ವಿಶ್ವದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಎನಿಸಿಕೊಂಡಿರುವ ವಾಟ್ಸ್ಆ್ಯಪ್ (WhatsApp) ದೀಪಾವಳಿ ಪ್ರಯುಕ್ತ ತನ್ನ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ನೀಡಿದೆ. ವಾಟ್ಸ್ಆ್ಯಪ್ ಬಳಕೆದಾರರು ಅನೇಕ ತಿಂಗಳುಗಳಿಂದ ಕಾಯುತ್ತಿದ್ದ ಬಹು ನಿರೀಕ್ಷಿತ ಫೀಚರ್ಸ್ ಅನ್ನು ಪರಿಚಯಿಸಿದೆ. ಇದೀಗ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು (Whatsapp Linked Devices) ಹೊರತಂದಿರುವ ವಾಟ್ಸ್ಆ್ಯಪ್, ಇನ್ನುಂದೆ ವಾಟ್ಸ್ಆ್ಯಪ್ ವೆಬ್ಗಾಗಿ (WhatsApp Web) ನೀವು ಸ್ಮಾರ್ಟ್‌ಫೋನ್ ಅನ್ನು ಆನ್ಲೈನ್ನಲ್ಲಿ ಇರಿಸುವ ಅಗತ್ಯವಿಲ್ಲ. ತನ್ನ ಮಲ್ಟಿ ಡಿವೈಸ್ ಕನೆಕ್ಟ್ ಫೀಚರ್ಸ್ ಅನ್ನು ಇದೀಗ ಆಂಡ್ರಾಯ್ಡ್ ಮತ್ತು iOS ಎರಡೂ ಆವೃತ್ತಿಗಳಲ್ಲಿಯೂ ಕೂಡ ಅಪ್ಡೇಟ್ ಮಾಡಿದೆ. ಈ ಹಿಂದೆ ವಾಟ್ಸ್ಆ್ಯಪ್ ವೆಬ್ ಬಳಸಬೇಕಾದರೆ ಪ್ರತಿ ಬಾರಿ ನಿಮ್ಮ ಫೋನ್‌ನೊಂದಿಗೆ ಲಾಗಿನ್ ಮಾಡಬೇಕಾಗಿತ್ತು. ಆದರೀಗ ಬೀಟಾ ಪ್ರೋಗ್ರಾಂನಿಂದ ಹೊರಬರುವ ಮಲ್ಟಿ-ಡಿವೈಸ್ ವೈಶಿಷ್ಟ್ಯದಿಂದ ಸ್ಮಾರ್ಟ್‌ಫೋನ್ (Smartphone) ಸಹಾಯವಿಲ್ಲದೆ ಲಾಗಿನ್ ಆಗಬಹುದಾಗಿದೆ.
ವಾಟ್ಸ್ಆ್ಯಪ್ ಪರಿಚಯಿಸಿರುವ ಮಲ್ಟಿ ಡಿವೈಸ್ ಮೂಲಕ ಒಬ್ಬರು ಒಂದೇ ಸಮಯದಲ್ಲಿ ತಮ್ಮ ವಾಟ್ಸ್ಆ್ಯಪ್ ಅಕೌಂಟ್ ಅನ್ನು ನಾಲ್ಕು ಡಿವೈಸ್‌ಗಳಿಗೆ ಲಿಂಕ್ ಮಾಡಲು ಅವಕಾಶ ನೀಡಲಿದೆ. ಇದರಲ್ಲಿ ಬ್ರೌಸರ್ ಮತ್ತು ಇತರ ಡಿವೈಸ್‌ಗಳು ಕೂಡ ಸಾಧನಗಳು ಸೇರಿವೆ. ಇನ್ನು ಈ ಫೀಚರ್ಸ್ ಕೂಡ ಎಂಡ್ ಎಂಡ್ ಎನ್‌ಕ್ರಿಪ್ಶನ್ ಅನ್ನು ಬೆಂಬಲಿಸಲಿದೆ. ಇದರಿಂದ ನೀವು ಯಾವುದೇ ಡಿವೈಸ್‌ಗೆ ಕನೆಕ್ಟ್ ಮಾಡಿ ಚಾಟ್ ಮಾಡಿದರೂ ಸಹ ನಿಮ್ಮ ಚಾಟ್ ಸುರಕ್ಷಿತವಾಗಿರಲಿದೆ ಎಂದು ವಾಟ್ಸ್ಆ್ಯಪ್ ದೃಢಪಡಿಸಿದೆ.
