ಭಾರತದ ನಂಬರ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಕಂಪನಿ ತನ್ನ ರೆಡ್ಮಿ ನೋಟ್ ಸರಣಿಯಲ್ಲಿ ಮತ್ತೆ ಮಾರುಕಟ್ಟೆಗೆ ಧೂಳೆಬ್ಬಿಸಲು ಬಂದಿದೆ. 2022ನೇ ಸಾಲಿನ ಮೊದಲ ರೆಡ್ಮಿ ಫೋನ್ ಅನಾವರಣಗೊಂಡಿದ್ದು ಬಾರೀ ಕುತೂಹಲ ಮೂಡಿಸಿದ್ದ ರೆಡ್ಮಿ ನೋಟ್ 11 (Redmi Note 11), ರೆಡ್ಮಿ ನೋಟ್ 11S ಮತ್ತು ರೆಡ್ಮಿ ನೋಟ್ 11 ಪ್ರೊ 4G ಹಾಗೂ 5G ವೇರಿಯಂಟ್ ಮಾಡೆಲ್‌ಗಳು ಇದೀಗ ಜಾಗತೀಕವಾಗಿ ಬಿಡುಗಡೆ ಆಗಿವೆ. ಈ ಸರಣಿಯ ರೆಡ್ಮಿ ನೋಟ್ 11 ಪ್ರೊ 4G ಹಾಗೂ 5G ಸ್ಮಾರ್ಟ್‌ಫೋನ್ ಬರೋಬ್ಬರಿ 108 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿರುವುದು ವಿಶೇಷ. ಉಳಿದಂತೆ ಅತ್ಯುತ್ತಮ ಬ್ಯಾಟರಿ ಪವರ್, ಪ್ರೊಸೆಸರ್ನಿಂದ ಕೂಡಿದೆ. ಮುಂದಿನ ತಿಂಗಳು ಇದು ಭಾರತದಲ್ಲೂ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.
ರೆಡ್ಮಿ ನೋಟ್ 11 ಪ್ರೊ 5G-4G ಫೀಚರ್ಸ್ ಏನು?:
ರೆಡ್ಮಿ ನೋಟ್ 11 ಪ್ರೊ 5G ಸ್ಮಾರ್ಟ್‌ಫೋನ್ 6.67 ಇಂಚಿನ 1080p ಪ್ಯಾನೆಲ್ ಅನ್ನು 120Hz ರಿಫ್ರೆಶ್ ಹೊಂದಿದೆ. ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದ್ದು 108 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾದಿಂದ ಆವೃತ್ತವಾಗಿದೆ. 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇದೆ. ಈ ಫೋನಿನ 5G ವೇರಿಯಂಟ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 695 SoC ಪ್ರೊಸೆಸರ್ ಪಡೆದಿದ್ದು, ಇನ್ನು 4G ವೇರಿಯಂಟ್ ಮೀಡಿಯಾ ಟೆಕ್ ಹಿಲಿಯೋ G96 ಪ್ರೊಸೆಸರ್ ಅನ್ನು ಹೊಂದಿದೆ. ಎರಡೂ ಮಾದರಿಗಳು ಅತ್ಯಂತ ವೇಗದ 67W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
ರೆಡ್ಮಿ ನೋಟ್ 11S:
ಈ ಫೋನ್ 6.43 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದ್ದು, 90Hz AMOLED ಡಿಸ್ಪ್ಲೇಯನ್ನು ಪಡೆದಿದೆ. ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕಗಳು ಮತ್ತು ಹೆಡ್‌ಫೋನ್ ಜ್ಯಾಕ್‌ಗಳನ್ನು ಹೊಂದಿವೆ. ಇದು ಕೂಡ 108 ಮೆಗಾಫಿಕ್ಸೆಲ್ ಕ್ಯಾಮೆರಾದಿಂದ ಆವೃತ್ತವಾಗಿದೆ. 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ರೆಡ್ಮಿ ನೋಟ್ 11:
ರೆಡ್ಮಿ ನೋಟ್ 11 ಫೋನ್ 6.43 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದ್ದು, 90 Hz 1080p LCD ಡಿಸ್ಪ್ಲೇಯನ್ನು ಪಡೆದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 680 ಚಿಪ್‌ಸೆಟ್ ಪ್ರೊಸೆಸರ್ ಹೊಂದಿದೆ. ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿದೆ. ಜೊತೆಗೆ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್‌ಗಳು ಶೀಘ್ರದಲ್ಲೇ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಇದರಲ್ಲಿ ಸೆಲ್ಫೀಗಾಗಿ 13 ಮೆಗಾಫಿಕ್ಸೆಲ್ಕ್ಯಾಮೆರಾ ಅಳವಡಿಸಲಾಗಿದೆ.
ಬೆಲೆ ಎಷ್ಟು?:
ರೆಡ್ಮಿ ನೋಟ್ 11 ಪ್ರೊ 4G ಫೋನಿನ 6GB RAM + 64GB ಸ್ಟೋರೆಜ್ ಆಯ್ಕೆಯ ಬೆಲೆ $299 ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 22,500 ರೂ. ಎನ್ನಬಹುದು. ಜೊತೆಗೆ ಇದು 6GB RAM + 128GB ಮತ್ತು 8GB RAM + 128GB ಸ್ಟೋರೆಜ್ ಆಯ್ಕೆಯಲ್ಲೂ ಲಭ್ಯವಿದೆ. ರೆಡ್ಮಿ ನೋಟ್ 11 ಪ್ರೊ 5G ಬೆಲೆ $329 (24,700 ರೂ.). ಭಾರತದಲ್ಲಿ ರೆಡ್ಮಿ ನೋಟ್ 11 ಆರಂಭಿಕ ಬೆಲೆ ಅಂದಾಜು 13,500 ರೂ. ಇರಬಹುದೆಂದು ಅಂದಾಜಿಸಲಾಗಿದೆ. ಹಾಗೂ ರೆಡ್ಮಿ ನೋಟ್ 11S ಬೆಲೆ 18,700 ರೂ. ಎಂದು ಹೇಳಬಹುದು.
ಡೇಟಾ ಗೌಪ್ಯತೆ ದಿನ: ಡಿಜಿಟಲ್ ಜಗತ್ತಿನಲ್ಲಿ ಸಂದೇಶ, ಮಾಹಿತಿಗಳ ಗೌಪ್ಯತೆ ಕಾಪಾಡುವುದಕ್ಕೆ ಇಲ್ಲಿದೆ ವಿಧಾನ