Redmi K50 series: 108MP ಕ್ಯಾಮೆರಾ: ಜಾಗತೀಕ ಮಾರುಕಟ್ಟೆಗೆ ಎಂಟ್ರಿಕೊಟ್ಟ ರೆಡ್ಮಿ K50 ಸರಣಿ

Redmi K50, Redmi K50 Pro: ಶವೋಮಿ (Xiaomi) ಕಂಪನಿ ಇದೀಗ ತನ್ನ ಬಹುನಿರೀಕ್ಷಿತ ರೆಡ್ಮಿ K50 ಸರಣಿಯನ್ನು (Redmi K50 series) ಲಾಂಚ್‌ ಮಾಡಿದೆ. ಈ ಸರಣಿಯಲ್ಲಿ ರೆಡ್ಮಿ K50 (Redmi K50) ಮತ್ತು ರೆಡ್ಮಿ K50 ಪ್ರೊ (Redmi K50 Pro) ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ.

Redmi K50 series: 108MP ಕ್ಯಾಮೆರಾ: ಜಾಗತೀಕ ಮಾರುಕಟ್ಟೆಗೆ ಎಂಟ್ರಿಕೊಟ್ಟ ರೆಡ್ಮಿ K50 ಸರಣಿ
Redmi K50, Redmi K50 Pro
Follow us
| Updated By: Vinay Bhat

Updated on: Mar 18, 2022 | 3:03 PM

ಜಾಗತೀಕ ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಫೋನ್​ಗಳನ್ನು ಬಿಡುಗಡೆ ಮಾಡಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾ ಮೂಲದ ಪ್ರಸಿದ್ಧ ಕಂಪನಿ ಶವೋಮಿ (Xiaomi) ಕಂಪನಿ ಇದೀಗ ತನ್ನ ಬಹುನಿರೀಕ್ಷಿತ ರೆಡ್ಮಿ K50 ಸರಣಿಯನ್ನು (Redmi K50 series) ಲಾಂಚ್‌ ಮಾಡಿದೆ. ಈ ಸರಣಿಯಲ್ಲಿ ರೆಡ್ಮಿ K50 (Redmi K50) ಮತ್ತು ರೆಡ್ಮಿ K50 ಪ್ರೊ (Redmi K50 Pro) ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಆಕರ್ಷಕ ಫೀಚರ್​ಗಳಿಂದ ಕೂಡಿರುವ ಈ ಫೋನ್ ಜಾಗತೀಕ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌, ಅತ್ಯಂತ ವೇಗವಾಗಿ ಚಾರ್ಜ್ ಆಗುವುದಕ್ಕಾಗಿ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌, ಇದಕ್ಕೆ ಅನುಗುಣವಾಗಿ ಬಿಗ್‌ ಬ್ಯಾಟರಿ ಸಾಮರ್ಥ್ಯ ಒಳಗೊಂಡಿವೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಇತರೆ ವಿಶೇಷತೆ ಏನು ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಈ ಎರಡೂ ಸ್ಮಾರ್ಟ್​ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ರೆಡ್ಮಿ K50 ಪ್ರೊ ಫೋನ್‌ 8GB + 128GB ಬೇಸಿಕ್ ವೇರಿಯಂಟ್‌ CNY 2,999. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 35,900 ರೂ. ಎನ್ನಬಹುದು. ಹಾಗೆಯೇ ರೆಡ್ಮಿ K50 ಪೋನ್‌ 8GB + 128GB ಆರಂಭಿಕ ವೇರಿಯಂಟ್ ದರವು CNY 2,399 (ಭಾರತದಲ್ಲಿ ಅಂದಾಜು ಸುಮಾರು ರೂ. 28,700) ಆಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಡಿಮ್ ಲೈಟ್, ಫ್ಯಾಂಟಸಿ, ಇಂಕ್ ಫೆದರ್ ಮತ್ತು ಸಿಲ್ವರ್ ಟ್ರೇಸಸ್ ಬಣ್ಣ ರೂಪಾಂತರಗಳಲ್ಲಿ ಲಭ್ಯವಿರುತ್ತವೆ. ಭಾರತಕ್ಕೆ ಈ ಸ್ಮಾರ್ಟ್​ಫೋನ್ ಯಾವಾಗ ಕಾಲಿಡಲಿದೆ ಎಂಬ ಬಗ್ಗೆ ಕಂಪನಿ ಇನ್ನೂ ಖಚಿತ ಮಾಹಿತಿ ಹೊರಹಾಕಿಲ್ಲ.

ಏನು ವಿಶೇಷತೆ?:

ಇನ್ನು ರೆಡ್ಮಿ K50 ಫೋನ್ ಅಧಿಕ ಪಿಕ್ಸೆಲ್‌ ರೆಸಲ್ಯುಶನ್‌ನೊಂದಿಗೆ 6.7 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು 120Hz ಡಿಸ್‌ಪ್ಲೇಯು 1,200 ನಿಟ್‌ಗಳ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ 1/1.52-ಇಂಚಿನ ಸೆನ್ಸಾರ್ ಹೊಂದಿದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಮುಂಭಾಗದಲ್ಲಿ, ಇದು 20 ಮೆಗಾ ಪಿಕ್ಸೆಲ್ ಸೋನಿ IMX596 ಸಂವೇದಕವನ್ನು ಹೊಂದಿದೆ. ಈ ಫೋನ್ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 67W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ನೀಡಲಾಗಿದೆ.

ರೆಡ್ಮಿ K50 ಪ್ರೊ ಫೋನ್ 1440 x 3200 ಪಿಕ್ಸೆಲ್‌ ರೆಸಲ್ಯುಶನ್‌ನೊಂದಿಗೆ 6.7 ಇಂಚಿನ ಸ್ಯಾಮ್‌ಸಂಗ್ ನಿರ್ಮಿತ OLED 2K ಡಿಸ್‌ಪ್ಲೇ ಅನ್ನು ಪಡೆದಿದೆ. ಇದು ಡಾಲ್ಬಿ ವಿಷನ್, HDR10+ ಬೆಂಬಲ ಮತ್ತು 120Hz ಡಿಸ್‌ಪ್ಲೇಯು 1,200 ನಿಟ್‌ಗಳ ಬ್ರೈಟ್ನೆಸ್​​ನಿಂದ ಕೂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ 1/1.52-ಇಂಚಿನ ಸೆನ್ಸಾರ್ ಹೊಂದಿದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಮುಂಭಾಗದಲ್ಲಿ, ಇದು 20 ಮೆಗಾ ಪಿಕ್ಸೆಲ್ ಸೋನಿ IMX596 ಸಂವೇದಕವನ್ನು ಹೊಂದಿದೆ. ಈ ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 120W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದಿದೆ.

Netflix: ನೆಟ್​​ಫ್ಲಿಕ್ಸ್​ನಿಂದ ಶಾಕ್: ನೀವು ಸ್ನೇಹಿತರಿಗೆ ಪಾಸ್ವರ್ಡ್ ಕೊಟ್ಟಿದ್ದರೆ ತಪ್ಪದೇ ಈ ಸ್ಟೋರಿ ಓದಿ

Redmi 10 ಬಿಡುಗಡೆ: ಕೇವಲ 10,000 ರೂ. ಗೆ 50MP ಕ್ಯಾಮೆರಾ, 6000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