ಸಾಮಾನ್ಯವಾಗಿ ಒಂದು ಸ್ಮಾರ್ಟ್ಫೋನ್ (Smartphone) ಬಿಡುಗಡೆ ಆಗಿ ಅತಿ ಹೆಚ್ಚು ಸೇಲ್ ಕಂಡು ದಾಖಲೆ ಬರೆಯವುದು ಮಾಮಾಲಿ. ಆದರೆ, ಶವೋಮಿ ಕಂಪನಿ ಬಿಡುಗಡೆ ಮಾಡಲಿರುವ ಹೊಚ್ಚ ಹೊಸ ಬಹುನಿರೀಕ್ಷಿತ ಫೋನ್ ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿದೆ. ಹೌದು, ಕಳೆದ ಎರಡು ವರ್ಷಗಳಿಂದ ನಂಬರ್ ಒನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಶವೋಮಿ ಈಗ ತನ್ನ ಬಹುನಿರೀಕ್ಷಿತ ಶವೋಮಿ 12 ಸರಣಿ (Xiaomi 12 Series) ಫೋನನ್ನು ಬಿಡುಗಡೆ ಮಾಡಲು ತಯಾರಾಗಿದೆ. ಶವೋಮಿ 12 (Xiaomi 12) ಮತ್ತು ಶವೋಮಿ 12 ಪ್ರೊ (Xiaomi 12 Pro) ಸ್ಮಾರ್ಟ್ಫೋನ್ ಹೊಸ ವರ್ಷ (New Year 2022) ಪ್ರಯುಕ್ತ ಇದೇ ಡಿಸೆಂಬರ್ 28 ರಂದು ಜಾಗತೀಕವಾಗಿ ಅನಾವರಣಗೊಳ್ಳಲಿದೆ. ಆದರೆ, ಬಿಡುಗಡೆಗೂ ಮುನ್ನವೇ ಈ ಫೋನ್ ಪ್ರಿ ಆರ್ಡರ್ ಹೋಗುವುದಕ್ಕೂ ಮುನ್ನ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮಂದಿ ಮುಂಗಡ ಬುಕ್ಕಿಂಗ್ (Xiaomi 12 series Reservations) ಮಾಡಿದ್ದಾರೆ.
ಶವೋಮಿ 12 ಸ್ಮಾರ್ಟ್ಫೋನ್ ಒಟ್ಟು 98,000 ಮುಂಗಡ ಬುಕ್ಕಿಂಗ್ ಮಾಡಲಾಗಿದೆಯಂತೆ. ಅಂತೆಯೆ ಶವೋಮಿ 12 ಪ್ರೊ ಒಟ್ಟು 110,000 ಪ್ರಿ ಬುಕ್ಕಿಂಗ್ ಆಗಿದೆಯಂತೆ. ಸದ್ಯಕ್ಕೆ ಡಿಸೆಂಬರ್ 28 ರಂದು ಚೀನಾದಲ್ಲಿ ಅಧಿಕೃತವಾಗಿ ಈ ಫೋನ್ ಬಿಡುಗಡೆ ಆಗಲಿದೆ. ಈ ಬಗ್ಗೆ ಶವೋಮಿ ಸಂಸ್ಥೆಯೇ ಸ್ವತಃ ಈ ಎರಡೂ ಫೋನ್‌ಗಳ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ.
ಶವೋಮಿ 12 ಕಾಂಪ್ಯಾಕ್ಟ್ ರಚನೆಯನ್ನು ಹೊಂದಿದ್ದು, ಶವೋಮಿ 12 ಪ್ರೊ ದೊಡ್ಡ ಸ್ಕ್ರೀನ್ ರಚನೆ ಹೊಂದಿರುವ ಅಂಶ ಟೀಸರ್ ಚಿತ್ರದಲ್ಲಿದೆ. WHY LAB ಪ್ರಕಾರ, ಶವೋಮಿ ಕಂಪನಿ Xiaomi 12 ಮತ್ತು XIaomi 12 Pro Snapdragon 8 Gen 1 ನಿಂದ ಚಾಲಿತವಾಗುವ ಸಾಧ್ಯತೆಯಿದೆ ಎಂದಿದೆ. ಶವೋಮಿ 12 ಮತ್ತು ಶವೋಮಿ 12 ಪ್ರೊ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಮುಂಭಾಗವನ್ನು ಮಾತ್ರ ತೋರಿಸುತ್ತದೆ. ಇದರ ಪವರ್ ಬಟನ್ ಮತ್ತು ಬಲ ಭಾಗದಲ್ಲಿ ವಾಲ್ಯೂಮ್ ರಾಕರ್ ಇದೆ.
