ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಪ್ರತಿ ದಿನ ಒಂದಲ್ಲ ಒಂದು ಹೊಸ ಫೀಚರ್ಗಳ ಘೋಷಣೆ ಮಾಡುತ್ತಲೇ ಇದೆ. ಈಗಾಗಲೇ ತನ್ನ ಬಳಕೆದಾರರನ್ನು 2000 ಮಿಲಿಯನ್ಗೆ ತಲುಪಿರುವ ವಾಟ್ಸ್ಆ್ಯಪ್ (WhatsApp) ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಅಗತ್ಯವಿರುವ ಎಲ್ಲ ಆಯ್ಕೆಗಳನ್ನು ಒಂದೊಂದಾಗಿ ನೀಡುತ್ತಿರುವ ಇದರಲ್ಲಿ ಆಂಡ್ರಾಯ್ಡ್ (Android), ಐಒಎಸ್, ಟ್ಯಾಬ್ಲೆಟ್ ಹಾಗೂ ವೆಬ್ ಬಳಕೆದಾರರಿಗೆ ನೂತನ ಫೀಚರ್ಸ್ ನೀಡುವಲ್ಲಿ ನಿರತವಾಗಿದೆ. ಎರಡು ದಿನಗಳ ಹಿಂದೆಯಷ್ಟೆ ಟ್ಯಾಬ್ಲೆಟ್ನಲ್ಲಿ ಸ್ಪ್ಲಿಟ್ ವ್ಯೂ ಫೀಚರ್ಸ್ ನೀಡುವುದಾಗಿ ಘೋಷಣೆ ಮಾಡಿದ್ದ ಕಂಪನಿ ಇದೀಗ ಮತ್ತೊಂದು ಉಪಯುಕ್ತ ಆಯ್ಕೆಯನ್ನು ನೀಡಲು ಮುಂದಾಗಿದೆ. ಈ ಫೀಚರ್ ಮೂಲಕ ಬಳಕೆದಾರರು ಅಪರಿಚಿತ ಕರೆ ಹಾಗೂ ಅನವಶ್ಯಕ ಕರೆಗಳಿಂದ ಮುಕ್ತಿ ಪಡೆಯಬಹುದು.
ಅಪರಿಚಿತ ಕರೆಗಳನ್ನು ಮ್ಯೂಟ್ ಮಾಡುವಂತಹ ಆಯ್ಕೆಯನ್ನು ವಾಟ್ಸ್ಆ್ಯಪ್ ನೀಡಲು ಮುಂದಾಗಿದೆ. ಅಂದರೆ ಎಲ್ಲ ಅಪರಿಚಿತ ಸಂಖ್ಯೆಗಳು ಅಥವಾ ಸೇವ್ ಮಾಡಿರದ ಕಾಂಟೆಕ್ಟ್ಗಳಿಂದ ಬರುವ ಕರೆಗಳ ವಿರುದ್ಧ ಇದು ಕ್ರಮ ಕೈಗೊಳ್ಳುತ್ತದೆ. ಆರಂಭದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಈ ಫೀಚರ್ಸ್ ಲಭ್ಯವಾಗಲಿದೆ.
Smartphones: ಹುಬ್ಬೇರಿಸುವಂತಹ ಫೀಚರ್ಗಳಿದ್ದರೂ ಮಾರುಕಟ್ಟೆಯಲ್ಲಿ ಫೇಲ್ ಆದ ಸ್ಮಾರ್ಟ್ಫೋನ್ಗಳು ಯಾವುವು ಗೊತ್ತೇ?
ಆಂಡ್ರಾಯ್ಡ್ ಸ್ಮಾರ್ಟ್ಫೋನ್ನ ವಾಟ್ಸ್ಆ್ಯಪ್ ಸೆಟ್ಟಿಂಗ್ ವಿಭಾಗದಲ್ಲಿ ‘ಅನಾಮಿಕ ಕರೆ ಮಾಡುವವರನ್ನು ಮ್ಯೂಟ್ ಮಾಡು’ ಎಂಬ ಫೀಚರ್ಸ್ ಕಾಣಿಸಲಿದೆ. ಇದರಲ್ಲಿ ಆನ್ ಹಾಗೂ ಆಫ್ ಎಂಬ ಆಯ್ಕೆಯನ್ನು ನೀಡಲಾಗಿದ್ದು, ನೀವು ಇದನ್ನು ಆಫ್ ಮಾಡಿದಾಗ ಅಪರಿಚಿತ ನಂಬರ್ನಿಂದ ವಾಟ್ಸ್ಆ್ಯಪ್ ಕಾಲ್ ಬರುವುದಿಲ್ಲ. ಆದರೆ, ನೋಟಿಫಿಕೇಶನ್ ಬಾರ್‌ನಲ್ಲಿ ಈ ಕರೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಸದ್ಯಕ್ಕೆ ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದೆ. ಶೀಘ್ರದಲ್ಲೇ ಪರೀಕ್ಷೆ ಉದ್ದೇಶಕ್ಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದೆ.
