WhatsApp: ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ಅವರ ವಾಟ್ಸ್​ಆ್ಯಪ್ ಸ್ಟೇಟಸ್ ನೋಡುವ ಟ್ರಿಕ್ ಗೊತ್ತೇ?

| Updated By: Vinay Bhat

Updated on: May 29, 2022 | 1:58 PM

WhatsApp Tips and Tricks: ವಾಟ್ಸ್​ಆ್ಯಪ್​ನಲ್ಲಿ ಬೇರೆ ಅವರು ಹಂಚಿಕೊಂಡ ಸ್ಟೇಟಸ್ ಅನ್ನು ಅವರಿಗೆ ತಿಳಿಯದಂತೆ ನೋಡಬಹುದು. ಇದಕ್ಕೂ ಟ್ರಿಕ್​ಗಳಿವೆ. ಇದಕ್ಕಾಗಿ ನೀವು ಥರ್ಡ್​ ಪಾರ್ಟಿ ಆ್ಯಪ್ (Third Party App) ಮೊರೆ ಹೋಗಬೇಕು ಅಂತಿಲ್ಲ.

WhatsApp: ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ಅವರ ವಾಟ್ಸ್​ಆ್ಯಪ್ ಸ್ಟೇಟಸ್ ನೋಡುವ ಟ್ರಿಕ್ ಗೊತ್ತೇ?
WhatsApp
Follow us on

ಮೆಟಾ (Meta) ಒಡೆತನದ ವಾಟ್ಸ್​ಆ್ಯಪ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಹೊಸ ಹೊಸ ಅಪ್ಡೇಟ್​ಗಳುಳ್ಳ ನೂತನ ಫೀಚರ್​ಗಳನ್ನೂ ನೀಡುತ್ತಿದೆ. ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ಉಪಯೋಗಿಸುತ್ತಿರುವ ವಾಟ್ಸ್​ಆ್ಯಪ್​ನಲ್ಲಿ (WhatsApp) ಅನೇಕ ಮಂದಿಗೆ ತಿಳಿದಿರದ ಅದೆಷ್ಟೊ ಟ್ರಿಕ್​ಗಳಿವೆ. ಅದು ಡಿಲೀಟ್ ಆದ ಮೆಸೇಜ್ ಅನ್ನು ನೋಡುವುದು ಇರಬಹುದು ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂದು ತಿಳಿಯುವುದು ಇರಬಹುದು. ಅಂತೆಯೆ ವಾಟ್ಸ್​ಆ್ಯಪ್​ನಲ್ಲಿ ಬೇರೆ ಅವರು ಹಂಚಿಕೊಂಡ ಸ್ಟೇಟಸ್ ಅನ್ನು ಅವರಿಗೆ ತಿಳಿಯದಂತೆ ನೋಡಬಹುದು. ಇದಕ್ಕೂ ಟ್ರಿಕ್​ಗಳಿವೆ. ಇದಕ್ಕಾಗಿ ನೀವು ಥರ್ಡ್​ ಪಾರ್ಟಿ ಆ್ಯಪ್ (Third Party App) ಮೊರೆ ಹೋಗಬೇಕು ಅಂತಿಲ್ಲ. ಬದಲಾಗಿ ವಾಟ್ಸ್​ಆ್ಯಪ್ ಸೆಟ್ಟಿಂಗ್​ನಲ್ಲಿ ಕೊಂಚ ಬದಲಾವಣೆ ಮಾಡುವ ಮೂಲಕ ಈ ಟ್ರಿಕ್ ಉಪಯೋಗಿಸಬಹುದು.

ವಾಟ್ಸ್​ಆ್ಯಪ್​ ಸ್ಟೇಟಸ್‌ ಇಂದು ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದು, ಬಹುತೇಕ ಬಳಕೆದಾರರು ಈ ಆಯ್ಕೆಯನ್ನು ಮಿಸ್‌ ಮಾಡದೇ ಬಳಸುತ್ತಾರೆ. ವಾಟ್ಸ್​ಆ್ಯಪ್​ ಸ್ಟೇಟಸ್‌ 24 ಗಂಟೆಗಳ ಅವಧಿ ಕಾಲಮಿತಿ ಹೊಂದಿದ್ದು, ಆ ನಂತರ ಆಟೋಮ್ಯಾಟಿಕ್ ಆಗಿ ಸ್ಟೇಟಸ್‌ ಡಿಲೀಟ್‌ ಆಗಿಬಿಡುತ್ತದೆ. ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲೇ ಫೋಟೋ ಎಡಿಟಿಂಗ್ ಆಯ್ಕೆ ನೀಡಿದೆ. ವಾಟ್ಸ್​ಆ್ಯಪ್​ ಯಾರೆಲ್ಲಾ ಸ್ಟೇಟಸ್‌ ವೀಕ್ಷಿಸಿದ್ದಾರೇ ಎನ್ನುವ ಮಾಹಿತಿ ಬಳಕೆದಾರರಿಗೆ ಸಾಮಾನ್ಯವಾಗಿ ಸಿಗುತ್ತದೆ. ಆದರೆ ನೀವು ಅವರ ಸ್ಟೇಟಸ್‌ ನೋಡಿದರೂ ಅದು ಅವರಿಗೆ ತಿಳಿಯದಂತೆ ಸೆಟ್‌ ಮಾಡಬಹುದಾಗಿದೆ. ಅದಕ್ಕೆ ಇಲ್ಲಿದೆ ನೋಡಿ ಟ್ರಿಕ್.

