ಕಾಂಗ್ರೆಸ್ ತತ್ವ-ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಬರಲು ಇಚ್ಛಿಸುತ್ತಾರೋ ಅವರಿಗೆ ಸ್ವಾಗತವಿದೆ: ಸಿದ್ದರಾಮಯ್ಯ
ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ‘ಕಾಂಗ್ರೆಸ್ ಬಿಟ್ಟು ಹೋದವರು ಬೇಷರತ್ತಾಗಿ ವಾಪಸ್ಸು ಬರಲಿಚ್ಛಿಸಿದರೆ ಅವರನ್ನು ಸೇರಿಸಿಕೊಳ್ಳುತ್ತೇವೆ ಅಂತ ನಾನು ಹೇಳಿರುವುದಾಗಿ ಒಂದು ಪತ್ರಿಕೆ ವರದಿ ಮಾಡಿದೆ, ನಾನು ಹಾಗಂತ ಎಲ್ಲಿ ಹೇಳಿದ್ದು? ಯಾರಿಗೆ ಹೇಳಿದ್ದು? ಇದೆಲ್ಲ ಹೇಗೆ ಹುಟ್ಟಿಕೊಳ್ಳುತ್ತದೆ ಅಂತ ಅರ್ಥವಾಗುವುದಿಲ್ಲ,’ ಎಂದರು.
ರಾಜಕೀಯ ನಾಯಕರು ಹೇಳುವ ಮಾತೊಂದು ವಿವಾದಕ್ಕೆ ಮೂಲವಾದರೆ ಹಾಗೆ ನಾನು ಹೇಳಲೇ ಇಲ್ಲ, ಹೇಳಿಕೆಯನ್ನು ತಿರುಚಲಾಗಿದೆ ಅಂತ ಹೇಳಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಾರೆ. ಇದು ಎಲ್ಲ ಪಕ್ಷದ ನಾಯಕರಿಗೆ ಅನ್ವಯಿಸುತ್ತದೆ. ಮಾಜಿ ಮುಖ್ಯಮಂತ್ರಿ (former chief minister) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನೇ (Siddaramaiah) ತೆಗೆದುಕೊಳ್ಳಿ. ಮೊನ್ನೆಯಷ್ಟೇ ಅವರು ಜೆಡಿ(ಎಸ್) (JD(S)) ಮತ್ತು ಕೆಲ ಮಂತ್ರಿಗಳೂ ಸೇರಿದಂತೆ ಬಿಜೆಪಿ ಶಾಸಕರು ತಮ್ಮ ಜೊತೆ ಸಂಪರ್ಕದಲ್ಲಿದ್ದಾರೆ, ಅವರು ಕಾಂಗ್ರೆಸ್ ಪಕ್ಷ ಸೇರಲು ಕಾತುರರಾಗಿದ್ದಾರೆ ಎಂದು ಹೇಳಿದ್ದರು. ಅವರು ಹಾಗೆ ಹೇಳಿಕೆ ನೀಡಿದ ಕೂಡಲೇ ಬಿಜೆಪಿ ನಾಯಕರು ಶಾಸಕರ ಹೆಸರು ಬಹಿರಂಗಪಡಿಸಿ ಎಂದರು. ಮೌನವೇ ಸಿದ್ದರಾಮಯ್ಯನವರ ಪ್ರತಿಕ್ರಿಯೆಯಾಗಿತ್ತು.
ಅದೇ ಪ್ರಶ್ನೆಯನ್ನು ಮಾಧ್ಯಮದವರು ಬುಧವಾರದಂದು ಬೆಂಗಳೂರಲ್ಲಿ ಕೇಳಿದಾಗ, ‘ನೀವು ಮಾಧ್ಯಮದವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತೀರಿ, ನಾನು ಹೇಳಿದ್ದೇನು? ಕೆಲವರು ನನ್ನ ಮತ್ತು ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿದ್ದಾರೆ, ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ವಿಷಯ ಅಲ್ಲಿಗೆ ಮುಗಿಯಿತು,’ ಅಂತ ಹೇಳಿದರು.
ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ‘ಕಾಂಗ್ರೆಸ್ ಬಿಟ್ಟು ಹೋದವರು ಬೇಷರತ್ತಾಗಿ ವಾಪಸ್ಸು ಬರಲಿಚ್ಛಿಸಿದರೆ ಅವರನ್ನು ಸೇರಿಸಿಕೊಳ್ಳುತ್ತೇವೆ ಅಂತ ನಾನು ಹೇಳಿರುವುದಾಗಿ ಒಂದು ಪತ್ರಿಕೆ ವರದಿ ಮಾಡಿದೆ, ನಾನು ಹಾಗಂತ ಎಲ್ಲಿ ಹೇಳಿದ್ದು? ಯಾರಿಗೆ ಹೇಳಿದ್ದು? ಇದೆಲ್ಲ ಹೇಗೆ ಹುಟ್ಟಿಕೊಳ್ಳುತ್ತದೆ ಅಂತ ಅರ್ಥವಾಗುವುದಿಲ್ಲ,’ ಎಂದರು.
‘ಅಸಲಿಗೆ ನಾನು ಹೇಳಿದ್ದೇನೆಂದರೆ, ಯಾರು ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿಕೊಂಡು ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಬರಲು ತಯಾರಿದ್ದಾರೆಯೋ ಮತ್ತು ಅವರನ್ನು ಸೇರಿಸಿಕೊಳ್ಳಲು ಪಕ್ಷದ ನಾಯಕತ್ವ ರೆಡಿಯಿದ್ದರೆ ಅವರಿಗೆ ಸ್ವಾಗತವಿದೆ. ಈ ಮಾತು ಕಾಂಗ್ರೆಸ್ ಬಿಟ್ಟು ಹೋಗಿರುವ ನಾಯಕರಿಗೆ ಅನ್ವಯಿಸುವುದಿಲ್ಲ, ನಾನು ಅಸೆಂಬ್ಲಿಯಲ್ಲಿ ಹೇಳಿರುವುದಕ್ಕೆ ಬದ್ಧನಾಗಿದ್ದೇನೆ,’ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಸಾಕು ನಾಯಿಯನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ; ಅಷ್ಟಕ್ಕೂ ಮುಂದೆ ಆಗಿದ್ದೇನು ಇಲ್ಲಿದೆ ವೈರಲ್ ವಿಡಿಯೋ