ವಾಟ್ಸ್ಆ್ಯಪ್ ತನ್ನ ಟ್ಯಾಬ್ಲೆಟ್ ಯೂಸರ್ಸ್ಗೆ ಸ್ಪ್ಲಿಟ್ ವ್ಯೂ ಎಂಬ ವಿಶೇಷ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಈಗಾಗಲೇ ಈ ಆಯ್ಕೆ ಸ್ಮಾರ್ಟ್ಫೋನ್ಗಳಲ್ಲಿ ಇದೆ. ಇದರ ಮೂಲಕ ಒಂದೇ ಮೊಬೈಲ್‌ನಲ್ಲಿ ಎರಡೆರಡು ಆ್ಯಪ್‌ಗಳನ್ನು ಏಕಕಾಲದಲ್ಲಿ ಬಳಕೆ ಮಾಡಬಹುದು. ಇದೀಗ ಈ ಫೀಚರ್ ಅನ್ನು ವಾಟ್ಸ್ಆ್ಯಪ್ ತನ್ನ ಟ್ಯಾಬ್ಲೆಟ್ ಬಳಕೆದಾರರಿಗೆ ನೀಡಲು ಮುಂದಾಗಿದೆ. ಸ್ಪ್ಲಿಟ್ ವ್ಯೂ ಫೀಚರ್ಸ್ ಮೂಲಕ ಒಮ್ಮೆಲೆ ಒಂದೇ ಡಿಸ್‌ಪ್ಲೇನಲ್ಲಿ ಎರಡು ಆ್ಯಪ್‌ಗಳನ್ನು ತೆರೆಯಲು ಅವಕಾಶ ನೀಡುತ್ತದೆ.
ಇದು ವಾಟ್ಸ್ಆ್ಯಪ್ನಲ್ಲಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಒಬ್ಬರ ಜೊತೆ ಚಾಟಿಂಗ್ನಲ್ಲಿ ನಿರತವಾಗುವುದರ ಜೊತೆಗೆ ಇನ್ನೊಂದು ಬದಿಯಲ್ಲಿ ವಾಟ್ಸ್ಆ್ಯಪ್ನ ಇತರೆ ಫೀಚರ್ಸ್ ಅನ್ನು ಸಹ ಬಳಕೆ ಮಾಡಿಕೊಳ್ಳಬಹುದು. ಸ್ಪ್ಲಿಟ್ ವ್ಯೂ ಆಯ್ಕೆಯನ್ನು ಸದ್ಯಕ್ಕೆ ಪರೀಕ್ಷಿಸಲಾಗುತ್ತಿದ್ದು, ಟ್ಯಾಬ್ಲೆಟ್‌ಗಳಿಗಾಗಿ ಆಂಡ್ರಾಯ್ಡ್ ಬೀಟಾದಲ್ಲಿ ಇದನ್ನು ಹೊರತರಲು ಯೋಜಿಸಲಾಗುತ್ತಿದೆ. WABetaInfo ಈ ಬಗ್ಗೆ ವರದಿ ಮಾಡಿದ್ದು, ಆಂಡ್ರಾಯ್ಡ್ ಟ್ಯಾಬ್ಲೆಟ್ ಬಳಕೆದಾರರು ವಾಟ್ಸ್ಆ್ಯಪ್ನ ಸ್ಪ್ಲಿಟ್ ವ್ಯೂ ಫೀಚರ್ಸ್ ಅನ್ನು ಬಳಕೆ ಮಾಡಲು ಅನುಮತಿಸಲಾಗುತ್ತದೆ ಎಂದು ಉಲ್ಲೇಖಿಸಿದೆ.
ಈ ಆಯ್ಕೆ ಬಳಕೆದಾರರಿಗೆ ಲಭ್ಯವಾದರೆ ವಾಟ್ಸ್ಆ್ಯಪ್ ಚಾಟ್‌ನಿಂದ ನಿರ್ಗಮಿಸುವ ಅಗತ್ಯವಿಲ್ಲದೇ ಚಾಟ್ ಪಟ್ಟಿಯನ್ನು ತ್ವರಿತವಾಗಿ ಸ್ಕ್ರೋಲ್ ಮಾಡುವ ಮೂಲಕ ಚಾಟ್‌ಗಳನ್ನು ಕಂಟ್ರೋಲ್ ಮಾಡಲು ಇದು ಸಹಾಯ ಮಾಡುತ್ತದೆ. ಇದರಿಂದಾಗಿ ಬಳಕೆದಾರರಿಗೆ ಸಮಯದ ವ್ಯರ್ಥವಾಗದೆ ಸುಲಭವಾಗಿ ಹಾಗೂ ವೇಗವಾಗಿ ಬೇಕಾದ ಚಾಟ್ನಲ್ಲಿ ಸಕ್ರಿಯವಾಗಬಹುದು. ಟ್ಯಾಬ್ಲೆಟ್ ಬಳಿಕ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೂ ಬರುವ ನಿರೀಕ್ಷೆ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