Telegram Update: ಟೆಲಿಗ್ರಾಂ ಬಳಕೆದಾರರಿಗೆ ಬಿಗ್ ಅಪ್ಡೇಟ್: ಪರಿಚಯಿಸಿದೆ ಬೊಂಬಾಟ್ ಫೀಚರ್ಸ್

Telegram 8.2 update: ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ ಗಳನ್ನು ಪರಿಚಯಿಸಿರುವ ಟೆಲಿಗ್ರಾಂ ಇದೀಗ ಹೊಸ ಅಪ್ಡೇಟ್‌ ಅನ್ನು ಘೋಷಿಸಿದೆ. ಇದರಲ್ಲಿ ಡೇಟ್‌ ಬಾರ್‌ ಮತ್ತು ಕ್ಯಾಲೆಂಡರ್ ವ್ಯೂ ಅನ್ನು ಒಳಗೊಂಡಿದೆ.

Telegram Update: ಟೆಲಿಗ್ರಾಂ ಬಳಕೆದಾರರಿಗೆ ಬಿಗ್ ಅಪ್ಡೇಟ್: ಪರಿಚಯಿಸಿದೆ ಬೊಂಬಾಟ್ ಫೀಚರ್ಸ್
Telegram Update
Follow us
TV9 Web
| Updated By: Vinay Bhat

Updated on: Nov 05, 2021 | 2:26 PM

ವಿಶ್ವದ ಜನಪ್ರಿಯ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಟೆಲಿಗ್ರಾಂ ಆ್ಯಪ್ (Telegram App) ಕೂಡ ಒಂದು. ಅನೇಕರು ಈ ಆ್ಯಪ್ ಅನ್ನು ಬಳಸುತ್ತಿದ್ದಾರೆ. ಸಂದೇಶ ರವಾನಿಸುದರಿಂದ ಹಿಡಿದು ವಿಡಿಯೋ ಕರೆ (Video Call), ಧ್ವನಿ ಸಂದೇಶ ಮಾತ್ರವಲ್ಲದೆ ಸಿನಿಮಾಗಳನ್ನು ಕೂಡ ಡೌನ್​ಲೋಡ್​​ ಮಾಡುತ್ತಾರೆ. ಅಂದರೆ ಎಂಬಿ, ಜಿಬಿ ಗಾತ್ರದ ಫೈಲ್​ಗಳನ್ನು ಟೆಲಿಗ್ರಾಂ (Telegram) ಮೂಲಕ ಸುಲಭವಾಗಿ ಕಳುಹಿಸಬಹುದಾಗಿದೆ. ಈಗಾಗಲೇ ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ ಗಳನ್ನು ಪರಿಚಯಿಸಿರುವ ಟೆಲಿಗ್ರಾಂ ಇದೀಗ ಹೊಸ ಅಪ್ಡೇಟ್‌ ಅನ್ನು ಘೋಷಿಸಿದೆ. ಇದರಲ್ಲಿ ಡೇಟ್‌ ಬಾರ್‌ ಮತ್ತು ಕ್ಯಾಲೆಂಡರ್ ವ್ಯೂ ಅನ್ನು ಒಳಗೊಂಡಿದೆ. ಇದಲ್ಲದೆ ವರ್ಲ್ಡ್‌ ಚಾಟ್ ಥೀಮ್‌ಗಳು ಮತ್ತು ಹೊಸ ಸಂವಾದಾತ್ಮಕ ಎಮೋಜಿಗಳನ್ನು ಕೂಡ ಸೇರಿಸಲಾಗಿದೆ.

ಟೆಲಿಗ್ರಾಂನ ಹೊಸ ಅಪ್ಡೇಟ್‌ನಲ್ಲಿ ಅಡ್ಮಿನ್‌ಗೆ ಹೆಚ್ಚಿನ ಪವರ್‌ ನೀಡಲಾಗಿದೆ. ಹೊಸ ಸೆಟ್ಟಿಂಗ್‌ಗಳೊಂದಿಗೆ ಯಾರು ಸೇರಬಹುದು ಮತ್ತು ಚಾಟ್ ಅನ್ನು ನೋಡಬಹುದು ಅನ್ನೊದನ್ನ ಅಡ್ಮಿನ್‌ ನಿರ್ಧಾರ ಮಾಡುವ ಅವಕಾಶವನ್ನು ನೀಡಲಾಗಿದೆ. ಇದಲ್ಲದೆ ವರ್ಲ್ಡ್‌ ಚಾಟ್ ಥೀಮ್‌ಗಳು ಮತ್ತು ಹೊಸ ಸಂವಾದಾತ್ಮಕ ಎಮೋಜಿಗಳನ್ನು ಕೂಡ ಸೇರಿಸಲಾಗಿದೆ.

ಈ ಹೊಸ ಅಪ್‌ಡೇಟ್‌ನ ಬಗ್ಗೆ ಟೆಲಿಗ್ರಾಂ ಐಒಎಸ್ ಬಳಕೆದಾರರಿಗೆ ತನ್ನ ಬ್ಲಾಗ್ ಪೋಸ್ಟ್ ಮೂಲಕ ವಿವರಣೆ ನೀಡಿದೆ. ಈ ಮೂಲಕ ಹೊಸ ಮಾದರಿಯ ಅನುಭವ ನೀಡಲು ಮುಂದಾಗಿದೆ. ಟೆಲಿಗ್ರಾಂ ನೀಡಿರುವ ಮಾಹಿತಿ ಪ್ರಕಾರ ಹೊಸ ಅಪ್‌ಡೇಟ್ ಶೇರ್‌ ಮಾಡಿದ ಮೀಡಿಯಾ ಪೇಜ್‌ ಬದಿಯಲ್ಲಿ ಹೊಸದಾಗಿ ಡೇಟ್‌ಬಾರ್‌ ಕಾಣಿಸಲಿದೆ. ಇದರಿಂದ ನೀವು ಯಾವ ದಿನಾಂಕದಂದು ಯಾವ ಚಾಟ್‌ ಮಾಡಿದ್ದೀರಾ ಅನ್ನೊದು ಸುಲಭವಾಗಿ ತಿಳಿಯಬಹುದು. ಅಲ್ಲದೆ ನೀವು ನಿರ್ಧಿಷ್ಟ ದಿನಾಂಕದಂದು ಶೇರ್‌ ಮಾಡಿರುವ ಎಲ್ಲಾ ಫೋಟೋಗಳು, ವಿಡಿಯೋಗಳು, ಫೈಲ್‌ಗಳು ಮತ್ತು ಮ್ಯೂಸಿಕ್‌ ಅನ್ನು ನೋಡಬಹುದಾಗಿದೆ.

