ಪ್ರತಿವರ್ಷ ಮೇ 17ರಂದು ‘ವಿಶ್ವ ದೂರಸಂಪರ್ಕ ದಿನ ‘ವನ್ನಾಗಿ( World Telecommunication Day 2023) ಆಚರಿಸುತ್ತಾ ಬರಲಾಗುತ್ತಿದೆ. 1865 ಮೇ 17ರಂದು ಅಂತಾರಾಷ್ಟ್ರೀಯ ಟೆಲಿಗ್ರಾಫ್ ಒಕ್ಕೂಟ ‘ಐಟಿಯು’ ಸ್ಥಾಪನೆಯಾದ ನೆನಪಿನಲ್ಲಿ ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ. 1876ರ ದೂರವಾಣಿ ಆವಿಷ್ಕಾರ, 1957ರ ಚೊಚ್ಚಲ ಉಪಗ್ರಹ ಉಡಾವಣೆ, ನಂತರ 60ರ ದಶಕದ ಅಂತರ್ಜಾಲದ ಆವಿಷ್ಕಾರದ ಕಾಲಘಟ್ಟದಲ್ಲಿ ಅಂತಾರಾಷ್ಟ್ರೀಯ ಟೆಲಿಗ್ರಾಫ್ ಒಕ್ಕೂಟವು ನಿರ್ಣಾಯಕ ಪಾತ್ರ ವಹಿಸಿತ್ತು. ಅಂತರ್ಜಾಲ, ಸಂಪರ್ಕ ಸೇರಿದಂತೆ ಹೊಸ ತಂತ್ರಜ್ಞಾನಗಳಿಂದ ಆಗುತ್ತಿರುವ ಸಾಮಾಜಿಕ ಮತ್ತು ಸಮುದಾಯದ ಬದಲಾವಣೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಜನಜಾಗೃತಿ ಮೂಡಿಸುವುದೇ ವಿಶ್ವ ದೂರಸಂಪರ್ಕ ದಿನದ ಪ್ರಮುಖ ಉದ್ದೇಶ. ಜತೆಗೆ, ಜನರಿಗೆ ಆಗುತ್ತಿರುವ ಡಿಜಿಟಲ್ ತಾರತಮ್ಯಗಳನ್ನು ನಿಯಂತ್ರಿಸುವುದೇ ಇದರ ಗುರಿಯಾಗಿದೆ.
ದೈನಂದಿನ ಬದುಕಿನಲ್ಲಿ ಸಂಪರ್ಕದ ಮಹತ್ವ ಮತ್ತು ಅದರಿಂದ ಸಿಗುತ್ತಿರುವ ನಾನಾ ರೀತಿಯ ಪ್ರಯೋಜನಗಳು ಹಾಗೂ ವಿಶ್ವಾದ್ಯಂತ ಹೇಗೆ ಅದು ಹರಿದಾಡುತ್ತಿದೆ ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸುವ ಗುರಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸುವುದು ಪ್ರಮುಖ ಧ್ಯೇಯವಾಗಿದೆ.
1865 ಮೇ 17ರಲ್ಲಿ ಅಂತಾರಾಷ್ಟ್ರೀಯ ಟೆಲಿಗ್ರಾಫ್ ಒಕ್ಕೂಟ ಆರಂಭವಾದ ನೆನಪಿನಲ್ಲಿ ಈ ದಿನವನ್ನು ವಿಶ್ವ ದೂರ ಸಂಪರ್ಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) 1876ರಲ್ಲಿ ದೂರವಾಣಿ, 1957ರಲ್ಲಿ ಚೊಚ್ಚಲ ಉಪಗ್ರಹ ಉಡಾವಣೆ ನಂತರ ಅಂತರ್ಜಾಲ ಅವಿಷ್ಕಾರದಲ್ಲಿ ಪ್ರಮುಖ ಪಾತ್ರವಹಿಸಿತ್ತು.
1865 ರ ಮೇ 17ರಂದು ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ITU)ನ ಸ್ಥಾಪನೆಯ ನೆನಪಿನಲ್ಲಿ ಈ ದಿನವನ್ನು ಆಚರಣೆಯ ಸ್ಮರಿಸಲಾಗುತ್ತಿದೆ. ಪ್ಯಾರಿಸ್‌ನಲ್ಲಿ ಮೊದಲ ಅಂತರರಾಷ್ಟ್ರೀಯ ಟೆಲಿಗ್ರಾಫ್ ಸಮಾವೇಶಕ್ಕೆ ಸಹಿ ಹಾಕಿದ ಸಂದರ್ಭವೂ ಇದಾಗಿದೆ.17 ಮೇ, 1969 ರಂದು, ವಿಶ್ವ ದೂರಸಂಪರ್ಕ ದಿನವನ್ನು ಮೊದಲು ಆಚರಿಸಲಾಯಿತು. 1865 ಮೇ 17ರಂದು ಅಂತಾರಾಷ್ಟ್ರೀಯ ಟೆಲಿಗ್ರಾಫ್ ಒಕ್ಕೂಟ ‘ಐಟಿಯು’ ಸ್ಥಾಪನೆಯಾದ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.
ಟುನಿಸ್ ದೇಶದಲ್ಲಿ 2005ರಲ್ಲಿ ನಡೆದ ವಿಶ್ವ ಮಾಹಿತಿ ಸೊಸೈಟಿಯ ಸಮಾವೇಶ ನಡೆದಿತ್ತು. ಸಂಪರ್ಕ ಕ್ಷೇತ್ರದಲ್ಲಿ ಆಗುತ್ತಿದ್ದ ತ್ವರಿತ ಬೆಳವಣಿಗೆಗಳು ಹಾಗೂ ಮಾಹಿತಿ ಕ್ಷೇತ್ರಕ್ಕೆ ಅದರಿಂದ ಸಿಗುತ್ತಿದ್ದ ವಿಫುಲ ತಂತ್ರಜ್ಞಾನ ಪ್ರಯೋಜನಗಳನ್ನು ಗಮನಿಸಿದ ಅದು, ‘ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿಯ ದಿನವನ್ನಾಗಿ ಆಚರಿಸಬೇಕು’ ಎಂದು ವಿಶ್ವಸಂಸ್ಥೆಗೆ ಕರೆ ನೀಡಿತ್ತು. ಅದರಂತೆ, 2006 ಮಾರ್ಚ್‌ನಲ್ಲಿ ವಿಶ್ವಸಂಸ್ಥೆ ತನ್ನ ಸಾಮಾನ್ಯ ಅಧಿವೇಶನದಲ್ಲಿ ‘ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿಯ ದಿನ ‘ ಆಚರಿಸುವ ನಿರ್ಣಯ ಘೋಷಿಸಿತ್ತು.
ಈ ದಿನದಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳು, ರಾಷ್ಟ್ರೀಯ ಕಾರ್ಯಕ್ರಮಗಳು, ಧ್ಯೇಯವಾಕ್ಯದ ಹಿಂದಿನ ವಿವಿಧ ಅಂಶಗಳ ಕುರಿತು ಚರ್ಚೆ, ಸಂವಾದ ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ.
ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸಮಾಜದ ದಿನವು ಮಾನವ ನಾಗರಿಕತೆಯ ಬೆಳವಣಿಗೆಯಲ್ಲಿ ಹೊಸ ಯುಗದ ಆರಂಭವನ್ನು ಗುರುತಿಸಿದೆ. ಭಾರತದ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿರುವ ಎಲ್ಲಾ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ವಿಶ್ವ ದೂರಸಂಪರ್ಕ ದಿನದ ಶುಭಾಶಯಗಳು.