ಮೆಟಾ (Meta) ಒಡೆತನದ ಪ್ರಸಿದ್ಧ ಇನ್‌ಸ್ಟಂಟ್ ಮೆಸೆಜ್ ಆ್ಯಪ್ ವಾಟ್ಸ್ಆ್ಯಪ್ (WhatsApp) ಹಲವು ಉಪಯುಕ್ತ ಫೀಚರ್ಗಳ ಮೂಲಕ ಬಳಕೆದಾರರಿಗೆ ಆಪ್ತವಾಗಿದೆ. ಇದರೊಂದಿಗೆ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡುತ್ತಿದೆ. ವಾಟ್ಸ್ಆ್ಯಪ್ 2014 ರಲ್ಲಿ ಬ್ಲೂ ಟಿಕ್ಸ್ (WhatsApp Blue Tick) ಎಂಬ ಫೀಚರ್ ಅನ್ನು ಬಳಕೆದಾರರಿಗೆ ಪರಿಚಿಯಿಸಿತ್ತು. ಈ ವೈಶಿಷ್ಟ್ಯ ಸ್ವೀಕರಿಸುವವರು ಸಂದೇಶ ಓದಿದ್ದಾರೋ ಇಲ್ಲವೋ ಎಂಬುದನ್ನು ಕಳುಹಿಸಿದವರೆಗೆ ತಿಳಿಯಲು ಅವಕಾಶ ಮಾಡಿಕೊಟ್ಟಿತು. ಈ ಫೀಚರ್ ಪ್ರಾರಂಭವಾದ ನಂತರ, ಸಿಂಗಲ್ ಟಿಕ್ ಎಂದರೆ ಸಂದೇಶ ಕಳುಹಿಸಲಾಗಿದೆ, ಡಬಲ್ ಟಿಕ್ ಎಂದರೆ ಸಂದೇಶ ಸ್ವೀಕರಿಸಲಾಗಿದೆ. ಮತ್ತು ಎರಡು ನೀಲಿ ಟಿಕ್ ಬಂದರೆ ರಿಸೀವರ್ ಸಂದೇಶ ಓದಿದ್ದಾನೆ ಎಂಬುದು ತಿಳಿಸುವುದಾಗಿದೆ. ಈ ಆಯ್ಕೆಯಲ್ಲಿ ಮುಂದುವರೆದ ಭಾಗವಾಗಿ ವಾಟ್ಸ್ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಮೂರನೇ ಬ್ಲೂ ಟಿಕ್ (WhatsApp Third Tick) ಆಯ್ಕೆ ನೀಡಲಿದೆ ಎಂಬ ಸುದ್ದಿ ಎರಡು ದಿನಗಳ ಹಿಂದೆ ಪ್ರಕಟವಾಗಿದೆ.
ಹೌದು, ವಾಟ್ಸ್ಆ್ಯಪ್ ಕೆಲವೇ ದಿನಗಳಲ್ಲಿ ತನ್ನ ಬಳಕೆದಾರರಿಗೆ ಮೂರನೇ ಬ್ಲೂ ಟಿಕ್ ಕಾಣಿಸುವಂತಹ ಆಯ್ಕೆ ನೀಡಲಿದೆ. ಯಾರಾದರು ನಿಮ್ಮ ಮೆಸೇಜ್ ಅನ್ನು ಸ್ಕ್ರೀನ್ ಶಾಟ್ ತೆಗೆದರೆ ಈ ಮೂರನೇ ಟಿಕ್ ಕಾಣಿಸಲಿದೆ. ಸದ್ಯಕ್ಕೆ ಇದು ಪರೀಕ್ಷಾ ಹಂತದಲ್ಲಿದೆ ಎಂದು ವರದಿಯಾಗಿತ್ತು. ಆದರೆ, ಇದು ಸುಳ್ಳು ಸುದ್ದಿಯೆಂದು ತಿಳಿದುಬಂದಿದೆ.
Wabetainfo ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, “ಸ್ಕ್ರೀನ್ ಶಾಟ್ ತೆಗೆದರೆ ಅದನ್ನು ಸೂಚಿಸುವ ಮೂರನೇ ಬ್ಲೂ ಟಿಕ್ ಫೀಚರ್ ಅನ್ನು ವಾಟ್ಸ್ಆ್ಯಪ್ ಅಭಿವೃದ್ದಿ ಪಡಿಸುತ್ತಿಲ್ಲ. ಇದು ಫೇಕ್ ನ್ಯೂಸ್” ಎಂದು ಹೇಳಿದೆ. ವಾಟ್ಸ್ಆ್ಯಪ್ ಯಾವುದೇ ಹೊಸ ಫೀಚರ್ ಪರಿಚಯಿಸಿದರೂ ಅಥವಾ ಅಭಿವೃದ್ದಿ ಪಡಿಸುತ್ತಿದ್ದರೂ ಅದರ ಬಗ್ಗೆ ನಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸುತ್ತೇವೆ. ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಹೇಳಿದೆ.
ಬೇಕಾದಲ್ಲಿ ವಾಟ್ಸ್ಆ್ಯಪ್ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಬಹುದು. ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಸೆಟ್ಟಿಂಗ್ ವಿಭಾಗದಲ್ಲಿ ಅವಕಾಶ ಇದೆ. ಆದರೆ, ಅದೇ ಹೆಸರಿನಿಂದ ಆಯ್ಕೆ ಒದಗಿಸಿಲ್ಲ. ಬದಲಾಗಿ Read Receipts option ಆಯ್ಕೆ ಇದೆ. ಈ ಆಯ್ಕೆ ಆಫ್ ಮಾಡುವ ಮೂಲಕ ವಾಟ್ಸ್ಆ್ಯಪ್ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಬಹುದಾಗಿದೆ.
ಈ ಹಂತಗಳನ್ನು ಅನುಸರಿಸುವ ಮೂಲಕ ಬಳಕೆದಾರರು ತಮಗೆ ಯಾವಾಗ ಬೇಕಾದರೂ ಈ ಆಯ್ಕೆಯನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶ ಇದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿದರೇ ನೀವು ಕಳುಹಿಸಿದ ಮೆಸೆಜ್‌ಗಳು ಇತರರು ಓದಿದಾಗ ಬ್ಲೂ ಟಿಕ್ ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.
Xiaomi 12 series: ಹೊಸ ವರ್ಷದ ಮೊದಲ ಫೋನ್ ಬಿಡುಗಡೆ: ಶವೋಮಿ 12, ಶವೋಮಿ 12 ಪ್ರೊ ಸ್ಮಾರ್ಟ್ಫೋನ್ ಅನಾವರಣ
Reliance Jio: ಶಾಕಿಂಗ್: 426 ಮಿಲಿಯನ್ ಗ್ರಾಹಕರಿಗೆ ನೋಟಿಸ್ ಕಳುಹಿಸಿದ ಜಿಯೋ: ನಿಮ್ಮ ಇನ್ಬಾಕ್ಸ್ ಚೆಕ್ ಮಾಡಿ
(WhatsApp will soon introduce a third tick this news is completely false whatsapp fake news)