ಅಪ್ಪಟ ಮೇಕ್ ಇನ್ ಇಂಡಿಯ ಮೈಕ್ರೊಮ್ಯಾಕ್ಸ್ ಇನ್ ನೋಟ್ 2! ಏನಿದರ ವಿಶೇಷ?

ಮೈಕ್ರೊಮ್ಯಾಕ್ಸ್ ಇನ್ ನೋಟ್ 2 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 ನ ಕೆಮೆರಾ ದ್ವೀಪದಂತೆ ಕಾಣುವ ಕ್ವಾಡ್-ಕ್ಯಾಮೆರಾ ಸೆಟಪ್ ಹೊಂದಿದೆ. ಈ ಸ್ಮಾರ್ಟ್​ಫೋನ್ 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಕೆಮೆರಾ ಹೊಂದಿದೆ. ಹೆಚ್ಚುವರಿಯಾಗಿ, ಇನ್ ನೋಟ್ 2 ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, 3.5 ಎಮ್ ಎಮ್ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್‌ಗಾಗಿ ಯು ಎಸ್ ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.

ಅಪ್ಪಟ ಮೇಕ್ ಇನ್ ಇಂಡಿಯ ಮೈಕ್ರೊಮ್ಯಾಕ್ಸ್ ಇನ್ ನೋಟ್ 2! ಏನಿದರ ವಿಶೇಷ?
| Updated By: shivaprasad.hs

Updated on: Jan 27, 2022 | 7:23 AM

ಮೇಕ್ ಇನ್ ಇಂಡಿಯ ಹೆಗ್ಗಳಿಕೆಯ ಸ್ಮಾರ್ಟ್ ಫೋನ್ ಕಂಪನಿ ಮೈಕ್ರೊಮ್ಯಾಕ್ಸ್ ತನ್ನ ಹೊಸ ಉತ್ಪಾದನೆ ಮೈಕ್ರೊಮ್ಯಾಕ್ಸ್ ಇನ್ ನೋಟ್ 2 (Micromax In Note 2) ಅನ್ನು ಮಂಗಳವಾರ- ಜನೆವರಿ 25 ರಂದು ಲಾಂಚ್ ಮಾಡಿದೆ. ಕಂಪನಿಯು ನವೆಂಬರ್ 2020ರಲ್ಲಿ ಲಾಂಚ್ ಮಾಡಿದ್ದ ಇನ್ ನೋಟ್ 1 ಸ್ಮಾರ್ಟ್ ಫೋನ್​ಗೆ ಇದು ಉತ್ತರಾಧಿಕಾರಿಯಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಫ್ಲಿಪ್ ಕಾರ್ಟ್ ನಲ್ಲಿ (Flipkart) ಮೈಕ್ರೊಮ್ಯಾಕ್ಸ್ ಇನ್ ನೋಟ್ 2 ಎಕ್ಸ್​ಕ್ಲ್ಯೂಸಿವ್ ಆಗಿ ಲಭ್ಯವಿದೆ. ಲಾಂಚ್ ಗೆ ಒಂದು ದಿನ ಮೊದಲೇ ಮೈಕ್ರೊಮ್ಯಾಕ್ಸ್ ಇನ್ ನೋಟ್ 2 ಮಾರಾಟಕ್ಕೆಂದೇ ಪ್ರತ್ಯೇಕವಾಗಿ ಫಿಪ್ಕಾರ್ಟ್ನ ಒಂದು ಮೈಕ್ರೊಸೈಟ್ (Microsite) ಲೈವ್ ಮಾಡಲಾಗಿದೆ. ಖರೀದಿಸಲು ಇಚ್ಛಿಸುವವರು ಈ ಮೈಕ್ರೊಸೈಟ್ ಮೂಲಕ ಆನ್ ಲೈನ್ ಆರ್ಡರ್ ಪ್ಲೇಸ್ ಮಾಡಬಹುದು. ಮೈಕ್ರೊಮ್ಯಾಕ್ಸ್ ಇನ್ ನೋಟ್ 2 ಫೋನಿನ ಅತಿ ಮುಖ್ಯ ವೈಶಿಷ್ಟ್ಯತೆ ಎಂದರೆ ಮೈಕ್ರೊಮ್ಯಾಕ್ಸ್ ಇನ್ ನೋಟ್ 1 ನಲ್ಲಿದ್ದ ಎಲ್ ಸಿ ಡಿ ಬದಲಿಗೆ ಇದು 6.43 ಇಂಚಿನ ಅಮೊಲೆಡ್ (AMOLED) ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರ ಮಧ್ಯಭಾಗದಲ್ಲಿ ಪಂಚ್-ಹೋಲ್ ಕಟೌಟ್ ಇದೆ.

ರೆಸ್ಯೂಲೂಷನ್ ಮತ್ತು ರಿಫ್ರೆಶ್ ರೇಟ್ ಬಗ್ಗೆ ಕಂಪನಿಯು ಯಾವದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಮಿಡಿಯಾ ಟೆಕ್ ಹೆಲಿಯೋ ಜಿ95 ಪ್ರೊಸೆಸರ್ ನಿಂದ ಮೈಕ್ರೊಮ್ಯಾಕ್ಸ್ ಇನ್ ನೋಟ್ 2 ನಿಯಂತ್ರಿಸಲ್ಪಡುತ್ತದೆ.

ಮೈಕ್ರೊಮ್ಯಾಕ್ಸ್ ಇನ್ ನೋಟ್ 2 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 ನ ಕೆಮೆರಾ ದ್ವೀಪದಂತೆ ಕಾಣುವ ಕ್ವಾಡ್-ಕ್ಯಾಮೆರಾ ಸೆಟಪ್ ಹೊಂದಿದೆ. ಈ ಸ್ಮಾರ್ಟ್​ಫೋನ್ 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಕೆಮೆರಾ ಹೊಂದಿದೆ. ಹೆಚ್ಚುವರಿಯಾಗಿ, ಇನ್ ನೋಟ್ 2 ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, 3.5 ಎಮ್ ಎಮ್ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್‌ಗಾಗಿ ಯು ಎಸ್ ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.

30 ಡಬ್ಲ್ಯೂ ಚಾರ್ಜರ್‌ ನಿಂದಾಗಿ, ಇನ್ ನೋಟ್ 2 ಕೇವಲ 25 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 5,000 mAh ಬ್ಯಾಟರಿ ಸಾಮರ್ಥ್ಯವಿದೆ. ಮೈಕ್ರೊಮ್ಯಾಕ್ಸ್ ಇನ್ ನೋಟ್ 2 ಫೋನ್ ಬೆಲೆ ರೂ. 12,490. ಫೋನ್ ಎರಡು ಬಣ್ಣಗಳಲ್ಲಿ-ಕಪ್ಪು ಮತ್ತು ಕಂದು ಲಭ್ಯವಿದೆ. ಜನವರಿ 30ರಿಂದ ಗ್ರಾಹಕರಿಗೆ ಈ ಫೋನ್ ಲಭ್ಯವಿದೆ ಎಂದು ಫ್ಲಿಪ್​ಕಾರ್ಟ್ ಹೇಳಿಕೊಂಡಿದೆ.

ಇದನ್ನೂ ಓದಿ:    ಸಾಕು ನಾಯಿಯನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ; ಅಷ್ಟಕ್ಕೂ ಮುಂದೆ ಆಗಿದ್ದೇನು ಇಲ್ಲಿದೆ ವೈರಲ್ ವಿಡಿಯೋ

Follow us