Mi 11 ಸೀರಿಸ್​ನಲ್ಲಿ ಹೊಸ ಮೂರು ಮಾಡೆಲ್​ಗಳು ಮಾರುಕಟ್ಟೆಗೆ; 12GB RAM, 512GB ಸ್ಟೋರೆಜ್​!

| Updated By: ganapathi bhat

Updated on: Mar 30, 2021 | 5:31 PM

Xiaomi ಮೂರು ಹೊಸ ಸ್ಮಾರ್ಟ್​ಫೋನ್​ಗಳ ಜತೆಗೆ Mi ಬ್ಯಾಂಡ್​ 6 ಕೂಡ ಲಾಂಚ್​ ಮಾಡಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ಎಂಐ ಬ್ಯಾಂಡ್​ 5 ಯಶಸ್ಸು ಕಂಡಿತ್ತು.

Mi 11 ಸೀರಿಸ್​ನಲ್ಲಿ ಹೊಸ ಮೂರು ಮಾಡೆಲ್​ಗಳು ಮಾರುಕಟ್ಟೆಗೆ; 12GB RAM, 512GB ಸ್ಟೋರೆಜ್​!
Xiaomi ಮೊಬೈಲ್​
Follow us on

Xiaomi ಕಂಪೆನಿ Mi 11 ಅಲ್ಟ್ರಾ, Mi 11 ಪ್ರೋ, Mi 11 ಲೈಟ್​ 5ಜಿ ಮಾಡೆಲ್​ಗಳನ್ನು ಪರಿಚಯಿಸಿದೆ. ಸದ್ಯ, ಈ ಮಾಡೆಲ್​ಗಳು ಚೀನಾ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿದ್ದು, ಶೀಘ್ರವೇ ಭಾರತದ ಮಾರುಕಟ್ಟೆಗೂ ಕಾಲಿಡಲಿದೆ. ಭಾರತದ ಮಾರುಕಟ್ಟೆಗೆ Mi ಸೀರಿಸ್​ಗಳನ್ನು ಪರಿಚಯಿಸುವ ವಿಚಾರವನ್ನು Xiaomi ಖಚಿತಪಡಿಸಿದೆ. ಆದರೆ, ದಿನಾಂಕ ಇನ್ನೂ ಘೋಷಣೆ ಆಗಿಲ್ಲ. Xiaomi ಮೂರು ಹೊಸ ಸ್ಮಾರ್ಟ್​ಫೋನ್​ಗಳ ಜತೆಗೆ Mi ಬ್ಯಾಂಡ್​ 6 ಕೂಡ ಲಾಂಚ್​ ಮಾಡಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ಎಂಐ ಬ್ಯಾಂಡ್​ 5 ಯಶಸ್ಸು ಕಂಡಿತ್ತು. ಹೀಗಾಗಿ, Mi ಬ್ಯಾಂಡ್​ 6 ಪರಿಚಯಗೊಂಡಿದೆ. ಇದು ಭಾರತದ ಮಾರುಕಟ್ಟೆಗೆ ಬಿಡುಗಡೆ ಆಗುವ ದಿನಾಂಕ ಇನ್ನಷ್ಟೇ ಅಧಿಕೃತವಾಗಬೇಕಿದೆ.

ಬೆಲೆ ಎಷ್ಟು?
Mi 11 ಅಲ್ಟ್ರಾ
Mi 11 ಅಲ್ಟ್ರಾ ಬೆಲೆ ಸ್ವಲ್ಪ ದುಬಾರಿ ಇರಲಿದೆ. ಸದ್ಯ ಚೀನಾ ಮಾರುಕಟ್ಟೆಯಲ್ಲಿ Mi 11 ಅಲ್ಟ್ರಾ 8GB RAM ಮತ್ತು 256GB ಸ್ಟೋರೆಜ್​ ಮಾಡೆಲ್​ನ ಬೆಲೆ 5,999 ಯುವಾನ್ (66,400 ರೂಪಾಯಿ). 12GB RAM ಮತ್ತು 256GB ಆಯ್ಕೆಯ ಮಾಡೆಲ್​ಗೆ 6,499 ಯುವಾನ್ (72,000 ರೂಪಾಯಿ). 12GB RAM ಮತ್ತು 512GB ಸ್ಟೋರೆಜ್​ ಆಯ್ಕೆಗೆ 6,999 ಯುವಾನ್​ (77,500 ರೂಪಾಯಿ). ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಆಯ್ಕೆ ಸಿಗಲಿದೆ.

