Year Ender 2021: ಹೊಸ ವರ್ಷಕ್ಕೆ ಕೇವಲ 5000 ರೂ ಒಳಗಿನ ಈ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಗಿಫ್ಟ್ ನೀಡಿ
New Year Gift: ನೀವು ಹೊಸ ವರ್ಷಕ್ಕೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಬೇಕು ಅಥವಾ ಗಿಫ್ಟ್ ನೀಡಬೇಕು ಎಂಬ ಯೋಚನೆಯಲ್ಲಿದ್ದರೆ 5,000 ರೂ. ಆಸುಪಾಸಿನ ಮೊಬೈಲ್ ಇಲ್ಲಿದೆ ನೋಡಿ.
ಇನ್ನೇನು ಹೊಷ ವರ್ಷ (New Year) ಬಂದೇ ಬಿಡ್ತು. ಈ ಸಂದರ್ಭ ಅನೇಕರು ತಮ್ಮ ಪ್ರೀತಿಪಾತ್ರರಿಗೆ ಉತ್ತಮ ಉಡುಗೊರೆಗಳನ್ನು ಖರೀದಿಸಲು ಎದುರು ನೋಡುತ್ತಿರುತ್ತಾರೆ. ಅತ್ಯುತ್ತಮ ಗಿಫ್ಟ್ ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಕೂಡ ಒಂದಾಗಿದೆ. ಅದರಲ್ಲೂ ನೀವು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಮೇಲೆ ಕಣ್ಣಿಟ್ಟಿದ್ದರೆ ಅದಕ್ಕೆ ಹಲವಾರು ಆಯ್ಕೆಗಳಿವೆ. ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಅಥವಾ ಹೆಚ್ಚಿನ ಹಣವನ್ನು ವ್ಯಯಿಸದೆ ತಮ್ಮ ಕುಟುಂಬ ಸದಸ್ಯರಿಗೆ ಉಡುಗೊರೆಯಾಗಿ ಖರೀದಿಸಲು ಬಯಸುವವರಿಗೆ ಈ ಆಯ್ಕೆಯು ಹೆಚ್ಚು ಸೂಕ್ತವಾಗಿದೆ. ಏಕೆಂದರೆ ಈಗಂತು ಕಡಿಮ ಬೆಲೆಗೆ ಲಭ್ಯವಿರುವ ಆಕರ್ಷಕ ಸ್ಮಾರ್ಟ್ಫೋನ್ಗಳಿಗೆ (Budget smartphones) ಹೆಚ್ಚಿನ ಬೇಡಿಕೆ. ಸದ್ಯ ನೀವು ಹೊಸ ವರ್ಷಕ್ಕೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಬೇಕು ಅಥವಾ ಗಿಫ್ಟ್ (New Year Gift) ನೀಡಬೇಕು ಎಂಬ ಯೋಚನೆಯಲ್ಲಿದ್ದರೆ 5,000 ರೂ. ಆಸುಪಾಸಿನ ಮೊಬೈಲ್ ಇಲ್ಲಿದೆ ನೋಡಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M01 ಕೋರ್: ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲಕ್ಸಿ M01 ಕೋರ್ ಸ್ಮಾರ್ಟ್‌ಫೋನ್ ಅತಿ ಕಡಿಮೆ ಬೆಲೆ ಲಭ್ಯವಿರುವ ಬೆಸ್ಟ್ ಮೊಬೈಲ್ ಆಗಿದೆ. ಇದರ ಬೆಲೆ ಕೇವಲ 4,999 ರೂ.. ಈ ಸ್ಮಾರ್ಟ್‌ಫೋನ್ 5.1-ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಡ್-ಕೋರ್ ಮೀಡಿಯಾ ಟೆಕ್ ಎಂಟಿ 6739 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಗೋ 10 ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 1GB RAM ಮತ್ತು 8GB ಇಂಟರ್ ಸ್ಟೋರೇಜ್ ಹೊಂದಿದೆ. 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಜೊತೆಗೆ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ಜಿಯೋನಿ ಮ್ಯಾಕ್ಸ್: ಜಿಯೋನಿ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬೆಲೆ 4,999 ರೂ.ಆಗಿದೆ. ಇದು 6.1-ಇಂಚಿನ ಎಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಯುನಿಸಾಕ್ 9863 ಎ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 2GB RAM ಮತ್ತು 32GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಮುಖ್ಯ ಕ್ಯಾಮೆರಾ 13ಮೆಗಾಫಿಕ್ಸೆಲ್ ಸೆನ್ಸಾರ್ ಹೊಂದಿದೆ.
ಮೈಕ್ರೋಮ್ಯಾಕ್ಸ್ ಭಾರತ್ 2 ಪ್ಲಸ್: ಮೈಕ್ರೋಮ್ಯಾಕ್ಸ್ ಸಂಸ್ಥೆಯ ಈ ಸ್ಮಾರ್ಟ್‌ಫೋನ್ 4 ಇಂಚಿನ ಡಬ್ಲ್ಯುವಿಜಿಎ ಡಿಸ್‌ಪ್ಲೇ ಹೊಂದಿದೆ. ಕ್ವಾಡ್-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 7.0 ನೌಗಾಟ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 1GB RAM ಮತ್ತು 8GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾವನ್ನು 1,600mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ಕೇವಲ 3,710ರೂ.
ಇದರ ಜೊತೆಗೆ ಕೊಂಚ ಅಧಿಕ ಬೆಲೆಯ ಮೈಕ್ರೋಮ್ಯಾಕ್ಸ್ ಇನ್ 1ಬಿ ಸ್ಮಾರ್ಟ್ಫೊನ್ ಇದೆ. ಇದರ ಬೆಲೆ ಕೇವಲ 6,999 ರೂಪಾಯಿ ಆಗಿದ್ದು, 6.52 ಇಂಚು ಡಿಸ್ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಹೆಲಿಯೋ ಜಿ35 ಚಿಪ್ಸೆಟ್, 32 ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. 13 ಮೆಗಾ ಪಿಕ್ಸಲ್ ಪ್ರೈಮರಿ ಶೂಟರನ್ನು ಒಳಗೊಂಡಿದೆ.
ಐಟೆಲ್ A25 ಪ್ರೊ: ಈ ಸ್ಮಾರ್ಟ್‌ಫೋನ್ 5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಡ್ ಕೋರ್ ಪ್ರೊಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 9.0 ಪೈ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. 2 GB RAM ಮತ್ತು 32GB ಇಂಟರ್ ಸ್ಟೋರೇಜ್ ಸಾಮರ್ಥ್ಯ, 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾವನ್ನು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ 3,020mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಮಾರುಕಟ್ಟೆಯಲ್ಲಿ ಕೇವಲ 4,999 ರೂ. ಗೆ ಲಭ್ಯವಿದೆ.
Vodafone Idea: ವೊಡಾಫೋನ್ ಐಡಿಯಾ ಗ್ರಾಹಕರಿಗೆ ಬಿಗ್ ಶಾಕ್: ಓಟಿಟಿ ಯೋಜನೆ ಬಂದ್
Tecno Camon 18: 48MP ಸೆಲ್ಫೀ ಕ್ಯಾಮೆರಾ, 5000mAh ಬ್ಯಾಟರಿ: ಭಾರತದಲ್ಲಿ ಧೂಳೆಬ್ಬಿಸುತ್ತಿದೆ ಬಜೆಟ್ ಬೆಲೆಯ ಈ ಫೋನ್
(New Year Gift Give this budget price smartphone gift of just under Rs 5000 for the new year 2022)