ಅಂತೆಯೆ ಶವೋಮಿ 12 ಫೋನ್ 6.2 ಇಂಚಿನ ಪೂರ್ಣ HD + AMOLED ಡಿಸ್‌ಪ್ಲೇ ಅನ್ನು ಹೊಂದಿದೆ ಎಂದು ಸೂಚಿಸಲಾಗಿದೆ. ಇನ್ನು ಶವೋಮಿ 12 ಪ್ರೊ ಮಾಡೆಲ್ ಫೋನ್ ಡಿಸ್‌ಪ್ಲೇ ದೊಡ್ಡದಾಗಿದ್ದು, ಎಡ ಭಾಗದಲ್ಲಿ ಯಾವುದೇ ಬಟನ್ ಆಯ್ಕೆ ಕಾಣಿಸಿಲ್ಲ. ಈ ಫೋನ್ ಮಾದರಿಯು 6.9 ಇಂಚಿನ QHD + AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರುವ ನಿರೀಕ್ಷೆಗಳಿವೆ. ಇದರೊಂದಿಗೆ ಈ ಫೋನ್‌ಗಳ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಹೊಂದಿರಬಹುದು ಎನ್ನಲಾಗಿದೆ.
ಶವೋಮಿ 12 Pro 3C ಪ್ರಮಾಣೀಕರಣ ಸೈಟ್ನಲ್ಲಿ ಕಾಣಿಸಿಕೊಂಡಿದೆ. ಈ ಸಾಧನವು 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು ಎಂದು ಸೂಚಿಸುತ್ತದೆ. ಅಂದರೆ, ಈ ಫೋನ್ ಅನ್ನು 10 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.
ಇನ್ನು ಈ ಎರಡೂ ಫೋನ್‌ಗಳು ಒಂದೇ ರೀತಿಯ ಫ್ರೇಮ್‌ಗಳು ರಚನೆ ಮತ್ತು ಬಟನ್ ಪ್ಲೇಸ್‌ಮೆಂಟ್‌ಗಳನ್ನು ಒಳಗೊಂಡಿವೆ. ಶವೋಮಿ 12 ಮತ್ತು ಶವೋಮಿ 12 ಪ್ರೊ ಕೇಂದ್ರೀಯವಾಗಿ ಇರಿಸಲಾದ ಹೋಲ್ ಪಂಚ್ ಕಟೌಟ್ ಅನ್ನು ಹೊಂದಿವೆ. 12 ಫೋನ್ ಡ್ಯುಯಲ್ LED ಫ್ಲ್ಯಾಷ್ ನೊಂದಿಗೆ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಅದೇ ರೀತಿ ಶವೋಮಿ 12 ಪ್ರೊ ಫೋನ್ ಹಿಂಭಾಗದಲ್ಲಿ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸೆಲ್ಫಿ ಕ್ಯಾಮೆರಾ ಬಗ್ಗೆ ಮಾಹಿತಿ ಇಲ್ಲ.
Paytm Cashback Offer: ತಕ್ಷಣವೇ ಪೇಟಿಎಂನಿಂದ ರಿಚಾರ್ಜ್ ಮಾಡಿ: ಸಿಗಲಿದೆ ಬರೋಬ್ಬರಿ 1000 ರೂ ಕ್ಯಾಶ್ಬ್ಯಾಕ್
Year Ender 2021: ಹೊಸ ವರ್ಷಕ್ಕೆ ಕೇವಲ 5000 ರೂ ಒಳಗಿನ ಈ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ ಗಿಫ್ಟ್ ನೀಡಿ
(Xiaomi 12 series Xiaomi 12 and Xiaomi 12 Pro has received more than 200000 reservations)