Oppo A16K: ಬಜೆಟ್ ಬೆಲೆಯ ಒಪ್ಪೋ A16K ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಮತ್ತಷ್ಟು ಕಡಿತ: ನೂತನ ದರ ಇಲ್ಲಿದೆ

ಇದನ್ನೂ ಓದಿ
108MP ಕ್ಯಾಮೆರಾದ Mi 11X Pro ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಮಿಸ್ ಮಾಡ್ಬೇಡಿ
Redmi Note 11SE: ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್: ಶವೋಮಿಯಿಂದ ರೆಡ್ಮಿ ನೋಟ್‌ 11SE ಬಿಡುಗಡೆ
Realme Narzo 50 5G: ಭಾರತದಲ್ಲಿ ರಿಯಲ್ ಮಿ ನಾರ್ಜೊ 50 5G ಮಾರಾಟ ಆರಂಭ: ಹೇಗಿದೆ?, ಖರೀದಿಸಬಹುದೇ?
Oppo Reno 8 Series: ಒಪ್ಪೋ ರೆನೋ 8 ಸರಣಿಯ ಮೂರೂ ಫೋನ್​ಗೆ ಕ್ಯಾಮೆರಾ ಪ್ರಿಯರು ಕ್ಲೀನ್ ಬೌಲ್ಡ್: ಬೆಲೆ ಎಷ್ಟು?
  • ಮೊದಲು ನಿಮ್ಮ ಫೋನ್‌ನಲ್ಲಿನ ವಾಟ್ಸ್​ಆ್ಯಪ್​ ಅಪ್ಲಿಕೇಶನ್‌ಗೆ ಹೋಗಿ.
  • ನಂತರ ಮುಂದುವರಿಯಿರಿ ಮತ್ತು ಸೆಟ್ಟಿಂಗ್‌ಗಳ ಮೆನು ತೆರೆಯಿರಿ.
  • ಆನಂತರ ಪ್ರೈವಸಿ ಸೆಟ್ಟಿಂಗ್‌ಗೆ ಕೆಳಗೆ ಸ್ಕ್ರಾಲ್ ಮಾಡಿ.
  • ನೀವು ಅಲ್ಲಿ ಕೆಲವು ಆಯ್ಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಸ್ಕ್ರೀನ್‌ ಕೆಳಭಾಗದಲ್ಲಿರುವ Read receipts ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.
  • ಅದನ್ನು ಸಕ್ರಿಯಗೊಳಿಸಿದ ನಂತರ, ನೀವು ಬಳಕೆದಾರರ(ನಿಮ್ಮ ಕಾಂಟ್ಯಾಕ್ಟ್‌) ವಾಟ್ಸ್​ಆ್ಯಪ್​ ಸ್ಟೇಟಸ್‌ ವೀಕ್ಷಿಸಿದ್ದಿರಾ ಅಥವಾ ಇಲ್ಲವೇ ಎಂಬುದನ್ನು ಅವರ ಸಂಪರ್ಕಕ್ಕೆ ತಿಳಿಯಲು ಸಾಧ್ಯವಾಗುವುದಿಲ್ಲ.

ವಾಟ್ಸ್​ಆ್ಯಪ್​ನಲ್ಲಿ ಡಿಜಿಲಾಕರ್‌ ಸೇವೆ:

ಭಾರತದಲ್ಲಿ ವಾಟ್ಸ್​ಆ್ಯಪ್  ಮೂಲಕ​ ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ವಿಮಾ ಪಾಲಿಸಿಯಂತಹ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡಲು ಸರ್ಕಾರ ಮುಂದಾಗಿದೆ. MyGov ಹೆಲ್ಫ ಡೆಸ್ಕ್‌ ವಾಟ್ಸ್​ಆ್ಯಪ್​ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು, ಇನ್ಮುಂದೆ ಡಿಜಿಲಾಕರ್ ಸೇವೆಗಳು ವಾಟ್ಸ್​ಆ್ಯಪ್​ನಲ್ಲಿ ಕೂಡ ಲಭ್ಯವಾಗಲಿದೆ. ಅದರಂತೆ ವಾಟ್ಸ್​ಆ್ಯಪ್​ ಬಳಕೆದಾರರು ಡಿಜಿಲಾಕರ್ ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.

ವಾಟ್ಸ್​​ಆ್ಯಪ್​​​ನಲ್ಲಿ MyGov ಹೆಲ್ಪ್‌ಡೆಸ್ಕ್ ಆಡಳಿತ ಮತ್ತು ಸರ್ಕಾರಿ ಸೇವೆಗಳು ನಾಗರಿಕರ ಬೆರಳ ತುದಿಯಲ್ಲಿ ಸಿಗುವಂತೆ ಮಾಡಲು ವಾಟ್ಸ್​​ಆ್ಯಪ್​​​ ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದೆ. ಈ ಸಹಾಯವಾಣಿ ಸಂಖ್ಯೆಯ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗುವ ಮೂಲಕ ವಾಟ್ಸ್​​ಆ್ಯಪ್​​​ನಲ್ಲಿ ದಾಖಲೆಗಳನ್ನು ಪಡೆಯಬಹುದು. ಈಗಾಗಲೇ ಡಿಜಿಲಾಕರ್ ಅಕೌಂಟ್ ಅನ್ನು ನೀವು ಈಗಾಗಲೇ ಒಂದನ್ನು ಹೊಂದಿದ್ದರೆ, ದಾಖಲೆಗಳನ್ನು ಪಡೆಯುವುದು ಸುಲಭವಾಗುತ್ತದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