Mi 11 ಪ್ರೋ
Mi 11 ಪ್ರೋ 8GB RAM ಮತ್ತು 128GB ಸ್ಟೋರೆಜ್​ ಮಾಡೆಲ್​ಗೆ 4,999 ಯುವಾನ್​ (55,400 ರೂಪಾಯಿ), 8GB RAM ಮತ್ತು 256GB ಸ್ಟೋರೆಜ್​ ಮಾಡೆಲ್​ಗೆ 5,299 ಯುವಾನ್​ (Rs 58,700 ರೂಪಾಯಿ) , 12GB RAM ಮತ್ತು 256GB ಸ್ಟೋರೆಜ್​ ಮಾಡೆಲ್​ಗೆ 5,699 ಯುವಾನ್​(63,100 ರೂಪಾಯಿ) ಇದೆ.

Mi 11 Lite 5G
ಈ ಮಾಡೆಲ್​ನ ಮೊಬೈಲ್​ ಕಡಿಮೆ ಬೆಲೆಯಲ್ಲಿ ನಿಮಗೆ ಲಭ್ಯವಾಗುತ್ತಿದೆ. 8GB RAM ಮತ್ತು 128GB ವಿಧದ ಮೊಬೈಲ್​ಗೆ 2,299 ಯುವಾನ್​ (25,500 ರೂಪಾಯಿ) . 8GB RAM ಮತ್ತು 256GB ಸ್ಟೋರೆಜ್​ ಮೊಬೈಲ್​​ಗೆ 2,599 ಯುವಾನ್ (28,800 ರೂಪಾಯಿ) ಇದೆ.

Mi 11 ಅಲ್ಟ್ರಾ, Mi 11 ಪ್ರೋ ಫೀಚರ್​ಗಳು
Mi 11 ಅಲ್ಟ್ರಾ ಮೊಬೈಲ್​ 6.81 ಇಂಚಿನ ಡಿಸ್​ಪ್ಲೇ ಹೊಂದಿದೆ. 120Hz ರಿಫ್ರೆಶಿಂಗ್​ ರೇಟ್​ ಇದೆ. 5,000mAh ಬ್ಯಾಟರಿ, 50 ಮೆಗಾ ಪಿಕ್ಸೆಲ್​ ಕ್ಯಾಮೆರಾವನ್ನು ಇದು ಹೊಂದಿದೆ. Mi 11 ಪ್ರೋ ಕೂಡ ಬಹುತೇಕ ಇದೇ ಫೀಚರ್​​ಗಳನ್ನು ಹೊಂದಿದೆ.

Mi 11 ಲೈಟ್​ 5G
6.55 ಇಂಚಿನ ಡಿಸ್​ಪ್ಲೇ ಹೊಂದಿರುವ Mi 11 ಲೈಟ್​ 5G 90Hz ರಿಫ್ರೆಶಿಂಗ್​ ರೇಟ್​ ಹೊಂದಿದೆ. 64 ಮೆಗಾ ಪಿಕ್ಸೆಲ್ ಪ್ರೈಮರಿ​ ಕ್ಯಾಮೆರಾವನ್ನು ಇದು ಹೊಂದಿದೆ. ಫ್ರಂಟ್​ ಕ್ಯಾಮೆರಾ 20 ಮೆಗಾಪಿಕ್ಸೆಲ್​ ಇದೆ. 4,250mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ Poco X3 Pro; ಆನ್​ಲೈನ್​ನಲ್ಲಿ ಖರೀದಿ ಮಾಡುವವರಿಗೆ ಭಾರೀ ಆಫರ್!