ಎರಡೇ ದಿನ ಬಾಕಿ: ಮಾರುಕಟ್ಟೆಯನ್ನು ಅಲ್ಲೋಲ-ಕಲ್ಲೋಲ ಮಾಡಲಿದೆ ಶವೋಮಿ 14 ಸರಣಿ

|

Updated on: Oct 24, 2023 | 1:31 PM

Xiaomi 14 Series Launch Date: ಶವೋಮಿ 14 ಸರಣಿಯನ್ನು ಮಾತ್ರ ಉಲ್ಲೇಖಿಸಿದ್ದರೂ, ಇದು ಕ್ರಮವಾಗಿ ಶವೋಮಿ 13 ಮತ್ತು ಶವೋಮಿ 13 ಪ್ರೊನ ಉತ್ತರಾಧಿಕಾರಿಗಳಾದ ಶವೋಮಿ 14 ಮತ್ತು ಶವೋಮಿ 14 ಪ್ರೊ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಬಹುದು. ಮುಂಬರುವ ಸ್ಮಾರ್ಟ್‌ಫೋನ್‌ಗಳು ಲೈಕಾ-ಟ್ಯೂನ್ಡ್ ಹೊಸದಾದ ಕ್ಯಾಮೆರಾ ಘಟಕಗಳನ್ನು ಹೊಂದಿರುವುದು ವಿಶೇಷ.

ಎರಡೇ ದಿನ ಬಾಕಿ: ಮಾರುಕಟ್ಟೆಯನ್ನು ಅಲ್ಲೋಲ-ಕಲ್ಲೋಲ ಮಾಡಲಿದೆ ಶವೋಮಿ 14 ಸರಣಿ
xiaomi 14 series
Follow us on

ಟೆಕ್ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಶವೋಮಿ ಕಂಪನಿಯ ಬಹುನಿರೀಕ್ಷಿತ ಸ್ಮಾರ್ಟ್​ಫೋನ್ ಶವೋಮಿ 14 ಸರಣಿಯ (Xiaomi 14 Series) ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಈ ಸರಣಿಯಲ್ಲಿ ಒಟ್ಟು ಎರಡು ಸ್ಮಾರ್ಟ್​ಫೋನ್​ಗಳು ಇರಲಿದೆ ಎಂದು ಹೇಳಲಾಗಿದೆ. ಶವೋಮಿ 14 ಮತ್ತು ಶವೋಮಿ 14 ಪ್ರೊ ಫೋನ್ ಅಕ್ಟೋಬರ್ 26 ರಂದು ಅನಾವರಣಗೊಳ್ಳಲಿದೆ. ಬಿಡುಗಡೆ ಕಾರ್ಯಕ್ರಮವು ಚೀನಾದಲ್ಲಿ 19:00pm (4:30pm IST) ಕ್ಕೆ ಪ್ರಾರಂಭವಾಗುತ್ತದೆ. ಚೀನೀ ಬ್ರಾಂಡ್‌ನ ಈ ಫೋನ್​ನಲ್ಲಿ ಹೊಚ್ಚ ಹೊಸ ಆಪರೇಟಿಂಗ್ ಸಿಸ್ಟಂ ಇರಲಿದೆ. ಈ ಫೋನಿನ ಬೆಲೆ, ಫೀಚರ್ಸ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಕೆಲ ವಿಶೇಷತೆಗಳು ಸೋರಿಕೆ ಆಗಿದೆ.