ಈ ಹೊಸ ಫೀಚರ್ ಇನ್ನೂ ಬೀಟಾ ಹಂತದಲ್ಲಿದೆ. ವಾಟ್ಸ್ಆ್ಯಪ್ ನಲ್ಲಿನ ಲಿಂಕ್ಡ್ ಡಿವೈಸಸ್ ಸೆಟ್ಟಿಂಗ್‌ನಿಂದ ಬೀಟಾ ಎಂದು ಲೇಬಲ್ ಮಾಡಲಾದ ವೈಶಿಷ್ಟ್ಯವನ್ನು ಬಳಕೆದಾರರು ಆಯ್ಕೆ ಮಾಡಬೇಕಾಗುತ್ತದೆ. ಈ ಬಾರಿ, ನಿಮ್ಮ ಸ್ಮಾರ್ಟ್‌ಫೋನ್ ಆನ್‌ಲೈನ್‌ನಲ್ಲಿದೆಯೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕಾಗಿಲ್ಲ. ಸ್ಮಾರ್ಟ್‌ಫೋನ್ ಆಫ್‌ಲೈನ್‌ಗೆ ಹೋದ ನಂತರ 14 ದಿನಗಳವರೆಗೆ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಖಾಲಿಯಾಗಿದ್ರೆ, ನಿಮ್ಮ ವಾಟ್ಸ್ಆ್ಯಪ್ ವೆಬ್ ಕಾರ್ಯನಿರತವಾಗಿರುತ್ತದೆ.
ಸ್ಮಾರ್ಟ್‌ಫೋನ್ ಇಲ್ಲದೆ ಹೋದರೂ ವಾಟ್ಸ್ಆ್ಯಪ್ ಬಳಕೆ ಹೇಗೆ?
ಈಗ ನಿಮ್ಮ ವಾಟ್ಸ್ಆ್ಯಪ್ ಅಕೌಂಟ್ ಅನ್ನು ಬೇರೆ ಡಿವೈಸ್‌ನಲ್ಲೂ ಉಪಯೋಗಿಸಬಹುದು. ಅಷ್ಟೇ ಅಲ್ಲ ಕನೆಕ್ಟ್ ಮಾಡಿದ ಮುಖ್ಯ ಫೋನ್ ಇಂಟರ್‌ನೆಟ್ ಇಲ್ಲದೆ ಹೋದರೂ ಕೂಡ ನಿಮ್ಮ ವಾಟ್ಸ್ಆ್ಯಪ್ ಅನ್ನು ನೀವು ಬಳಸುತ್ತಿರಬಹುದು.
Vodafone Idea: ವೊಡಾಫೋನ್-ಐಡಿಯಾದಿಂದ ಡಬಲ್ ಡೇಟಾ ಆಫರ್: 2GB ಜೊತೆ ಪುನಃ 2GB ಫ್ರೀ
Telegram Update: ಟೆಲಿಗ್ರಾಂ ಬಳಕೆದಾರರಿಗೆ ಬಿಗ್ ಅಪ್ಡೇಟ್: ಪರಿಚಯಿಸಿದೆ ಬೊಂಬಾಟ್ ಫೀಚರ್ಸ್
(WhatsApp Web WhatsApp users will soon get new feature to link devices without Whatsapp online in smartphone)
Published On - 2:41 pm, Sat, 6 November 21