ಇದರ ಜೊತೆಗೆ ಅಡ್ಮಿನ್‌ ಪ್ರಿವ್ಯೂ ಆಯ್ಕೆಯನ್ನು ಕೂಡ ಸೇರಿಸಿದೆ. ಇದರಿಂದ ನೀವು ಟೆಲಿಗ್ರಾಂ ಗ್ರೂಪ್‌ನಲ್ಲಿ ಶೇರ್‌ ಆಡಿದ ಚಾಟ್‌ ಅನ್ನು ಅಡ್ಮಿನ್‌ ಪರಿಶೀಲಿಸಬಹುದು. ಬಳಕೆದಾರರು ಇನ್ವೈಟ್‌ ಲಿಂಕ್ ಅನ್ನು ತೆರೆದಾಗ, ಚಾಟ್‌ನ ಮೇಲ್ಭಾಗದಲ್ಲಿರುವ ಹೊಸ ಬಾರ್‌ನಿಂದ ಅಡ್ಮಿನ್‌ ಮ್ಯಾನೇಜ್‌ ಮಾಡಬಹುದಾದ ಇನ್ವೈಟ್‌ ಲಿಂಕ್‌ ಬಟನ್‌ ಕಾಣಲಿದೆ ನೋಡುತ್ತಾರೆ. ಇದರೊಂದಿಗೆ, ಟೆಲಿಗ್ರಾಮ್ ಗ್ರೂಪ್ ಅಡ್ಮಿನ್‌ಗಳು ರಿಕ್ವೆಸ್ಟ್‌ ಕಳುಹಿಸುವವರ ಪಬ್ಲಿಕ್‌ ಪ್ರೊಫೈಲ್ ಚಿತ್ರಗಳನ್ನು ಮತ್ತು ಅವರ ರಿಕ್ವೆಸ್ಟ್‌ ಅನ್ನು ಅನುಮೋದಿಸುವ ಅಥವಾ ವಜಾಗೊಳಿಸುವ ಆಯ್ಕೆಯನ್ನು ಸಹ ಪಡೆಯಲಿದ್ದಾರೆ.

ಈ ಹಿಂದಿನ ಅಪ್‌ಡೇಟ್‌ನಲ್ಲಿ ಪರಿಚಯಿಸಿದ್ದ ಎಂಟು ಹೊಸ ಚಾಟ್ ಥೀಮ್‌ಗಳು ಈಗ iOS ಡಿವೈಸ್‌ನಲ್ಲಿಯೂ ಕೂಡ ಲಭ್ಯವಾಗಲಿದೆ. ಪ್ರತಿಯೊಂದು ಹೊಸ ಥೀಮ್ಸ್‌ ಡೇ ಮತ್ತು ನೈಟ್ ಮೋಡ್, ಅನಿಮೇಟೆಡ್ ಬ್ಯಾಕ್‌ಗ್ರೌಂಡ್‌ ಮತ್ತು ಗ್ರೇಡಿಯಂಟ್ ಮೆಸೇಜ್‌ ಬಬಲ್ಸ್‌ ಅನ್ನು ಕಾಣಬಹುದಾಗಿದೆ. ಇದು ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಇದು ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಅಲ್ಲದೆ ಟೆಲಿಗ್ರಾಂ ಹೊಸ ಅಪ್‌ಡೇಟ್‌ನಲ್ಲಿ ಬಳಕೆದಾರರು ಮೀಡಿಯಾ ಫೈಲ್‌ ಅನ್ನು ಸೆಂಡ್‌ ಮಾಡಿದಾಗ ಮೆಸೇಜ್‌ ಬಾರ್‌ನಲ್ಲಿ ಟೈಪ್‌ ಮಾಡಿದ ಟೆಕ್ಸ್ಟ್ ಅನ್ನು ಕ್ಯಾಪ್ಶನ್‌ಗೆ ಕನ್ವಟ್‌ ಮಾಡಲಿದೆ. ಇದರಲ್ಲಿರುವ ಕ್ಲೌಡ್ ಡ್ರಾಫ್ಟ್‌ಗಳು ಬಳಕೆದಾರರಿಗೆ ಕಂಪ್ಯೂಟರ್‌ನಲ್ಲಿ ಸಂದೇಶವನ್ನು ಟೈಪ್ ಮಾಡಲು ಅನುಮತಿಸುತ್ತದೆ.

Moto G51: 5000mAh ಬ್ಯಾಟರಿ, 50MP ಕ್ಯಾಮೆರಾ: ಅತ್ಯಂತ ಕಡಿಮೆ ಬೆಲೆ ಮೋಟೋ G51 ಸ್ಮಾರ್ಟ್​ಫೋನ್ ರಿಲೀಸ್

(Telegram update has introduced few new features for its users here is the details)

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು