AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಕಾಲಿಟ್ಟ Poco X3 Pro; ಆನ್​ಲೈನ್​ನಲ್ಲಿ ಖರೀದಿ ಮಾಡುವವರಿಗೆ ಭಾರೀ ಆಫರ್!

ಪ್ರತಿಷ್ಠಿತ ಕಂಪೆನಿಯ ಮಾಡೆಲ್​ಗಳಾದ ಸ್ಯಾಮ್​ಸಂಗ್​ ಗ್ಯಾಲಾಕ್ಸಿ ಎಫ್​​62, ರಿಯಲ್​ಮಿ ಎಕ್ಸ್​​7 ಮತ್ತು ವಿವೋ ವಿ20ಗೆ Poco X3 Pro ಕಾಂಪಿಟೇಷನ್​ ನೀಡಲಿದೆ.

ಭಾರತಕ್ಕೆ ಕಾಲಿಟ್ಟ Poco X3 Pro; ಆನ್​ಲೈನ್​ನಲ್ಲಿ ಖರೀದಿ ಮಾಡುವವರಿಗೆ ಭಾರೀ ಆಫರ್!
ಪೊಕೋ ಎಕ್ಸ್​3 ಪ್ರೋ
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: Mar 30, 2021 | 4:24 PM

Share

ವಿಶ್ವದ ಮಾರುಕಟ್ಟೆಗೆ ವಾರದ ಹಿಂದೆ ಕಾಲಿಟ್ಟಿದ್ದ Poco X3 Pro ಮಂಗಳವಾರ (ಮಾ.30) ಭಾರತದ ಮಾರುಕಟ್ಟೆಗೂ ಬಂದಿದೆ. ಸಾಕಷ್ಟು ಫೀಚರ್​ಗಳನ್ನು ಹೊಂದಿರುವ ಈ ಮೊಬೈಲ್​ ಜನಸಾಮಾನ್ಯರಿಗೆ ಹೇಳಿ ಮಾಡಿಸಿದಂತಿದೆ. 20 ಸಾವಿರದ ಒಳಗೆ ಸಿಗುತ್ತಿರುವ ಅತ್ಯುತ್ತಮ ಮೊಬೈಲ್​ಗಳಲ್ಲಿ Poco X3 Pro ಕೂಡ ಇದೆ ಅನ್ನೋದು ವಿಶೇಷ. Poco X3 Pro ಕ್ವಾಲ್ಕಾಮ್ ಸ್ನಾಪ್​ಡ್ರ್ಯಾಗನ್ 860 ಎಸ್​ಒಎಸ್​ ಅನ್ನು ಹೊಂದಿದೆ. 250 ಜಿಬಿ ವರೆಗೆ ಇಂಟರ್​​ನಲ್​ ಸ್ಟೋರೆಜ್​ ಸಿಗಲಿದೆ. ಪ್ರತಿಷ್ಠಿತ ಕಂಪೆನಿಯ ಮಾಡೆಲ್​ಗಳಾದ ಸ್ಯಾಮ್​ಸಂಗ್​ ಗ್ಯಾಲಾಕ್ಸಿ ಎಫ್​​62, ರಿಯಲ್​ಮಿ ಎಕ್ಸ್​​7 ಮತ್ತು ವಿವೋ ವಿ20ಗೆ Poco X3 Pro ಕಾಂಪಿಟೇಷನ್​ ನೀಡಲಿದೆ. ಭಾರತದಲ್ಲಿ ಬೆಲೆ ಎಷ್ಟು? Poco X3 Pro 6GB RAM + 128GB ಸ್ಟೋರೆಜ್​​ನ ಬೆಲೆ 18,999 ರೂಪಾಯಿ. 8GB RAM + 128GB ಸ್ಟೋರೆಜ್​​ನ ಮೊಬೈಲ್​ಗೆ 20,999 ರೂಪಾಯಿ. ಚಿನ್ನದ ಬಣ್ಣ ಹೋಲುವ ಕಂಚು, ಗ್ರ್ಯಾಫೈಟ್ ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಈ ಮೊಬೈಲ್​ ಲಭ್ಯವಾಗುತ್ತಿದೆ. ಏಪ್ರಿಲ್​ 6ರ ಮಧ್ಯಾಹ್ನ 12 ಗಂಟೆಯಿಂದ ಮೊಬೈಲ್​ ಆನ್​ಲೈನ್​ನಲ್ಲಿ ಲಭ್ಯವಾಗುತ್ತಿದೆ.

ನಿಮಗೆ ಸಿಗಲಿದೆ ಆಫರ್​ ಫ್ಲಿಪ್​ಕಾರ್ಟ್​ನಲ್ಲಿ ಈ ಮೊಬೈಲ್​ ಖರೀದಿ ಮಾಡುವವರಿಗೆ ಭಾರೀ ಆಫರ್​ ಸಿಗಲಿದೆ. ಐಸಿಐಸಿಐ ಕ್ರೆಡಿಟ್​ ಕಾರ್ಡ್​ ಬಳಕೆ ಮಾಡಿಕೊಂಡು ಈ ಮೊಬೈಲ್​ ಖರೀದಿ ಮಾಡಿದರೆ ಶೇ.10 ಆಫರ್​ ಸಿಗಲಿದೆ. ಗರಿಷ್ಠ 1000 ರೂಪಾಯಿವರೆಗೆ ಆಫರ್​ ದೊರೆಯಲಿದೆ.

ವಿಶೇಷತೆಗಳು ಎರಡು ಸಿಮ್​ (ನ್ಯಾನೋ) , ಪೊಕೋ ಎಕ್ಸ್​ ಪ್ರೋ ಆ್ಯಂಡ್ರಾಯ್ಡ್​ 11 ಇದೆ. 6.67ಇಂಚಿನ ಪೂರ್ಣ ಎಚ್​​ಡಿ ಡಿಸ್​ ಪ್ಲೇ ಇದೆ. 120Hz ರಿಫ್ರೆಶ್​ ರೇಟ್​ ಇದೆ. ಗೋರಿಲ್ಲಾ ಗ್ಲಾಸ್​ 6 ಈ ಮೊಬೈಲ್​​ಗಿದೆ. 48 ಮೆಗಾ ಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ, 8 ಮೆಗಾ ಫಿಕ್ಸೆಲ್​ ಅಲ್ಟ್ರಾ ವೈಡ್​ ಶೋಟರ್​ ಕ್ಯಾಮೆರಾ, 2 ಮೆಗಾ ಫಿಕ್ಸೆಲ್​ ಮ್ಯಾಕ್ರೋ ಶೂಟರ್​ ಕ್ಯಾಮೆರಾ ಈ ಮೊಬೈಲ್​ಗೆ ಇದೆ. Poco X3 Pro 5,160mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 215 ಗ್ರಾಂ ತೂಕವನ್ನು ಮೊಬೈಲ್​ ಹೊಂದಿದೆ.

ಇದನ್ನೂ ಓದಿ: ಮೊಬೈಲ್ ಕಳವಾದರೆ ಏನು ಮಾಡಬೇಕು? ಮೊಬೈಲ್​ನಲ್ಲಿರುವ ನಿಮ್ಮ ಮುಖ್ಯ ಮಾಹಿತಿಗಳನ್ನು ಸಂರಕ್ಷಿಸುವುದು ಹೇಗೆ?

 SBI ಗ್ರಾಹಕರಿಗೆ ಸ್ಮಾರ್ಟ್​ಫೋನ್​ ಕೊಳ್ಳಲು ಉತ್ತಮ ಅವಕಾಶ: ಶೇ.15ರಷ್ಟು ರಿಯಾಯಿತಿಯೊಂದಿಗೆ ಮೊಬೈಲ್​ ಖರೀದಿಸಿ ಹೋಳಿ ಹಬ್ಬದ ಸುಂದರ ಚಿತ್ರಣ ಸೆರೆ ಹಿಡಿಯಿರಿ

ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್