ಫಾರ್ ಮಿ ಒತ್ತಿ ಬಿಡುತ್ತಾರೆ. ವಾಟ್ಸ್ಆ್ಯಪ್ನ ಈ ಹೊಸ ಅನ್ಡು ಬಟನ್ ಇದಕ್ಕೆ ಸಹಕಾರಿ ಆಗಲಿದೆ. ಸದ್ಯದಲ್ಲೇ ಈ ಎಲ್ಲ ಆಯ್ಕೆ ಎಲ್ಲ ಬಳಕೆದಾರರಿಗೆ ಸಿಗಲಿದೆ ಎಂದು ಹೇಳಲಾಗಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Tue, 14 June 22