ಕಂಪನಿಯು ಶವೋಮಿ 14 ಸರಣಿಯನ್ನು ಮಾತ್ರ ಉಲ್ಲೇಖಿಸಿದ್ದರೂ, ಇದು ಕ್ರಮವಾಗಿ ಶವೋಮಿ 13 ಮತ್ತು ಶವೋಮಿ 13 ಪ್ರೊನ ಉತ್ತರಾಧಿಕಾರಿಗಳಾದ ಶವೋಮಿ 14 ಮತ್ತು ಶವೋಮಿ 14 ಪ್ರೊ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಬಹುದು. ಮುಂಬರುವ ಸ್ಮಾರ್ಟ್‌ಫೋನ್‌ಗಳು ಹೊಸದಾದ ಲೈಕಾ-ಟ್ಯೂನ್ಡ್ ಕ್ಯಾಮೆರಾ ಘಟಕಗಳನ್ನು ಹೊಂದಿರುವುದು ವಿಶೇಷ. ಇದರಲ್ಲಿ ಸ್ನಾಪ್​ಡ್ರಾಗನ್ 8 Gen 3 SoC ಇರುವ ಸಾಧ್ಯತೆ ಇದೆ. ಶವೋಮಿಯ 14 ಸರಣಿಯು HyperOS ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುವ ಮೊದಲ ಫೋನ್ ಆಗಿದೆ.

ಒಪ್ಪೋದ ನೂತನ ಮಡಚುವ ಫೋನ್ ಫೈಂಡ್ N3 ಫ್ಲಿಪ್ ಇಂದಿನಿಂದ ಖರೀದಿಗೆ ಲಭ್ಯ

ಇದನ್ನೂ ಓದಿ
ಲಾವಾದಿಂದ ಮಹತ್ವದ ಘೋಷಣೆ: ಬರುತ್ತಿದೆ ಹೊಸ ದೇಶೀಯ ಸ್ಮಾರ್ಟ್​ಫೋನ್
5G ಬಳಸುವಾಗ ಡೇಟಾ ಬೇಗನೆ ಖಾಲಿ ಆಗುತ್ತಾ?: ಹಾಗಿದ್ರೆ ಈ ಟ್ರಿಕ್ ಟ್ರೈ ಮಾಡಿ
ಭಾರತದಲ್ಲಿ ಬಹುನಿರೀಕ್ಷಿತ ವಿವೋ Y200 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ?
ಬಜೆಟ್ ಬೆಲೆ, ಬಲಿಷ್ಠ ಪ್ರೊಸೆಸರ್: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಿವೋ Y78t

ಸೋರಿಕೆಯಾದ ಮಾಹಿತಿಯ ಪ್ರಕಾರ, ಶವೋಮಿ 14 ಸ್ಮಾರ್ಟ್​ಫೋನ್ 6.44-ಇಂಚಿನ Huaxing C8 OLED ಡಿಸ್ಪ್ಲೇ, 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಪ್ರೊ ಮಾದರಿಯು 2K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ ಫ್ಲಾಟ್ AMOLED 2.5D ಡಿಸ್ಪ್ಲೇಯನ್ನು ಪ್ಯಾಕ್ ಮಾಡಬಹುದು. ಎರಡೂ ಮಾದರಿಗಳು ಕ್ವಾಲ್ಕಾಮ್​ನ ಮುಂಬರುವ ಸ್ನಾಪ್​ಡ್ರಾಗನ್ 8 Gen 3 SoC ನಲ್ಲಿ ರನ್ ಆಗುತ್ತವೆ ಎಂದು ಹೇಳಲಾಗಿದೆ.

ಕ್ವಾಲ್ಕಾಮ್ 14 ಸರಣಿಯು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕದೊಂದಿಗೆ ಬರುತ್ತದೆ. OIS ಜೊತೆಗೆ 50-ಮೆಗಾಪಿಕ್ಸೆಲ್ OV50H ಮುಖ್ಯ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಶವೋಮಿ 14 ನಲ್ಲಿ 90W ವೈರ್ಡ್ ಚಾರ್ಜಿಂಗ್, 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,600mAh ಬ್ಯಾಟರಿ ಇರುತ್ತದೆ. ಶವೋಮಿ 14 ಪ್ರೊ 4,860mAh ಬ್ಯಾಟರಿಯನ್ನು ಹೊಂದಿದ್ದು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